• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 17-05-2020

No of views : 27       No of Comments : 0

1. ಚಾಮರಾಜನಗರ ಪೂರ್ವ ಠಾಣೆ (ಮೊ ನಂ 88/2020) ಪಿರ್ಯಾದಿ ಮಲ್ಲೇಶ ಮಸಣಾಪುರ ಗ್ರಾಮರವರು ನೀಡಿದ ದೂರಿನಲಿಅವರ ದೊಡ್ಡಮ್ಮನ ಮಗ ವೀರಭದ್ರನಾಯಕ ತನ್ನ ಬೈಕ್ ನಲ್ಲಿ ಯಳಂದೂರು ಕಡೆ ಹೋಗುತ್ತಿದ್ದು ಎದುರುಗಡೆಯಿಂದ ಬಂದು ಗೋಡ್ಸ್ ವಾಹನ ಅತೀವೇಗ ಮತ್ತು ಅಜಾರೋಕತೆಯಿಂಸ ಓಡಿಸಿಕೊಂಡು ಬಂದು ವೀರಭದ್ರನಾಯಕ ರವರ ಮೊಪೈಡ್ ಗೆ ಡಿಕ್ಕಿ ಮಾಡಿದ ಪರಿಣಾಮ ವೀರಭದ್ರನಾಯಕ ಮೊಪೈಡ್ ಸಮೇತ ಕೆಳಕ್ಕೆ ಬಿದ್ದಾಗ ಅವನ ತಲೆ ಕಾಲುಗಳಿಗೆ ಪೆಟ್ಟಾಗಿದ್ದು ಅಪಘಾತ ಮಾಡಿದ ವಾಹನ ನಂಬರ್ ನೋಡಲಾಗಿ ಆಶೋಕ ಲೈಲ್ಯಾಂಡ್ ಕಂಪನಿ ಕೆ ಎ-10-7974 ಆಗಿದ್ದು ಅಷ್ಟಕ್ಕೆ ನಾನು ಮತ್ತು ರಂಗಸ್ವಾಮಿನಾಯಕರವರು ವೀರಭದ್ರನಾಯಕ ನನ್ನು ಎತ್ತಿ ಸುಧಾರಿಸಿ ನೀರು ಕುಡಿಸಿರುತ್ತೇವೆ ನಂತರ ಆಂಬುಲೇನ್ಸ್ ಚಾಮರಾಜನಗರ ಸಕರ್ಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದು ಚಿಕಿತ್ಸೆಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗಿದ್ದು ಈ ಅಪಘಾತ ಮಾಡಿದ ಮೇಲ್ಕಂಡ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ.ವವ

2. ಚಾಮರಾಜನಗರ ಪೂರ್ವ ಠಾಣೆ (ಮೊ ನಂ 89/2020) ಪಿರ್ಯಾದಿ ಬಸವರಾಜು ಹೊಂಗನೂರು ಗ್ರಾಮರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರೆಂದರೆ, ದಿನಾಂಕ;- 16/05/2020 ರಂದು ಸಂಜೆ ಸುಮಾರು 04.00 ಗಂಟೆ ಸಮಯದಲ್ಲಿ ನೀರಿನ ನಲ್ಲಿ ಎಳೆಯುವ ವಿಚಾರದಲ್ಲಿ ಕೆಂಪರಾಜು, ರುಕ್ಮಿಣಿ, ಸುರೇಶ, ಸಿದ್ದರಾಜು ರವರು ಮನೆಯ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿರುತ್ತಾರೆ. ಇದೇ ಹಿನ್ನೆಲೆಯಲ್ಲಿ ಈ ದಿನ ದಿನಾಂಕ;- 17/05/2020 ರಂದು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ನಟರಾಜು, ಕೆಂಪರಾಜು, ಶಿವನಂಜಯ್ಯ ಹಾಗೂ ಉಮೇಶ ರವರು ನಮ್ಮ ಮನೆ ಬಳಿ ಬಂದು ನಮ್ಮ ಮನೆಯ ಬಾಗಿಲು ಹೊಡೆದು ಹಾಕಿ ಒಳಗಡೆ ಬಂದು ದೊಣ್ಣೆಯಿಂದ ಹಾಗು ಮಚ್ಚುಗಳಿಂದ ನನ್ನ ತಮ್ಮ ಕೆಂಪರಾಜು ಹಾಗೂ ನನ್ನ ತಾಯಿ ನಂಜಮ್ಮ ರವರ ಮೇಲೆ ಹಾಗೂ ನನ್ನ ಹೆಂಡತಿ ಶಿವಮ್ಮ ರವರ ಮೇಲೆ ದೊಣ್ಣೆಯಿಂದ ಮೈಮೇಲೆ, ಸೊಂಟದ ಮೇಲೆ ಹಾಗೂ ಬೆನ್ನಿನ ಹೊಡೆದಿರುತ್ತಾರೆ. ನಟರಾಜು ಮತ್ತು ಕೆಂಫರಾಜು ರವರು ತಮ್ಮ ಬಟ್ಟೆಗಳನ್ನು ತೆಗೆದು ಅಂಗಾಂಗಗಳನ್ನು ಪ್ರದಶರ್ಿಸಿ ಅಸಭ್ಯವಾಗಿ ಮಾತನಾಡಿ ವತರ್ಿಸಿರುತ್ತಾರೆ. ಆಗ ಮಹೇಶ, ನಾಗಯ್ಯ ಇತರರು ಗಲಾಟೆ ಬಿಡಿಸಿರುತ್ತಾರೆ. ಮೇಲ್ಕಂಡ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರು.

