• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 06-08-2020

No of views : 53       No of Comments : 2

1. ಚಾಮರಾಜನಗರ ಪೂರ್ವ ಠಾಣೆ ( ಮೊ.ನಂ 126/2020 ) : ದಿನಾಂಕ 06/08/2020 ರಂದು ಪಿಯರ್ಾದಿ ದೊರೆಸ್ವಾಮಿ, ರೇಚಂಬಳ್ಳಿ ಯವರು ಆಸ್ಪತ್ರೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ದಿನಾಂಕ 06/08/2020 ರಂದು ಬೆಳಿಗ್ಗೆ 09.00 ಗಂಟೆ ಸಮಯದಲ್ಲಿ ನಮ್ಮ ಮನೆಯಿಂದ ಜಮೀನಿಗೆ ಹೋಗಲು ನಮ್ಮೂರಿನ ಬಸ್ಸ್ ನಿಲ್ದಾಣದ ರಸ್ತೆಯ ಕಡೆಗೆ ಹೋಗುತ್ತಿದ್ದು ಅಷ್ಟರಲ್ಲಿ ಕಾಗಲವಾಡಿ ಕಡೆಯಿಂದ ಹೊಂಗನೂರು ಕಡೆ ಹೋಗುವ ರಸ್ತೆಯ ಮಾರ್ಗ ಮದ್ಯ ಬಸ್ಸ್ ನಿಲ್ದಾಣದ ಬಳಿಯಲ್ಲಿ ಒಬ್ಬ ವ್ಯಕ್ತಿಯು ಕೆ,ಎ-10 ಯು 8131 ರ ಹೀರೋ ಹೊಂಡ ಬೈಕ್ ನಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಅಷ್ಟಕ್ಕೆ ಕೆಳಗೆ ಬಿದ್ದು ನನಗೆ ಎಡಗಾಲಿನ ತತ್ತಿ ಹತ್ತಿರ ಹಾಗು ಬಲಗಾಲಿನ ಹೆಬ್ಬೆರಳು ಮತ್ತು ನನ್ನ ಬೆನ್ನಿನ ಎಡ ಭಾಗ ಗಾಯವಾಗಿರುತ್ತದೆ. ನನ್ನ ಮೇಲೆ ಬೈಕಿನಿಂದ ಗುದ್ದಿಸಿ ಅಪಘಾತ ಮಾಡಿದ ನಂಜುಂಡಸ್ವಾಮಿ ಎಂಬುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ. ವರದಿ.

