• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 05-08-2020

No of views : 38       No of Comments : 0

1. ಚಾಮರಾಜನಗರ ಪಟ್ಟಣ ಠಾಣೆ ( ಮೊ.ನಂ 70/2020 ) : ದಿನಾಂಕಃ 28.07.2020 ರಂದು ಪಿರ್ಯಾದಿ ರಂಗನಾಥ, ದೊಡ್ಡಮೋಳೆ ಗ್ರಾಮ ಯವರು ಠಾಣೆಗೆ ಹಾಜರಾಗಿ ಚಾ.ನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಮಾನ್ಯ ಪುಟ್ಟರಂಗಶೆಟ್ಟರ ಬಗ್ಗೆ ಮಾನ್ಯ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದಶರ್ಿಗಳಾದ ಶಿವಕುಮಾರ್ ರವರು ಪತ್ರಿಕಾ ಗೋಷ್ಠಿ ನಡೆಸಿದ್ದು, ಈ ವಿಷಯ ದಿನ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿರುತ್ತದೆ ಈ ವಿಷಯವನ್ನು ತೆಗೆದುಕೊಂಡು ಕೆಲವು ಶಾಸಕರ ಅಭಿಮಾನಿಗಳೆಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮಾನ್ಯ ಮಂಗಲ ಶಿವಕುಮಾರ್ ರವರ ಬಗ್ಗೆ ಹಾಗೂ ಬಿಜೆಪಿಯ ಉಪ್ಪಾರ ಮುಖಂಡರ ಬಗ್ಗೆ ಆಶ್ಲೀಲವಾಗಿ ಅವಹೇಳನಕಾರಿಯಾಗಿ ಮನಸೋ ಇಚ್ಚೆ ನಿಂದಿಸಿರುತ್ತಾರೆ ಹಾಗೂ ವೈಯುಕ್ತಿಕವಾಗಿ ತೇಜೋವದೆ ಮಾಡಿರುವುದಲ್ಲದೆ ಜಾತಿ ಜಾತಿಗಳ ನಡುವೆ ಕೋಮುಗಳ ನಡುವೆ ಸಮಾಜದ ಸ್ವಾಸ್ತ್ಯ ಹಾಳು ಮಾಡುತ್ತಿದ್ದು ಚಿಕ್ಕಸ್ವಾಮಿಶೆಟ್ಟಿ ಕಾಗಲವಾಡಿ ಮೊಳೆ ಗ್ರಾಮ ಹಾಗೂ ರಮೇಶ್ ಆರ್ ಮತ್ತು ರಾಜೇಂದ್ರ ರಾಜೆ, ದೀಪಕ್ ಉಪ್ಪಾರ ಕಿರಣ್ ಕೆಚ್ಚೆದೆಯ ಕನ್ನಡಿಗ ಯರಿಯೂರು, ಎಂಬುವರು ತಮ್ಮ ಪೇಸ್ ಬುಕ್ ಮೂಲಕ ಕೆಟ್ಟದಾಗಿ ಕಾಮೆಂಟ್ ಮಾಡಿರುತ್ತಾರೆ. ಇವರ ವಿರುದ್ದ ಕಾನೂನು ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಠಾಣಾ ಜಿಎಸ್ಸಿ ನಂ 401/2020 ರಲ್ಲಿ ನೊಂದಾಯಿಸಿಕೊಂಡಿರುತ್ತದೆ ನಂತರ ಸದರಿ ಅಸಂಜ್ಞೆಯ ಪ್ರಕರಣದಲ್ಲಿ ಕಲಂ 500 501 504 507 ಐಪಿಸಿ ರೀತ್ಯಾ ಪ್ರಕರಣ ನೊಂದಾಯಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿಯನ್ನು ನೀಡುವಂತೆ ಘನ ನ್ಯಾಯಾಲಯದಲ್ಲಿ ಕೋರಿದ್ದು, ಘನ ನ್ಯಾಯಾಲಯವು ಅನುಮತಿಯನ್ನು ನೀಡಿದ ಮೇರೆಗೆ.

