• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 23-08-2020

No of views : 78       No of Comments : 0

1. ಕೊಳ್ಳೇಗಾಲ ಗ್ರಾಮಾಂತರ ಠಾಣೆ (ಮೊ.ನಂ 160/2020 ) : ದಿ:23-08-2020 ರಂದು ಪಿರ್ಯಾದಿ ರಂಗಸ್ವಾಮಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ದಿನಾಂಕ: 23/08/2020 ರಂದು ಬೆಳಿಗ್ಗೆ 05.45 ಗಂಟೆಯಲ್ಲಿ ನಮ್ಮ ತಂದೆ ಹೊನ್ನಯ್ಯರವರು ಎಂದಿನಂತೆ ಬೆಳಿಗ್ಗೆ ಎದ್ದು ಉತ್ತಂಬಳ್ಳಿ ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ನಮ್ಮ ಗ್ರಾಮದ ಶಿವಶಂಕರ್ರವರ ಖಾಲಿ ನಿವೇಶನದ ಮುಂದಿನ ರಸ್ತೆಯಲ್ಲಿ ಕೊಳ್ಳೇಗಾಲ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಡಭಾಗ ನಡೆದುಕೊಂಡು ಹೋಗುತ್ತಿದ್ದಾಗ ಬೆಳಿಗ್ಗೆ 06-00ಗಂಟೆಗೆ ಕೊಳ್ಳೇಗಾಲದ ಕಡೆ ಯಿಂದ ಬಂದ ಕೆಎ10ಇಎ 6306 ನಂಬರಿನ ಮೋಟಾರ್ ಬೈಕ್ ಸವಾರನು ಬೈಕ್ನಲ್ಲಿ ಹಿಂದುಗಡೆ ಒಬ್ಬ ಹೆಂಗಸನ್ನು ಕೂರಿಸಿಕೊಂಡು ಬೈಕ್ನ್ನು ಅತೀ ವೇಗ ಮತ್ತು ಅಜಾಗರೂಕತೆ ಯಿಂದ ಚಾಲನೆ ಮಾಡಿ ನಮ್ಮ ತಂದೆಗೆ ಹಿಂದಿನಿಂದ ಅಪಘಾತ ವುಂಟು ಮಾಡಿರುತ್ತಾರೆ. ಬೈಕ್ ನವರೂ ಸಹ ಕೆಳಗೆ ಬಿದಿದ್ದು ನಂತರ ನಮಗೆ ವಿಷಯ ತಿಳಿದು ಸುಧಾರಿಸಿ ಚಿಕಿತ್ಸೆಗೆ ಕೊಳ್ಳೇಗಾಲ ಸಕರ್ಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿ ನಮ್ಮ ತಂದೆ ಹೊನ್ನಯ್ಯರವರು ಮೃತಪಟ್ಟಿ ರುವುದಾಗಿ ವೈಧ್ಯರು ತಿಳಿಸಿ ರುತ್ತಾರೆ. ಮೇಲ್ಕಂಡ ಕೆಎ10ಇಎ 6306 ನಂಬರಿನ ಬೈಕ್ ಸವಾರನು ಬೈಕ್ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ನಮ್ಮ ತಂದೆಗೆ ಅಪಘಾತವುಂಟು ಮಾಡಿ ಅವರ ಸಾವಿಗೆ ಕಾರಣನಾದ ಪ್ರವೀಣನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ಕೊಟ್ಟ ದೂರಿನ ಮೇರೆಗೆ ಈ ಪ್ರ ವ ವರದಿ.

