• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 18-05-2020

No of views : 20       No of Comments : 0

1. ಗುಂಡ್ಲುಪೇಟೆ ಠಾಣೆ (ಮೊ ನಂ 182/2020) ಪಿರ್ಯಾದಿ ಸುಬ್ಬಣ್ಣ ನೇನೆಕಟ್ಟೆ ಗ್ರಾಮರವರು ನೀಡಿದ ದೂರಿನಲ್ಲಿ ದಿನಾಂಕ: 18.05.2020 ರಂದು ಬೆಳಿಗ್ಗೆ 10.15 ಗಂಟೆ ಸಮಯದಲ್ಲಿ ನೇನೆಕಟ್ಟೆ ಗ್ರಾಮದ ಆರೋಪಿಗಳಾದ ರೇವೇಗೌಡ, ಗವೀಗೌಡ, ತಾಯಮ್ಮ, ಮಾದಮ್ಮ ರವರುಗಳು ಪಿರ್ಯಾಧಿ ಸುಬ್ಬಣ್ಣ ರವರ ಅಣ್ಣ ಬಸವರಾಜು ರವರ ಜಮೀನಿನನ್ನು ಅಕ್ರಮವಾಗಿ ಉಳುಮೆ ಮಾಡುತ್ತಿದ್ದಾಗ ಸದರಿ ಜಮೀನು ನಮ್ಮದು ಯಾಕೆ ಉಳುಮೆ ಮಾಡುತ್ತಿದ್ದೀರ ಎಂದು ಕೇಳಲು ಹೋದ ಪಿರ್ಯಾಧಿಯವರಿಗೆ ಮತ್ತು ಅವರ ಮಗ ಮಧು ರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಮತ್ತು ದೊಣ್ಣೆಯಿಂದ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

2. ಗುಂಡ್ಲುಪೇಟೆ ಠಾಣೆ (ಮೊ ನಂ 183/2020) ದಿ-16.03.2020 ರಂದು ಮದ್ಯಾಹ್ನ 2.00 ಗಂಟೆ ಸಮಯದಲ್ಲಿ ಪಿ.ಎಸ್.ಐರವರು ಗಸ್ತಿನಲ್ಲಿದ್ದಾಗ, ಹಂಗಳ ಗ್ರಾಮದ ಹತ್ತಿರಕರಿಕಲ್ಲುಕ್ವಾರೆ ಬಳಿ ಹಣವನ್ನು ಪಣವಾಗಿಇಟ್ಟುಕೊಂಡುಅಂದರ್ ಬಾಹರ್ ನಸೀಬಿನ ಇಸ್ಪೀಟ್ ಜೂಜಾಟಆಡುತ್ತಿದ್ದಾರೆಂದು ಬಂದಖಚಿತ ಮಾಹಿತಿ ಮೇರೆಗೆ ಪಂಚಾಯ್ತುದಾರರು ಮತ್ತು ಸಿಬ್ಬಂದಿಯವರೊಡನೆ ದಾಳಿ ಮಾಡಿ, ಮೂರುಜನ ಆಸಾಮಿಗಳನ್ನು ಹಿಡಿದುಕೊಂಡುಇನ್ನಿಬ್ಬರು ಓಡಿ ಹೋಗಿದ್ದು, ಮೂರುಜನ ಆಸಾಮಿಗಳು, ಒಟ್ಟು 3070/- ರೂಗಳು, 52 ಇಸ್ಪೀಟ್ ಎಲೆಗಳು, ಮತ್ತುಒಂದು ಪ್ಲಾಸ್ಟಿಕ್ ತಾಟನ್ನು ಮುಂದಿನ ಕ್ರಮದ ಬಗ್ಗೆ ಅಮಾನತ್ತುಪಡಿಸಿಕೊಂಡು ಠಾಣೆಗೆಕರೆತಂದು ಘನ ನ್ಯಾಯಾಲಯದಅನುಮತಿ ಪಡೆದು ಈ ದಿನ ಪ್ರಕರಣ ದಾಖಲಿಸಿರುತ್ತದೆ.