2. ಚಾಮರಾಜನಗರ ಪೂರ್ವ ಠಾಣೆ ( ಮೊ.ನಂ 127/2020) : ದಿನಾಂಕ 06/08/2020 ರಂದು ಪಿಯರ್ಾದಿ ಮಂಜುಳ, ಅಂಕನಶೆಟ್ಟಿಪುರ ಗ್ರಾಮ ರವರು ಪಿಕಾಡರ್ೋ ಆಸ್ಪತ್ರೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸ ಮಾಡಿಕೊಂಡಿರುತ್ತೇನೆ ನಾನು ಸುಮಾರು 30 ವರ್ಷಗಳಿಂದ ಅಂಕನಶೆಟ್ಟಿಪುರ ಗ್ರಾಮದಲ್ಲಿರುವ ವೇಲನ್ ಟೆಕ್ಸಟೆಲ್ ನಲ್ಲಿ ಎಳೆಕಟ್ಟುವ ಕೆಲಸ ಮಾಡಿಕೊಂಡಿರುತ್ತೇನೆ. ಎಂದಿನಂತೆ ದಿನಾಂಕ 04/08/2020 ರಂದು ನಾನು ಬೆಳಿಗ್ಗೆ ನಾನು ಮಾಮೂಲಿನಂತೆ ವೇಲನ್ ಟೆಕ್ಸಟೆಲ್ ಗೆ ಕೆಲಸಕ್ಕೆ ಹೋದೆ ಅಲ್ಲಿ ವಾಸಂತಿ, ರತ್ನಮ್ಮ. ಗೌರಮ್ಮ ಹಾಗು ಇತರರು ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಸುಮಾರು 02.30 ಗಂಟೆ ಸಮಯದಲ್ಲಿ ನಾನು ಯಂತ್ರದಲ್ಲಿ ಎಳೆಯನ್ನು ಕಟ್ಟುವಾಗ ನನ್ನ ಕೈ ಬೆರಳು ಯಂತ್ರಕ್ಕೆ ಸಿಲುಕಿ ನನ್ನ ಬಲಗೈ ನ ಮದ್ಯದ ಬೆರಳು ಹಾಗು ಉಂಗುರದ ಬೆರಳು ತುಂಡಾಗಿರುತ್ತದೆ ( ಕಟ್ಟಾಗಿರುತ್ತದೆ) ಆಗ ಅಲ್ಲಿ ಕೆಲಸ ಮಾಡುತ್ತಿದ್ದವರು ಹಾಗು ಸೂಪರ್ ವೈಜರ್ ನಂಜುಂಡಸ್ವಾಮಿ ರವರು ಕಾರಿನಲ್ಲಿ ಚಾಮರಾಜನಗರದ ಪಿಕಾಡರ್ೋ ಆಸ್ಪತ್ರೆಗೆ ಕರೆತಂದು ಸೇರಿಸಿರುತ್ತಾರೆ. ನಾನು ಎಳೆಕಟ್ಟುವ ಯಂತ್ರದಲ್ಲಿ ಕೆಲಸ ಮಾಡುವಾಗ ಯಾವುದೇ ಮುಂಜಾಗ್ರತೆ ಅನುಸರಿಸದೆ ನಿರ್ಲಕ್ಷತೆಯಿಂದ ಯಂತ್ರದಲ್ಲಿ ನನ್ನಿಂದ ಎಳೆಕಟ್ಟುವ ಕೆಲಸ ಮಾಡಿಸಿದ್ದರಿಂದ ನನ್ ಕೈ ಬೆರಳು ಯಂತ್ರಕ್ಕೆ ಸಿಲುಕಿ ನನ್ ಕೈಯನ ಎರಡು ಬೆರಳುಗಳು ತುಂಡಾಗಿರುತ್ತದೆ. ನಾನು ಈ ವಿಚಾರವನ್ನು ನಮ್ಮ ಮನೆಯವರಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ, ಆದ್ದರಿಂದ ವೇಲನ್ ಟಕ್ಸಟೆಲ್ ನ ಮಾಲೀಕರು ಹಾಗು ಸೂಪರ್ ವೈಜರ್ ನಂಜುಂಡಸ್ವಾಮಿಯವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿ ಕೋರಿಕೆ ಎಂದು ನೀಡಿದ ದೂರಿನ ಮೆರೆಗೆ ಈ ಪ್ರ,ವವರದಿ.

3. ಚಾಮರಾಜನಗರ ಪೂರ್ವ ಠಾಣೆ ( ಮೊ.ನಂ 128/2020) : ದಿನಾಂಕ 06/08/2020 ರಂದು ಪಿಯರ್ಾದಿ ಶ್ರೀಮತಿ ಗೀತಾ, ಇರಸವಾಡಿ ಗ್ರಾಮ ರವರು ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ತಂಗಿ ಜ್ಯೋತಿಯ ಮಗು ದಿನಾಂಕ 05/08/2020 ರಂದು ಸಂಜೆ 04.00 ಗಂಟೆ ಸಮಯದಲ್ಲಿ ಇರಸವಾಡಿ ಗ್ರಾಮದ ಬೇಕರಿ ಬಳಿ ರಸ್ತೆಯಲ್ಲಿ ಬರುತ್ತಿರುವಾಗ ಮಸಣಾಪುರ ಗ್ರಾಮದ ಕುಮಾರ ಬಿನ್ ಮುದ್ದಯ್ಯ ಎಂಬುವರು ಮೋಟಾರು ಸೈಕಲ್ ನಲ್ಲಿ ಯಳಂದೂರಿನಿಂದ ಮಸಣಾಪುರಕ್ಕೆ ಹೋಗುತ್ತಿದ್ದಾಗ ಅಜಾರೂಕತೆಯಿಂದ ಗಾಡಿಯನ್ನು ಓಡಿಸಿಕೊಂಡು ಬಂದು ಮನುವಿಗೆ ಡಿಕ್ಕಿ ಮಾಡಿದ ಪರಿಣಾಮ ಕೆಳಗೆ ಬಿದ್ದು ಏಟಾಗಿ ಕಿವಿಯಲ್ಲಿ ರತ್ಕ ಬರುತ್ತಿದ್ದು ನಂತರ ಮೂತರ್ಿ. ಮಹೇಶ. ರವರು ಆಟೋದಲ್ಲಿ ಯಳಂದೂರು ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿರುತ್ತಾರೆ. ಕಿವಿಯಲ್ಲಿ ರಕ್ತ ಬರುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲು ಮಾಡಿರುತ್ತೇವೆ, ಆದ್ದರಿಂದ ಮೋಟಾರು ಸೈಕಲ್ನಲ್ಲಿ ಗುದ್ದಿಸಿ ಗಾಯಪಡಿಸಿದ ಅಸಾಮಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ. ವರದಿ.

