• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 04-08-2020

No of views : 41       No of Comments : 0

1. ಚಾಮರಾಜನಗರ ಸಂಚಾರ ಠಾಣೆ ( ಮೊ.ನಂ 125/2020 ) : ಪಿರ್ಯಾದಿ ಗಂಗಾಧರ ರವರು ದಿನಾಂಕ 04-08-2020 ರಂದು ಚಾಮರಾಜನಗರ ಜಿಲ್ಲಾತ್ರೆಯಲ್ಲಿ ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಮನೆಗೆ ತಿಂಡಿ ತರುವ ಸಲುವಾಗಿ ಕೆ.ಎ.-05 ಇ.ಡಬ್ಲೂ-1126 ಮೋಟಾರ್ ಸೈಕಲ್ ನಲ್ಲಿ ಬರುತ್ತಿದ್ದಾಗ ಚಂದಕವಾಡಿ ಸರ್ಕಲ್ ಬಳಿ ಸಾಯಂಕಾಲ ಸುಮಾರು 5-45 ಗಂಟೆಯಲ್ಲಿ ಚಾಮರಾಜನಗರ ಕಡೆಯಿಂದ ಕೆ.ಎ-55 9361 ರ ಟಾಟಾ ಏಸ್ ಗೂಡ್ಸ್ ವಾಹನವನ್ನು ಅದರ ಚಾಲಕ ಮಧು ರವರು ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪಿಯರ್ಾದಿಯವರ ಮೋಟಾರ್ ಸೈಕಲ್ಗೆ ಅಪಘಾತ ಮಾಡಿದ ಪರಿಣಾಮ ಪಿಯರ್ಾದಿಗೆ ತಲೆಯ ಹಿಂಭಾಗ, ಎಡಕೈನ ಮಧ್ಯದ ಬೆರಳು, ಎಡಕಾಲಿನ ಮಂಡಿ, ಬೆರಳು ಮತ್ತು ಬಲಮಂಡಿಗೆ ಏಟಾಗಿರುತ್ತದೆ. ಕೆಎ-55 9361 ರ ಟಾಟಾ ಏಸ್ ಗೂಡ್ಸ್ ವಾಹನದ ಚಾಲಕ ಮಧು ರವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಸ್ಪತ್ರೆಯಲ್ಲಿ ನೀಡಿದ ಹೇಳಿಕೆ ನೀಡಿದ ದೂರಿನ ಮೇರೆಗೆ ಈ ಪ್ರ,ವ,ವರದಿ .