2. ಗುಂಡ್ಲುಪೇಟೆ ಠಾಣೆ ( ಯು.ಡಿ.ಆರ್ ನಂ 19/2020) : ಪಿರ್ಯಾದಿ ಅಕ್ಬರ್ ಅಲಿ, ಮಲ್ಲಯ್ಯನಪುರ ಗ್ರಾಮ ರವರ ಬಾಮೈದ ಅಬುತಾಯಿರ್ ಎಂಬುವವನು ಈಗ್ಗೆ 1 ವರ್ಷದ ಹಿಂದೆ ಗೂಡ್ಲೂರಿನಿಂದ ಗುಂಡ್ಲುಪೇಟೆಗೆ ಬಂದು ಹೋಟೆಲ್ ಸಪ್ಲೈಯರ್ ಕೆಲಸ ಮಾಡಿಕೊಂಡಿದ್ದು ಬಂದ ಹಣದಲ್ಲಿ ಕುಡಿಯುತ್ತಿದ್ದನು. ಲಾಕ್ಡೌನ್ ಆದಾಗಿನಿಂದ ಕೂಲಿ ಕೆಲಸ ಸಿಗದೆ, ಭಿಕ್ಷೆ ಬೇಡಿಕೊಂಡು ತಿನ್ನುತ್ತಿದ್ದು ಸರಿಯಾಗಿ ಊಟ ಸೇವಿಸದೆ ನಿತ್ರಾಣಗೊಂಡು ಆರೋಗ್ಯ ಸಮಸ್ಯೆಯಿಂದ ಗುಂಡ್ಲುಪೇಟೆ ಪಟ್ಟಣದ ಬಿ.ಇ.ಒ ಕಛೇರಿ ಹತ್ತಿರ ಈ ದಿನ ಸಂಜೆ. 5.00 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾನೆ. ಈತನ ಸಾವಿನ ಬಗ್ಗೆ ಸಂದೇಹ ಇರುವುದಿಲ್ಲ. ಎಂದು ಕೊಟ್ಟ ದೂರಿನ ಮೇರೆಗೆ ಈ ಯು.ಡಿ.ಆರ್ ವರದಿ.

3. ಅಗರ ಮಾಂಬಳ್ಳಿ ಠಾಣೆ ( ಯು.ಡಿ.ಆರ್ ನಂ 03/2020) : ದಿನಾಂಕ :05-8-2020 ರಂದು ಸಂಜೆ ಪಿರ್ಯಾದಿ ಚಿಕ್ಕಸಿದ್ದಯ್ಯ, ಬಸ್ತೀಪುರ ಗ್ರಾಮ ಯವರು ಕೊಳ್ಳೇಗಾಲ ಸಕರ್ಾರಿ ಆಸ್ಪತ್ರೆಯಲ್ಲಿ ನೀಡಿದ ಲಿಖಿತ ದೂರೇನೆಂದರೆ ಪಿರ್ಯಾದಿಯವರ ಮಗಳಾದ ರತ್ನಮ್ಮಳನ್ನು ಮಾಂಬಳ್ಳಿ ಗ್ರಾಮದ ಚಿನ್ನರಾಜು ಎಂಬುವರಿಗೆ ಕೊಟ್ಟು 3 ವರ್ಷಗಳ ಹಿಂದೆ ಮದುವೆ ಮಾಡಿದ್ದು ಆಕೆಗೆ ಒಂದು ಗಂಡು ಮಗು ಇದ್ದು ಹಾಲಿ ಗಭರ್ಿಣಿಯಾಗಿರುತ್ತಾಳೆ. ಈ ದಿನ ಮಧ್ಯಾಹ್ನ ಆಕೆಯ ನಾದಿನಿ ರಾಧ ಪಿರ್ಯಾದಿಗೆ ಕರೆ ಮಾಡಿ ನಿಮ್ಮ ಮಗಳಿಗೆ ಲೋ ಬಿಪಿ ಆಗಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದಳು. ಪಿರ್ಯಾದಿಯವರು ಕೊಳ್ಳೇಗಾಲ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲಾಗಿ ಪಿರ್ಯಾದಿಯವರ ಮಗಳು ತನ್ನ ಗಂಡನ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿ ಈಕೆ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