4. ಕುದೇರು ಠಾಣೆ ( ಯು.ಡಿ.ಆರ್ ನಂ 05/2020) : ದಿನಾಂಕ:06-08-2020 ರಂದು ಸಂಜೆ 5.30 ಗಂಟೆಯ ಸಮಯದಲ್ಲಿ ಪಿರ್ಯಾದಿ ಶಿವಪ್ರಸಾದ್, ಲಿಂಗಣಾಪುರ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಮ್ಮ ಸಹೋದರ ಮಾವ ಲೇಟ್ ಶಿವಣ್ಣನವರಿಗೆ ಇಬ್ಬರು ಗಂಡು ಮಕ್ಕಳು ಒಂದನೇ ಮಲ್ಲೇಶ ರವರಿಗೆ ಮದುವೆಯಾಗಿದ್ದು, ಎರಡನೇ ರವಿಗೆ ಮದುವೆಯಾಗಿರಲಿಲ್ಲ. ರವಿ ಚಿಕ್ಕ ವಯಸ್ಸಿನಲ್ಲೇ ಬೀಡಿ ಸೇದುವ ಚಟ ಬೆಳಸಿಕೊಂಡಿದ್ದರಿಂದ ಅವನಿಗೆ ಸೂಲು ದಮ್ಮು ಖಾಯಿಲೆ ಇತ್ತು ಹಾಗೂ ಈಗ್ಗೆ ಆರು ತಿಂಗಳ ಹಿಂದೆ ಅವನಿಗೆ ಪಾರ್ಶವಾಯು ಕಾಯಿಲೆ ಬಂದಿದ್ದು ಅದಕ್ಕಾಗಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದ, ದಿನಾಂಕ:31.07.2020 ರಂದು ಮನೆಯಲ್ಲಿ ಎಲ್ಲರು ಊಟಮಾಡಿ ಮಲ್ಲಗಿದ್ದಾಗ ರವಿ ಮನೆಯ ಹಿಂಭಾಗದಲ್ಲಿ ಮಲುಗಿದನು. ರಾತ್ರಿ ಸುಮಾರು 10.30 ಗಂಟೆಯ ಸಮಯದಲ್ಲಿ ಇದ್ದಕ್ಕಿಂದತೆ ಹೊಟ್ಟೆಹುರಿ ಎಂದು ಕೂಗಾಡುತ್ತಿದನು ಆಗ ರವಿ ಅಣ್ಣ ಮಲ್ಲೇಶ, ರವಿಯ ಹೆಂಡತಿ ಶೀಲಾ ಮತ್ತು ಅವರ ತಾಯಿ ಜಯಮ್ಮ ರವರು ತಕ್ಷಣ ಹೋಗಿ ನೋಡಿದಾಗ ನಾನು ನಿದ್ದೆಗಣ್ಣಿನಲ್ಲಿ ತಿಳಿಯದೆ ಸೂಲು ದಮ್ಮಿಗೆ ತೆಗೆದುಕೊಳ್ಳುವ ಮಾತ್ರೆಯೆಂದು ತಿಳಿದು ಬೀತನೆ ಬೀಜಕ್ಕೆ ಹಾಕುವ ವಿಷದ ಮಾತ್ರೆಯನ್ನು ನುಂಗಿರುತ್ತೇನೆ ಎಂದು ತಿಳಿಸಿದಾಗ ತಕ್ಷಣ ಮಲ್ಲೇಶ ತನ್ನ ಕಾರಿನಲ್ಲಿ ರವಿಯನ್ನು ಕರೆದುಕೊಂಡು ಮೈಸೂರು ಜೆ.ಎಸ್,ಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು, ಈ ದಿನ ದಿನಾಂಕ:06.08.2020 ರಂದು ಸಂಜೆ ಸುಮಾರು 4.30 ಗಂಟೆಯ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರವಿ ಮೃತಪಟ್ಟಿರುತ್ತಾನೆ, ಅವನು ತನಗೆ ತಿಳಿಯದೆ ಸೂಲು ದಮ್ಮಿಗೆ ತೆಗೆದುಕೊಳ್ಳವ ಮಾತ್ರೆಯೆಂದು ಬೀತನೆ ಬೀಜದ ರಕ್ಷಣೆಗೆ ಹಾಕುವ ವಿಷದ ಮಾತ್ರೆಯನ್ನು ಆಕಸ್ಮಿಕವಾಗಿ ಸೇವಿಸಿ ಮೃತಪಟ್ಟಿರುತ್ತಾನೆ ಅವನ ಸಾವಿನ ವಿಚಾರದಲ್ಲಿ ಯಾವುದೆ ಸಂಶಯವಿರುವುದಿಲ್ಲ ಮುಂದಿನ ಕ್ರಮ ಜರುಗಿಸಬೇಕೆಂದು ಇದ್ದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.

