• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 23-06-2020

No of views : 47       No of Comments : 0

1. ಚಾಮರಾಜನಗರ ಸಂಚಾರ ಠಾಣೆ (ಮೊ ನಂ 43/2020) ಪಿರ್ಯಾದಿ ಚಿಕ್ಕಣ್ಣಶೆಟ್ಟಿ ಜಾಲಹಳ್ಳಿಹುಂಡಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನೆನ್ನೆ ದಿನ ದಿನಾಂಕ:22/6/2020 ರಂದು ಪಿರ್ಯಾದಿ ಮಗ ಮಣಿಕಂಠ ಮತ್ತು ಸಿದ್ದರಾಜು ಮಗ ಮಾಧು ಇಬ್ಬರು ಸಹಾ ಮಣಿಕಂಠರವರಿಗೆ ಸೇರಿದ ಕೆಎ-09ಇಪಿ-2746 ರಮೋಟಾರ್ ಸೈಕಲ್ನಲ್ಲಿ ಚಾಮರಾಜನಗರ ಟೌನ್ ಗೆ ಹೋಗಿ ವಾಪಸ್ ಮನೆಗೆ ಬರುವಾಗ ರಾತ್ರಿ ಸುಮಾರು 9-10 ಗಂಟೆಯಲ್ಲಿ ಚಾಮರಾಜನಗರ ಟೌನ್ನ ಹೊಸ ಬಸ್ ನಿಲ್ದಾಣದ ಬಳಿ ಎಲ್.ಐ.ಸಿ. ರಸ್ತೆಯ ಕಡೆಗೆ ಹೋಗುವ ಕ್ರಾಸ್ ಬಳಿ ಮೋಟಾರ್ ಸೈಕಲ್ ಅನ್ನು ಮಣಿಕಂಠ ಸ್ಫೀಡಾಗಿ ಓಡಿಸಿಕೊಂಡು ಬಂದು ರಸ್ತೆಯ ಬಲಬದಿ ಕಡೆಗೆ ತಿರುಗಿಸಿದ ಪರಿಣಾಮ ರಸ್ತೆಯ ಬಲಬದಿ ಇರುವ ತೆರದ ಚರಂಡಿ ಒಳಗೆ ಬಿದ್ದ ಪರಿಣಾಮ ಮಣಿಕಂಠನಿಗೆ ತಲೆಗೆ,ಮುಖಕ್ಕೆ ಮತ್ತು ಕಾಲಿಗೆ ಏಟಾಗಿದ್ದು ರಾತ್ರಿ ಸುಮಾರು 11-05 ಗಂಟೆಯಲ್ಲಿ ಮಣಿಕಂಠ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಮಾಧುವಿಗೂ ಸಹ ಒಳ ಏಟಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಅವರ ಮನೆಯವರು ಬಂದು ಅವನನ್ನು ಮೈಸೂರಿಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು, ಈ ವಿಚಾರವನ್ನು ಪಿರ್ಯಾದಿಯವರು ಅವರ ಕಡೆಯವರಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಈ ಅಪಘಾತದ ಸಂಬಂಧ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಈ ಪ್ರ.ಥ.ವ ವರದಿ.

