• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 19-05-2020

No of views : 26       No of Comments : 0

1. ಚಾಮರಾಜನಗರ ಗ್ರಾಮಾಂತರ ಠಾಣೆ (ಮೊ ನಂ 55/2020) ದಿನಾಂಕ: 19-05-2020 ರಂದು ಪಿರ್ಯಾದಿ ಮಹದೇವಪ್ರಸಾದ್ ಅರಳಿಕಟ್ಟೆ ಗ್ರಾಮರವರು ಠಾಣೆಗೆ ಬಂದು ಒಂದು ಲಿಖಿತ ದೂರು ನೀಡಿದ್ದು, ಅವರ ಸೋದರ ಮಾವ ಸೋಮು ರವರು ಕೆ.ಎ 10 ವೈ 2532 ರ ಹೋಂಡಾ ಶೈನ್ ಮೋಟಾರ್ ಬೈಕಿನಲ್ಲಿ ಹೋಗಿದ್ದು, ಆ ರಾತ್ರಿ ವಾಪಸ್ ಮನೆಗೆ ಬರಲಿಲ್ಲ. ಮಲೆಯೂರು-ಮೂಡ್ನಾಕೂಡು ರಸ್ತೆಯ ಬಳಿ ಇರುವ ನಮ್ಮೂರಿನ ಮಹದೇವಪ್ಪ ರವರ ಜಮೀನಿನ ಬಳಿ ರಸ್ತೆಯ ಪಕ್ಕದಲ್ಲಿ ಅವರ ಸೋಧರ ಮಾವನಿಗೆ ಆಕ್ಸಿಡೆಂಟ್ ಆಗಿ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು, ಪ್ರಜ್ಞೆ ಇರುವುದಿಲ್ಲ ಎಂದು ತಿಳಿಸಿದ ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ಮಾವ ರಸ್ತೆಯಿಂದ ಸ್ವಲ್ಪ ದೂರದಲ್ಲಿ ಬಿದ್ದಿದ್ದು, ಅವರ ತಲೆ ಹಾಗೂ ಮೈ, ಕೈಗೆ ಪೆಟ್ಟಾಗಿರುತ್ತದೆ. ನಮ್ಮ ಮಾವನಿಗೆ ಪ್ರಜ್ಞೆ ಇರುವುದಿಲ್ಲ, ನಮ್ಮ ಮಾವನ ಪಕ್ಕದಲ್ಲಿ ಅವರ ಬೈಕ್ ಸಹ ಬಿದ್ದಿದ್ದು, ಅಲ್ಲಲ್ಲಿ ಜಖಂಗೊಂಡಿರುತ್ತದೆ. ನಮ್ಮ ಮಾವ ಸೋಮು ರವರನ್ನು ಚಾ||ನಗರದ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು, ವೈದ್ಯರು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ಆಂಬುಲೆನ್ಸ್ನಲ್ಲಿ ನಮ್ಮ ಮಾವನನ್ನು ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಪುನಃ ಹೆಚ್ಚಿನ ಚಿಕಿತ್ಸೆ ಸಂಬಂಧ ಮೈಸೂರಿನ ಕಾವೇರಿ ಆಸ್ಪತ್ರೆಗೆ ದಾಖಲಿಸಿರುತ್ತೇವೆ. ರಸ್ತೆಯಲ್ಲಿ ಯಾವುದೋ ವಾಹನವನ್ನು ಅದರ ಚಾಲಕ ಅತಿ ವೇಗ ಹಾಗೂ ಅಜಾಗರೂಕತೆದಿಯಿಂದ ಓಡಿಸಿಕೊಂಡು ಬಂದು ನಮ್ಮ ಮಾವನ ಬೈಕಿಗೆ ಗುದ್ದಿಸಿದ್ದರಿಂದಲೋ ಅಥವಾ ನಮ್ಮ ಮಾವ ತಮ್ಮ ಬೈಕನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ಬೈಕನ್ನು ನಿಯಂತ್ರಿಸಲಾರದೇ ಬೈಕ್ ಸಮೇತ ಬಿದ್ದ ಪರಿಣಾಮದಿಂದಲೋ ಈ ಅಪಘಾತವಾಗಿರುತ್ತದೆ. ಆಸ್ಪತ್ರೆಯಲ್ಲಿ ನಮ್ಮ ಮಾವನಿಗೆ ಚಿಕಿತ್ಸೆ ಕೊಡಿಸುತ್ತಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿಕೊಳ್ಳುತ್ತೇನೆ. ಎಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ. ವ. ವರದಿ.