2. ಚಾಮರಾಜನಗರ ಗ್ರಾಮಾಂತರ ಠಾಣೆ (ಮೊ.ನಂ 85/2020) : ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳು ಮಹೇಶರವರು ವೈದ್ಯರ ಸಮಕ್ಷಮದಲ್ಲಿ ನೀಡಿದ ಹೇಳಿಕೆಯಲ್ಲಿ ದಿನಾಂಕ: 23/08/2020 ರಂದು ನಮ್ಮ ಗ್ರಾಮದ ನನ್ನ ಸ್ನೇಹಿತ ಮಲ್ಲುನಾಯಕನ ಬಾಬ್ತು ಕೆಎ-10-ಇಎ-9338 ರ ಹೊಂಡಾ ಶೈನ್ ಮೋಟಾರ್ ಬೈಕಿನಲ್ಲಿ ನಮ್ಮೂರಿನಿಂದ ಚಾಮರಾಜನಗರಕ್ಕೆ ಬರುತ್ತಿದ್ದಾಗ ಸಂಜೆ 4-30 ಗಂಟೆಯಲ್ಲಿ ನಮ್ಮೂರಿನಿಂದ ಸ್ವಲ್ಪ ಮುಂದೆ ಇರುವ ಚಿನ್ನಸ್ವಾಮಿರವರ ಜಮೀನಿನ ಬಳಿ ರಸ್ತೆಯಲ್ಲಿ ಹರದನಹಳ್ಳಿ ಕಡೆಗೆ ಬರುತ್ತಿದ್ದಾಗ ಹರದನಹಳ್ಳಿ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಡ್ಡಾದಿಡ್ಡಿ ಯಾಗಿ ಓಡಿಸಿಕೊಂಡು ಬಂದು ನನ್ನ ಮೋಟಾರ್ ಬೈಕಿಗೆ ಗುದ್ದಿಸಿದಾಗ ನಾನು ಬೈಕಿನ ಸಮೇತ ಕೆಳಕ್ಕೆ ಬಿದ್ದುಕೊಂಡೆನು, ನನಗೆ ಎಡಕೆನ್ನೆ, ತಲೆ, ಕತ್ತಿನ ಹಿಂಭಾಗ, ಎಡಮಂಡಿ ಬಳಿ ನೋವಾಯಿತು. ನನಗೆ ಗುದ್ದಿಸಿದ ಕಾರಿನ ನಂಬರ್ ಅನ್ನು ನೋಡಲಾಗಿ ಕೆಎ-04-ಎಂಎಕ್ಸ್-5591 ಕಾರ್ ಆಗಿರುತ್ತದೆ, ನಂತರ ಸ್ಥಳದಲ್ಲಿದ್ದ ಮಾದೇಶರವರು 108 ಗೆ ಕರೆ ಮಾಡಿ ಆಂಬುಲೆನ್ಸ್ ಬಂದ ನಂತರ ಅದರಲ್ಲಿ ನನ್ನನ್ನು ಚಾ-ನಗರ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ಸೇರಿಸಿದರು. ನನಗರ ಅಪಘಾತ ಮಾಡಿದ ಕೆಎ-04-ಎಂ.ಎಕ್ಸ್-5591 ರ ಕಾರಿನ ಚಾಲಕನ ಮೇಲ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ಹೇಳಿಕೆಯ ದೂರಿನ ಮೇರೆಗೆ ಈ ಪ್ರ.ವ. ವರದಿ.

3. ಚಾಮರಾಜನಗರ ಪೂರ್ವ ಠಾಣೆ (ಮೊ.ನಂ 137/2020) ದಿನಾಂಕ:23-08-2020 ರಂದು ಸಂಜೆ 6.30 ಗಂಟೆ ಸಮಯದಲ್ಲಿ ಪಿಎಸ್ಐ ತಾಜುದ್ದಿನ್ ಹಾಗೂ ಸಿಬ್ಬಂದಿಗಳು ಇಲಾಖಾ ಜೀಪ್ ನಂಬರ್ ಕೆ.