2. ಚಾಮರಾಜನಗರ ಗ್ರಾಮಾಂತರ ಠಾಣೆ ( ಯು ಡಿ ಆರ್ ನಂ 08/2020) ಚಾಮರಾಜನಗರದ ಪಾಲಿಟೆಕ್ನಿಕ್ ಕಾಲೇಜಿನ ನಿರಾಶ್ರಿತರ ಕೇಂದ್ರದಿಂದ ಪಿರ್ಯಾದಿ ಸುಧಾಮ ಮುನೇಶ್ವರ ಗ್ರಾಮ ಮಹಾರಾಷ್ಟ್ರ ಜಿಲ್ಲೆರವರು ಠಾಣೆಗೆ ಬಂದು ಚಾ-ನಗರದ ಪಾಲಿಟೆಕ್ನಿಕ್ ಕಾಲೇಜಿನ ನಿರಾಶ್ರಿತರ ಕೇಂದ್ರದಲ್ಲಿದ್ದ ನಮ್ಮ ಅಣ್ಣ ರಾಜುರವರು ದಿ: 22/06/2020 ರಂದು ರಾತ್ರಿ ಸುಮಾರು 8-30 ಗಂಟೆಯಲ್ಲಿ ಏಕಾಏಕಿ ಎದೆ ನೋವೆಂದು ಹೇಳಿದ, ಅಷ್ಟಕ್ಕೆ ನಾವೆಲ್ಲಾ ಆತನಿಗೆ ನೀರು ಕುಡಿಸಿ ಸುಧಾರಿಸುವಷ್ಟರಲ್ಲಿ ಆತನು ಕುಸಿದು ನನ್ನ ತೊಡೆಯ ಮೇಲೆ ಬಿದ್ದುಬಿಟ್ಟನು, ಆತನನ್ನು ನೋಡಲಾಗಿ ಆತನ ಉಸಿರು ನಿಂತು ಹೋದಂತೆ ಕಂಡು ಬರುತ್ತಿದ್ದು, ಈ ವಿಚಾರವನ್ನು ನಿರಾಶ್ರಿತರ ಶಿಬಿರದ ಮೇಲ್ವಿಚಾರಕರಿಗೆ ತಿಳಿಸಲಾಗಿ ಅವರು ಸ್ಥಳಕ್ಕೆ ಆಂಬುಲೆನ್ಸ್ ಕರೆಸಿದ್ದು, ಅದರಲ್ಲಿ ನನ್ನ ಅಣ್ಣ ರಾಜುವನ್ನು ಚಾಮರಾಜನಗರ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿ ವೈದ್ಯರು ಪರೀಕ್ಷಿಸಿ ಸತ್ತುಹೋಗಿರುವುದಾಗಿ ತಿಳಿಸಿರುತ್ತಾರೆ, ನನ್ನ ಅಣ್ಣ ರಾಜು ಊಟ ಮಾಡಿ ಮಲಗಿದ್ದಾಗ, ಏಕಾಏಕಿ ಎದೆ ನೋವು ಬಂದು ಸತ್ತುಹೋಗಿರುತ್ತಾನೆ, ಇದಕ್ಕೆ ಬೇರೆ ಏನೂ ಕಾರಣ ಇರುವುದಿಲ್ಲ, ಮುಂದಿನ ಕ್ರಮ ಜರುಗಿಸಿ ಎಂದು ಇದ್ದ ಲಿಖಿತ ದೂರಿನ ಮೇರೆಗೆ ಈ ಯು.ಡಿ.ಆರ್. ವರದಿ.