2. ಚಾಮರಾಜನಗರ ಪೂರ್ವ ಠಾಣೆ (ಮೊ ನಂ 91/2020) ದಿನಾಂಕ; 19-05-2020 ರಂದು ಸಂಜೆ ಸುಮಾರು 4-30 ಗಂಟೆಯಲ್ಲಿ ನಾನು ನಮ್ಮ ಕಛೇರಿಯಲ್ಲಿದ್ದಾಗ ಚಾಮರಾಜನಗರ ಡಿ.ಸಿ.ಐ.ಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ರವರಾದ ಶ್ರೀ. ಮಹದೇವಶೆಟ್ಟಿ ರವರು ನಮ್ಮ ಕಛೇರಿಗೆ ಬಂದು ಚಾಮರಾಜನಗರ ತಾಲ್ಲೂಕು ಚಾಟೀಪುರ ಗ್ರಾಮದಲ್ಲಿ ಸಮೀಉಲ್ಲಾ ರವರು ತಮ್ಮ ಮನೆಯ ಗೋಡೌನ್ನಂತಿರುವ ಕಟ್ಟಡದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿಕೊಂಡಿರುವುದಾಗಿ ಮಾಹಿತಿ ಬಂದಿದ್ದು ಈ ಸಂಬಂಧ ದಾಳಿ ಮಾಡಿ ಪರಿಶೀಲನೆ ನಡೆಸುವ ಸಲುವಾಗಿ ನನ್ನನ್ನು ಸ್ಥಳಕ್ಕೆ ಬರುವಂತೆ ಮನವಿಯನ್ನು ನೀಡಿರುತ್ತಾರೆ. ನಂತರ ಚಾಟಿಪುರ ಗ್ರಾಮದ ವ್ಯಾಪ್ತಿಗೆ ಬರುವ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶ್ರೀ ಎಸ್.ಪಿ. ಸುನಿಲ್ ರವರಿಗೂ ಮಾಹಿತಿಯನ್ನು ತಿಳಿಸಿ ಚಾಟಿಪುರಕ್ಕೆ ತಮ್ಮ ಸಿಬ್ಬಂದಿಯವರೊಂದಿಗೆ ಬರುವಂತೆ ಡಿ.ಸಿ.ಐ.ಬಿ ವಿಭಾಗದ ಇನ್ಸ್ಪೆಕ್ಟರ್ ರವರು ತಿಳಿಸಿರುತ್ತಾರೆ. ನಂತರ ನಾನು ಡಿ.ಸಿ.ಐ.ಬಿ. ಇನ್ಸ್ಪೆಕ್ಟರ್ ಮಹದೇವಶೆಟ್ಟಿರವರ ಜೊತೆ ಅವರ ಇಲಾಖಾ ವಾಹನ ನಂ ಕೆ.ಎ-10 ಜಿ- 295 ರಲ್ಲಿ ಹೊರಟು ಸಿಬ್ಬಂದಿ ಪಂಚರ ಚಾಟಿಪುರ ಗ್ರಾಮದ ಸಮೀಉಲ್ಲಾರವರ ಗೋಡೌನ್ನಂತಿರುವ ಮನೆಗೆ ಬಂದು ಪರಿಶೀಲಿಸಲಾಗಿ ಮನೆಯ ಮುಂಭಾಗ ರಸ್ತೆಯಲ್ಲಿ ಹಳದಿ ಕಪ್ಪು ಬಣ್ಣದ ಒಂದು ಆಪೆ ಪ್ಯಾಸೆಂಜರ್ ಆಟೋ ನಂಬರ್ ಕೆ.ಎ-42, 592 ನಂಬರಿನ ಆಟೋ ಇದ್ದು ಇದರ ಒಳಗಡೆ ಬಿಳಿ, ಹಳದಿ ಪ್ಲಾಸ್ಟಿಕ್ ಚೀಲಗಳಲ್ಲಿ ಪಡಿತರ ಅಕ್ಕಿ ತುಂಬಿರುವ 10 ಚೀಲಗಳು ಇದ್ದು ಈ ಆಟೋದ ಮುಂಭಾಗದಲ್ಲಿ ಮತ್ತೊಂದು ಆಪೆ ಗೂಡ್ಸ್ ನೀಲಿ ಬಣ್ಣದ ಆಟೋ ಇದ್ದು ಈ ಆಟೋದ ಒಳಗಡೆ ಬಿಳಿ, ಹಳದಿ ಪ್ಲಾಸ್ಟಿಕ್ ಚೀಲಗಳಲ್ಲಿ ಪಡಿತರ ಅಕ್ಕಿ ತುಂಬಿರುವ 15 ಚೀಲಗಳು ಇದ್ದು ಸಮಿವುಲ್ಲಾರವರ ಮನೆಯಂತಿರುವ ಗೋಡೌನ್ನ ಬಾಗಿಲು ತೆರೆದಿದ್ದು ಒಳಗೆ ಹೋಗಿ ಪರಿಶೀಲಿಸಿ ನೋಡಲಾಗಿ ಬಿಳಿ, ಹಳದಿ, ಪಿಂಕ್ ಕಲರ್ನ ಪ್ಲಾಸ್ಟಿಕ್ ಚೀಲಗಳಲ್ಲಿ ಹಾಗೂ ಗೋಣಿ ಚೀಲಗಳಲ್ಲಿ ಅಕ್ಕಿ ತುಂಬಿರುವುದು ಕಂಡು ಬಂದಿದ್ದು ಮೂಟೆಗಳ ಗಂಟನ್ನು ಪಂಚರ ಮತ್ತು ಪೊಲೀಸ್ ನವರ ಸಮಕ್ಷಮ ಬಿಚ್ಚಿಸಿ ನೋಡಲಾಗಿ ಪಡಿತರದಾರರಿಗೆ ವಿತರಣೆ ಮಾಡಿರುವ ಪಡಿತರ ಅಕ್ಕಿಯಾಗಿರುತ್ತೆ. ಮೇಲ್ಕಂಡ ಆಟೋಗಳಲ್ಲಿ ತುಂಬಿದ್ದ ವಿವಿಧ ಅಳತೆಯ 25 ಪಡಿತರ ಅಕ್ಕಿ ಮೂಟೆಗಳು ಹಾಗೂ ಗೋಡೌನ್ ನಲ್ಲಿದ್ದ 79 ಪಡಿತರ ಅಕ್ಕಿ ಮೂಟೆ ಅಂದಾಜು ಮೌಲ್ಯ 73,788.75 (ಎಪ್ಪತ್ತ ಮೂರು ಸಾವಿರದ ಏಳುನೂರ ಎಂಬತ್ತೆಂಟು ರೂ ಎಪ್ಪತ್ತೈದು ಪೈಸೆ) ಆಗಿರುತ್ತೆ. ಮುಂದಿನ ಕ್ರಮದ ಬಗ್ಗೆ ಮಹಜರ್ ಮಾಡಿ ಅಮಾನತುಪಡಿಸಿಕೊಂಡು ಠಾಣೆಗೆ ಮಾಲುಗಳ ಸಮೇತ ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ವರದಿ, ಮಹಜರ್ , ಮತ್ತು ಮಾಲುಗಳು, ಮತ್ತು ವಾಹನಗಳನ್ನು ಹಾಜರ್ಪಡಿಸಿದ ಮೇರೆಗೆ.

