• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 22-08-2020

No of views : 122       No of Comments : 0

1. ಚಾಮರಾಜನಗರ ಸಂಚಾರ ಠಾಣೆ (ಮೊ.ನಂ 53/2020 ) : ದಿನಾಂಕ 22.08.2020 ರಂದು ಬೆಳಗ್ಗೆ ಪಿರ್ಯಾದಿರವರಾದ ಶ್ರೀ ನಾಗರಾಜುರವರು ತಮ್ಮ ಬಾಬ್ತು ಕೆಎ 10 ಆರ್ 0620 ಮೊಟಾರ್ ಬೈಕಿನಲ್ಲಿ ತನ್ನ ಹೆಂಡತಿಯ ಚಿಕಿತ್ಸೆ ಸಂಬಂಧ ಚಾಮರಾಜನಗರ ಆಸ್ಪತ್ರೆಗೆ ಬಂದಿದ್ದು ಚಿಕಿತ್ಸೆ ಪಡೆದು ಔಷದಿ ಪಡೆಯಲು ಜೋಡಿ ರಸ್ತೆಯಲ್ಲಿರುವ ಮೋದಿ ಜನೌಷದಿ ಕೇಂದ್ರಕ್ಕೆ ಸುಮಾರು 10.30ರ ಸಮಯದಲ್ಲಿ ಹೋಗುತ್ತಿದ್ದು ಎಸ್ಪಿ ಕಚೇರಿಯ ಡಿವೈಡರ್ನಲ್ಲಿ ಬಲಕ್ಕೆ ತಮ್ಮ ಬೈಕನ್ನು ತಿರುಗಿಸಿದ್ದು ಆಸಮಯದಲ್ಲಿ ಹಿಂದುಗಡೆಯಿಂದ ಅಂದರೆ ಡಿಸಿ ಕಛೇರಿ ಕಡೆಯಿಂದ ಒಬ್ಬ ಮೊಟಾರ್ ಬೈಕು ಸವಾರನ್ನು ಸ್ಪೀಡಾಗಿ ಬಂದು ತಮ್ಮ ಬೈಕಿಗೆ ತಾಗಿಸಿ ರಸ್ತೆಯ ಡಿವೈಡರ್ಗೆ ಗುದ್ದಿಕೊಂಡು ಕೆಳಗೆ ಬಿದ್ದು ರಕ್ತಗಾಯಗೊಂಡಿರುತ್ತಾನೆ. ನೋಡಲಾಗಿ ಅಪಘಾತ ಮಾಡಿದ ಬೈಕು ನಂಬರ್ ಕೆಎ 10ಆರ್ 2702 ಆಗಿದ್ದು ಕೂಡಲೆ ಸ್ಥಳೀಯ ಒಬ್ಬ ಆಟೋ ಚಾಲಕನು ಬಂದು ಗಾಯಗೊಂಡಿದ್ದ ಬೈಕು ಸವಾರನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತೇನೆ ನನಗೆ ಅಪಘಾತ ಮಾಡಿದ ಬೈಕು ಗಾಯಗೊಂಡಿದ್ದ ನಾನು ನನ್ನ ಹೆಂಡತಿ ಮತ್ತೊಂದು ಆಟೋದಲ್ಲಿ ಹೋಗಿ ಚಿಕಿತ್ಸೆ ಪಡೆದಿರುತ್ತೇನೆ. ನನಗೆ ಎಡಗೈ ಹೆಬ್ಬರಳು, ಎಡಮಂಡಿ ಬಲಗೈತೋಳು ಬಲಗಣ್ಣಿನ ಕೆಳಗೆ ಗಾಯಗೊಂಡಿರುತ್ತೇನೆ. ನನ್ನ ಹೆಂಡತಿಯು ಅಲ್ಲಿ ಮೈಕೈಗೆ ನೋವಾಗಿರುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಚೇತರಿಕೆಗೊಂಡು ಠಾಣೆಗೆ ಬಂದು ತಡವಾಗಿ ದೂರು ನೀಡುತ್ತಿದ್ದು ಅಪಘಾತ ಮಾಡಿದ ಕೆಎ 10 ಆರ್ 2702 ಬೈಕು ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದ ಮೇರೆಗೆ ಈ ಪ್ರ.ವ.ವರದಿ.