3. ಗುಂಡ್ಲುಪೇಟೆ ಠಾಣೆ (ಮೊ ನಂ 184/2020) ದಿ-17.05.2020 ರಂದುಸಂಜೆ 5.00ಗಂಟೆ ಸಮಯದಲ್ಲಿ ಪಿ.ಎಸ್.ಐರವರು ಗಸ್ತಿನಲ್ಲಿದ್ದಾಗ, ಮಡಹಳ್ಳಿಗ್ರಾಮದಮಹದೇವಪ್ಪರವರಜಮೀನಿನ ಬಳಿ ಹುಣಸೇಮರದ ಕೆಳಗೆ ಯಾರೋ ಆಸಾಮಿಗಳು ಹಣವನ್ನು ಪಣವಾಗಿಇಟ್ಟುಕೊಂಡುಅಂದರ್ ಬಾಹರ್ ನಸೀಬಿನ ಇಸ್ಪೀಟ್ ಜೂಜಾಟಆಡುತ್ತಿದ್ದಾರೆಂದು ಬಂದಖಚಿತ ಮಾಹಿತಿ ಮೇರೆಗೆ ಪಂಚಾಯ್ತುದಾರರು ಮತ್ತು ಸಿಬ್ಬಂದಿಯವರೊಡನೆ ದಾಳಿ ಮಾಡಿ, ಮೂರುಜನ ಆಸಾಮಿಗಳನ್ನು ಹಿಡಿದುಕೊಂಡುಒಟ್ಟು2000/- ರೂಗಳು, 52 ಇಸ್ಪೀಟ್ ಎಲೆಗಳು, ಮತ್ತುಒಂದು ಪ್ಲಾಸ್ಟಿಕ್ ತಾಟನ್ನು ಮುಂದಿನ ಕ್ರಮದ ಬಗ್ಗೆ ಅಮಾನತ್ತುಪಡಿಸಿಕೊಂಡು ಠಾಣೆಗೆಕರೆತಂದು ಘನ ನ್ಯಾಯಾಲಯದಅನುಮತಿ ಪಡೆದು ಈ ದಿನ ಪ್ರಕರಣ ದಾಖಲಿಸಿರುತ್ತದೆ.

4. ಗುಂಡ್ಲುಪೇಟೆ ಠಾಣೆ (ಮೊ ನಂ 185/2020) ದಿನಾಂಕ 18.05.2020 ರಂದು 13.30 ಗಂಟೆ ಸಮಯದಲ್ಲಿ ಪಿರ್ಯಾದಿ ಪಿಎಸ್ಐರವರು ಮೊಸಂ 181/2020 ರ ತನಿಖೆ ಸಂಬಂದ ಹುಂಡಿಪುರ ಗ್ರಾಮದ ಬಳಿ ಇದ್ದಾಗ ಬಾತ್ಮಿದಾರರಿಂದ ಹಂಗಳ ಗ್ರಾಮದ ನಾಯಕರ ಬೀದಿಯ ಮುಖ್ಯ ರಸ್ತೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಿದ್ದರಾಜು ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಮದ್ಯದ ಪೌಚ್ಗಳನ್ನು ನೀಡಿ ಮದ್ಯ ಕುಡಿಯಲು ಅನುವು ಮಾಡಿಕೊಡುತ್ತಿದ್ದಾನೆಂದು ಮಾಹಿತಿ ದೊರೆತ ಮೇರೆಗೆ ಪಂಚರು ಮತ್ತು ಸಿಬ್ಬಂದಿಗಳ ಜೊತೆ ದಾಳಿ ಮಾಡಿ ಸ್ಥಳದಲ್ಲಿದ್ದ 1) 90 ಎಂ.ಎಲ್ 08 ಒರಿಜಿನಲ್ ಚಾಯ್ಸ್ ವಿಸ್ಕಿ ಪೌಚ್ಗಳು 2) 2 ಪ್ಲಾಸ್ಟಿಕ್ ಗ್ಲಾಸ್ಗಳು ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯ ಮೇಲೆ ಸ್ವಯಂ ವರದಿ ತಯಾರಿಸಿ ಪ್ರಕರಣ ದಾಖಲು ಮಾಡಿದ ಮೇರೆಗೆ ಈ ಪ್ರ ವ ವರದಿ