4. ಕೊಳ್ಳೇಗಾಲ ಪಟ್ಟಣ ಠಾಣೆ ( ಯು.ಡಿ.ಆರ್ ನಂ 03/2020) : ದಿನಾಂಕ:-05-08-2020 ರಂದು ಪಿರ್ಯಾದಿ ಗೀತಾ ಬಾಪುನಗರ ರವರು ಠಾಣೆಗೆ ಬಂದು ದಿನಾಂಕ 04-08-2020 ರಂದು ರಾತ್ರಿ 09-45 ಗಂಟೆ ಸಮಯದಲ್ಲಿ ನಮ್ಮ ಮನೆಗೆ ನಮ್ಮೂರಿನ ಪ್ರೇಮ ಎಂಬುವರು ಬಂದು ನಿಮ್ಮ ತಂದೆ ವೆಂಕಟೇಶ್ ರವರಿಗೆ ಈ ದಿನ ರಾತ್ರಿ ಸುಮಾರು 9-30 ಗಂಟೆ ಸಮಯದಲ್ಲಿ ಬಾಪುನಗರದ ಪೆಟ್ರೋಲ್ ಬಂಕ್ ಹತ್ತಿರ ನಮ್ಮ ಪೆಟ್ಟಿ ಅಂಗಡಿಯ ಸ್ವಲ್ಪ ದೂರದಲ್ಲಿ ಯಾವುದೋ ವಾಹನ ಅಪಘಾತಪಡಿಸಿರುತ್ತದೆ. ನಿಮ್ಮ ತಂದೆಗೆ ಅಪಘಾತದಿಂದ ಬಲಗಾಲಿನ ಹತ್ತಿರ ರಕ್ತಗಾಯವಾಗಿದೆ ಎಂದು ತಿಳಿಸಿರುತ್ತಾರೆ. ನಂತರ ನಾವು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಂದೆಯವರು ಬಾಪುನಗರದ ಎದುರುಗಡೆ ಇರುವ ಭಾರತ್ ಪೆಟ್ರೋಲ್ ಬಂಕ್ ಬಳಿ ಇರುವ ಪ್ರೇಮ ಎಂಬುವರ ಪೆಟ್ಟಿ ಅಂಗಡಿ ಬಳಿ ಕೊಳ್ಳೇಗಾಲ ಮೈಸೂರು ಮುಖ್ಯ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಮುಡಿಗುಂಡ ಕಡೆಯಿಂದ ಕೊಳ್ಳೇಗಾಲ ಕಡೆಗೆ ಯಾವುದೋ ವಾಹನವನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ನನ್ನ ತಂದೆಗೆ ಬಲಗಾಲಿನ ಹತ್ತಿರ ರಕ್ತಗಾಯವಾಗಿ ಮೂಳೆ ಮುರಿದಿರುತ್ತದೆ. ಅಪಘಾತಪಡಿಸಿದ ಅಪರಿಚಿತ ವಾಹನ ಮತ್ತು ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರ ವ ವರದಿ

5. ಕೊಳ್ಳೇಗಾಲ ಪಟ್ಟಣ ಠಾಣೆ (ಮೊ. ನಂ 100/2020) : ದಿನಾಂಕ:05-08-2020 ಪಿರ್ಯಾದಿ ಎಂ. ಹನುಮಂತುರವರು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾನು ದಿ:30-04-2020 ರಂದು ಸಂಜೆ 4-00 ಗಂಟೆಗೆ ನಮ್ಮ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿನ ನನ್ನ ತಮ್ಮನ ಮನೆಗೆ ಹೋಗಿದ್ದು ನಂತರ 15 ದಿನಗಳ ನಂತರ ದಿ:15-05-2020 ರಂದು ಮಧ್ಯಾಹ್ನ 03-00 ಗಂಟೆಗೆ ಬಂದು ನಮ್ಮ ಮನೆ ನೋಡಲಾಗಿ ಮನೆ ಬಾಗಿಲು ಮೀಟಿ ತರೆದಂತೆ ಇದ್ದು ನಂತರ ಮನೆ ಒಳಗಡೆ ಹೋಗಿ ನೋಡಲಾಗಿ ಬೀರುವನ್ನು ಸಹ ಮೀಟಿ ತೆಗೆದಿದ್ದು ನಂತರ ಬೀರುವನ್ನು ಪರಿಶೀಲಿಸಿ ನೋಡಲಾಗಿ ಬೀರಿನಲ್ಲಿದ್ದ ಒಟ್ಟು 82 ಗ್ರಾಂ ತೂಕದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ಇತ್ಯಾದಿ.

