• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 25-06-2020

No of views : 38       No of Comments : 0

1. ಚಾಮರಾಜನಗರ ಗ್ರಾಮಾಂತರ ಠಾಣೆ (ಮೊ ನಂ 62/2020) ದಿನಾಂಕ: 25-06-2020 ರಂದು ಚಾಮರಾಜನಗರ ತಾಲ್ಲೋಕು, ಕುಲಗಾಣ ಗ್ರಾಮದ ಸಿದ್ದಮಲ್ಲಪ್ಪ ಬಿನ್ ಶಿವಬಸಪ್ಪ ಎಂಬುವರು ಠಾಣೆಗೆ ಹಾಜರಗಿ ಒಂದು ಲಿಖಿತ ದೂರು ಸಲ್ಲಿಸಿಕೊಂಡಿದ್ದು, ಸದರಿ ದೂರಿನಲ್ಲಿ ನಾನು ಈಗ್ಗೆ 5 ವರ್ಷದ ಹಿಂದೆ ಗುಂಡ್ಲುಪೇಟೆ ತಾಲ್ಲೋಕು, ಬಾಚಹಳ್ಳಿ ಗ್ರಾಮದ ಅನುಪಮಾ ಎಂಬುವರನ್ನು ಮದುವೆಯಾಗಿದ್ದು, ನಮಗೆ 03 ವರ್ಷದ ಒಂದು ಹೆಣ್ಣು ಮಗು ಇರುತ್ತದೆ. ನಾನು ನನ್ನ ಹೆಂಡತಿ ಮಗುವಿನ ಜೊತೆ ಪ್ರತ್ಯೇಕವಾಗಿ ವಾಸವಾಗಿರುತ್ತೇನೆ. ದಿನಾಂಕ: 22-06-2020 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ನಾನು ಮನೆಗೆ ಸಾಮಾನು ತರಲೆಂದು ಅಂಗಡಿಗೆ ಹೋಗಿದ್ದು, 8-20 ಗಂಟೆಗೆ ವಾಪಸ್ ಮನೆಗೆ ಬಂದು ನೋಡಲಾಗಿ, ಮನೆಯ ಬಾಗಿಲು ತೆರೆದಿದ್ದು, ನನ್ನ ಹೆಂಡತಿ ಮನೆಯಲ್ಲಿ ಇರಲಿಲ್ಲ. ಸುಮಾರು ಹೊತ್ತು ಕಳೆದರೂ ನನ್ನ ಹೆಂಡತಿ ಮನೆಗೆ ವಾಪಸ್ ಬಾರದೇ ಇದ್ದರಿಂದ ನಾನು ಗಾಬರಿಯಾಗಿ ನನ್ನ ಹೆಂಡತಿಯನ್ನು ನಮ್ಮ ಪರಿಚಯಸ್ಥರ ಮನೆ ಹಾಗೂ ಸುತ್ತಮುತ್ತ ನೋಡಲಾಗಿ ಆಕೆ ಎಲ್ಲಿಯೂ ಪತ್ತೆಯಾಗಲಿಲ್ಲ. ನಂತರ ನಮ್ಮ ಸುತ್ತಮುತ್ತಲಿನ ಗ್ರಾಮಗಳು ಹಾಗೂ ನನ್ನ ಹೆಂಡತಿಯ ಅಜ್ಜಿ ಮನೆ ಮಲೆಯೂರು ಗ್ರಾಮ ಮುಂತಾದ ಕಡೆಗಳಲ್ಲಿ ಹುಡುಕಾಡಲಾಗಿ ಇದುವರೆವಿಗೂ ನನ್ನ ಹೆಂಡತಿ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಕಾಣೆಯಾಗಿರುವ ನನ್ನ ಹೆಂಡತಿ ಅನುಪಮಾ ರವರನ್ನು ಪತ್ತೆ ಮಾಡಿಕೊಡಿ ಎಂಬುದು ದೂರಿನ ಸಾರಾಂಶವಾಗಿರುತ್ತದೆ.