5. ಗುಂಡ್ಲುಪೇಟೆ ಠಾಣೆ (ಮೊ. ನಂ 259/2020) : ದಿನಾಂಕ: 31.07.2020 ರಂದು ಬೆಳಿಗ್ಗೆ 8.00 ಗಂಟೆಯಲ್ಲಿ ಕೇರಳದ ಎನರ್ಾಕುಲಂನಿಂದ ರಂಜೀತ್ಕುಮಾರ್ ನು ತನ್ನ ಬಾಬ್ತು ಕೆಎಲ್-03 ಕ್ಯೂ7458 ರ ಲಾರಿಯಲ್ಲಿ ಯೂರಿಯ ಮೂಟೆಗಳನ್ನು ಲೋಡ್ ಮಾಡಿಕೊಂಡು ಕನರ್ಾಟಕದ ಹಾಸನಕ್ಕೆ ಬಂಡಿಪುರ ಮಾರ್ಗವಾಗಿ ಅರಣ್ಯ ಪ್ರದೇಶ ರಸ್ತೆಯ ಇಳಿಜಾರಿನಲ್ಲಿ ಬರುತ್ತಿದ್ದಾಗ ಲಾರಿ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ಲಾರಿಯನ್ನು ನಿಯಂತ್ರಿಸಲಾಗದೇ ರಸ್ತೆಯ ಬಲಭಾಗದ ಬದಿಗೆ ಬಿಟ್ಟು ಲಾರಿಯು ಮಗುಚಿದ ಪರಿಣಾಮ ಲಾರಿ ಚಾಲನೆ ಮಾಡುತ್ತಿದ್ದ ಚಾಲಕ ರಂಜಿತ್ ಮತ್ತು ಕ್ಲೀನರ್ ಮೀರಜ್ ಇಬ್ಬರಿಗೂ ಏಟಾಗಿ ಲಾರಿ ಸಹ ಸಂಪೂರ್ಣ ಜಖಂಗೊಂಡಿರುತ್ತದೆ. ಗಾಯಾಳುಗಳನ್ನು ಗುಂಡ್ಲುಪೇಟೆ ಸಕರ್ಾರಿ ಆಸ್ಪತ್ರೆಗೆ ತಂದು ತೋರಿಸಿ ಹೆಚ್ಚಿನ ಚಿಕಿತ್ಸೆಗೆ ಕೇರಳ ಚಿಕಿತ್ಸೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಕ್ಯಾಲಿಕಟ್ನ ಮೀಮ್ಸ್ ಆಸ್ಪತ್ರೆಗೆ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿದ್ದು ಲಾರಿ ಚಾಲಕ ರಂಜೀತ್ನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಈ ದಿನ ತಡವಾಗಿ ಬಂದು ದೂರು ನೀಡಿದ ಮೇರೆಗೆ ಈ ಪ್ರ ವ ವರದಿ.