3. ಬೇಗೂರು ಠಾಣೆ ( ಮೊ, ನಂ 68/2020) ಪಿರ್ಯಾದಿ ಕಿರಣ್ ಎಸ್. ಕೆಂಗಾಕಿ ಗ್ರಾಮರವರು ನೀಡಿದ ದೂರಿನಲ್ಲಿ ದಿನಾಂಕ 22/06/2020ರಂದು ನಾನು ಮತ್ತು ನಮ್ಮ ದೊಡ್ಡಪ್ಪನ ಮಗ ರವೀಂದ್ರ ಇಬ್ಬರೂ ಕೆಎ-51-ಹೆಚ್ ಎಲ್-2798ರ ಮೋಟಾರ್ ಬೈಕ್ ನಲ್ಲಿ ಬೆಳಗಿನ ಜಾವ ಸುಮಾರು 05 ಗಂಟೆ ಸಮಯದಲ್ಲಿ ತೊಂಡವಾಡಿ ಗ್ರಾಮದ ಗೇಟಿನ ಸ್ವಲ್ಪ ಮುಂದೆ ರಸ್ತೆಯ ಎಡಭಾಗದಲ್ಲಿ ನಂಜನಗೂಡಿನ ಕಡೆಗೆ ಹೋಗುತ್ತಿದ್ದು ರವೀಂದ್ರ ಬೈಕ್ ನ್ನು ಓಡಿಸುತ್ತಿದ್ದನು. ತೊಂಡವಾಡಿ ಗೇಟಿನಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಾಗ ರಸ್ತೆಯ ಎಡಭಾಘದಲ್ಲಿ ಯಾವುದೋ ಒಂದು ಲಾರಿಯನ್ನು ಅದರ ಚಾಲಕ ಹೆದ್ದಾರಿಯಲ್ಲಿ ನಿಲ್ಲಿಸಿ ಯಾವುದೇ ಮುನ್ಸೂಚನೆ ಕ್ರಮಗಳನ್ನು ಅಂದರೆ ದೀಪಗಳನ್ನು ಹಾಕದೆ ನಿಲ್ಲಿಸಿದ್ದರಿಂದ ಮುಂಭಾಗ ಏನು ಕಾಣಿಸದೆ ಕತ್ತಲು ಆಗಿದ್ದರಿಂದ ರವಿಂದ್ರ ಬೈಕನ್ನು ನಿಯಂತ್ರಿಸಲಾಗದೆ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಮಾಡಿದಾಗ ನಾನು ಮತ್ತು ರವಿಂದ್ರ ಇಬ್ಬರೂ ಬೈಕಿನ ಸಮೇತ ಕೆಳಕ್ಕೆ ಬಿದ್ದೆವು. ನನಗೆ ಬಲಗಣ್ಣು, ಮೈಕೈಗೆ ಗಾಯವಾಯಿತು ರವೀಂದ್ರನಿಗೆ ತಲೆ ಮತ್ತು ಮೈಕೈಗೆ ಗಾಯವಾಯಿತು. ಲಾರಿ ನಂಬರ್ ನೋಡಲಾಗಿ ಕೆಎ-40-1775 ಆಗಿದ್ದು ನಂತರ ನಮ್ಮಗಳನ್ನು ಅಲ್ಲೆ ದಾರಿಯಲ್ಲಿ ಬಂದ ವಾಹನ ಸವಾರರು ಬೇಗೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಅಲ್ಲಿಂದ ಕೆ.ಆರ್ ಆಸ್ಪತ್ರೆಗೆ ಸೇರಿಸಿದ್ದರು. ಮೇಲ್ಕಂಡ ಕೆಎ-40-1775ರ ಲಾರಿಯನ್ನು ಅದರ ಚಾಲಕ ಯಾವುದೋ ಕಾರಣಕ್ಕೆ ದುರಸ್ಥಿಗಾಗಿ ಅಥವಾ ಏನೋ ಯಾವ ಕಾರಣಕ್ಕೋ ಹೆದ್ದಾರಿಯಲ್ಲಿ ನಿಲ್ಲಿಸಿ ಯಾವುದೆ ಮುನ್ಸೂಚನೆ ಕೈಗೊಳ್ಳದೆ ಮತ್ತು ವಾಹನವನ್ನು ನಿಲ್ಲಿಸಿದ ಬಗ್ಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳದೆ ವಾಹನವನ್ನು ರಸ್ತೆಯಲ್ಲಿ ನಿಲ್ಲಿಸಿದ್ದರಿಂದ ಮಈ ಅಪಘಾತವಾಗಿರುತ್ತದೆ ಆದ್ದರಿಂದ ಸದರಿ ಲಾರಿ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂಬುದಾಗಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

4. ಅಗರ ಮಾಂಬಳ್ಳಿ ಠಾಣೆ ( ಮೊ, ನಂ 13/2020) ದಿನಾಂಕ. 22-06-20 ರಂದು ಪಿರ್ಯಾಧಿ ಪಿಎಸ್ಐರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿ ಹಾಗೂ ಪಂಚರ ಜೊತೆ ಸುಮಾರು 16-15 ಗಂಟೆ ಸಮಯದಲ್ಲಿ ಮಾಂಬಳ್ಳಿ ಗ್ರಾಮದ ಗ್ರಾಮ ಪಂಚಾಯ್ತಿಗೆ ಹೋಗುವ ರಸ್ತೆಯ ಮೀಸೆ ಬಸಪ್ಪರವರ ಜಮೀನಿನ ತೆಂಗಿನ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿಟ್ಟು ಅಂದರ ಬಾಹರ್ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದ ಆಸಾಮಿಗಳ ಮೇಲೆ ದಾಳಿ ಮಾಡಿ, ಇಸ್ಪೇಟ್ ಜೂಜಾಟದಲ್ಲಿ ಪಣವಾಗಿಟ್ಟಿದ್ದ ಒಟ್ಟು ರೂ. 1680/- ಮತ್ತು 52 ಇಸ್ಪೆಟ್ ಎಲೆಗಳು, ಹಾಗೂ ಒಂದು ಪ್ಲಾಸ್ಟೀಕ್ ತಾಟನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಸ್ವಯಂ ವರದಿ ತಯಾರಿಸಿ ಠಾಣಾ ಎನ್.ಸಿ.ಆರ್ 41/2020 ರಲ್ಲಿ ನೋಂದಾಯಿಸಿ ಕೊಂಡು ಈ ದಿನ ಘನ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲು ಮಾಡಿದ ಮೇರೆಗೆ ಈ ಪ್ರ.ವ.ವರದಿ.