2. ಚಾಮರಾಜನಗರ ಗ್ರಾಮಾಂತರ ಠಾಣೆ ( ಮೊ, ನಂ 63/2020) ದಿನಾಂಕ: 25-06-2020 ರಂದು ಚಾಮರಾಜನಗರ ತಾಲ್ಲೋಕು, ಮುತ್ತಿಗೆ ಗ್ರಾಮದ ನೀಲಾವತಿ ಕೋಂ ಸಿದ್ದರಾಜು ಎಂಬುವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು, ಸದರಿ ದೂರಿನಲ್ಲಿ ನಾನು ನೆನ್ನೆ ದಿನ ದಿನಾಂಕ: 24-06-2020 ರಂದು ಬೆಳಿಗ್ಗೆ ಸುಮಾರು 09-00 ಗಂಟೆ ಸಮಯದಲ್ಲಿ ನಮ್ಮ ಮನೆಯ ಬಳಿ ಇರುವ ತೊಂಬೆಯಲ್ಲಿ ನೀರು ಹಿಡಿದುಕೊಳ್ಳುತ್ತಿದ್ದಾಗ, ಮಹದೇವಯ್ಯನ ಮಗ ಸಿದ್ದಯ್ಯ, ತೊಂಬೆ ನಲ್ಲಿಯಲ್ಲಿ ಕಾಲು ತೊಳೆಯುತ್ತಿದ್ದ, ಇದನ್ನು ನಾನು ಕೇಳಿದ್ದಕ್ಕೆ ಆತ ನನ್ನನ್ನು ಬೋಳಿ ಮಗಳೇ, ಸೂಳೇ ಮಗಳೇ ನನ್ನಿಷ್ಟ ನಾನು ಇಲ್ಲಿ ಕಾಲು ತೊಳೆಯುತ್ತೇನೆಂದು ಏಕಾಏಕಿ ಜಗಳ ತೆಗದು ರಿಪೀಸ್ ಪಟ್ಟಿಯಿಂದ ನನ್ನ ಬೆನ್ನಿಗೆ ಹೊಡೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು, ಅಷ್ಟಕ್ಕೆ ಅಲ್ಲಿಗೆ ಬಂದ ರಂಗಯ್ಯನ ಮಗ ಗುರು ನನ್ನನ್ನು ಹೀನಾಮಾನವಾಗಿ ಬೈಯ್ದು ಸಿದ್ದಯ್ಯನಿಗೆ ಸಪೋಟರ್್ ಮಾಡಿ ಜಗಳಕ್ಕೆ ಬಂದನು, ನನಗೆ ಹೆಚ್ಚಿನ ಏಟಾಗದ ಕಾರಣ ನಾನು ನೆನ್ನೆ ದಿನ ಚಿಕಿತ್ಸೆಗೆ ಬರಲಿಲ್ಲ, ನೆನ್ನೆ ರಾತ್ರಿ ನನಗೆ ನೋವು ಜಾಸ್ತಿಯಾದ ಕಾರಣ ಈ ದಿನ ನನ್ನ ಮಗನ ಜೊತೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದು, ನನ್ನ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಕೇಸಿನ ಪ್ರ, ವ, ವರದಿ.

3. ಯಳಂದೂರು ಠಾಣೆ ( ಮೊ, ನಂ 48/2020) ಪಿಯರ್ಾದಿ ಜಡೇಮಾದಮ್ಮ ಬಂಗ್ಲೇಪೂಡು, ಬಿಳಿಗಿರಿರಂಗನಬೆಟ್ಟರವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆಂನೆಂದರೆ ನನ್ನ ಮೂರನೇ ತಮ್ಮನಾದ ನಂಜೇಗೌಡ ಅಲಿಯಾಸ್ ಟಿಪ್ಪರ್ ಆಗಿದ್ದು ದಿನಾಂಕ 24-06-2020 ರಂದು ರಾತ್ರಿ ಸುಮಾರು 11:30 ಹಾಗೂ 12 ಗಂಟೆ ಸಮಯದಲ್ಲಿ ಕಂದಹಳ್ಳಿ ಗ್ರಾಮದ ನಂಜಶೆಟ್ಟಿರವರ ಮನೆಯ ಮುಂಭಾಗದಲ್ಲಿರುವ ರಾಷ್ಟ್ರಿಯಾ ಹೆದ್ದಾರಿ ರಸ್ತೆಯಲ್ಲಿ ನಂಜೆಗೌಡರಿಗೆ ಯಾವುದೋ ಅಪರಿಚಿತ ವಾಹನವು ಯಳಂದೂರು ಹಾಗೂ ಸಂತೆಮರಹಳ್ಳಿ ರಸ್ತೆ ಕಡೆಯಿಂದ ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಬಂದು ನಂಜೆಗೌಡರಿಗೆ ಗುದ್ದಿ ಅಪಘಾತ ಪಡಿಸಿ ವಾಹನವನ್ನು ನಿಲ್ಲಿಸದೆ ಹೋರಟು ಹೋಗಿದ್ದು, ಸಾರ್ವಜನಿಕರು ಅಂಬುಲೇನ್ಸಗೆ ಕರೆಮಾಡಿ ವಿಚಾರ ತಿಳಿಸಿ ಅಂಬ್ಯಲೇನ್ಸ್ ಹಾಗೂ ಪೊಲೀಸ್ ಸಿಬ್ಬಂದಿಗಳ ಸಹಾಯದಿಂದ ಶವವನ್ನು ಸಕರ್ಾರಿ ಆಸ್ಪತ್ರೆಗೆ ಸಾಗಿಸಿರುವುದಾಗಿ ತಿಳಿಯಿತು. ನಂಜೇಗೌಡರಿಗೆ ಯಾವುದೆ ಅಪರಿಚಿತ ವಾಹನದ ಚಾಲಕನು ವಾಹನವನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಓಡಿಸಿ ಗುದ್ದಿಸಿ ಅಪಘಾತ ಪಡಿಸಿ ವಾಹನವನ್ನು ನಿಲ್ಲಿಸದೆ ಹೋರಟು ಹೋಗಿದ್ದು ಅಪರಿಚಿತ ವಾಹನದ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ನೀಡಿದ ದೂರಿನ ಸ್ವೀಕರಿಸಿಕೊಂಡ ಮೇರೆಗೆ ಈ ಪ್ರ.ವ.ವರದಿ.