3. ಚಾಮರಾಜನಗರ ಪೂರ್ವ ಠಾಣೆ (ಮೊ ನಂ 92/2020) ಪಿಯರ್ಾದಿ ಗಂಗಾಧರ ಬೊಮ್ಮನಹಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ದಿನಾಂಕ;- 19/05/2020 ರಂದು ಸಂಜೆ ಸುಮಾರು 6.15 ಗಂಟೆ ಸಮಯದಲ್ಲಿ ಮನೆಯ ಬಳಿ ಇದ್ದ ಟಾಟಾ ಸುಮೊ ವನ್ನು ನನ್ನ ತಮ್ಮ ಸತ್ಯರಾಜು ವಾಹನವನ್ನು ಮನೆಯ ಬಳಿ ನಿಲ್ಲಿಸುವುದಾಗಿ ತಿಳಿಸಿ ಏಕಾ ಏಕೀ ನಿರ್ಲಕ್ಷತೆಯಿಂದ ಹಿಂದಕ್ಕೆ ಚಲಿಸಿದ್ದನು ಆಗ ಮನೆಯ ಬಳಿ ಇದ್ದ ಸತ್ಯರಾಜುರವರ ಮಗನಾದ ಎಸ್ ರೋಹಿತ್ ಒಂದು ವರ್ಷ 10 ತಿಂಗಳ ಮಗು ಆಟ ಆಡುತ್ತಿದ್ದವನಿಗೆ ಡಿಕ್ಕಿ ಮಾಡಿದ ಪರಿಣಾಮ ಅವನ ತಲೆಗೆ ಪೆಟ್ಟಾಗಿದ್ದು ತಲೆಯಲ್ಲಿ ಹಾಗು ಮೂಗಿನಲ್ಲಿ ರಕ್ತ ಬರುತ್ತಿದ್ದು ಅಷ್ಟಕ್ಕೆ ನಾನು ನನ್ನ ಸತ್ಯರಾಜು ದನಲಕ್ಷಿ ಸುಧಾರಿಸಿ ಅದೇ ಟಾಟಾ ಸುಮೊದಲ್ಲಿ ತಾಳವಾಡಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು ಅಲ್ಲಿ ವೈದ್ಯರು ಪರೀಕ್ಷೆ ಮಾಡಿ ಎಸ್ ರೋಹಿತ್ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಮುಂದಿನ ಕ್ರಮ ಕೈಗೊಳ್ಳಿ ಎಂದು ದೂರು

4. ಕುದೇರು ಠಾಣೆ (ಮೊ ನಂ 31/2020) ಫಿರ್ಯಾದಿ ಸಿದ್ದವೀರಪ್ಪ ದೇಮಹಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ನನಗೆ 03 ಜನ ಮಕ್ಕಳು ಎಲ್ಲರಿಗು ಮದುವೆಯಾಗಿರುತ್ತದೆ. ನನ್ನ ಕಿರಿಯ ಕೆಂಪಣ್ಣನಿಗೆ ಟಿ.ನರಸೀಪುರ ತಾಲ್ಲೂಕು ವಾಟಾ ಮಗ ಳ್ಪುರ ಗ್ರಾಮದ ಚಂದ್ರಶೇಖರ್ರವರ ಮಗಳು ಪೂಣರ್ಿಮಾಳ ಜೊತೆ 05 ವರ್ಷದ ಹಿಂದೆ ಮದುವೆಯಾಗಿದ್ದು 03 ವರ್ಷದ ಹೃಥ್ವಿಕ್ ಎಂಬ ಗಂಡು ಮಗು ಇರುತ್ತದೆ. ಮೊನ್ನೆ ನನ್ನ ಮಗ ತನ್ನ ಮೋಟಾರ್ ಬೈಕ್ ಕೆ.ಎ-03, ಕ್ಯೂ-4374 ರಲ್ಲಿ ತನ್ನ ಹೆಂಡತಿ ಮಗುವನ್ನು ಕರೆದುಕೊಂಡು ಆಲ್ದೂರು ಗ್ರಾಮದಲ್ಲಿರುವ ನನ್ನ ಸೊಸೆಯ ದೊಡ್ಡಮ್ಮನ ಮನೆಗೆ ಹೋದನು. ಈ ದಿನ 19.05.2020 ರಂದು ಬೆಳಿಗ್ಗೆ 7:30 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ ಲಿಂಗಣಾಪುರ ಗ್ರಾಮದ ಭೋಜಪ್ಪ ಎಂಬುವವರು ನಮ್ಮ ಗ್ರಾಮಕ್ಕೆ ಫೋನ್ ಮಾಡಿ ಲಿಂಗಣಾಪುರ-ಬಾಗಳಿ ಮುಖ್ಯ ರಸ್ತೆ ಬಳಿ ಇರುವ ಚಾನೆಲ್ ಹತ್ತಿರ ಇಬ್ಬರು ಗಂಡ-ಹೆಂಡತಿ ಮೋಟಾರ್ ಬೈಕಿನಲ್ಲಿ ಹೋಗುತ್ತಿದ್ದು ಚಾನೆಲ್ ಹತ್ತಿರ ಮಗು ಸಮೇತ ಮೋಟಾರ್ ಬೈಕನ್ನು ನಿಲ್ಲಿಸಿ ನೀರು ಹರಿಯುತ್ತಿರುವ ಚಾನೆಲ್ಗೆ ಇಳಿದರು ನಾನು ತಕ್ಷಣ ಓಡಿಹೋಗಿ ನೋಡಿದಾಗ ಅವರು ನೀರಿನಲ್ಲಿ ಮುಳುಗಿದರು. ಎಂದು ತಿಳಿಸಿದಾಗ ನಾನು ಮತ್ತು ನಮ್ಮ ಗ್ರಾಮದ ಸುಬ್ಬಣ್ಣರವರನ್ನು ಕರೆದುಕೊಂಡು ಬೆಳಿಗ್ಗೆ 8:00 ಗಂಟೆ ಸಮಯದಲ್ಲಿ ಸ್ಥಳಕ್ಕೆ ಹೋಗಿ ನೋಡಿದಾಗ ನನ್ನ ಮಗ ಓಡಿಸುತ್ತಿದ್ದ ಮೋಟಾರ್ ಬೈಕ್ ರಸ್ತೆ ಬದಿಯಲ್ಲಿ ನಿಂತಿದ್ದು ಆ ಬೈಕ್ನ ಮೇಲೆ ನನ್ನ ಮೊಮ್ಮಗ ಕುಳಿತಿದ್ದು ನಂತರ ಚಾನೆಲ್ನ ಸುತ್ತಮುತ್ತ ನೋಡಲಾಗಿ ನನ್ನ ಸೊಸೆ ಬಳಸುತ್ತಿದ್ದ ಬಟ್ಟೆಗಳ ಬ್ಯಾಗು ಚಾನೆಲ್ ಬದಿಯಲ್ಲಿ ಬಿದ್ದಿರುತ್ತದೆ. ನನ್ನ ಸೊಸೆ ಮತ್ತು ಮಗ ಚಾನೆಲ್ನಲ್ಲಿ ಹರಿಯುವ ನೀರಿನಲ್ಲಿ ಮುಳುಗಿ ಕಾಣೆಯಾಗಿರುತ್ತಾರೆ. ಅವರನ್ನು ಪತ್ತೆ ಮಾಡಿಕೊಡಬೇಕೆಂದು ಇದ್ದ ಲಿಖಿತ ದೂರಿನ ಮೇರೆಗೆ.