2. ಸಿ.ಇ.ಎನ್ ಠಾಣೆ ( ಮೊ.ನಂ 05/2020) : ದಿನಾಂಕ 15-07-2020 ರಂದು ಪಿರ್ಯಾದಿ ಕುಮಾರ, ಚಾ.ನಗರ ಪಟ್ಟಣ ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ, ದಿನಾಂಕ: 01-08-2020 ರಂದು ಬೆಳಿಗ್ಗೆ 10:33 ಗಂಟೆಯಲ್ಲಿ 7870216209 ರ ಮೊಬೈಲ್ ನಂಬರ್ ನಿಂದ ನನ್ನ ಮೊಬೈಲ್ ನಂಬರ್ ಗೆ ಕರೆ ಬಂದಿದ್ದು, ಹೆಸರು ಮುನೇಂದ್ರ ಬೋನೆ ಎಂಬ ವ್ಯಕ್ತಿಯು ದಿ ರಾಕ್ ವಲ್ಡರ್್ ಫೌಂಡೇಷನ್ ವತಿಯಿಂದ ಕರೆ ಮಾಡುತ್ತಿದ್ದೇವೆ, ನೀವು ಲಕ್ಕಿ ಡ್ರಾ ನಲ್ಲಿ 10,72,225/- ರೂಪಾಯಿ ಗೆದ್ದಿದ್ದೀರಿ ಎಂದು ಹೇಳಿರುತ್ತಾರೆ. ನೀವು 6500/- ರೂ ಗೂಗಲ್ ಪೇ ಅಥವಾ ಫೋನ್ ಪೇ ಮುಖಾಂತರ ಹಣ ಹಾಕಿದರೆ 10,72,225/- ರೂ ಬರುತ್ತದೆ ಎಂದು ಹೇಳಿದಾಗ ನಾನು ಗೂಗಲ್ ಪೇ ಮುಖಾಂತರ 6500/- ರೂ ಅನ್ನು ಮುನೇಂದ್ರಬೋನೆ ಎಂಬಾತನ ಅಕೌಂಟ್ ನಂಬರ್ 33291528192 ಈಖಅ ಕೋಡ್ ಖಃಓ0004380 ಗೆ ಹಾಕಿರುತ್ತೇನೆ. ಮತ್ತೇ ಮತ್ತೊಂದು ಸಂದೇಶ ಬಂದಿದ್ದು, ಅದರಲ್ಲಿ 18,600/- ರೂ ಜಿಎಸ್ಟಿ ಹಣವನ್ನು ಗೂಗಲ್ ಪೇ ಮುಖಾಂತರ ಸಂದಾಯ ಮಾಡುವಂತೆ ಹೇಳಿದ್ದರಿಂದ ಮತ್ತೆ ನಾನು ಆ 18,600/- ರೂ.ಗಳನ್ನು ಹಾಕಿರುತ್ತೇನೆ. ಮತ್ತೆ ಎನ್ಓಸಿ ಚಾಜರ್್ ಎಂದು 25,200/- ರೂ.ಗಳನ್ನು ಪಾವತಿ ಮಾಡಿರುತ್ತೇನೆ. ಇನ್-ಕಮ್ ಟ್ಯಾಕ್ಸ್ ಚಾಜರ್್ ಎಂದು 37,500/- ರೂ.ಗಳನ್ನು ಹಾಕುವಂತೆ ತಿಳಿಸಿದ್ದು, ಅಕೌಂಟ್ಗೆ ಹಾಕಿದಾಗ ಅದು ಸಂದಾಯವಾಗದೇ ಇದ್ದಾಗ ಮತ್ತೆ ಅವನು ತನ್ನ ಸಹೋದ್ಯೋಗಿ ಹೆಸರು ಅಭಿಷೇಕ್ ಕುಮಾರ್ ಎಂಬಾತನ ಅಕೌಂಟ್ ನಂ 38042821891 ಈಖಅ ಕೋಡ್ ಖಃಓ0004380 ನೀಡಿದ್ದು, ಅದಕ್ಕೆ ನಾನು ಅಆಒ ನಲ್ಲಿ 37,500/- ಹಾಕಿರುತ್ತೇನೆ. ನಂತರ ಸಹ ನಾನು ಹಣವಿಲ್ಲ ಎಂದರೂ ಕೂಡ ಮುನೇಂದ್ರಬೋನೆ ಎಂಬಾತನು ನೀವು 49,999/- ರೂ ಹಣವನ್ನು ಹಾಕದೇ ಇದ್ದರೇ ನಿಮ್ಮ ಖಾತೆಯಲ್ಲಿ ಹಣವನ್ನು ವಾಪಸ್ ತೆಗೆದುಕೊಳ್ಳುತ್ತೇವೆಂದು ತಿಳಿಸಿದಾಗ ನಾನು ಮತ್ತೇ ಮುನೇಂದ್ರಬೋನೆ ಎಂಬಾತನ ಅಕೌಂಟ್ ನಂಬರ್ ಗೆ 40,000/- ಗಳನ್ನು ಹಾಕಿರುತ್ತೇನೆ. ಮತ್ತೆ ನನಗೆ ಮೆಸೇಜ್ ಬಂದಿದ್ದು ಅದರಲ್ಲಿ ಅಕೌಂಟ್ ಷೋ ಸಟರ್ಿಫಿಕೇಟ್ ಚಾಜರ್್ ಎಂದು 49,999/- ರೂ ಹಾಕುವಂತೆ ಬಂದಿದ್ದು, ಆಗ ನಾನು ಮೋಸಹೋಗಿರುವುದು ಗೊತ್ತಾಗಿರುತ್ತದೆ. ಎರಡು ದಿನ ಬ್ಯಾಂಕ್ ರಜೆ ಇದ್ದರಿಂದ ನಾನು ಬ್ಯಾಂಕ್ನಿಂದ ಎಲ್ಲಾ ದಾಖಲಾತಿಗಳನ್ನು ಪಡೆದುಕೊಂಡು ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಮೋಸ ಮಾಡಿ ಪಡೆದಿರುವ ನನ್ನ ಬಾಬ್ತು 1,27,800/- ರೂ ಹಣವನ್ನು ವಾಪಸ್ ಕೊಡಿಸಿಕೊಡಬೇಕೆಂದು ಹಾಗೂ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.


Your Comment

Name :
Email:
Comment:
Submit

Website Designed and Developed by Global Buzz®