• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 24-06-2020

No of views : 18       No of Comments : 0

1. ಚಾಮರಾಜನಗರ ಪಟ್ಟಣ ಠಾಣೆ (ಮೊ,ನಂ 56/2020) : ಪಿರ್ಯಾದಿ ನಾಗಶೆಟ್ಟಿ ಚಾಮರಾಜನಗರ ಟೌನ್ರವರು ನೀಡಿದ ದೂರಿನಲ್ಲಿ ದಿನಾಂಕ. 24.06.2020 ರಂದು ಸುಮಾರು ಸಂಜೆ 4-00 ಗಂಟೆ ಸಮಯದಲ್ಲಿ ಪವನ್ಭಂಢಾರ್ ಪಕ್ಕದಲ್ಲಿರುವ ಡಾಕ್ಟರ್ ರಮೇಶ್ ಉಡುಪ ಮತ್ತು ಪ್ಯಾಮಿಲಿಯವರು ನಮ್ಮ ಜಾಗವನ್ನು ಅಳತೆ ಮಾಡುತ್ತಾರೆ ಎಂದು ನನ್ನ ಮತ್ತು ನಮ್ಮ ಬೀದಿಯ ಯಜಮಾನರುಗಳು ಬಂದು ಅಳತೆ ಮಾಡಿಕೊಡಿ ಎಂದು ನಮ್ಮನ್ನು ಕೇಳಿ ಕೊಂಡಿದ್ದರು. ನಾವುಗಳು ಅದಕ್ಕೆ ನಮ್ಮ ಯಾಜಮಾನರುಗಳ ಅವಶ್ಯಕತೆ ಏನಿದೆ ಎಂದು ಕೇಳಿದಾಗ ಈ ಹಿಂದೆ ನಮ್ಮ ಬೀದಿಯ ಮಹದೇವಸ್ವಾಮಿ @ ಜಂಪು ಮತ್ತು ಮಕ್ಕಳು ಅಳತೆ ಮಾಡಿಸದೆ ಗಲಾಟೆ ಮಾಡಿದ್ದರು. ಆದುದರಿಂದ ತಾವುಗಳು ಬಂದು ಶಾಂತ ರೀತಿಯಲ್ಲಿ ನಿಂತು ಅಳತೆ ಮಾಡಿಸಿಕೊಡಿ ಮತ್ತು ಪೊಲೀಸರು ಸಹ ಬರುತ್ತಾರೆಂದು ತಿಳಿಸಿದ್ದರು. ಅದರಂತೆ ನಾನು ನಮ್ಮ ಬೀದಿಯ ಯಾಜಮಾನರುಗಳ ಸಮಕ್ಷಮ ನಗರಸಭೆಯವರು ಅಳತೆ ಮಡಿದಾಗ ಸದರಿ ಜಾಗವು ಡಾಃ ರಮೇಶ್ ಉಡುಪ ರವರ ಫ್ಯಾಮಿಲಿಗೆ ಸೇರಿರುತ್ತೆ ಎಂದು ಸವರ್ೆಯವರು ತಿಳಿಸಿ ನಾಳೆ ಅಫೀಸಿಗೆ ಬನ್ನಿ ಎಂದು ಹೇಳಿ ಹೋದರು. ನಂತರ ಅಲ್ಲೆ ಇದ್ದ ನನಗೆ ಮಹದೇವಸ್ವಾಮಿ ಮತ್ತು ಇಬ್ಬರು ಮಕ್ಕಳು ಹಾಗೂ ಅವರ ಭಾವ ಮಹದೇವಶೆಟ್ಟಿಯು ಸೇರಿಕೊಂಡು ಹೀನಾ ಮಾನವಾಗಿ ಬೈಯ್ದು ನನಗೆ ಹೊಡೆದು ತಲೆಯಲ್ಲಿ ರಕ್ತ ಬರುವಂತೆ ಗಲಾಟೆ ಮಾಡಿರುತ್ತಾರೆ. ಆದ್ದರಿಂದ ನನಗೆ ಹೊಡೆದು ಗಲಾಟೆ ಮಾಡಿದವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕಾಗಿ ಕೋರಿಕೆ. ಎಂದು ನೀಡಿದ ದೂರಿನ ಮೇರೆಗೆ