5. ಕುದೇರು ಠಾಣೆ (ಮೊ ನಂ 32/2020) ದಿನಾಂಕ:19.05.2020 ರಂದು ಫಿರ್ಯಾದಿ ಸಿದ್ದರಾಮು ಹೆಗ್ಗೋಠಾರ ಗ್ರಾಮರವರು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನನ್ನ ಅಣ್ಣ ಗುರುಸಿದ್ದಯ್ಯ.ಹೆಚ್.ಎನ್ ರವರು ಕುದೇರು ಗ್ರಾಮದಲ್ಲಿರುವ ಹಾಲಿನ ಡೈರಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಪ್ರತಿದಿನ ಕುದೇರು ಗ್ರಾಮದಿಂದ ನಮ್ಮ ಗ್ರಾಮಕ್ಕೆ ಕೆ.ಎ-10, ಡಬ್ಲ್ಯೂ-0586 ರ ಹೊಂಡಾ ಲಿವೊ ಮೋಟಾರ್ ಬೈಕಿನಲ್ಲಿ ಹೋಗಿ ಬರುತ್ತಿರುತ್ತಾರೆ. ದಿನಾಂಕ:17.05.2020 ರಂದು ನಾನು ಕೆಲಸದ ನಿಮಿತ್ತ ಸಂತೆಮರಹಳ್ಳಿ ಗ್ರಾಮಕ್ಕೆ ಬಂದು ವಾಪಸ್ ನಮ್ಮ ಊರಿಗೆ ಹೋಗಲು ನಮ್ಮ ಅಣ್ಣನ ಮೋಟಾರ್ ಬೈಕ್ನಲ್ಲಿ ಹೋಗೋಣ ಎಂದು ಕುದೇರು ಗ್ರಾಮಕ್ಕೆ ಬಂದು ರಾಜಶೇಖರ್ ಹೋಟೆಲ್ ಹತ್ತಿರ ಕಾಯುತ್ತಿದ್ದಾಗ ಕುದೇರು ಬಸ್ ನಿಲ್ದಾಣದ ಕಡೆಯಿಂದ ಕೆ.ಎ-10, ವಿ-9963. ರ ನೊಂದಣಿ ಸಂಖ್ಯೆಯ ಬಜಾಜ್ ಡಿಸ್ಕವರ್ ಬೈಕ್ ಸವಾರ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ಮದ್ಯಾಹ್ನ 2:35 ಗಂಟೆ ಸಮಯದಲ್ಲಿ ಕುದೇರು ಹಳೆ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯಲ್ಲಿ ಬರುತ್ತಿದ್ದ ನಮ್ಮ ಅಣ್ಣನ ಮೋಟಾರ್ ಬೈಕಿಗೆ ಢಿಕ್ಕಿ ಹೊಡೆಸಿ ಅಪಘಾತ ಉಂಟು ಮಾಡಿದ ಪರಿಣಾಮ ನಮ್ಮ ಅಣ್ಣ ತನ್ನ ಮೋಟಾರ್ ಬೈಕ್ ಸಮೇತ ಕೆಳಕ್ಕೆ ಬಿದ್ದಾಗ ಅವರ ಬಲಭುಜ ಮತ್ತು ಬಲಗಾಲಿಗೆ ಏಟಾಯಿತು. ನಂತರ ನನ್ನ ಅಣ್ಣನ ಸ್ನೇಹಿತರಾದ ಮಹದೇವಸ್ವಾಮಿ.ಪಿ ಮತ್ತು ಪ್ರದೀಪರವರು ಸಂತೆಮರಹಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ನಾನು ಅವರ ಯೋಗಕ್ಷೇಮವನ್ನು ನೋಡಿಕೊಂಡು ಈ ದಿನ ದಿನಾಂಕ:19.05.2020 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಅಪಘಾತ ಉಂಟು ಮಾಡಿರುವ ಕೆ.ಎ-10, ವಿ-9963 ರ ನೊಂದಣಿ ಸಂಖ್ಯೆಯ ಬಜಾಜ್ ಡಿಸ್ಕವರ್ ಬೈಕ್ ಸವಾರನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಇದ್ದ ದೂರಿನ ಮೇರೆಗೆ ಈ ಪ್ರ.ವ.ವರದಿ.