3. ಚಾಮರಾಜನಗರ ಪೂರ್ವ ಠಾಣೆ (ಮೊ ನಂ 90/2020) ಪಿರ್ಯಾದಿ ನಟರಾಜು ಹೊಂಗನೂರು ಗ್ರಾಮರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರೆಂದರೆ, ದಿನಾಂಕ;- 16/05/2020 ರಂದು ನಲ್ಲಿ ಪೈಪ್ ಎಳೆಯುವ ವಿಚಾರದಲ್ಲಿ ಗಲಾಟೆ ಯಾಗಿದ್ದು ದೂರು ನೀಡಿದ್ದು ಈ ದಿನ ದಿನಾಂಕ;- 17/05/2020 ರಂದು ಸುಮಾರು 9.-10 ಗಂಟೆ ಸಮಯದಲ್ಲಿ ಅದೇ ಗ್ರಾಮದ ಬಸವಣ್ಣ, ರಮೇಶ, ಶಿವಮ್ಮ, ಕೆಂಪರಾಜು, ನಂಜಮ್ಮರವರುಗಳು ಗುಂಪುಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಹಾಗು ದೋಣ್ಣೆ ಮಚ್ಚು ಕತ್ತಿ ತೆಗೆದುಕೊಂಡು ಕೊಲೆ ಮಾಡುತ್ತೇನೆ ಎಂದು ಮನೆಯ ಬಾಗಿಲ ಬಳಿ ಬಂದು ಬೈದಿರುತ್ತಾರೆ ಹಾಗು ಗ್ರಾಮ ಪಂಚಾಯಿತಿ ಬಳಿ ಬಂದು ಗಲಾಟೆ ಮಾಡಿರುತ್ತಾರೆ ಸದರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ.ವವ