6. ಗುಂಡ್ಲುಪೇಟೆ ಠಾಣೆ (ಮೊ.ನಂ 260/2020): ಪಿರ್ಯಾದಿ ಶಿವಾನಂದ ರವರು ಹಾಗೂ ಇವರ ಸೋದರ ಮಾವ ಲೇಟ್ ಶಿವಾನಂದ ರವರು ನೇನೆಕಟ್ಟೆ ಗ್ರಾಮದ ರಾಜಶೆಟ್ಟಿ ರವರಿಗೆ ಜಮೀನಿನ ಖಚರ್ಿಗೆ ಈಗ್ಗೆ 2 1/2 ವರ್ಷಗಳಲ್ಲಿ 80000 ಹಣವನ್ನು ಸಾಲವಾಗಿ ನೀಡಿದ್ದು, ಆಗಿನಿಂದ ಹಣವನ್ನು ನೀಡಿರಲಿಲ್ಲ. ದಿನಾಂಕ: 06.08.2020 ರಂದು ಬೆಳಿಗ್ಗೆ 10.15 ಗಂಟೆ ಸಮುಯದಲ್ಲಿ ಪಿರ್ಯಾದಿ ಶಿವಾನಂದ ರವರು ತಮ್ಮ ಗ್ರಾಮದ ಮಾಲೇಗೌಡ ರವರ ಮನೆ ಮುಂದೆ ಆರೋಪಿತರಾದ ರಾಜಶೆಟ್ಟಿ, ರೇವಣ್ಣ, ಚಂದ್ರಶೇಖರ ರವರುಗಳನ್ನು ಹಣ ಕೇಳಿದ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ದೊಣ್ಣೆಗಳಿಂದ ಪಿರ್ಯಾದಿಯವರ ತಲೆ, ಮೈಕೈಗೆ ಹೊಡೆದು ರಕ್ತಗಾಯಪಡಿಸಿ, ನಂತರ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗ ಈ ಪ್ರ ವ ವರದಿ.

7. ಗುಂಡ್ಲುಪೇಟೆ ಠಾಣೆ (ಮೊ.ನಂ 261/2020): ದಿನಾಂಕ 06.08.2020 ರಂದು ಮಧ್ಯಾಹ್ನ 2.00 ಗಂಟೆ ಸಮಯದಲ್ಲಿ ಪಿ.ಎಸ್.ಐ ಡಿ.ಕೆ ಲತೇಶ್ ರವರು ಗಸ್ತಿನಲ್ಲಿದ್ದಾಗ, ಕಲಿಗೌಡನಹಳ್ಳಿ ಗ್ರಾಮದ ಕುಮಾರ ರವರ ಜಮೀನಿನ ಬಳಿ ಸಕರ್ಾರಿ ಓಣಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್ ಬಾಹರ್ ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಠಾಣಾ ಕೆ.ಜಿ,ಎಸ್.ಸಿ ಯಲ್ಲಿ ನೊಂದಾಯಿಸಿಕೊಂಡು, ದಾಳಿ ಮಾಡಿ ಸಂಜ್ಞೆಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು, ನಂತರ ಪಂಚಾಯ್ತುದಾರರು ಮತ್ತು ಸಿಬ್ಬಂದಿಯವರೊಡನೆ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ, 09 ಜನ ಆಸಾಮಿಗಳನ್ನು ಹಿಡಿದುಕೊಂಡು ಅಖಾಡದಲ್ಲಿದ್ದ ನಗದು ಹಣ, 52 ಇಸ್ಪೀಟ್ ಎಲೆಗಳು, ಮತ್ತು ಒಂದು ಪ್ಲಾಸ್ಟಿಕ್ ತಾಟನ್ನು ಮುಂದಿನ ಕ್ರಮದ ಬಗ್ಗೆ ಅಮಾನತ್ತುಪಡಿಸಿಕೊಂಡು ಠಾಣೆಗೆ ಕರೆತಂದು ಹಾಜರುಪಡಿಸಿ ಸದರಿಯವರ ಮೇಲೆ ಕಲಂ 87 ಕೆ.ಪಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಲು ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ.