6. ಹನೂರು ಪೊಲೀಸ್ ಠಾಣೆ (ಮೊ.ಸಂ 96/2020): ದಿನಾಂಕ : 05.08.2020 ರಂದು ಪಿರ್ಯಾದಿ ಪ್ರಸಾದ್ ರವರು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ನೀಡಿದ ಲಿಖಿತ ದೂರಿನಲ್ಲಿ ಕೊಂಗರಹಳ್ಳಿ ಗ್ರಾಮದ ನನ್ನ ಸ್ನೇಹಿತ ಮಹದೇವಪ್ರಭು ಬಿನ್ ಲೇಟ್ ಗುರುಸ್ವಾಮಿ ಎಂಬಾತನು ನನ್ನನ್ನು ನನಗೆ ಯಾವುದೂ ಸಮಸ್ಯೆ ಇದ್ದು ತುತರ್ಾಗಿ ನನಗೆ ಹಣದ ಅವಶ್ಯಕತೆ ಇರುತ್ತದೆ, ಆದ್ದರಿಂದ ನನಗೆ ನೀನು 10.000 ರೂಗಳನ್ನು ಕೊಡು ನಂತರ ನಿನಗೆ ಹಿಂದಿರುಗಿಸುತ್ತೇನೆ ಎಂದು ಕೇಳಿಕೊಂಡನು. ಆಗ ನಾನು ನನ್ನ ಸ್ನೇಹಿತನಾದ ನಾಗ ಎಂಬುವವನ ಬಳಿ 10.000 ರೂ ಹಣವನ್ನು ಪಡೆದುಕೊಂಡು ಮಹದೇವಪ್ರಭುವಿಗೆ ಕೊಟ್ಟು ಒಂದು ತಿಂಗಳ ನಂತರ ವಾಪಸ್ಸು ಕೊಡು ಎಂದು ಹೇಳಿ 10.000 ರೂಗಳನ್ನು ಕೊಟ್ಟೆನು, ದಿನಾಂಕ 02.08.2020 ರಂದು ಬೆಳಿಗ್ಗೆ ಕೊಂಗರಹಳ್ಳಿ ಗ್ರಾಮದ ಮಹದೇವಪ್ರಭು ಮನೆಯ ಹತ್ತಿರ ಆತನು ನನಗೆ ಸಿಕ್ಕಿದಾಗ ನೀನು ನನ್ನ ಬಳಿ ಹಣವನ್ನು ಪಡೆದುಕೊಂಡು ಒಂದು ತಿಂಗಳಾಯಿತು ನನ್ನ ಸ್ನೇಹಿತ ನಾಗನು ನನ್ನನ್ನು ಬೇಗ ಹಣವನ್ನು ವಾಪಸ್ ಕೊಡು ಎಂದು ಕೇಳುತ್ತಿದ್ದಾನೆ ನೀನು ಅದಷ್ಟು ಬೇಗ ನನಗೆ ಕೊಡಬೇಕಾಗಿರುವ 10.000 ರೂಗಳನ್ನು ಕೊಡು ಎಂದು ಕೇಳಿದೆ, ಅದಕ್ಕೆ ಮಹದೇವಪ್ರಭುವು ಇನ್ನು ಎರಡು -ಮೂರು ದಿನದಲ್ಲಿ ಹಣವನ್ನು ವಾಪಸ್ಸು ಕೊಡುತ್ತೇನೆ ಎಂದು ಹೇಳಿ ಹೋದನು. ನಂತರ ನೆನ್ನೆ ದಿನ ದಿನಾಂಕ 04.08.2020 ರಂದು ರಾತ್ರಿ 9.15 ಗಂಟೆಯಲ್ಲಿ ನಾನು ಮನೆಯಲ್ಲಿ ಮಹದೇವಪ್ರಭು ನಮ್ಮ ಮನೆ ಬಳಿ ಬಂದು ಏಕಾಏಕಿ ನನ್ನನ್ನು ಕುರಿತು ಏನೋ ಬೋಳಿಮಗನೆ ನೀನು ನನ್ನನ್ನು ಹಾದಿಬೀದಿ ಮನೆಯ ಬಳಿ ಹಣವನ್ನು ವಾಪಸ್ ಕೊಡು ಎಂದು ಕೇಳುತ್ತೀಯಾ ನೋಡಿದ ಜನರು ನನ್ನನ್ನು ಏನೆಂದುಕೊಳ್ಳುವುದಿಲ್ಲ ಎಂದು ಸೊಳೆಮಗನೆ ನಿನಗೆ ಮಾಡುತ್ತೇನೆ ನೋಡು ಎಂದು ಬೈಯುತ್ತಾ ತಾನು ತಂದಿದ್ದ ತನ್ನ ಬೆನ್ನ ಹಿಂದೆ ಅವಿಸಿಕೊಂಡಿದ್ದ ಸಣ್ಣ ಕೊಡಲಿ(ಪಿಚ್ಚು ಕೊಡಲಿ)ಯಿಂದ ನನ್ನ ತಲೆಗೆ ಕೊಡಲಿಯ ಹಿಂಭಾಗದಿಂದ ಹೊಡೆದನು. ನಿನ್ನನ್ನು ಸಾಯಿಸದೆ ಬಿಡುವುದಿಲ್ಲ ಎಂದು ಬೈಯುತ್ತಾ ತನ್ನ ಹೊಂಡ ಶೈನ್ ಬೈಕಿನಲ್ಲಿ ಹೊರಟು ಹೋದನು ಕಾನೂನು ಕ್ರಮ ಕೈಗೊಳ್ಳಿ ಎಂತ ದೂರು.


Your Comment

Name :
Email:
Comment:
Submit

Website Designed and Developed by Global Buzz®