4. ಕೊಳ್ಳೇಗಾಲ ಗ್ರಾಮಾಂತರ ಠಾಣೆ ( ಮೊ, ನಂ 112/2020) ಪಿರ್ಯಾದಿ ಆರೀಫ್ಉಲ್ಲಾ ಈದ್ಗಾ ಮೊಹಲ್ಲಾ ಟೌನ್ರವರು ನೀಡಿದ ದೂರಿನಲ್ಲಿ ಪಿರ್ಯಾದಿದಾರರ ತಮ್ಮ ಸತ್ತೇಗಾಲ ಹ್ಯಾಂಡ್ಪೋಸ್ಟ್ನ ಚಿಕ್ಕದರ್ಗದಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದು ದಿಃ 25-06-2020 ರಂದು ಬೆಳಿಗ್ಗೆ 07-30 ಗಂಟೆ ಸಮಯದಲ್ಲಿ ಸತ್ತೇಗಾಲ ಹ್ಯಾಂಡ್ಪೋಸ್ಟ್ ಬಳಿ ಟೀ ಕುಡಿಯಲು ಹೋಗಿದ್ದು ದಗರ್ಾದ ಕಡೆ ಬರಲು ರಸ್ತೆಯ ಎಡಭಾಗದಲ್ಲಿ ಬರುತ್ತಿದ್ದಾಗ ಮಳವಳ್ಳಿ ರಸ್ತೆಯ ಕಡೆಯಿಂದ ಯಾವುದೋ ಒಂದು ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿಗೊಳಿಸಿದನು. ಆಗ ತಲೆಯ ಹಿಂಭಾಗಕ್ಕೆ, ಎಡಗೈ ಮೊಣಕೈಗೆ, ಕುತ್ತಿಗೆ ಹಿಂಭಾಗ ರಕ್ತಗಾಯವಾಗಿ ಕಾಲುಗಳಿಗೆ ಒಳನೋವಾಯಿತು. ಅಷ್ಟಕ್ಕೆ ಚಿಕ್ಕದರ್ಗದ ಬಳಿ ಇರುವ ಮುಕ್ರಂಪಾಷ ಮತ್ತು ಸೈಯ್ಯದ್ ಅಮೀರ್ಜಾನ್ ರವರುಗಳು ಬಂದು ನನ್ನನ್ನು ಸುಧಾರಿಸಿ ನನಗೆ ಅಪಘಾತಪಡಿಸಿದ ವಾಹನ ಕೆಎ-05 ಎಂಬಿ-2412 ನಂಬರಿನ ಕಾರು ಎಂದು ನಂಬರ್ ಬರೆದುಕೊಟ್ಟು. ಅದೇ ಕಾರಿನಲ್ಲಿ ನನ್ನನ್ನು ಕೊಳ್ಳೇಗಾಲಕ್ಕೆ ಚಿಕಿತ್ಸೆಗೆ ಕಳುಹಿಸಿಕೊಟ್ಟರು ಕಾರಿನವರು ನನ್ನನ್ನು ಕೊಳ್ಳೇಗಾಲಕ್ಕೆ ಕರೆದುಕೊಂಡು ಬಂದು ಆಸ್ಪತ್ರೆಯ ಮೂಲೆಯಲ್ಲಿ ಇಳಿಸಿ ಯಾರಾದರೂ ಕೇಳಿದರೆ ಬಿದ್ದೆ ಎಂದು ಹೇಳಿ ಎಂಬುದಾಗಿ ತಿಳಿಸಿ ಇಳಿಸಿ ಹೊರಟು ಹೋದರು ಆದುದರಿಂದ ನನ್ನ ತಮ್ಮನಿಗೆ ಅಪಘಾತಪಡಿಸಿ ಚಿಕಿತ್ಸೆ ಕೊಡಿಸುವುದಾಗಿ ಕರೆತಂದು ಬಿಟ್ಟು ಹೊರಟುಹೋಗಿರುವ ಕೆಎ-05 ಎಂಬಿ-2412 ಕಾರು ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಎಂದು ಕೊಟ್ಟ ದೂರಿನ ಮೇರೆಗೆ ಈ ಪ್ರ ವ ವರದಿ.