8. ಕೊಳ್ಳೇಗಾಲ ಗ್ರಾಮಾಂತರ ಠಾಣೆ (ಮೊ.ನಂ 146/2020): ದಿನಾಂಕ 06-08-2020 ರಂದು ಪಿರ್ಯಾದಿ ಆರ್. ಬಿಸಿಲಯ್ಯ, ಆಹಾರ ನಿರೀಕ್ಷಕರು, ತಾಲ್ಲೂಕು ಕಛೇರಿ, ಕೊಳ್ಳೇಗಾಲ ಯವರು ಠಾಣೆಗೆ ಹಾಜರಾಗಿ ನೀಡಿದ ವರದಿ ಏನೆಂದರೆ ಈ ದಿನ ಬೆಳಗ್ಗೆ 06-00 ಗಂಟೆ ಸಮಯದಲ್ಲಿ ವಿಶ್ರಾಂತಿಯಲ್ಲಿರುವಾಗ್ಗೆ ಪಿಎಸ್ಐ ಶ್ರೀ.ವಿ.ಸಿ.ಅಶೋಕ್ರವರು ನನಗೆ ಕರೆ ಮಾಡಿ ಯಾರೋ ಆಸಾಮಿಗಳು ಬಿಳಿ ಬಣ್ಣದ ಟಾಟಾ ಮ್ಯಾಜಿಕ್ ಪ್ಯಾಸೆಂಜರ್ ವಾಹನದಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಿರುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡು ಯಳಂದೂರು ಟೌನ್ ಕಡೆಯಿಂದ ಕುಂತೂರು ಗ್ರಾಮದ ಮಾರ್ಗವಾಗಿ ನರಸೀಪುರ ತಾಲ್ಲೂಕು ಮಾವಿನಹಳ್ಳಿ ಗ್ರಾಮದ ಕಡೆಗೆ ಸಾಗಾಣಿಕೆ ಮಾಡುತ್ತಿರುವುದಾಗಿ ಬಾತ್ಮೀದಾರರಿಂದ ಮಾಹಿತಿ ಬಂದಿರುವುದದಾಗಿ ತಿಳಿಸಿದ್ದು ನಾನು ಪಿಎಸ್ಐ ಮತ್ತು ಅವರ ಸಿಬ್ಬಂದಿ ಹಾಗೂ ಪಂಚರ ಜೊತೆ ಕುಂತೂರು ಗ್ರಾಮದ ಪ್ರಭುಲಿಂಗೇಶ್ವರ ಬೆಟ್ಟದ ಬಳಿ ಕಾಯುತ್ತಿದ್ದಾಗ ಕೆಎ 05 ಎಬಿ 379 ಟಾಟಾ ಮ್ಯಾಜಿಕ್ ಪ್ಯಾಸೆಂಜರ್ ವಾಹನದಲ್ಲಿ ಆರೋಪಿತರು ಯಾವುದೇ ರಹದಾರಿ ಬಿಲ್ಲುಗಳು ಇಲ್ಲದೇ 38 ಪಾಸ್ಟೀಕ್ ಚೀಲಗಳಲ್ಲಿ ಒಟ್ಟು 1822 ಕೆಜಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಆಸಾಮಿಗಳನ್ನು ಸ್ವತ್ತುಗಳು ಮತ್ತು ವಾಹನ ಸಮೇತ ಅಮಾನತ್ತು ಮಹಜರ ಮುಖೇನ ವಶಪಡಿಸಿಕೊಂಡು ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿ ಮೇರೆಗೆ ಈ ಪ್ರ ವ ವರದಿ.