2. ಗುಂಡ್ಲುಪೇಟೆ ಪೊಲೀಸ್ ಠಾಣೆ (ಮೊ.ನಂ 278/2020) : ಗುಂಡ್ಲುಪೇಟೆ ತಾಲ್ಲೂಕು ತಹಸೀಲ್ದಾರ್ರವರು ದೂರಿನಲ್ಲಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೋವಿಡ್ 19 ವೈರಾಣು ತಡೆಗಟ್ಟುವ ಉದ್ದೇಶದಿಂದ ಆರೋಪಿಯನ್ನು ತಮ್ಮ ಮನೆಯಲ್ಲಿ ಹೋಂ ಕ್ವಾರೆಂಟೈನ್ನಲ್ಲಿ ಇರುವಂತೆ ಸೂಚಿಸಿದ್ದರೂ ಸಹಾ ಆರೋಪಿ ಮಂಜುನಾಥ್.ವಿ.ಆರ್ ಕ್ವಾರೆಂಟೈನ್ ನಿಯಮವನ್ನು ಉಲ್ಲಂಘಿಸಿ ಹಲವಾರು ಬಾರಿ ತಮ್ಮ ಮನೆಯಿಂದ ಹೊರಗಡೆ ಓಡಾಡುತ್ತಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಈ ಪ.ವ ವರದಿ.

3. ಗುಂಡ್ಲುಪೇಟೆ ಪೊಲೀಸ್ ಠಾಣೆ (ಮೊ.ನಂ 279/2020) ಗುಂಡ್ಲುಪೇಟೆ ತಾಲ್ಲೂಕು ತಹಸೀಲ್ದಾರ್ರವರು ದೂರಿನಲ್ಲಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೋವಿಡ್ 19 ವೈರಾಣು ತಡೆಗಟ್ಟುವ ಉದ್ದೇಶದಿಂದ ಆರೋಪಿಯನ್ನು ತಮ್ಮ ಮನೆಯಲ್ಲಿ ಹೋಂ ಕ್ವಾರೆಂಟೈನ್ನಲ್ಲಿ ಇರುವಂತೆ ಸೂಚಿಸಿದ್ದರೂ ಸಹಾ ಆರೋಪಿ ರಾಜಗೋಪಲ, ಹಂಗಳ ಗ್ರಾಮ ಕ್ವಾರೆಂಟೈನ್ ನಿಯಮವನ್ನು ಉಲ್ಲಂಘಿಸಿ ಹಲವಾರು ಬಾರಿ ತಮ್ಮ ಮನೆಯಿಂದ ಹೊರಗಡೆ ಓಡಾಡುತ್ತಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಈ ಪ.ವ ವರದಿ.

4. ಗುಂಡ್ಲುಪೇಟೆ ಪೊಲೀಸ್ ಠಾಣೆ (ಮೊ.ನಂ 280/2020) ಗುಂಡ್ಲುಪೇಟೆ ತಾಲ್ಲೂಕು ತಹಸೀಲ್ದಾರ್ರವರು ದೂರಿನಲ್ಲಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೋವಿಡ್ 19 ವೈರಾಣು ತಡೆಗಟ್ಟುವ ಉದ್ದೇಶದಿಂದ ಆರೋಪಿಯನ್ನು ತಮ್ಮ ಮನೆಯಲ್ಲಿ ಹೋಂ ಕ್ವಾರೆಂಟೈನ್ನಲ್ಲಿ ಇರುವಂತೆ ಸೂಚಿಸಿದ್ದರೂ ಸಹಾ ಆರೋಪಿ ದೊಡ್ಡೇಗೌಡ, ಗುಂಡ್ಲುಪೇಟೆ ಪಟ್ಟಣ ಕ್ವಾರೆಂಟೈನ್ ನಿಯಮವನ್ನು ಉಲ್ಲಂಘಿಸಿ ಹಲವಾರು ಬಾರಿ ತಮ್ಮ ಮನೆಯಿಂದ ಹೊರಗಡೆ ಓಡಾಡುತ್ತಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಈ ಪ.ವ ವರದಿ.

5. ಗುಂಡ್ಲುಪೇಟೆ ಪೊಲೀಸ್ ಠಾಣೆ (ಮೊ.ನಂ 281/2020) ಗುಂಡ್ಲುಪೇಟೆ ತಾಲ್ಲೂಕು ತಹಸೀಲ್ದಾರ್ರವರು ದೂರಿನಲ್ಲಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೋವಿಡ್ 19 ವೈರಾಣು ತಡೆಗಟ್ಟುವ ಉದ್ದೇಶದಿಂದ ಆರೋಪಿಯನ್ನು ತಮ್ಮ ಮನೆಯಲ್ಲಿ ಹೋಂ ಕ್ವಾರೆಂಟೈನ್ನಲ್ಲಿ ಇರುವಂತೆ ಸೂಚಿಸಿದ್ದರೂ ಸಹಾ ಆರೋಪಿ ಎಂ. ಸತೀಶ್, ಗುಂಡ್ಲುಪೇಟೆ ಪಟ್ಟಣ ಕ್ವಾರೆಂಟೈನ್ ನಿಯಮವನ್ನು ಉಲ್ಲಂಘಿಸಿ ಹಲವಾರು ಬಾರಿ ತಮ್ಮ ಮನೆಯಿಂದ ಹೊರಗಡೆ ಓಡಾಡುತ್ತಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಈ ಪ.ವ ವರದಿ.