4. ಬೇಗೂರು ಠಾಣೆ ( ಮೊ ನಂ 59/2020) ಪಿರ್ಯಾದಿ ರಾಘವಾಪುರ ಗ್ರಾಮದ ವಾಸಿ ಶಿವಣ್ಣ ಎಂಬುವವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನನ್ನತಮ್ಮ ಮಹೇಶನಿಗೆ ನಮ್ಮೂರಿನ ಶಿವಶಂಕರ ರವರ ಜಮೀನಿನ ಹತ್ತಿರ ರಸ್ತೆ ಅಪಘಾತವಾಗಿದ್ದು ನನ್ನ ತಮ್ಮ ಊಟಿ-ಮೈಸೂರು ಮುಖ್ಯ ರಸ್ತೆಯ ಎಡಭಾಗದಲ್ಲಿ ರಕ್ತಗಾಯವಾಗಿ ಬಿದ್ದಿದ್ದನ್ನು. ನಂತರ ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿ ನಂತರ ಆತನನ್ನು ವಿಚಾರ ಮಾಡಲಾಗಿ, ಗಾಯಾಳುವಾದ ನನ್ನ ತಮ್ಮ ತಾನು ಬೆಳಿಗ್ಗೆ ಜಮೀನಿಗೆ ಹೋಗಿದ್ದು ವಾಪಸ್ ಮನೆಗೆ ಬರಲು ಕೆಎ-10-ವಿ-6911ರ ಮೋಟಾರ್ ಸೈಕಲ್ ನಲ್ಲಿ ಶಿವಶಂಕರರವರ ಜಮೀನಿನ ಹತ್ತಿರ ಊಟಿ ಮೈಸೂರು ಮುಖ್ಯರಸ್ತೆಯ ಎಡಭಾಗದಲ್ಲಿ ಊರಿನ ಕಡೆಗೆ ಬರುತ್ತಿದ್ದಾಗ ಬೆಳಿಗ್ಗೆ ಸುಮಾರು 09.30 ಗಂಟೆ ಸಮಯದಲ್ಲಿ ತನ್ನ ಮುಂದೆ ತರಕಾರಿಯನ್ನು ತುಂಬಿಕೊಂಡು ಗುಂಡ್ಲುಪೇಟೆ ಕಡೆಗೆ ಹೋಗುತ್ತಿದ್ದ ಕೆಎ-09-ಸಿ-4395 ರ ಮಹೇಂದ್ರ ಪಿಕ್ ಅಪ್ ಗೂಡ್ಸ್ ವಾಹನವನ್ನು ಅದರ ಚಾಲಕ ಯಾವುದೇ ಮುನ್ಸೂಚನೆ ನೀಡದೆ ನಿರ್ಲಕ್ಷತೆಯಿಂದ ಇದ್ದಕ್ಕಿದಂತೆ ವಾಹನವನ್ನು ನಿಲ್ಲಿಸಿದ್ದರಿಂದ ತಾನು ಮೋಟಾರ್ ಬೈಕನ್ನು ನಿಯಂತ್ರಿಸಲಾಗದೆ ವಾಹನಕ್ಕೆ ಡಿಕ್ಕಿ ಮಾಡಿದಾಗ ತನಗೆ ರಕ್ತಗಾಯವಾಗಿರುತ್ತದೆಂದು ತಿಳಿಸಿರುತ್ತಾನೆ. ನಾನು ನನ್ನ ತಮ್ಮನಿಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಠಾಣೆಗೆ ಬಂದು ಈ ಅಪಘಾತಕ್ಕೆ ಕಾರಣನಾದ ಸದರಿ ಗೂಡ್ಸ್ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

5. ಯಳಂದೂರು ಠಾಣೆ ( ಯುಡಿಆರ್ 02/2020) ದಿನಾಂಕ 17-05-2020 ರಂದು ಬೆಳಿಗ್ಗೆ 10:15 ಗಂಟೆಗೆ ಪಿರ್ಯಾದಿ ಶ್ರೀಮತಿ ಪುಟ್ಟಮ್ಮ ಕೋಂ ರಾಮನಾಯಕ ಯರಿಯೂರು ಗ್ರಾಮರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನನ್ನ ಮಗ ಶಾಂತ ಕ್ವಾರೆ ನೀರಿನಲ್ಲಿ ಬಹಿದರ್ೆಸೆಗೆ ಹೋಗಿ ನೀರು ತೆಗೆದುಕೊಳ್ಳಲು ಹೋಗಿ ಆಕಸ್ಮೀಕವಾಗಿ ಕಾಲು ಜಾರಿ ಮುಳುಗಿಕೊಂಡಿರಬಹುದು. ಆದ್ದರಿಂದ ನನ್ನ ಮಗನ ಮೃತ ದೇಹವನ್ನು ಪತ್ತೆ ಮಾಡಿ ಮುಂದಿನ ಕ್ರಮ ಜರುಗಿಸಬೆಕೇಂದು ನೀಡಿದ ದೂರು ಅಜರ್ಿಯ ಮೇರೆಗೆ ಈ ಪ್ರ ವ ವರದಿ.

6. ಹನೂರು ಠಾಣೆ ( ಮೊ ನಂ 57/2020) ಪಿರ್ಯಾದಿ ಶ್ರೀನಿವಾಸಪ್ರಸಾದ್ ಪಿ.ಜಿ ಪಾಳ್ಯ ಗ್ರಾಮರವರು ನೀಡಿದ ದೂರಿನಲ್ಲಿ ಪಿರ್ಯಾದಿ ಮತ್ತು ಅವರ ಬಾವನ ಜೊತೆ ಆರೋಪಿಗಳು ತೀಟೆ ಜಗಳ ತೆಗೆಯುತ್ತಿದ್ದು ಆ ಸಮಯಕ್ಕೆ ಪಿರ್ಯಾದಿ ಚಿಕ್ಕಪ್ಪ ರಾಮಕೃಷ್ಣ ಬಿನ್ ಮುತ್ತಯ್ಯ ಮತ್ತು ರಾಚಪ್ಪಾಜಿ, ಮಂಟೇಸ್ವಾಮಿ, ಸಿದ್ದಪ್ಪಾಜಿ ಎಲ್ಲರೂ ಸಮಧಾನ ಪಡಿಸುತ್ತ ಇರುವಾಗ ನನ್ನ ಚಿಕ್ಕಪ್ಪನ ಕತ್ತಿಗೆಗೆ ಕೈಹಾಕಿ ನನ್ನ ಚಿಕ್ಕಪ್ಪನ ಕತ್ತಿನಲ್ಲಿ ಇದ್ದ 30ಗ್ರಾಮ್ ತೂಕದ ಚಿನ್ನದ ಸರವನ್ನು ಸತ್ಯ ಬಿನ್ ಗಣೇಶ್ ಎಂಬುವವನು ನನ್ನ ಚಿಕ್ಕಪ್ಪನಿಗೆ ಹೊಡೆದು ಕಿತ್ತುಕೊಂಡನು, ಮೂರು ದಿನಗಳಿಂದ ಆ ಜಾನುವಾರು ನಮ್ಮ ಕೊಟ್ಟಿಗೆಯಲ್ಲಿ ಮಲಗಿತ್ತು ಅದನ್ನು ನೋಡಲು ನಾನು 10.30 ಗಂಟೆಯಲ್ಲಿ ಹೋದಾಗ ಅಲ್ಲೆ ಇದ್ದ ಪುಷ್ಪ ಕೋಂ ಮಾದೇವ ಎಂಬುವವರ ಮನೆಯಲ್ಲಿ ಕಾದು ಕುಳಿತು ಮೇಲ್ಕಂಡ ಆರೋಪಿತರು ಮಚ್ಚು, ದೊಣ್ಣೆ, ಕಬ್ಬಿಣದ ರಾಡುಗಳಿಂದ ನನ್ನ ಹಲ್ಲೆಮಾಡಿ ಈ ಬೋಳಿಮಗನನ್ನು ಬಿಡಬೇಡಿ ಕೈಕಾಲು ಕತ್ತರಿಸಿ ಹಾಕು ಎಂದು ಮಾದೇವ ಬಿನ್ನ ನಂಜಯ್ಯ ಎಂಬುವವನು ಕೂಗಿದನು, ಅದಕ್ಕೆ ಎಲ್ಲರೂ ಸಮಾನ ಉದ್ದೇಶದಿಂದ ಇವನನ್ನು ಕೊಲೆ ಮಾಡಿರೋ ಅದು ಏನೂ ಆಗುತ್ತದೋ ನೋಡೋಣಾ ಎಂದು ಮಚ್ಚಿನಿಂದ ಸಿದ್ದರಾಜು ಬಿನ್ ಮೀಸೆ ಸಿದ್ದಯ್ಯ ನನ್ನ ಬುರುಡೆಗೆ ಹೊಡೆದನು, ಕಬ್ಬಿಣದ ರಾಡಿನಿಂದ ಮೀಸೆ ಸಿದ್ದಯ್ಯ ಬಿನ್ ಲೇಟ್ ನಂಜಯ್ಯ ಎಂಬುವವನು ನನ್ನ ಎಡಕತ್ತಿನ ಭಾಗಕ್ಕೆ ಹೊಡೆದನು ಅಷ್ಟೋತ್ತಿಗೆ ನನ್ನ ಚಿಕ್ಕಪ್ಪ ರಾಮಕೃಷ್ಣ ಬಿನ್ ಮುತ್ತಯ್ಯ ಓಡಿ ಬಂದರು ಅವರಿಗೂ ಸಹಾ ದೊಣ್ಣಡ ಮತ್ತು ಕಲ್ಲುಗಳಿಂದ ಮಧು ಬಿನ್ ಮಾದೇವ , ಸತ್ಯ ಬಿನ್ನ ಗಣೇಶ್ ಎಂಬುವವರು ಒಡೆದರೂ ನನ್ನ ಅತ್ತೆಯ ಮಗನಾದ ರಾಚಪ್ಪಾಜಿ ಎಂಬುವವರು ಬಿಡಿಸಲು ಬಂದಾಗ ಅವರಿಗೂ ಸಹಾ ದೊಣ್ಣೆಗಳಿಂದ ಆಕಾಶ್ ಬಿನ್ ನೀಲಪ್ಪ, ಶಿವ ಬಿನ್ ರುದ್ರ ಎಂಬುವವರು ಹೊಡೆದರೂ ನಂತರ ಕೋಪಾದ್ರಿತಾನಾಗಿ ಎಲ್ಲರೂ ದೊಣ್ಣೆಗಳಿಂದ ಒಬ್ಬೊರಾದ ಮೇಲೆ ಒಬ್ಬರು ನನ್ನ ಮೈಕೈ ತೊಡೆ ಬೆನ್ನು ಭಾಗಗಳಿಗೆ ಹಿಂದುಗಡೆಯಿಂದ ಬಂದು ಹೊಡೆದರೂ ಪ್ರಮೋದಾ ಬಿನ್ ಸಣ್ಣ ಹೈದ ಎಂಬುವವನು ಬೈಕ್ ನ ಮುಂದೆ ಕತ್ತಿಯನ್ನು ಸಿಕ್ಕಿಸಿಕೊಂಡು ಓಡಿ ಬಂದು ನನ್ನನ್ನು ಹೊಡೆಯಲು ಯತ್ನಿಸಿದಾಗ ನನ್ನ ಅತ್ತೆಯ ಮಗ ಸಿದ್ದಪ್ಪಾಜಿ ಎಂಬುವವರು ತಡೆದರು ನಂತರ ಜಗಳವನ್ನು ಬಿಡಿಸಿ ನನ್ನ ಚಿಕ್ಕಪ್ಪ ಎಲ್ಲರನ್ನು ಮನೆಗೆ ಕರೆದುಕೊಂಡು ಬಂದರು , ನನ್ನ ಕೊಲೆ ಪ್ರಯತ್ನ ಮಾಡಲು ಎಲ್ಲರೂ ಉದ್ದೇಶ ಪೂರ್ವಕವಾಗಿ ಬಂದಿರುತ್ತಾರೆ, ನನಗೆ ಜೀವ ಭಯ ಉಂಟಾಗಿರುತ್ತದೆ, ನಮಗೆ ರಕ್ಷಣೆ ನೀಡಿ ನಮ್ಮನ್ನು ಕೊಲೆ ಪ್ರಯತ್ನ ಹಾಗೂ ಮಾರಾಣಾಂತಿಕ ಹಲ್ಲೆ ಮಾಡಿದವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲೆಂದು ನೀಡಿದ ದೂರಿನ ಮೇರೆಗೆ ಈ ಪ್ರ,ವ ವರದಿ.