9. ಕೊಳ್ಳೇಗಾಲ ಗ್ರಾಮಾಂತರ ಠಾಣೆ (ಮೊ.ನಂ 147/2020): ದಿ:06-08-2020 ರಂದು ಪಿಎಸ್ಐ ಅಶೋಕ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ಏನೆಂದರೆ ದಿನಾಂಖ 06-08-2020 ರಂದು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ತಿಮ್ಮರಾಜೀಪುರ ಗ್ರಾಮದ ಬೀಟ್ ಸಿಬ್ಬಂದಿಯಾದ ಸಿಪಿಸಿ 152 ಅನಿಲ್ಕುಮಾರ್ ರವರು ಪೋನ್ ಕರೆ ಮಾಡಿ ತಿಳಿಸಿದ್ದೇನೆಂದರೆ, ತಿಮ್ಮರಾಜೀಪುರ ಗ್ರಾಮದ ಹೊಸ ಬಡಾವಣೆಯಲ್ಲಿರುವ ನೀರಿನ ತೊಂಬೆಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಮಹಿಳಾ ಆಸಾಮಿ ಅಕ್ರಮವಾಗಿ ಮದ್ಯದ ಪೌಚ್ಗಳನ್ನು ಒಂದು ಪ್ಲಾಸ್ಟಿಕ್ ಕವರ್ನಲ್ಲಿ ಇಟ್ಟುಕೊಂಡು ರಸ್ತೆಯಲ್ಲಿ ಓಡಾಡುವ ಜನರನ್ನು ಕೂಗಿ ಕರೆಯುತ್ತಾ, ಮದ್ಯದ ಪೌಚ್ಗಳನ್ನು ನೀಡಿ ಮದ್ಯಪಾನ ಮಾಡಲು ಅವಕಾಶ ನೀಡುತ್ತಿದ್ದಾರೆಂಬುದಾಗಿ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಹಾಗೂ ಪಂಚರನ್ನು ಕರೆದುಕೊಂಡು ಹೋಗಿ ದಾಳಿ ಮಾಡಿ ಪಂಚರ ಸಮಕ್ಷಮ ಸ್ಧಳದಲ್ಲಿ ಅಮಾನತ್ತು ಮಹಜರ್ ಮುಖೇನ ಮಾಲು ಸಮೇತ ಆಸಾಮಿ ಶ್ರೀಮತಿ ಪುಟ್ಟಮ್ಮ ರವರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ನೀಡಿದ ಮೇರೆಗೆ ಈ ಪ್ರ ವ ವರದಿ.

10. ಕೊಳ್ಳೇಗಾಲ ಗ್ರಾಮಾಂತರ ಠಾಣೆ (ಮೊ.ನಂ 148/2020): ದಿನಾಂಕ 06-08-2020 ರಂದು ಪಿಎಸ್ಐ ಅಶೋಕ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ಏನೆಂದರೆ ದಿನಾಂಕ 06-08-2020 ರಂದು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ತಿಮ್ಮರಾಜೀಪುರ ಗ್ರಾಮದ ಬೀಟ್ ಸಿಬ್ಬಂದಿಯಾದ ಸಿಪಿಸಿ 152 ಅನಿಲ್ಕುಮಾರ್ ರವರು ಪೋನ್ ಕರೆ ಮಾಡಿ ತಿಳಿಸಿದ್ದೇನೆಂದರೆ, ತಿಮ್ಮರಾಜೀಪುರ ಗ್ರಾಮದ ಹೊಸ ಬಡಾವಣೆಯ ಸಾರ್ವಜನಿಕ ರಸ್ತೆಯಲ್ಲಿ ಉಮಾ ಎಂಬ ಮಹಿಳಾ ಆಸಾಮಿಯು ಅಕ್ರಮವಾಗಿ ಮದ್ಯದ ಪೌಚ್ಗಳನ್ನು ಒಂದು ಪ್ಲಾಸ್ಟಿಕ್ ಕವರ್ನಲ್ಲಿ ಇಟ್ಟುಕೊಂಡು, ರಸ್ತೆಯಲ್ಲಿ ಓಡಾಡುವ ಜನರನ್ನು ಕೂಗಿ ಕರೆಯುತ್ತಾ ಮದ್ಯದ ಪೌಚ್ಗಳನ್ನು ನೀಡಿ ಮದ್ಯಪಾನ ಮಾಡಲು ಅವಕಾಶ ನೀಡುತ್ತಿದ್ದಾನೆಂಬುದಾಗಿ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಹಾಗೂ ಪಂಚರನ್ನು ಕರೆದುಕೊಂಡು ಹೋಗಿ ದಾಳಿ ಮಾಡಿ ಪಂಚರ ಸಮಕ್ಷಮ ಸ್ಧಳದಲ್ಲಿ ಅಮಾನತ್ತು ಮಹಜರ್ ಮುಖೇನ ಮಾಲು ಸಮೇತ ಆಸಾಮಿ ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ನೀಡಿದ ಮೇರೆಗೆ ಈ ಪ್ರ ವ ವರದಿ.