2. ಚಾಮರಾಜನಗರ ಪಟ್ಟಣ ಠಾಣೆ (ಮೊ,ನಂ 57/2020) : ಪಿರ್ಯಾದಿ ಸಿ. ಬಿ ಮಹದೇವಸ್ವಾಮಿ ಚಾಮರಾಜನಗರ ಪಟ್ಟಣರವರು ದಿನಾಂಕ. 24.06.2020 ರಂದು ಸುಮಾರು ಸಂಜೆ 4-00 ಗಂಟೆ ಸಮಯದಲ್ಲಿ ನನಗೆ ಸೇರಿದ ನಾನು ಸ್ವಂತ ಕಟ್ಟಿಕೊಂಡು ಸುಮಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದ ನನ್ನ ಅಂಗಡಿಯ ಪಕ್ಕದ ಜಾಗವನ್ನು ಡಾ. ಶಶಿಕಲಾ ಕೋಂ ಡಾ. ರಮೇಶ್ ಉಡುಪ ಎಂಬುವವರು ನಾನು ಖರೀದಿಸಿದ್ದೇನೆ ಎಂದು ಅಳತೆ ಮಾಡಲು ನಗರ ಸಭೆಯ ಅಧಿಕಾರಿಗಳನ್ನು ಕರೆದುಕೊಂಡು ಬಂದಿದ್ದಾಗ ಚಾ.ನಗರ ಟೌನ್ ಉಪ್ಪಾರ ಬೀದಿ ನಿವಾಸಿಗಳಾದ ಆರ್. ನಾಗಶೆಟ್ಟಿ ಬಿನ ಲೇ. ರಾಮಶೆಟ್ಟಿ, (ಕೆ.ಟಿ ನಾಗ) ಹಾಗೂ ಅವನ ಮಗ ಮಹೇಂದ್ರ ಹಾಗೂ ಅವನ ತಮ್ಮ ಆನಂದ, ಮಾಲನಕಟ್ಟೆ ತಮ್ಮ ಇನ್ನು ಕೆಲವನ್ನು ಒಳಗೊಂಡು ಡಾ. ಶಶಿಕಲಾ ಕೋಂ ಡಾ. ರಮೇಶ್ ಉಡುಪ ರವರು ಮೈಸೂರಿನ ಸುನಿಲ್ ಕುಮಾರ್ ಇವರು ಪರವಾಗಿ ಬಂದು 10 ಲಕ್ಷ ರೂಪಾಯಿಗೆ ಡೀಲ್ ಪಡೆದು ನನ್ನ ಅಂಗಡಿಯನ್ನು ನಾಶಪಡಿಸಲು ಬಂದಿದ್ದರು, ಮೇಲ್ಕಂಡವರುಗಳು ನನ್ನ ಮಕ್ಕಳಾದ ಮೋಹನ್ ಕುಮಾರ್ ಮತ್ತು ಉಲ್ಲಾಸ್ ಕುಮಾರ್ ರವರುಗಳ ಮೇಲೆ ನಾಗಶೆಟ್ಟಿಯು ಕೊಲೆ ಮಾಡಲು ಇರಿದಿರುತ್ತಾನೆ. ಆಗ ಮೋಹನ್ ಗೆ ಬಲಗೈಗೆ ಗಾಯವಾಗಿರುತ್ತದೆ. ಹಾಗೂ ಉಲ್ಲಾಸ್ ಗೆ ಒಳ ಏಟು ಆಗಿರುತ್ತೆ. ಹೃದಯ ಬಾಗದಲ್ಲಿ ನೋವುಂಟಾಗಿರುತ್ತೆ. ಹಾಗೂ ಮುಖ ಪರಚಿರುತ್ತಾನೆ. ಹಾಗೂ ನನ್ನ ಮಕ್ಕಳೀಗೆ ಕೊಲೆ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ

3. ಚಾಮರಾಜನಗರ ಗ್ರಾಮಾಂತರ ಠಾಣೆ (ಮೊ,ನಂ 60/2020) : ಪಿರ್ಯಾದಿ ಸಿದ್ದಯ್ಯ, ಮುತ್ತಿಗೆ ಗ್ರಾಮರವರು ನೀಡಿದ ದೂರಿನಲ್ಲಿ ಜಮೀನಿನ ವಿಚಾರದಲ್ಲಿ ಈಗ್ಗೆ ಕೆಲ ದಿನಗಳಿಂದಲೂ ಕೇಸಿನ ಪಿರ್ಯಾದಿ ಹಾಗೂ ಆರೋಪಿ ಸಿದ್ದರಾಜು ರವರ ಮನೆಯವರಿಗೂ ವೈಮನಸ್ಸಿದ್ದು, ಇದೇ ವಿಚಾರವಾಗಿ ಈ ದಿನ ದಿ: 24/06/2020 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ಪಿರ್ಯಾದಿ ಸಿದ್ದಯ್ಯ ರವರು ಗ್ರಾಮದ ತೊಂಬೆ ನಲ್ಲಿ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಸಿದ್ದರಾಜು ಹಾಗೂ ಇವರ ಮಗ ಸುರೇಶ ಇಬ್ಬರು ಪಿರ್ಯಾದಿರವರನ್ನು ನೋಡಿ ಬೋಳಿ ಮಗನೇ ನಮ್ಮನ್ನೇ ದುರುಗುಟ್ಟಿಕೊಂಡು ನೋಡುತ್ತೀಯಾ ಎಂದು ಜಗಳ ತೆಗೆದು ಪಿರ್ಯಾದಿಯನ್ನು ತಬ್ಬಿ ಹಿಡಿದುಕೊಂಡು, ಕೆಳಕ್ಕೆ ಕೆಡವಿದ್ದು, ಸುರೇಶ ದೊಣ್ಣೆಯಿಂದ ಬೆನ್ನಿಗೆ ಹೊಡೆದಿದ್ದು, ಅಷ್ಟರಲ್ಲಿ ಸಿದ್ದರಾಜುವಿನ ಹೆಂಡತಿ ಲೀಲಾವತಿ ಬಂದು ಪಿರ್ಯಾದಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದು, ಸಿದ್ದರಾಜುವಿನ ಹಿರಿಯ ಮಗ ಗುರು ಪಿರ್ಯಾದಿಗೆ ಕೈನಿಂದ ಹೊಡೆದು ಹಲ್ಲೆ ಮಾಡಿದ್ದು, ಸಿದ್ದರಾಜುವಿನ ತಂಗಿ ಗುರುಸಿದ್ದಮ್ಮ ರವರು ಈತನಿಗೆ ಸರಿಯಾಗಿ ಬುದ್ದಿ ಕಲಿಸಿ ಎಂದು ಕುಮ್ಮಕ್ಕು ನೀಡಿರುವುದಾಗಿ ಕೇಸಿನ ಪಿರ್ಯಾದಿ ಸಿದ್ದಯ್ಯ ರವರು ಚಾ||ನಗರ ಜಿಲ್ಲಾ ಸಕರ್ಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಮೇರೆಗೆ ಈ ಕೇಸಿನ ಪ್ರ, ವ, ವರದಿ.