5. ಕೊಳ್ಳೇಗಾಲ ಪಟ್ಟಣ ಠಾಣೆ ( ಮೊ, ನಂ 82/2020) ಪಿರ್ಯಾದಿ ರಾಜ ಲೊಕ್ಕನಹಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ನನ್ನ 03 ನೆ ಮಗಳು ಸುಸ್ಮಿತಾ 20 ವರ್ಷ ಬೆಂಗಳೂರಿನ ದೊಡ್ಡಮ್ಮ ದೇವಿ ಕ್ರಿಯೇಷನ್ ಗಾಮರ್ೆಂಟ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ನಾನು ಮತ್ತು ನನ್ನ ಹೆಂಡತಿಯು ಸಹ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ನನ್ನ ಮಗಳ ಸಮೇತ ವಾಸವಾಗಿದ್ದೆವು ಕಳೆದಮೂರು ತಿಂಗಳ ಹಿಂದೆ ಕೊರೊನಾ ದಿಂದ ಲಾಖ್ ಡೌನ್ ಆಗಿದ್ದರಿಂದ ನಾನು ನನ್ನ ಹೆಂಡತಿ ,ನನ್ನ ಮಗಳು ಸುಷ್ಮಿತಾ ಮೂವರು ಮನೆ ಖಾಲಿ ಮಾಡಿಕೊಂಡು ಲೊಕ್ಕನಹಳ್ಳಿಗೆ ಬಂದು ಇದ್ದುಕೊಂಡೆವು ಆದರೆ ನನ್ನ ಮಗಳು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸಂಬಳ ಕೊಡಬೇಕಾಗಿದ್ದರಿಂದ ನನ್ನ ಮಗಳು ಬೆಂಗಳೂರಿಗೆ ಹೋಗಿ ಸಂಬಳ ತೆಗೆದುಕೊಂಡು ಬರುತ್ತೇನೆಂದು ಹೇಳಿದ್ದರಿಂದ ನಾನು ದಿ:13-06-2020 ರಂದು ಕೊಳ್ಳೇಗಾಳಕ್ಕೆ ಕರೆದುಕೊಂಡು ಬಂದು ಬೆಂಗಳುರಿಗೆ ಕೆ ಎಸ್ ಆರ್ ಟಿ ಸಿ ಬಸ್ ಹತ್ತಿಸಿ ಕಳುಹಿಸಿದೆ ಆದರೆ ನನ್ನ ಮಗಳು ವಾಪಾಸ್ ಬಂದಿರುವುದಿಲ್ಲ ನನ್ನ ಮಗಳ ಮೊ ನಂ 7760194886 ಮತ್ತು 8618211998 ಗೆ ಪೋನ್ ಮಾಡಿದಾಗ ಅದು ಸ್ವಿಚ್ ಆಫ್ ಆಗಿದ್ದು ಈ ವರೆಗು ನನ್ನ ಮಗಳು ಮನೆಗೆ ಬಂದಿರುವುದಿಲ್ಲ ಎಲ್ಲಾ ಕಡೆ ಹುಡುಕಾಡಿ ಎಲ್ಲು ಸಿಗದ ಕಾರಣ ಈ ದಿನ ತಡವಾಗಿ ಬಂದು ಕಾಣೆಯಾಗಿರುವ ನನ್ನ ಮಗಳ ಪತ್ತೆ ಹಚ್ಚಿಕೊಡಬೇಕಾಗಿ ಕೊಟ್ಟ ದೂರಿನ ಮೇರೆಗೆ ಪ್ರ ವರದಿ.


Your Comment

Name :
Email:
Comment:
Submit

Website Designed and Developed by Global Buzz®