7. ಸಂತೇಮರಳ್ಳಿ ಠಾಣೆ ( ಮೊ ನಂ 18/2020) ದಿ: 17-05-2020 ರಂದು ಮದ್ಯಾಹ್ನ 01-30 ಗಂಟೆ ಸಮಯದಲ್ಲಿ ಕಣ್ಣೇಗಾಲ ಗ್ರಾಮದ ಹರಳಪ್ಪನ ಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಅಂದರ್- ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರನ್ನು ಪಿರ್ಯಾದುದಾರರು ಸಿಬ್ಬಂದಿಗಳೊಂದಿಗೆ ಸುತ್ತುವರೆದು ಹಿಡಿದು ಅಖಾಡದಲ್ಲಿ ಹಾಗೂ ಆಸಾಮಿಗಳ ಬಳಿ ದೊರೆತ ಒಟ್ಟು ನಗದು 1360-00 ಹಾಗೂ 52 ಇಸ್ಪೀಟ್ ಎಲೆಗಳು ಒಂದು ಪ್ಲಾಸ್ಟಿಕ್ ತಾಟನ್ನು ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ವರದಿ ನೀಡಿದ ಮೇರೆಗೆ ಠಾಣಾ ಜಿ.ಎಸ್.ಸಿ. ನಂ.86/2020 ರಲ್ಲಿ ನಮೂದು ಮಾಡಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಯಾವುದೇ ರಹದಾರಿಯಿಲ್ಲದೆ ಇಸ್ಪೀಟು ಜೂಜಾಟವಾಡುತ್ತಿದ್ದ ಆಸಾಮಿಗಳ ವಿರುದ್ದ ಕಲಂ: 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡುವಂತೆ ಘನ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿಕೊಂಡಿದ್ದು, ಘನ ನ್ಯಾಯಾಲಯ ಅನುಮತಿಯನ್ನು ನೀಡಿದ್ದರ ಮೇರೆಗೆ ಠಾಣಾ ಮೊ. ನಂ. 18/2020 ಕಲಂ: 87 ಕೆ. ಪಿ. ಆಕ್ಟ್ ರೀತ್ಯಾ ಕೇಸು ದಾಖಲಿಸಿರುತ್ತೆ.