Your Comment

Name :
Email:
Comment:
Submit

Reader's Comments(2)

sunil   says on Sunday 09 August 2020

ಸರ್ ಮಂಗಲ ಹೊಸೂರು ಗ್ರಾಮದಲ್ಲಿ ಸುಮಾರು 7 ಜನರು ಮದ್ಯಪಾನ ವನ್ನು ಮಾಡುತ್ತಿದ್ದರೆ .ಹಲವಾರು ಬಾರಿ ಸಂತೆ ಮರಳ್ಳಿ ಪೋಲಿಸ್ ಠಾಣೆ ಹೇಳಿದರು ಅವರು ಯಾವುದೇ ರೀತಿಯಲ್ಲೂ ಗ್ರಾಮದಲ್ಲಿ ಪರಿಶೀಲಸದೆ (ಬಿಟ್ )ಮಾಡದೆ ಅಕ್ಕ ಪಕ್ಕ ಗ್ರಾಮದವರು ಬಂದು ಮಧ್ಯಪಾನವನ್ನು ತೆಗೆದು ಕೋಳ್ಳುವುದಕ್ಕೆ ದಿನನಿತ್ಯ ಗ್ರಾಮದ ಜನತೆಗೆ ಬಂದು ಹಲವರು ಜನರು covid19 ಇಂತಹ ಸಂಧ೯ದಲ್ಲೂ ಸಹ ಬಂದು ಹೋಗುತ್ತಾರೆ .ತಾವು ಇದನ್ನು ಗಮನದಲ್ಲಿ ಇಟ್ಟುಕೊಂಡು ತಾವು ಗ್ರಾಮದಲ್ಲಿ ಮಧ್ಯಪಾನವನ್ನು ತಡೆಗಟ್ಟಲು ನಿಮ್ಮ ಸಹಕಾರದೊಂದಿಗೆ ಗ್ರಾಮದ ಜನತೆಗೆ ಒಳ್ಳೇ ಜೀವನ ನೆಡೆಸಲು ಅವಕಾಶ ಮಾಡಿಕೋಡಬೇಕಾಗಿ .ತಾವು ಕ್ರಮವಹಿಸಬೇಕಾಗಿ ತಮ್ಮಲಿ ಮನವಿ


sunil   says on Sunday 09 August 2020

ಸರ್ ಮಂಗಲ ಹೊಸೂರು ಗ್ರಾಮದಲ್ಲಿ ಸುಮಾರು 7 ಜನರು ಅ ಕ್ರಮವಾಗಿ ಮದ್ಯಪಾನ ವನ್ನು ಮಾಡುತ್ತಿದ್ದರೆ .ಹಲವಾರು ಬಾರಿ ಸಂತೆ ಮರಳ್ಳಿ ಪೋಲಿಸ್ ಠಾಣೆ ಹೇಳಿದರು ಅವರು ಯಾವುದೇ ರೀತಿಯಲ್ಲೂ ಗ್ರಾಮದಲ್ಲಿ ಪರಿಶೀಲಸದೆ (ಬಿಟ್ )ಮಾಡದೆ ಅಕ್ಕ ಪಕ್ಕ ಗ್ರಾಮದವರು ಬಂದು ಮಧ್ಯಪಾನವನ್ನು ತೆಗೆದು ಕೋಳ್ಳುವುದಕ್ಕೆ ದಿನನಿತ್ಯ ಗ್ರಾಮದ ಜನತೆಗೆ ಬಂದು ಹಲವರು ಜನರು covid19 ಇಂತಹ ಸಂಧ೯ದಲ್ಲೂ ಸಹ ಬಂದು ಹೋಗುತ್ತಾರೆ .ತಾವು ಇದನ್ನು ಗಮನದಲ್ಲಿ ಇಟ್ಟುಕೊಂಡು ತಾವು ಗ್ರಾಮದಲ್ಲಿ ಮಧ್ಯಪಾನವನ್ನು ತಡೆಗಟ್ಟಲು ನಿಮ್ಮ ಸಹಕಾರದೊಂದಿಗೆ ಗ್ರಾಮದ ಜನತೆಗೆ ಒಳ್ಳೇ ಜೀವನ ನೆಡೆಸಲು ಅವಕಾಶ ಮಾಡಿಕೋಡಬೇಕಾಗಿ .ತಾವು ಕ್ರಮವಹಿಸಬೇಕಾಗಿ ತಮ್ಮಲಿ ಮನವಿ


Website Designed and Developed by Global Buzz®