4. ಚಾಮರಾಜನಗರ ಗ್ರಾಮಾಂತರ ಠಾಣೆ ( ಮೊ,ನಂ 61/2020) : ಚಾಮರಾಜನಗರ ತಾ|| ಕುಲಗಾಣ ಗ್ರಾಮದ ಪುಟ್ಟಬಸಮ್ಮ ನವರು ಚಾ,ನಗರ ಸಕರ್ಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ, ನಮ್ಮೂರಿನ ನಮ್ಮ ಜನಾಂಗದ ಬೆಳ್ಳಯ್ಯನ ಮಗ ರಂಗಸ್ವಾಮಿ ನಮ್ಮ ಸಂಬಂಧಿಕರ ಹುಡುಗಿಯನ್ನು ಪ್ರೀತಿಸಿದ ವಿಚಾರವಾಗಿ ಈಗ್ಗೆ 2 ವರ್ಷಗಳಿಂದ ನಮಗೂ ಅವರಿಗೂ ವೈಮನಸ್ಸಿದ್ದು ಮಾತನಾಡಿಸುತ್ತಿರಲಿಲ್ಲ. ಈ ದಿನ ಸಂಜೆ 5.00 ಗಂಟೆ ಸಮಯದಲ್ಲಿ ನನ್ನ ಸೊಸೆ ಸರೋಜಮ್ಮ ಜಮೀನಿನಿಂದ ಹಸುಗಳನ್ನು ಹಿಡಿದುಕೊಂಡು ಬರುತ್ತಿದ್ದಾಗ ಸದರಿ ರಂಗಸ್ವಾಮಿ ಜೋರಾಗಿ ಮೋಟಾರು ಬೈಕನ್ನು ಓಡಿಸಿಕೊಂಡು ಬಂದಾಗ ದನಗಳು ಬೆದರಿದ್ದು ಇದಕ್ಕೆ ನನ್ನ ಸೊಸೆ ಆತನನ್ನು ಯಾಕೆ ಈ ರೀತಿ ಮಾಡುತ್ತಿಯಾ ಎಂದು ಕೇಳಿದ್ದಕ್ಕೆ ಒಬ್ಬರಿಗೊಬ್ಬರಿಗೆ ಮಾತಿಗೆ ಮಾತಾಗಿದ್ದು, ಪುನಃ ಸಂಜೆ 5.30 ಗಂಟೆ ಸಮಯದಲ್ಲಿ ಸದರಿ ರಂಗಸ್ವಾಮಿ ಅವನ ದೊಡ್ಡಪ್ಪ ಹುಚ್ಚಯ್ಯನ ಮಗ ಕರಿಯಯ್ಯ, ಚನ್ನಯ್ಯನ ಮಗ ಸೋಮೇಂದ್ರ ರವರುಗಳು ನಮ್ಮ ಮನೆಯ ಬಳಿ ಬಂದು ನಮ್ಮನ್ನು ಬೈಯುತ್ತಿದ್ದರು ಆಗ ನಾನು ನನ್ನ ಸೊಸೆ ಸರೋಜ ಹಾಗೂ ನನ್ನ ಮೊಮ್ಮಗ ಮಣಿಕಂಠರವರು ಮನೆಯಿಂದ ಹೊರಗೆ ಬಂದು ಕೇಳಿದಾಗ ಸದರಿಯವರು ನಮ್ಮ ಜೊತೆ ಗಲಾಟೆ ಮಾಡಿ ಸೋಮೇಂದ್ರ ಏಕಾಏಕಿ ನನ್ನ ಮೊಮ್ಮಗನನ್ನು ತಬ್ಬಿಹಿಡಿದುಕೊಂಡಾಗ, ರಂಗಸ್ವಾಮಿ ಅಲ್ಲಿಯೇ ಬಿದ್ದಿದ್ದ ಒಂದು ದೊಣ್ಣೆಯನ್ನು ತೆಗೆದುಕೊಂಡು ನನ್ನ ಮೊಮ್ಮಗನ ತಲೆಗೆ ಹೋಡೆದನು ಬಿಡಿಸಿಕೊಳ್ಳಲು ಹೋದ ನನಗೆ ಅದೇ ದೊಣ್ಣೆಯಿಂದ ತಲೆಗೆ ಹೋಡೆದನು ಹಾಗೂ ನಾರಾಯಣ ಹೋಡೆಯಿರು ಅವರನ್ನು ಬಿಡಬೇಡಿ ಎಂದು ಅವರಿಗೆ ಕುಮ್ಮಕ್ಕು ನೀಡುತ್ತಿದ್ದನು. ಸದರಿಯವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ದೂರಿನ ಮೇರೆಗೆ ಈ ಪ್ರ. ವ. ವರದಿ.