5. ಮ.ಮ.ಬೆಟ್ಟ ಠಾಣೆ ( ಮೊ, ನಂ 20/2020) ಪಿರ್ಯಾದಿ ಮಹೇಶಕುಮಾರ ಗುರುನಗರ ಮ.ಮ.ಬೆಟ್ಟರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ಅಣ್ಣ ಮಹದೇವಪ್ರಸಾದ್ @ ಪುನೀತ್ ದಿನಾಂಕ, 25.06.2020 ರಂದು ಸಂಜೆ 04.00 ಗಂಟೆಗೆ ನನ್ನ ಅಣ್ಣ ನಾನು ಮತ್ತು ನನ್ನ ತಾಯಿ ಇಬ್ಬರು ಮನೆಯಲ್ಲಿ ಇರುವಾಗ ನನ್ನ ಹೆಂಡ್ತಿಯನ್ನು ನೋಡಿಕೊಂಡು ಬರಲೇಂದು ಮೋಟಾರ್ ಬೈಕ್ನಲ್ಲಿ ಏಂ10ಘಿ7836 ಹೇಳಿ ಹೋದನು. ನಂತರ ಸುಮಾರು 05.00 ಗಂಟೆಗೆ ನನ್ನ ಅಣ್ಣನು ತಾಳಬೆಟ್ಟದ ಹತ್ತಿರ ಗಾಯವಾಗಿ ಮೋಟಾರ್ ಬೈಕ್ನ ಮೇಲೆ ಕುಳಿತ್ತಿದ್ದಾನೆ ಎಂಬ ವಿಚಾರ ತಿಳಿಯಿತು ನಂತರ ನಾವು ಗಾಬರಿಯಾಗಿ ಏನಾಗಿರಬಹುದು ಎಂದು ತಿಳಿಯಲು ನಾನು ಮತ್ತು ಮಾವನಾದ ಮಹದೇವಸ್ವಾಮಿ ಮೋಟಾರ್ ಬೈಕ್ನಲ್ಲಿ ತಾಳಬೆಟ್ಟದ ಬಳಿ ಬಂದಾಗ ನಮ್ಮ ಅಣ್ಣ ಬೈಕ್ ಮೇಲೆ ಪ್ರಜ್ಙಹೀನವಾಗಿ ತಲೆಯಲ್ಲಿ ರಕ್ತ ಹರಿದು ಗಾಯವಾಗಿದ್ದು ಹಾಗೂ ಬೈಕ್ ಮತ್ತು ನೆಲದ ಮೇಲೆ ರಕ್ತ ಸುರಿದಿತ್ತು. ನಂತರ ತಕ್ಷಣ ನಮ್ಮ ಅಣ್ಣನನ್ನು ಖಾಸಗಿ ವಾಹನವೊಂದರಲ್ಲಿ ಚಿಕಿತ್ಸೆಗಾಗಿ ಹನೂರು ಕಡೆ ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ನಮ್ಮ ಅಣ್ಣನಾದ ಮಹದೇವಪ್ರಸಾದ್ @ ಪುನೀತ್ ಮೃತಪಟ್ಟಿರುತ್ತಾರೆ. ಈ ಘಟನೆಯನ್ನು ನೋಡಿದರೆ ಯಾರೋ ಅಪರಿಚಿತರು ನನ್ನ ಅಣ್ಣನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಯಾವುದೋ ದ್ವೇಷದಿಂದ ಯಾವುದೋ ಅಯುಧದಿಂದ ಕೊಲೆ ಮಾಡುವ ಉದ್ದೇಶದಲ್ಲಿ ನನ್ನನ ಅಣ್ಣನ ತಲೆಗೆ ಬಲವಾಗಿ ಹೊಡೆದ ಕಾರಣ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ. ಆದ ಕಾರಣ ನಮ್ಮ ಅಣ್ಣನನ್ನು ಅಡ್ಡಗಟ್ಟಿ ಕೊಲೆ ಮಾಡಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.


Your Comment

Name :
Email:
Comment:
Submit

Website Designed and Developed by Global Buzz®