8. ಯಳಂದೂರು ಠಾಣೆ ( ಮೊ ನಂ 39/2020) ದಿನಾಂಕ 17-05-2020 ರಂದು ಸಂಜೆ 07:30 ರ ಸಮಯದಲ್ಲಿ ಪಿರ್ಯಾದಿರವರಾದ ಎಂ.ಎಲ್.ಶೇಖರ. ಆರಕ್ಷಕ ವೃತ್ತ ನಿರೀಕ್ಷಕರು. ಯಳಂದೂರು ವೃತ್ತ. ಯಳಂದೂರು ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೆನೆಂದರೆ ದಿನಾಂಕ:-17-05-2020 ರಂದು ಸಂಜೆ 05:00 ಗಂಟೆ ಸಮಯದಲ್ಲಿ ನಾನು ವೃತ್ತ ಕಚೇರಿಯಲ್ಲಿದ್ದಾಗ ಆಸಮಯಕ್ಕೆ ಬಾತ್ಮೀದಾರರಿಂದ ಖಚಿತ ಮಾಹಿತಿಯು ಬಂದ ಮೇರೆಗೆ ಮಾಲಾರ ಪಾಳ್ಯೆ ಗ್ರಾಮದ ಎಲ್ಲೆಗೆ ಸೇರಿದ ಮಾಲಾರಪಾಳ್ಯೆ ಬೂದಿತಿಟ್ಟು ಗ್ರಾಮಗಳ ಕಡೆಗೆ ಹೋಗುವ ಸರ್ಕಲ್ ಬಳಿಯಲ್ಲಿ ಪೆಟ್ಟಿಗೆ ಅಂಗಡಿಯ ಮುಂಬಾಗ ಸಾರ್ವಜನಿಕರು ತಿರುಗಾ ಡುವ ರಸ್ತೆಯಲ್ಲಿ ಒಬ್ಬ ಅಸಾಮಿಯು ಇದ್ದು ಆತನ ಬಳಿಯಲ್ಲಿ ಪ್ಲಾಸ್ಟಿಕ್ಕವರ್ ಇಟ್ಟುಕೊಂಡು ಕೈಯಲ್ಲಿ ಮದ್ಯ ತುಂಬಿದ ಪೌಚ್ಗಳನ್ನು ಹಿಡಿದುಕೊಂಡು ಸದರಿ ಕವರ್ನಲ್ಲಿ ಮದ್ಯ ತುಂಬಿದ ಪೌಚ್ ಹಾಗು ಪ್ಲ್ಯಾಸ್ಟಿಕ್ ಲೋಟ. ಹಾಗು ನೀರಿನ ಬಾಟಲ್ನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಪ್ರಚೋದನೆಯನ್ನು ಮಾಡಿ ಅನುವುಮಾಡಿಕೊಡುತ್ತಿರುವುದು ಕಂಡುಬಂದ ಮೇರೆಗೆ ಪಂಚರುಗಳ ಸಮಕ್ಷಮ ಮದ್ಯ ತುಂಬಿದ ಪೌಚ್ ಗಳನ್ನು ಸಂಜೆ 05:30 ಗಂಟೆಯಿಂದ ಸಂಜೆ 06:30 ಗಂಟೆಯವರಗೆ ಮಹಜರ್ ಮುಖೇನ ಅಸಾಮಿ ದೇವರಶೆಟ್ಟಿರವರ ಬಳಿಯಲ್ಲಿ ಇದ್ದ 500/ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಆರೋಪಿತನಾದ ದೇವರಶೆಟ್ಟಿರವನ್ನು ಮತ್ತು ಮಾಲು ಸಮೇತ ರಾತ್ರಿ 07:00 ಗಂಟೆಗೆ ಯಳಂದೂರು ವೃತ್ತ ಕಛೇರಿಗೆ ಬಂದು ವರದಿಯನ್ನು ತಯಾರು ಮಾಡಿ. ರಾತ್ರಿ 07:30 ಗಂಟೆ ಸಮಯಕ್ಕೆ ಆರೋಪಿ ಮಾಲು ಹಾಗೂ ಮಹಜರ್ನ್ನು ಮುಂದಿನ ಕ್ರಮಕ್ಕಾಗಿ ನೀಡಿದ ವರದಿ ದೂರಿನ ಮೇರೆಗೆ ಈ ಪ್ರ ವ ವರದಿ.


Your Comment

Name :
Email:
Comment:
Submit

Website Designed and Developed by Global Buzz®