5. ಗುಂಡ್ಲುಪೇಟೆ ಠಾಣೆ (ಮೊ ನಂ 186/2020) ದಿನಾಂಕ 18.05.2020 ರಂದು 13.30 ಗಂಟೆ ಸಮಯದಲ್ಲಿ ಪಿರ್ಯಾದಿ ಪಿಎಸ್ಐರವರು ಮೊಸಂ 181/2020 ರ ತನಿಖೆ ಸಂಬಂದ ಹುಂಡಿಪುರ ಗ್ರಾಮದ ಬಳಿ ಇದ್ದಾಗ ಬಾತ್ಮಿದಾರರಿಂದ ಹಂಗಳ ಗ್ರಾಮದ ಊಟಿ ಮುಖ್ಯ ರಸ್ತೆಯ ಗೋಪಾಲಸ್ವಾಮಿಬೆಟ್ಟದ ರಸ್ತೆಯ ಸರ್ಕಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಿದ್ದರಾಜು ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಮದ್ಯದ ಪೌಚ್ಗಳನ್ನು ನೀಡಿ ಮದ್ಯ ಕುಡಿಯಲು ಅನುವು ಮಾಡಿಕೊಡುತ್ತಿದ್ದಾನೆಂದು ಮಾಹಿತಿ ದೊರೆತ ಮೇರೆಗೆ ಪಂಚರು ಮತ್ತು ಸಿಬ್ಬಂದಿಗಳ ಜೊತೆ ದಾಳಿ ಮಾಡಿ ಸ್ಥಳದಲ್ಲಿದ್ದ 1) 90 ಎಂ.ಎಲ್ 09 ಹೈವಾಡ್ಸರ್್ ಡೀಲಕ್ಸ್ ವಿಸ್ಕಿ ಪೌಚ್ಗಳು 2) 2 ಪ್ಲಾಸ್ಟಿಕ್ ಗ್ಲಾಸ್ಗಳು ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯ ಮೇಲೆ ಸ್ವಯಂ ವರದಿ ತಯಾರಿಸಿ ಪ್ರಕರಣ ದಾಖಲು ಮಾಡಿದ ಮೇರೆಗೆ ಈ ಪ್ರ ವ ವರದಿ.

6. ಗುಂಡ್ಲುಪೇಟೆ ಠಾಣೆ (ಮೊ ನಂ 187/2020) ದಿನಾಂಕ: 18.05.2020 ರಂದು ಬೆಳಿಗ್ಗೆ 9.30 ಗಂಟೆ ಸಮಯದಲ್ಲಿ ಪಿರ್ಯಾಧಿ ನೇನೆಕಟ್ಟೆ ಗ್ರಾಮದ ವೃಷಬೇಂದ್ರಪ್ಪ ಮತ್ತು ಅವರು ಕುಟುಂಬದವರು ತಮ್ಮ ಬಾಬ್ತು ಜಮೀನಿನಲ್ಲಿ ಟ್ರ್ಯಾಕ್ಟರ್ ನಿಂದ ಉಳುಮೆ ಮಾಡುತ್ತಿದ್ದಾಗ ನೇನೆಕಟ್ಟೆ ಗ್ರಾಮದ ಆರೋಪಿಗಳಾದ ಸುಬ್ಬಣ್ಣ, ಮಧು, ಪ್ರದೀಪ್, ಬಸವರಾಜಪ್ಪ ರವರುಗಳು ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾಧಿ ವೃಷಬೇಂದ್ರ ಮತ್ತು ಇವರ ಅಣ್ಣ ಗವೀಗೌಡ ರವರಿಗೆ ಕೈಗಳಿಂದ ಮೈಕೈಗೆ ಹಲ್ಲೆ ಮಾಡಿ ಗಲಾಟೆ ಬಿಡಿಸಲು ಬಂದ ಪಿರ್ಯಾಧಿ ತಾಯಿ ತಾಯಮ್ಮ ರವರ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನ ಮಾಡಿ, ಕೈಗಳಿಂದ ಎದೆಗೆ ಗುದ್ದಿ, ಹೊಟ್ಟೆಯ ಬಾಗಕ್ಕೆ ಕಾಲುಗಳಿಂದ ಹೊದ್ದು ನೋವುಂಟು ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

7. ಅಗರ ಮಾಂಬಳ್ಳಿ ಠಾಣೆ ( ಮೊ ನಂ 11/2020) ದಿಃ 18-05-2020ರಂದು ಸಾಯಂಕಾಲ 17-00 ಗಂಟೆಯ ಸಮಯದಲ್ಲಿ ಪಿರ್ಯಾದಿ ಪಿಎಸ್ಐರವರಿಗೆ ಯವರಿಗೆ ಬಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರ ಸಮಕ್ಷಮದಲ್ಲಿ ಅಗರ ಗ್ರಾಮದ ವಾಸಿ ಆರೋಪಿತನಾದ ಈರಣ್ಣರವರ ಪೆಟ್ಟಿ ಅಂಗಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸಹಕರಿಸುತ್ತಿದ್ದ ಆಸಾಮಿಯನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ 90 ಎಂ.ಎಲ್ ನ 20 ಹೈವಾಡ್ರ್ಸ ಚಿಯರ್ಸ್ ವಿಸ್ಕಿ ಮದ್ಯ ತುಂಬಿದ ಪೌಚ್ಗಳು, 4 ಖಾಲಿ ಪ್ಲಾಸ್ಟೀಕ್ ಲೋಟ್ ಹಾಗೂ ಒಂದು ನೀರಿನ ಪ್ಲಾಸ್ಟಿಕ್ ಬಾಟಲ್ ವಶಕ್ಕೆ ಪಡೆದು ವಾಪಸ್ ಠಾಣೆಗೆ ಬಂದು ಸಯಂ ವರದಿ ತಯಾರಿಸಿ ಪ್ರಕರಣ ದಾಖಲಿಸಿದ ಮೇರೆಗೆ ಈ ಪ್ರ.ವ.ವರದಿ.