6. ಕುದೇರು ಠಾಣೆ (ಮೊ ನಂ 33/2020) ಈ ದಿನ ದಿನಾಂಕ:19-05-2020 ರಂದು ಠಾಣಾ ದಿನಚರಿ ಉಸ್ತುವಾರಿಯಲ್ಲಿದ್ದಾಗ ಸಂಜೆ 4:30 ಗಂಟೆ ಸಮಯದಲ್ಲಿ ಅಂಚೆ ಮೂಲಕವಾಗಿ ಬಂದ ಟಪಾಲನ್ನು ಪಡೆದು ಕವರಿನ ಒಳಭಾಗ ತೆಗೆದು ನೋಡಲಾಗಿ, ಕುದೇರು ಗ್ರಾಮದ ಲೇ.ಮಾದಯ್ಯರವರ ಮಗ ಮಹದೇವರವರು ಬರೆದು ಕಳುಹಿಸಿದ್ದ ಲಿಖಿತ ದೂರಿನ ಸಾರಾಂಶವೇನೆಂದರೆ, ಆಸ್ತಿ ವಿಚಾರದಲ್ಲಿ ನಮಗು ಮತ್ತು ನನ್ನ ತಮ್ಮ ಕೆ.ಎಂ.ಸೋಮಣ್ಣ ಎಂಬುವವರಿಗು ಆಗಾಗ್ಗೆ ಗಲಾಟೆ ಆಗಿ ಅನೇಕ ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ದಿನಾಂಕ:11.05.2020 ರಂದು ಸಂಜೆ 7:30 ಗಂಟೆ ಸಮಯದಲ್ಲಿ ಆಸ್ತಿಗಾಗಿ ಗಲಾಟೆ ಮಾಡುತ್ತಿದ್ದಾಗ ಮಾಹಿತಿಯನ್ನು ನಿಮ್ಮ ಗಮನಕ್ಕೆ ತಂದಿದ್ದು ತಾವು ಸ್ಥಳಕ್ಕೆ ಬಂದು ಬುದ್ದಿ ಹೇಳಿ ದಿನಾಂಕ:12.05.2020 ರಂದು ಬೆಳಿಗ್ಗೆ 10:00 ಗಂಟೆಗೆ ಠಾಣೆಗೆ ಬರಲು ತಿಳಿಸಿ ಹೋಗಿದ್ದು ನೀವು ಹೋದ ಬಳಿಕ ಆಸ್ತಿ ವಿಷಯಕ್ಕೆ ರತ್ನಮ್ಮ ಕೋಂ ರಾಜು, ಅವಳ ಗಂಡ ರಾಜು, ಮಗಳು ಪೂಜಾ, ರಾಜುವಿನ ಚಿಕ್ಕಪ್ಪನ ಮಗನಾದ ಮಲ್ಲಿಕಾಜರ್ುನ, ಮತ್ತು ನ್ನ ಮಲತಾಯಿ ನಾಗಮ್ಮ ಮತ್ತು ಮಗಳು ಶೋಭಾ ರವರುಗಳು ನನ್ನ ಮತ್ತು ನನ್ನ ಅಣ್ಣನ ಕುಟುಂಬಗಳ ಮೇಲೆ ದೊಣ್ಣೆ, ಮಚ್ಚು ಮತ್ತು ಚಾಕುಗಳನ್ನು ಹಿಡಿದು ನನ್ನ ಮತ್ತು ನನ್ನ ಕುಟುಂಬದವರನ್ನು ಕೊಲೆ ಮಾಡಲು ಯತ್ನಿಸಿದಾಗ ನಾನು ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಹೋಗುತ್ತಿದ್ದಾಗ ಎಲ್ಲರು ನನ್ನನ್ನು ಅಡ್ಡಗಟ್ಟಿ ಪೊಲೀಸ್ ಠಾಣೆಗೆ ಏಕೆ ಹೋಗುತ್ತಿಯಾ ಎಂದು ತಡೆದಿರುತ್ತಾರೆ. ಆದ್ದರಿಂದ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂಧು ಇದ್ದ ದೂರಿನ ಮೇರೆಗೆ.