ಎ 10 ಜಿ 0605ರಲ್ಲಿ ಪುಣಜನೂರು, ಕೋಳಿಪಾಳ್ಯ ಗ್ರಾಮಗಳ ಕಡೆಗೆ ಗಸ್ತು ಮಾಡುವಾಗ ನನಗೆ ಮೂಕನಪಾಳ್ಯ ಬಸ್ಸ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಆಸಾಮಿಯೊಬ್ಬ ಸಹಕರಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾನೆ ಎಂದು ಖಚಿತ ಮಾಹಿತಿ ಬಂದಿದ್ದು, ಕೂಡಲೇ ಕೋಳಿಪಾಳ್ಯ ಗ್ರಾಮದ ಬಸ್ಸನಿಲ್ದಾಣದ ಬಳಿ ಇದ್ದ ಪಂಚಾಯ್ತದಾರರನ್ನು ಕರೆದುಕೊಂಡು ಸಂಜೆ ಸುಮಾರು 6.45 ಗಂಟೆಯಲ್ಲಿ ಹೋಗಿ ನೋಡಲಾಗಿ ಅಲ್ಲಿ ಓರ್ವ ಆಸಾಮಿಯು ತನ್ನ ಕೈಗಳಲ್ಲಿ ಪ್ಲಾಸ್ಟಿಕ್ ಲೋಟಗಳನ್ನು ಮತ್ತು ಎರಡು ಪ್ಲಾಸ್ಟಿಕ್ ಕವರ್ಗಳನ್ನು ಹಿಡಿದುಕೊಂಡು ನಿಂತಿದ್ದು, ಅವನ ಮುಂದೆ ಒಬ್ಬ ವ್ಯಕ್ತಿ ಮದ್ಯ ಸೇವಿಸಿ ಹೊರಟು ಹೋದನು. ಪ್ಲಾಸ್ಟಿಕ್ ಗ್ಲಾಸ್ಗಳು, ಮತ್ತು ಪ್ಲಾಸ್ಟಿಕ್ ಕವರನ್ನು ಹಿಡಿದಿದ್ದ ವ್ಯಕ್ತಿಯು ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದು,್ದ ಸಿಬ್ಬಂದಿಯವರ ಸಹಾಯದಿಂದ ಸದರಿ ಆಸಾಮಿಯನ್ನು ವಶಕ್ಕೆ ತೆಗೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಆತ ತನ್ನ ಹೆಸರು ನವೀನ್ ಕುಮಾರ್ ಬಿನ್ ಶಿವಣ್ಣನಾಯಕ್, 30 ವರ್ಷ, ಹೊಟೇಲ್ಕೆಲಸ, ಲಂಬಾಣಿ ನಾಯಕ ಜನಾಂಗ, ಮೂಕನಪಾಳ್ಯ ಗ್ರಾಮ. ಚಾಮರಾಜನಗರ ತಾಲ್ಲೂಕು. ಎಂದು ತಿಳಿಸಿದ್ದು, ನಂತರ ಆತನನ್ನು ಪಂಚರ ಸಮಕ್ಷಮ ಪರಿಶೀಲಿಸಿದ್ದು, ಆತನ ಬಳಿ ಒಂದು ಕಪ್ಪು ಪ್ಲಾಸ್ಟಿಕ್ ಕವರ್ನಲ್ಲಿ 1) 180 ಎಂ.ಎಲ್ನ ಓಲ್ಡ್ ಅಡ್ಮಿರಲ್ ಬ್ರಾಂದಿಯ ಮದ್ಯದ 03 ಪೌಚ್ಗಳು ಇದ್ದು 2) 180 ಎಂ.ಎಲ್ನ ಓಲ್ಡ್ ತವೆರಿನ್ ವಿಸ್ಕಿಯ ಮದ್ಯದ 04 ಪೌಚ್ಗಳು ಇದ್ದು 3) 90 ಎಂ.ಎಲ್ನ ಓರಿಜನಲ್ ಚಾಯ್ಸ್ ಡಿಲಕ್ಸ್ ಇಂಡಿಯನ್ ಬ್ರಾಂದಿ. ಮದ್ಯದ 05 ಪೌಚ್ಗಳು ಇದ್ದು ಹಾಗೂ 06 ಪ್ಲಾಸ್ಟಿಕ್ ಲೋಟಗಳು ನಂತರ ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅನುವು ಮಾಡಿಕೊಟ್ಟಿರುವ ಬಗ್ಗೆ ರಹದಾರಿ ಇದೆಯೇ ಎಂದು ಕೇಳಲಾಗಿ ಅವರು ಯಾವುದೇ ರಹದಾರಿ ಇರುವುದಿಲ್ಲ ಎಂದು ತಿಳಿಸಿ, ಸಾರ್ವಜನಿಕವಾಗಿ ಮದ್ಯ ಸೇವನೆ ಮಾಡಲು ಸ್ಥಳವಾಕಾಶ ನೀಡಿ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಸಹಕರಿಸಲು ನಿಂತಿದ್ದಾಗಿ ತಿಳಿಸಿದ ಮೇರೆಗೆ ವರದಿ ತಯಾರಿಸಿ ಪ್ರಕರಣ ದಾಖಲಿಸಿರುತ್ತದೆ.