8. ಹನೂರು ಠಾಣೆ ( ಮೊ ನಂ 58/2020) ಪಿರ್ಯಾದಿ ಗವಿಸಿದ್ದಮ್ಮ ಪಿ.ಜಿ ಪಾಳ್ಯ ಗ್ರಾಮರವರು ನೀಡಿದ ದೂರಿನಲ್ಲಿ ದಿನಾಂಕ, 16.05.2020 ರಂದು ಸಂಜೆ 7.00 ಗಂಟೆಯಲ್ಲಿ ನನ್ನ ತಮ್ಮನ ಮಗ ಆಕಾಶ ವಾಕ್ ಮಾಡಿ ಹೊಸಸೈಟಿನ ಕಡೆಗೆ ಹೋಗುತ್ತಿದ್ದಾಗ ಅಂಬೇಡ್ಕರ್ ಬೋಡರ್ಿನ ಹತ್ತಿರ ನಮ್ಮ ಬೀದಿಯ ರಾಮಕೃಷ್ಣ ನಿಂಗರಾಜುವಿನ ಮಕ್ಕಳಾದ ಸಿದ್ದಪ್ಪಾಜಿ, ಮಂಟೇಸ್ವಾಮಿ, ರಾಚಪ್ಪಾಜಿ, ಮುತ್ತಯ್ಯನ ಮಗ ಶ್ರೀನಿವಾಸಪ್ರಸಾದ್ ಹಾಗೂ ಸಣ್ಣಯ್ಯನ ಮಗ ನಿಂಗರಾಜು ರವರುಗಳು ಹಣದ ವಿಚಾರದಲ್ಲಿ ಗುಂಪುಕಟ್ಟಿಕೊಂಡು ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಆಕಾಶನನ್ನು ತಬ್ಬಿ ಹಿಡಿದುಕೊಂಡು ಸೊಳೆಮಗನೆ, ಕುಲದಲ್ಲಿ ನೀನು ಏನೋ ನನಗೆ ತಿರುಗಿ ಮಾತಾಡಿದ್ದೀಯ ನೀನೊಬ್ಬನೆ ಗಂಡಸ ಎಂದು ಆಕಾಶನನ್ನು ಕೈಗಳಿಂದ ಹೊಡೆದು ಕಾಲಿನಿಂದ ತುಳಿದು ದೊಣ್ಣೆಯಿಂದ ಹೊಡೆಯುತ್ತಿದಾಗ ನಾನು ಮತ್ತು ನನ್ನ ಮಧು ಬಂದು ಜಗಳ ಬಿಡಿಸಿ ನಮ್ಮ ಹುಡುಗನಿಗೆ ಹೊಡೆಯಬೇಡಿ ಎಂದು ಕೂಗಿಕೊಂಡು ಹೋದಾಗ ರಾಮಕೃಷ್ಣ, ಶ್ರೀನಿವಾಸಪ್ರಸಾದ್, ನಿಂಗರಾಜುರವರು ಕೆಡವಿಕೊಂಡು ಕಾಲಿನಿಂದ ತುಳಿದು ಮಾನಭಂಗ ಮಾಡಿದಾಗ ಮಂಟೇಸ್ವಾಮಿ, ರಾಚಪ್ಪಾಜಿರವರು ನೀನು ದೊಡ್ಡ ಯಜಮಾನಿನಾ ನೀನು ಕೇಳಲು ಬರುತ್ತೀಯಾ ಎಂದು ಕೊಲೆ ಮಾಡುವ ಉದ್ದೇಶದಿಂದ ದೊಣ್ನೆಯಿಂದ ನನ್ನ ತಲೆಗೆ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ರಕ್ತಗಾಯ ಮಾಡಿದರು. ಮಧುವಿಗೆ ರಾಮಕೃಷ್ಣನು ಕೈಯಿಂದ ಹೊಡೆದಿರುತ್ತಾರೆ. ಆದ್ದರಿಂದ ಮೇಲ್ಕಂಡರವರ ಮೇಲೆ ಕಾನೂನು ಕ್ರಮ ಜರುಗಿಸಿಬೇಕೆಂದು ಕೋರಿಕೊಂಡ ಮೇರೆಗೆ.


Your Comment

Name :
Email:
Comment:
Submit

Website Designed and Developed by Global Buzz®