7. ಗುಂಡ್ಲುಪೇಟೆ ಠಾಣೆ ( ಮೊ ನಂ 188/2020) ಪಿರ್ಯಾದಿ ಅನಿತಾ ಗೋಪಾಲಪುರ ಗ್ರಾಮರವರು ನೀಡಿದ ದೂರಿನಲ್ಲಿ ನಮ್ಮ ಗ್ರಾಮದ ಸಿದ್ದರಾಜಪ್ಪ ಮತ್ತು ಸಹಚರರು ನಮ್ಮ ತಂದೆ ನಿಂಗಪ್ಪ ರವರೊಂದಿಗೆ ತೀಟೆ ಜಗಳ ತೆಗೆದು ಗಲಾಟೆ ಮಾಡಿ, ಹಲ್ಲೆ ಮಾಡಿ ಹೊರಟು ಹೋಗಿದ್ದು, ಅನಂತರ ರಾತ್ರಿ 9.30 ರ ಸಮಯದಲ್ಲಿ ಪುನಃ ಬಂದು ನಮ್ಮ ತಂದೆಯನ್ನು ಹಲ್ಲೆ ಮಾಡದಂತೆ ಬಚ್ಚಿಟ್ಟಿದ್ದ ಮನೆಯ ಹತ್ತಿರ ನನ್ನ ತಂದೆ, ತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದಾಗ, ನಾನು ನಮ್ಮಪ್ಪ ಒಬ್ಬರಿಗೆ ಇಷ್ಟು ಜನ ಸೇರಿಕೊಂಡು ಹೊಡೆದಿದ್ದೀರಾ, ನೀವೆಲ್ಲಾ ಗಂಡಸರಾ ಎಂದು ಕೇಳಿದಕ್ಕೆ ಮಾದಪ್ಪ ಬಿನ್ ಶಿವಬಸಪ್ಪ, ಜಿ.ಬಿ.ಮಂಜುನಾಥ್ ಬಿನ್ ಬಸವರಾಜಪ್ಪ, ಸಿದ್ದೇಶ ಉರುಫ್ ಪುಟ್ನಂಜ ಬಿನ್ ಸಿದ್ದರಾಜಪ್ಪ, ಜಿ.ಜಿ.ಸಿದ್ದಪ್ಪ ಬಿನ್ ಲೇಟ್ ಬಸವರಾಜಪ್ಪ ಮತ್ತು ಮಲ್ಲೇಶ ಬಿನ್ ಮಾದಪ್ಪ ರವರುಗಳು ನನ್ನನ್ನು ಅವಾಚ್ಯ ಶಬ್ದಗಳಿಂದ ಬೈಯ್ದು ನಮ್ಮ ಜೊತೆ ಬಂದು ಮಲಗು ಒಟ್ಟಿಗೆ ನಾವು ಗಂಡಸರೆಂದು ತೋರಿಸುತ್ತೇವೆ ಎಂದು ನನ್ನನ್ನು ತಬ್ಬಿ ಹಿಡಿದು ತಡೆದು ನನ್ನ ಟೀ ಶಟರ್್ನ್ನು ಹಿಡಿದು ಎಳೆದಾಡಿ, ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿ ನಿನ್ನನ್ನು ರೇಪ್ ಮಾಡಿದರೂ ನಮ್ಮನ್ನು ಬಿಡಿಸಲು ಶಾಸಕರಿದ್ದಾರೆಂದು ಬೆದರಿಕೆ ಹಾಕಿ ನಿಮ್ಮ ಕುಟುಂಬದವರನ್ನು ಮುಗಿಸಿಯೇ ತೀರುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ ರುತ್ತಾರೆ ಸದರಿಯವರ ಮೇಲೆ ಕಾನುನು ರೀತಿ ಕ್ರಮ ಜರುಗಿಸಿ ಎಂದು ಎಂದು ಇತ್ಯಾದಿಯಾಗಿ ನೀಡಿದ ದೂರು

8. ಗುಂಡ್ಲುಪೇಟೆ ಠಾಣೆ ( ಮೊ ನಂ 189/2020) ಪಿರ್ಯಾದಿ ಮಂಜುಳ ಶಿವಪುರ ಗ್ರಾಮರವರು ನೀಡಿದ ದೂರಿನಲ್ಲಿ ಅವರು ದಿನಾಂಕ; 19.05.2020 ರಂದು ಮಧ್ಯಾಹ್ನ 1,00 ಗಂಟೆ ಸಮಯದಲ್ಲಿ ತಮ್ಮ ಅಕ್ಕನ ಮನೆಯ ಹತ್ತಿರ ಹೋಗುತ್ತಿದ್ದಾಗ ಅದೇ ಗರಾಮದ ಉದಯಕುಮಾರ್ ಪ್ರಭಾರವರುಗಳು ತೀಟೆ ಜಗಳ ತೆಗೆದು ಹಲ್ಲೆ ಮಾಡಿ ಸೀರೆಯನ್ನು ಹಿಡಿದು ಎಳೆದಾಡಿ ಅವಮಾನ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಕೊಟ್ಟ ದೂರಿನ ಮೇರೆಗೆ.

9. ಗುಂಡ್ಲುಪೇಟೆ ಠಾಣೆ ( ಮೊ ನಂ 190/2020) ದಿನಾಂಕ: 19.05.2020 ರಂದು ಬೆಳಿಗ್ಗೆ 7.00 ಗಂಟೆ ಸಮಯದಲ್ಲಿ ಪಿರ್ಯಾದಿ ಅಬ್ದುಲ್ಲಾ ಮತ್ತು ಅವರ ತಂದೆ ಇಬ್ಬರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ನಡೆದುಕೊಂಡು ಬರುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-02 ಎಜಿ-2346 ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿಯವರ ತಂದೆಗೆ ಗುದ್ದಿಸಿ ಅಪಘಾತ ಉಂಟು ಮಾಡಿದ ಪರಿಣಾಮ ಸೊಂಟ, ಮೈಕೈಗೆ, ನೋವುಂಟಾಗಿರುತ್ತದೆ, ಅಪಘಾತ ಉಂಟು ಮಾಡಿದ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ

10. ಬೇಗೂರು ಠಾಣೆ ( ಮೊ ನಂ 60/2020) ದಿನಾಂಕ : 19-05-2020 ರಂದು 17:30 ಗಂಟೆಗೆ ತೊರವಳ್ಳಿ ಗ್ರಾಮದ ವಾಸಿ ಚಂದ್ರ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ : 09/05/2020 ರಂದು ಸಾಯಂಕಾಲ 07.30 ಗಂಟೆ ಸಮಯದಲ್ಲಿ ನಮ್ಮ ಅಣ್ಣ ಅಭಿಷೇಕ್ ಎಂಬುವನು ಮನೆಗೆ ಸಾಮಾನು ತರಲು ಅಂಗಡಿಗೆ ಹೋಗಿದ್ದಾಗ ಅಲ್ಲಿ ಜೋರಾಗಿ ಕೂಗಾಡುತ್ತಿದ್ದರು ಆಗ ನಾನು ಅಲ್ಲಿಗೆ ಹೋದಾಗ ಅಲ್ಲಿ ನಮ್ಮೂರಿನ ಟಿಎಸ್ ರಾಜು ಎಂಬುವನು ಈ ಬೋಳಿಮಕ್ಕಳಿಗೆ ಯಾವುದೇ ಸಾಮಾನುಗಳನ್ನು ಕೊಡಬೇಡಿ ಎಂದು ಕೆಟ್ಟದಾಗಿ ಬೈಯ್ಯುತ್ತಿದ್ದನು, ಅದಕ್ಕೆ ನಮ್ಮ ಅಣ್ಣ ಅಭಿಷೇಕ್ ನು ಯಾಕೆ ಈ ರೀತಿಯಾಗಿ ಬೈಯ್ಯುತ್ತೀರಾ ಎಂದು ಕೇಳಿದಕ್ಕೆ ಅಲ್ಲೆ ಇದ್ದ ಸಿದ್ದರಾಜು ಬಿನ್ ಮಹದೇವೇಗೌಡ ಎಂಬುವನು ನಮ್ಮ ಚಿಕ್ಕಪ್ಪನನ್ನು ಬೈಯ್ಯುತ್ತೀಯಾ ನೀನು ಎಂದು ಜಗಳ ತೆಗೆದು ಕೈಯಲ್ಲಿದ್ದ ಮಚ್ಚಿನಿಂದ ನಮ್ಮ ಅಣ್ಣನಿಗೆ ಹೊಡೆದನು, ಅಷ್ಟಕ್ಕೆ ಟಿ ಎಸ್ ರಾಜು ರವರ ಮಗನಾದ ಅಮೃತ್ಶಿವು ಹಾಗೂ ಸಿದ್ದರಾಜು ರವರ ಭಾಮೈದ ಮಲ್ಲಿಕಾಜರ್ುನ ಎಂಬುವರುಗಳು ದೊಣ್ಣೆ ಮತ್ತು ಹೆಂಚುಗಳೊಂದಿಗೆ ಅಲ್ಲಿಗೆ ಬಂದಿದ್ದು, ಸಿದ್ದರಾಜು ಎಂಬುವನು ನಮ್ಮಣ್ಣನನ್ನು ಹಿಡಿದುಕೊಂಡಾಗ ಅಮೃತ್ಶಿವು ಹೆಂಚಿನಿಂದ ಕತ್ತಿನ ಹಿಂಭಾಗಕ್ಕೆ ಹೊಡೆದನು, ಅಷ್ಟಕ್ಕೆ ಮಲ್ಲಿಕಾಜರ್ುನ ಎಂಬುವನು ದೊಣ್ಣೆಯಿಂದ ಬೆನ್ನಿಗೆ ಹೊಡೆದು ನೋವುಂಟು ಮಾಡಿ ನಂತರ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆ ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂಬುದಾಗಿದ್ದ ದೂರಿನ ಮೇರೆಗೆ ಈ ಪ್ರ.ವ.ವರದಿ.