6. ಗುಂಡ್ಲುಪೇಟೆ ಪೊಲೀಸ್ ಠಾಣೆ (ಮೊ.ನಂ 282/2020) ಗುಂಡ್ಲುಪೇಟೆ ತಾಲ್ಲೂಕು ತಹಸೀಲ್ದಾರ್ರವರು ದೂರಿನಲ್ಲಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೋವಿಡ್ 19 ವೈರಾಣು ತಡೆಗಟ್ಟುವ ಉದ್ದೇಶದಿಂದ ಆರೋಪಿಯನ್ನು ತಮ್ಮ ಮನೆಯಲ್ಲಿ ಹೋಂ ಕ್ವಾರೆಂಟೈನ್ನಲ್ಲಿ ಇರುವಂತೆ ಸೂಚಿಸಿದ್ದರೂ ಸಹಾ ಆರೋಪಿ ಪ್ರಕಾಶ್, ಬರಗಿ ಗ್ರಾಮ ಕ್ವಾರೆಂಟೈನ್ ನಿಯಮವನ್ನು ಉಲ್ಲಂಘಿಸಿ ಹಲವಾರು ಬಾರಿ ತಮ್ಮ ಮನೆಯಿಂದ ಹೊರಗಡೆ ಓಡಾಡುತ್ತಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಈ ಪ.ವ ವರದಿ.

7. ತೆರಕಣಾಂಬಿ ಪೊಲೀಸ್ ಠಾಣೆ ( ಮೊ.ನಂ 67/2020) ದಿನಾಂಕ 22-08-2020 ರಂದು ಮದ್ಯಾಹ್ನ 2-30 ಗಂಟೆಯಲ್ಲಿ ತೆರಕಣಾಂಬಿ ಗ್ರಾಮದ ಗ್ರಾಮಲೆಕ್ಕಿಗರಾದ ಶ್ರೀ ಬಸವಲಿಂಗಪ್ಪಶರಣಪ್ಪರವರ ಮುಖಾಂತರ ಶ್ರೀ ನಂಜುಂಡಯ್ಯ ತಹಸೀಲ್ದಾರ್ ಹಾಗೂ ಇನ್ಸಿಡೆಂಟ್ ಕಮ್ಯಾಮಡರ್ ಕೋವಿಡೆ-19 ಗುಂಡ್ಲುಪೇಟೆ ತಾಲ್ಲೂಕು ರವರು ಕಳುಹಿಸಿದ ವರದಿಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೋವೀಡ್-19 ವೈರಾಣು ತಡೆಗಟ್ಟುವ ಎಲ್ಲಾ ಮುಂಜಾಗ್ರತ ಕ್ರಮವನ್ನು ಕೈ ಗೊಳ್ಳಲಾಗಿದ್ದು ಅದರಲ್ಲೂ ಮುಖ್ಯವಾಗಿ ಹೋಂ ಕ್ವಾರಂಟೈನ್ನಲ್ಲಿ ಕೆಲವರನ್ನು ಇರಿಸಲಾಗಿರುತ್ತದೆ ಸೂಚಿಸಿದ ದಿನಾಂಕದಿಂದ 14 ದಿನಗಳ ಕಾಲ ಮನೆ ಬಿಟ್ಟು ಬೇರೆ ಕಡೆಗೆ ಹೋಗುವಂತಿಲ್ಲ ಈ ಬಗ್ಗೆ ಅವರಿಗೆ ತಿಳುವಳಿಕೆ ಸಹಾ ನೀಡಿ ಹೋಂ ಕ್ವಾರೈಂಟನ್ನಲ್ಲಿ ಇರಿಸಲಾಗಿರುತ್ತದೆ ಈ ನಿಯಮವನ್ನು ಉಲಂಘಿಸಿದರೆ ಉಲ್ಲೇಖ-01 ರ ಸಕರ್ಾರಿ ಅದೇಶದಂತೆ ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿರುತ್ತದೆ ಗುರುವಿನಪುರ ಗ್ರಾಮದ ಮಹದೇವಪ್ರಸಾದ್ ಮೊಬೈಲ್ ನಂ. 7829876263 ರವರು ಹೋಂ ಕ್ವಾರೈಂಟನ್ ನಿಯಮವನ್ನು ಉಲಂಘಿಸಿ ದಿನಾಂಕ 20-08-2020 ರಂದು ಮನೆಯಿಂದ ಹೊರಗೆ ಓಡಾಡುತ್ತಿರುವುದು ಅಂತಜರ್ಾಲ ವರದಿಯಲ್ಲಿ ದಾಖಲಾಗಿದ್ದು ಉಲ್ಲೇಖ-02 ರಲ್ಲಿ ಕಂಡ ನೋಡೆಲ್ ಅಧಿಕಾರಿಗಳು (ಕ್ವಾರಂಟೈನ್ ನಿಗಾವಣೆ) ಹಾಗೂ ಸಹಕಾರ ಸಂಘಗಳ ಉಪ ನಿಭಂದಕರು ಚಾಮರಾಜನಗರ ಜಿಲ್ಲೆ ಇವರು ತಿಳಿಸಿರುತ್ತಾರೆ ಆದ್ದರಿಂದ ಗುರುವಿನಪುರ ಗ್ರಾಮದ ಮಹದೇವ ಪ್ರಸಾದ್ ರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ

8. ಕೊಳ್ಳೇಗಾಲ ಗ್ರಾಮಾಂತರ ಠಾಣೆ ( ಮೊ.ನಂ 159/2020) ದಿ:21/22-08-2020 ರಂದು ಗಾಯಾಳು ರಾಮಕುಮಾರ್ರವರು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಏನೆಂದರೆ ದಿನಾಂಕಃ 21-08-2020 ರಂದು ಎಂದಿನಂತೆ ವ್ಯಾಪಾರ ಮುಗಿಸಿಕೊಂಡು ರಾತ್ರಿ 08.30 ಗಂಟೆಯಲ್ಲಿ ಅಡ್ಡಹಳ್ಳದ ಬೀದಿಯ ನಮ್ಮ ಹಳೆ ಮನೆ ಹತ್ತಿರ ಹೋಗುತ್ತಿರುವಾಗ ಅವರ ಗ್ರಾಮದ ಮಾದೇಶ @ ಮನ್ನಾರಿ ಮಾದೇಶ್ ಎಂಬುವವನು ಬೀದಿಯಲ್ಲಿ ಕಿರುಚಾಡುತ್ತಾ ಕೆಟ್ಟ ಕೆಟ್ಟ ಮಾತುಗಳನ್ನು ಆಡುತ್ತಿದ್ದನು. ಪಿರ್ಯಾದಿಯವರು ಯಾಕೆ ಈರೀತಿ ಆಡುತ್ತೀಯಾ ಎಂದು ಕೇಳಿದ್ದಕ್ಕೆ ನಾನು ಹೇಗಾದರು ಇರುತ್ತೇನೆ. ನೀನ್ಯಾರೋ ಸೂಳೆಮಗನೆ ಕೇಳೊಕೆ ಎಂದು ಬೈದನು. ನಂತರ ಸುಮಾರು ರಾತ್ರಿ 9.00 ಗಂಟೆಗೆ ಮಾದೇವ ಪಿರ್ಯಾದಿ ಮನೆ ಬಳಿ ಬಂದು ನನಗೆ ನಿನ್ನಿಂದ ಬೀದಿಯಲ್ಲಿ ನನ್ನ ಮಾನ ಹೋಗಿದೆ ನಿನ್ನನ್ನು ಕೊಲೆ ಮಾಡಿದಾಗಲೇ ನನಗೆ ಸಮಾಧಾನ ಆಗೋದು ಬೋಳಿಮಗೆನೆ ಬಾರೋ ಹೊರಗಡೆ ಎಂದು ಕೈಯಲ್ಲಿ ಚಾಕು ಹಿಡಿದುಕೊಂಡು ಬೈಯ್ಯುತ್ತಿದ್ದನು ಆಗ ನಾನು ಮನೆಯಿಂದ ಹೊರಗಡೆ ಬಂದು ಏಕೆ ಮನೆ ಮುಂದೆ ಬಂದು ಗಲಾಟೆ ಮಾಡುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ಈ ದಿನ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ನನ್ನನ್ನು ಹಿಡಿದುಕೊಂಡು ಕೈಯಿಂದ ನನ್ನ ಮೈಕೈಗೆ ಹೊಡೆದು ಚಾಕುವಿನಿಂದ ನನ್ನ ಸೊಂಟದ ಎಡಭಾಗಕ್ಕೆ ತಿವಿದು ರಕ್ತಗಾಯ ಮಾಡಿ ಬೈದುಕೊಂಡು ಹೊರಟು ಹೋದನು ನಂತರ ವೆಂಕಟಮ್ಮ ಕೆಂಪಮ್ಮ ಕವಿತಾ ರವರು ಪಿರ್ಯಾದಿಯವರನ್ನು ಸಮಾಧಾನ ಪಡಿಸಿದರು ವಿಷಯ ತಿಳಿದು ಬಂದ ಮಣಿ ಮತ್ತು ರಂಗಸ್ವಾಮಿಯರವರು ಆಸ್ಪತ್ರಗೆ ತಂದು ಸೇರಿಸಿರುತ್ತಾರೆ ನನ್ನ ಮೇಲೆ ಹಲ್ಲೆ ಮಾಡಿರುವ ಮೇಲ್ಕಂಡ ಆಸಾಮಿಯ ಮೇಲೆ ಕ್ರಮ ಜರುಗಿಸಿ ಎಂದು ಕೊಟ್ಟ ಹೇಳಿಕೆ ಮೇರೆಗೆ ಈ ಪ್ರವ ವರದಿ

9. ಹನೂರು ಠಾಣೆ ( ಮೊ.ನಂ 104/2020) ದಿನಾಂಕ: 22.08.2020 ಪಿರ್ಯಾದಿ ಸುರೇಶ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನಲ್ಲಿ ದಿನಾಂಕ: 21.08.2020 ರಂದು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ನನ್ನ ತಾಯಿಯಾದ ಶಿವಮ್ಮ ಕೋಂ ಹೊನ್ನಪ್ಪ ರವರಿಗೆ 50 ವರ್ಷ ವಯಸ್ಸಾಗಿದ್ದು ಇವರು ಗೂಳ್ಯದಬಯಲಿನಲ್ಲಿನ ಅಂಗಡಿಯಿಂದ ತರಕಾರಿಯನ್ನು ತೆಗೆದು ಕೊಂಡು ನಮ್ಮ ಮನೆಗೆ ಬರುತ್ತಿದ್ದಾಗ ಏಜಾಸ್ ಬಿನ್ ರಿಯಾಜ್ ಎಂಬುವವನು ಒಡೆಯರ ಪಾಳ್ಯ ಕಡೆಗೆ ಬೈಲೂರಿನಿಂದ ತನ್ನ ಟಾಟಾ ಏಸಿ ಗೂಡ್ಸ್ ಆಟೋ ಕೆಎ-18, ಬಿ 9190 ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಜೋರಾಗಿ ಬಂದು ನನ್ನ ತಾಯಿಯಾದ ಶಿವಮ್ಮ ರವರಿಗೆ ಡಿಕ್ಕಿ ಮಾಡಿರುತ್ತಾನೆ. ಇದರಿಂದ ನನ್ನ ತಾಯಿಯಾದ ಶಿವಮ್ಮ ರವರಿಗೆ ಬೆನ್ನಿನ ಮೂಳೆ ಮುರಿದಿದ್ದು, ನನ್ನ ತಾಯಿಯ ತಲೆಗೆ ಪೆಟ್ಟಾಗಿ ರಕ್ತಸ್ರಾವ ವಾಗಿರುತ್ತದೆ. ನೆನ್ನೆ ದಿನ ನಂತರ ನನ್ನ ತಾಯಿಯನ್ನು ಕೊಳ್ಳೇಗಾಲ ಸಕರ್ಾರಿ ಆಸ್ಪತ್ರೆಗೆ ದಾಖಲು ಮಾಡಿ ಅಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಜೆಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಿ ಎಂದು ತಿಳಿಸಿರುತ್ತಾರೆ. ನಾನು ನನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲು ಮಾಡಿ ನಾನೇ ಚಿಕಿತ್ಸೆಯನ್ನು ಕೊಡಿಸಿರುತ್ತೇನೆ. ಈ ದಿನ ಆಟೋ ಮಾಲೀಕನಿಗೆ ನಾನು ವಿಚಾರವನ್ನು ತಿಳಿಸಿದಾಗ ನೀವು ನನ್ನ ಮೇಲೆ ಕಂಪ್ಲೆಂಟ್ ನೀಡಿ ಎಂದು ತಿಳಿಸಿರುತ್ತಾನೆ ಆದ್ದರಿಂದ ತಾವುಗಳು ಕಾನೂನು ರೀತ್ಯಾ ಕ್ರಮ ಕೈಗೊಂಡು ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ ವ ವರದಿ.


Your Comment

Name :
Email:
Comment:
Submit

Website Designed and Developed by Global Buzz®