4. ಬೇಗೂರು ಪೊಲೀಸ್ ಠಾಣೆ (ಮೊ.ನಂ 88/2020) ದಿನಾಂಕ : 23-08-2020 ರಂದು ಸಾಯಂಕಾಲ 19:30 ಗಂಟೆಗೆ ರಾಘವಾಪುರ ಗ್ರಾಮದ ವಿಷಕಂಠ ಎಂಬುವರು ಠಾಣೆಗೆ ಹಾಜರಾಗಿ ಲಿಖಿತ ದೂರೊಂದನ್ನು ನೀಡಿದ್ದು, ದೂರಿನಲ್ಲಿ ನಾನು ಬೇಗೂರು ಹೋಬಳಿ ರಾಘವಾಪುರ 2 ಸಮೀಪ ಮೈಸೂರು-ಊಟಿ ರಸ್ತೆಯ ಪಕ್ಕದಲ್ಲಿ ಕೆಪಿಟಿ ಹೋಟೆಲ್ ನ್ನು ಸುಮಾರು ವರ್ಷಗಳಿಂದ ನಡೆಸುತ್ತಿದ್ದು ದಿನಾಂಕ : 23-08-2020 ರಂದು ಎಂದಿನಂತೆ ಹೋಟೆಲ್ ತರೆದು ಕಾರ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಮಧ್ಯಾಹ್ನ 1:00 ಗಂಟೆಯ ಸಮಯದಲ್ಲಿ ಬೇಗೂರು ಕಡೆಯಿಂದ ಗುಂಡ್ಲುಪೇಟೆ ಕಡೆಗೆ ಹೋಗುತ್ತಿದ್ದ ಲಾರಿ ಸಂಖ್ಯೆ ಎಪಿ-27, ಟಿಯು-7746 ರ ಲಾರಿಯನ್ನು, ಲಾರಿಯ ಚಾಲಕ ಅಜಗಾರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಹೋಟೆಲ್ ನ ಜಾಹೀರಾತು ಫಲಕ ಹಾಗೂ ಹೋಟೆಲ್ ಗೆ ಡಿಕ್ಕಿ ಹೊಡೆದು ಪಕ್ಕದಲ್ಲಿರುವ ಜಮೀನಿಗೆ ಲಾರಿಯು ನುಗ್ಗಿರುತ್ತದೆ. ಆಗ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ನನಗೆ ಸಣ್ಣಪುಟ್ಟ ಗಾಯಗಳು ಆಗಿರುತ್ತವೆ. ಮತ್ತು ಹೋಟೆಲ್ ಹಾಗೂ ಬೇಕರಿಯಲ್ಲಿದ್ದ ತಿಂಡಿ ತಿನಿಸುಗಳು, ಐಸ್ ಕ್ರೀಮ್ ಇಡುತ್ತಿದ್ದ ಪ್ರಿಡ್ಜ್, ಕೂಲ್ ಡ್ರಿಂಕ್ಸ್ಗಳು, ನೀರಿನ ಬಾಟಲ್ ಗಳನ್ನು ಇಡುತ್ತಿದ್ದ ಪ್ರಿಡ್ಜ್, ತಿಂಡಿ ತಿನಿಸುಗಳನ್ನು ಇಡಲು ಮಾಡಿಸಿದ್ದ ಮರದ ಹಾಗೂ ಗ್ಲಾಸ್ ನ ಶೊಕೇಸ್, ಹೋಟೆಲ್ ಹಾಗೂ ಬೇಕರಿಗೆ ಅಳವಡಿಸಿದ್ದ ಸಿ ಸಿ ಕ್ಯಾಮರಾಗಳು, ಕುಚರ್ಿಗಳು ಹಾಗೂ ಮೇಜುಗಳು, ಜಾಹೀರಾತು ಫಲಕಗಳು, ಬೇಕರಿ ಮುಂದೆ ನಿಂತಿದ್ದ ಸೈಕಲ್, ಬೇಕರಿ ಮತ್ತು ಹೋಟೆಲ್ ನ ಬಾಗಿಲುಗಳು, ಗೋಡೆಗಳು, ಹಾಗೂ ಮೇಲ್ಛಾವಣಿಗೆ ಹಾಕಿದ್ದ ಕಬ್ಬಿಣದ ಶೀಟುಗಳು, ಕಬ್ಬಿಣದ ಪೈಪುಗಳು ಹಾಗೂ ಇತರ ವಸ್ತುಗಳು ಜಖಂಗೊಂಡಿರುತ್ತದೆ. ಹಾಗೂ ಕ್ಯಾಶ್ ಬಾಕ್ಸ್ ಲ್ಲಿದ್ದ 10 ಸಾವಿರ ನಗದು ಹಣ ಮತ್ತು ಪುಟ್ಟಸ್ವಾಮಿ ಬಿನ್ ದೊಡ್ಡಯ್ಯ ರವರ ಜಮೀನಿನಲ್ಲಿ ಬೆಳದಿದ್ದ ಬೆಳೆ ನಾಶವಾಗಿದ್ದು, ಈ ಘಟನೆಯಿಂದ ಒಟ್ಟು 18 50 000 ರೂಗಳು ನಷ್ಟವಾಗಿರುತ್ತದೆ. ಆದ್ದರಿಂದ ಲಾರಿ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದಿದ್ದ ದೂರಿನ ಮೇರೆಗೆ ಈ ಪ್ರ.ವ.ವರದಿ.

5. ಯಳಂದೂರು ಪೊಲೀಸ್ ಠಾಣೆ (ಮೊ.ನಂ 71/2020) ದಿ: 23-08-2020 ರಂದು ಸಂಜೆ 18:45 ಗಂಟೆ ಸಮಯದಲ್ಲಿ ಪಿರ್ಯಾದಿರವರಾದ ಅಂಬಿಕ ಹೆಚ್ ಎಂ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ದಿನಾಂಕ 23-8-2020 ರಂದು ಸಂಜೆ 05:00 ಗಂಟೆ ಸಮಯದಲ್ಲಿ ನಾನು ಮನೆಯಿಂದ ನಮ್ಮ ಎದುರುಗಡೆ ನಮ್ಮ ದೊಡ್ಡಪ್ಪ ಗುರುಸಿದ್ದಪ್ಪನ ಮನೆಗೆ ನಾನು ನನ್ನ 04 ವರ್ಷದ ಮಗಳು ಧನ್ಯಳನ್ನು ಆಟವಾಡಲು ಬಿಟ್ಟುಬಂದಿದ್ದು ನಂತರ ಸುಮಾರು 05:15 ಗಂಟೆ ಸಮಯದಲ್ಲಿ ನನ್ನ ಮಗಳು ಧನ್ಯ ನಮ್ಮ ಮನೆಗೆ ಬರಲು ನಮ್ಮ ದೊಡ್ಡಪ್ಪನ ಮನೆಯ ಹತ್ತಿರ ಇರುವ ರಸ್ತೆಯ ಪುಟ್ಪಾತ್ನ ಬಳಿ ನಿಂತಿದ್ದು ನಾನು ಮನೆಯಿಂದ ಹೊರಬಂದು ನನ್ನ ಮಗಳನ್ನು ಕರೆದುಕೊಂಡು ಬರೋಣ ಎಂದು ಬರುತ್ತಿದ್ದಾಗ ನಮ್ಮ ಮನೆಯ ಕೆಳಗಡೆ ರಸ್ತೆಯಿಂದ ಒಂದು ಬೈಕ್ ಸವಾರನು ತನ್ನ ಬೈಕ್ನನ್ನು ಅತಿ ಜೋರಾಗಿ ಓಡಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ನನ್ನ ಮಗಳು ಧನ್ಯಳಿಗೆ ಗುದ್ದಿಸಿದನು. ನನ್ನ ಮಗಳು ರಸ್ತೆಗೆ ಬಿದ್ದಾಗ ಆಕೆಯ ತಲೆಗೆ, ಬೆನ್ನೀಗೆ ಹಾಗೂ ಕಾಲಿನ ಹತ್ತಿರ ಹಾಗೂ ಕುಂಡಿಗೆ ಗಾಯಗಳಾದವು. ತಕ್ಷಣ ನಾನು ನನ್ನ ತಾಯಿ ನಾಗಮ್ಮ, ನಮ್ಮ ಅಣ್ಣ ರಾಜೇಶ್ ರವರುಗಳು ಹೋಗಿ ನನ್ನ ಮಗಳನ್ನು ಎತ್ತಿಕೊಂಡು ಸುದಾರಿಸಿದೆವು. ನನ್ನ ಮಗಳಿಗೆ ಗುದ್ದಿಸಿದ ಬೈಕ್ ನನ್ನು ನೋಡಲಾಗಿ ಕೆಎ-10-ಎಕ್ಷ್-2519 ಹಿರೋಹೋಂಡಾ ಸ್ಪೇಂಡರ್ ಬೈಕ್ ಆಗಿರುತ್ತದೆ. ಆತನ ಹೆಸರು ವಿಳಾಸ ನನಗೆ ತಿಳಿದಿರುವುದಿಲ್ಲ. ಆದ್ದರಿಂದ ನನ್ನ ಮಗಳಿಗೆ ಬೈಕ್ ಗುದ್ದಿಸಿ ಅಪಘಾತ ಪಡಿಸಿದ ಮೇಲ್ಕಂಡ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕೇಂದು ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

6. ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆ (ಮೊ.ನಂ 109/2020) ದಿನಾಂಕ:23-08-2020 ರಂದು ಪಿರ್ಯಾದಿ ಮಂಟೇಸ್ವಾಮಿ ಠಾಣೆಗೆ ಬಂದು ಲಿಖಿತ ದೂರು ನೀಡಿದ್ದು, ದೂರಿನಲ್ಲಿ ನಮ್ಮ ಸಂಬಂಧಿಯಾದ ಸತ್ಯರಾಜ್ ರವರು ಈ ದಿನ ತನ್ನ ಕೆಎ-10-ಇಬಿ-2368 ರ ಮೊಟಾರ್ ಬೈಕಿನಲ್ಲಿ ಅಮೆಜಾನ್ ಕಂಪನಿಯ ಪಾರ್ಸಲ್ಗಳನ್ನು ವಿತರಣೆ ಮಾಡಲು ಹೋಗಿ ವಾಪಸ್ ಕೊಳ್ಳೇಗಾಲಕ್ಕೆ ಬರುತ್ತಿದ್ದಾಗ ಸಂಜೆ 06:30 ಗಂಟೆಯಲ್ಲಿ ಮುಡಿಗುಂಡಗ್ರಾಮದ ಮುಂದೆ ಇರುವ ಶ್ರೀ ಮುಳಾಚ್ಚಮ ದೇವಸ್ಥಾನದ ಮುಂದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದಾಗ ಒನ್ ವೇನಲ್ಲಿ ಎದುರಿಗೆ ಬಂದ ಕೆಎ-09-ಡಿ-7464 ಆಟೋಚಾಲಕ ಆಟೋ ವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮೊಟಾರ್ ಬೈಕ್ಗೆ ಅಪಘಾತ ಮಾಡಿ ಗಾಯಗೊಳಿಸಿದ್ದು ಅಪಘಾತದಲ್ಲಿ ಆಟೋ ಚಾಲಕನಿಗೂ ಸಹ ಗಾಯಾವಾಗಿರುವುದಾಗಿ ತಿಳಿದುಬಂದಿದ್ದು ಆಟೋ ಚಾಲಕನ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ ವ ವರದಿ


Your Comment

Name :
Email:
Comment:
Submit

Website Designed and Developed by Global Buzz®