11. ಕೊಳ್ಳೇಗಾಲ ಪಟ್ಟಣ ಠಾಣೆ ( ಯುಡಿಆರ್ ನಂ 09/2020) ಪಿಯರ್ಾದಿ ಜಿ.ಕೆ ಲೋಕೇಶ್ ಕೊಳ್ಳೇಗಾಲ ಪಟ್ಟಣರವರು ನೀಡಿದ ದೂರಿನಲ್ಲಿ ಅವರ ಮಗಳು ಸರಿಯಾಗಿ ಓದದೆ ಹೆಚ್ಚಿನ ಸಮಯವನ್ನು ಮೊಬೈಲ್ ನೋಡಿಕೊಂಡು ಕಾಲ ಕಳೆಯುತ್ತಿದ್ದು ,ನಾನು ಮತ್ತು ನನ್ನ ಹೆಂಡತಿ ಈ ರೀತಿ ಮೊಬೈಲ್ ಬಳಕೆ ಮಆಡಿದರೆ ಪರಿಕ್ಷೆ ಹೇಗೆ ಬರಯುತ್ತೀಯ ಎಂದು ಬೈದು ಬುದ್ದಿ ಹೇಳುತ್ತಿದ್ದೆವು ಆ ಸಮಯದಲ್ಲಿ ಅವಳು ಒಪ್ಪಿ ಓದುತ್ತಿದ್ದಳು ಆದರೆ ಈದಿನ ಬೆಳಿಗ್ಗೆ ನಾನು ಅಂಗಡಿಗೆ ವ್ಯಾಪಾರಕ್ಕೆ ಹೋಗುತ್ತಿದ್ದಾಗ ನನ್ನ ಮಗಳು ಮೊಬೈಲ್ ವಾಟ್ಸಪ್ ನೋಡುತ್ತಿದ್ದಾಗ ನಾನು ನನ್ನ ಮಗಳನ್ನು ಗದರಿಸಿ ಪರಿಕ್ಷೆ ನಿಗದಿಯಾಗಿದೆ ನೀನು ಈ ರೀತಿ ಮೊಬೈಲ್ ಹಿಡಿದುಕೊಂಡರೆ ಏನು ಮಾಡುವುದು ಎಂದು ಬೈದು ಮೊಬೈಲ್ ಕಿತ್ತುಕೊಂಡು ವ್ಯಾಪಾರಕ್ಕೆ ಹೋದೆ ನನ್ನ ಹೆಂಡತಿ ಕೂಡ ಬ್ಯೂಟಿ ಪಾರ್ಲರ್ ಗೆ ಹೋದಳು ಮನೆಯಲ್ಲಿ ಮಗಳು ದಶರ್ಿನಿ ಮತ್ತು ಮಗ ನಂದ ಕಿಶೋರ್ ಇದ್ದರು ,ಮದ್ಯಾಹ್ನ 01-40 ಗಂಟೆ ಸಮಯದಲ್ಲಿ ನನ್ನ ಮಗ ಬಂದು ಅಕ್ಕ ದಶರ್ಿನಿ ಹಾಲ್ ನಲ್ಲಿರುವ ತೊಲೆಗೆ ನೇಣು ಹಾಖಿಕೊಂಡಿದ್ದಾಳೆ ಎಂದು ಹೇಳಿದಾಗ ನಾನು ಬಂದು ನೋಡಲಾಗಿ ನನ್ನ ಮಗಳು ತೊಲೆಗೆ ಸೀರೆಯಿಂದ ನೇಣು ಹಾಕಿಕೊಂಡಿದ್ದು ನಾಣು ಮತ್ತು ಪಕ್ಕದ ಮನೆಯವರು ಕೆಳಗೆ ಇಳಿಸಿ ಕೊಳ್ಳೇಗಾಲದ ಜನನಿ ಆಸ್ಪತ್ರೆಗೆ ಬಂದು ತೋರಿಸಿದಾಗ ವೈಧ್ಯರು ಈಗಾಗಲೆ ತೀರಿಹೋಗಿದಾಳೆಂದು ತೀಳಿಸಿದರು ನನ್ನ ಮಗಳು ಪರೀಕ್ಷೆಗೆ ಓದದೆ ಹೆಚ್ಚಿನ ಕಾಲ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದು ಮೊಬೈಲ್ ಬಳಸದೆ ಎಂದು ಓದು ಎಂದು ಹೇಳಿದ್ದರಿಂದ ಬೇಸರ ಗೊಂಡು ನನ್ನ ಮಗಳು ನೇಣು ಹಾಕಿಕೊಂಡು ಸತ್ತಿರುತ್ತಾಳೆಂದು ಬೇರೆ ಯಾವುದೆ ಕಾರಣ ಇರುವುದಿಲ್ಲವೆಂದು ಆದ್ದರಿಂದ ಪರಿಶೀಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಂಡ ಮೇರೆಗೆ.

12. ರಾಮಾಪುರ ಠಾಣೆ ( ಮೊ, ನಂ 51/2020) ಪಿರ್ಯಾದಿ ಕೆ ಎಸ್ ದೊಡ್ಡಿ ಗ್ರಾಮದ ವಾಸಿಯಾದ ಶಿವಪ್ಪ ಬಿನ್ ಬೋಳಮಾದ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಮಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿರುತ್ತಾನೆ ಹಿರಿಯ ಮಗಳಾದ ಶಶಿಕಲಾ ಎಂಬುವವಳಿಗೆ ಸುಮಾರು 18 ವರ್ಷ ತುಂಬಿದ್ದು ಇಂದು ಅಂದರೆ ದಿನಾಂಕ 19-05-2020 ರ ಮಂಗಳವಾರ ಬೆಳ್ಳಿಗ್ಗೆ ಸುಮಾರು 6-30ಗಂಟೆಯಿಂದ ನಮ್ಮ ಮನೆಯಿಂದ ಕಾಣೆಯಾಗಿರುತ್ತಾಳೆ ನಾವು ಇದುವರೆವಿಗೂ ಹುಡುಕಾಡಿದ್ದು ಸಿಗಲಿಲ್ಲಾ ಆಕೆಯನ್ನು ಕೊನೆಯ ಬಾರಿ ನೋಡಿದಾಗ ಹಸಿರು ಬಣ್ಣದ ಚೂಡಿದಾರ ಬಟ್ಟೆ ಧರಿಸಿರುತ್ತಾರೆ ಸುಮಾರು 5 ಅಡಿ ಎತ್ತರ ಕಪ್ಪು ಬಣ್ಣ ಸಾದಾರಣ ಮೈ ಕಟ್ಟು ಮತ್ತು ಕೋಲುಮುಖದವಳಾಗಿರುತ್ತಾಳೆ ನಮ್ಮ ಮನೆಯಲ್ಲಿ ಇಟ್ಟಿದ್ದ ಮೊಬೈಲ್ ಸೆಟ್ ಹಾಗೂ ಅದರ ಸಂಖ್ಯೆ 7760395340 ಆಗಿದ್ದು ಅದು ಕಾಣೆಯಾಗಿದ್ದು ಆಕೆಯೆ ತೆಗೆದುಕೊಂಡು ಹೋಗಿರಬಹುದೆಂದು ಅನುಮಾನವಿರುತ್ತದೆ ಖಾವಂದರಾದ ತಾವುಗಳು ಮೇಲೆ ತಿಳಿಸಿರುವ ವಿಷಯ ಮತ್ತು ಘಟನೆಯನ್ನು ಪರಿಶೀಲಿಸಿ ಕಾಣೆಯಾಗಿರುವ ನನ್ನ ಮಗಳು ಶಶಿಕಲಾ ಎಂಬುವವಳನ್ನು ಹುಡುಕಿಕೊಡಬೇಕಾಗಿ ನೀಡಿದ ದೂರಿನ ಮೇರೆಗೆ ಈ ಪ್ರ ವರದಿ.


Your Comment

Name :
Email:
Comment:
Submit

Website Designed and Developed by Global Buzz®