5. ಕೊಳ್ಳೇಗಾಲ ಗ್ರಾಮಾಂತರ ಠಾಣೆ (ಮೊ,ನಂ 111/2020) : ದಿ:24-06-2020ರಂದು ಆರ್ ಬಿಸಲಯ್ಯ ಆಹಾರ ನಿರೀಕ್ಷಕರವರು ಠಾಣೆಗೆ ಹಾಜರಾಗಿ ನೀಡಿದ ವರದಿ ಏನೆಂದರೆ ದಿ:24-06-2020ರಂದು ಬೆಳಿಗ್ಗೆ 04-30 ಗಂಟೆಯಲ್ಲಿ ಕೊಳ್ಳೇಗಾಲದ ಉಪ ವಿಭಾಗದ ಮಾನ್ಯ ಡಿವೈಎಸ್ಪಿ ರವರಾದ ಶ್ರೀ ನವೀನ್ಕುಮಾರ್ ರವರು ನನಗೆ ಕರೆ ಮಾಡಿ ಯಾರೋ ಆಸಾಮಿಗಳು ಬಿಳಿ ಬಣ್ಣದ ಪಿಕ್ಅಪ್ ಮಾದರಿಯ ಗೂಡ್ಸ್ ವಾಹನದಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಿರುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡು ಲೊಕ್ಕನಹಳ್ಳಿ ಗ್ರಾಮದ ಕಡೆಯಿಂದ ಸತ್ತೇಗಾಲದ ಮಾರ್ಗವಾಗಿ ಮಂಡ್ಯ ಕಡೆಗೆ ಸಾಗಾಣಿಕೆ ಮಾಡುತ್ತಿರುವುದಾಗಿ ಬಾತ್ಮೀದಾರರಿಂದ ಮಾಹಿತಿ ಬಂದಿದ್ದಾಗಿ ನನಗೆ ತಿಳಿಸಿ ತಕ್ಷಣ ಡಿವೈಎಸ್ಪಿ ನವೀನ್ಕುಮಾರ್ರವರು ನನ್ನನ್ನು ಹಾಗೂ ತಮ್ಮ ಕಛೇರಿಯ ಸಿಬ್ಬಂದಿಗಳೊಂದಿಗೆ ಸತ್ತೇಗಾಲಕ್ಕೆ ಹೋಗಿ ಜೀಪನ್ನು ಮರೆಯಾಗಿ ನಿಲ್ಲಿಸಿ ಕಾಯುತ್ತಾ ನಿಂತಿದ್ದಾಗ ಉಗನಿಯ ಗ್ರಾಮದ ಕಡೆಯ ರಸ್ತೆಯಿಂದ ಒಂದು ಬಿಳಿ ಬಣ್ಣದ ಪಿಕ್ಅಪ್ ಮಾದರಿಯ ಗೂಡ್ಸ್ ವಾಹನವು ಬಂತು,ತಕ್ಷಣ ನಾವು ಪರಿಶೀಲಿಸುವ ಸಲುವಾಗಿ ವಾಹನವನ್ನು ತಡೆದಾಗ ಗೂಡ್ಸ್ ವಾಹನದ ಚಾಲಕ ಮತ್ತು ಮತ್ತೋರ್ವ ಆಸಾಮಿಯು ವಾಹನವನ್ನು ನಿಲ್ಲಿಸಿ ಸ್ಥಳದಿಂದ ಓಡಲು ಶುರು ಮಾಡಿದಾಗ ತಕ್ಷಣ ಪೊಲೀಸಿನವರು ಸುತ್ತುವರಿದು ಹಿಡಿದುಕೊಂಡರು.ನಂತರ ಪಂಚಾಯ್ತದಾರರ ಸಮಕ್ಷಮ ಪರಿಶೀಲಿಸಿ ನೋಡಲಾಗಿ ಸಕರ್ಾರದ ಅನ್ನಭಾಗ್ಯ ಯೋಜನೆಯಲ್ಲಿ ಜನರಿಗೆ ವಿತರಣೆಯಾಗಿದ್ದ ಅಕ್ಕಿಯಾಗಿರುವುದು ಕಂಡು ಬಂತು.ನಂತರ ಅಮಾನತ್ತು ಮಹಜರ್ ಮುಖೇನ 48 ಪ್ಲಾಸ್ಟಿಕ್ ಅಕ್ಕಿ ಚೀಲಗಳು, ಕೆಎ-05-ಎಎಫ್4765ನಂನ ಅಶೋಕ ಲೈಲ್ಯಾಂಡ ದೋಸ್ತ್ ಗೂಡ್ಸ್ ವಾಹನ,ಇಬ್ಬರೂ ಆಸಾಮಿಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ನೀಡಿದ ಮೇರೆಗೆ ಈ ಪ್ರ ವ ವರದಿ.


Your Comment

Name :
Email:
Comment:
Submit

Website Designed and Developed by Global Buzz®