• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 26-03-2020

No of views : 20       No of Comments : 0

1. ಚಾಮರಾಜನಗರ ಗ್ರಾಮಾಂತರ ಠಾಣೆ (ಮೊ,ನಂ 23/2020) ಚಾಮರಾಜನಗರ ತಾ|| ಕಾಳನಹುಂಡಿ ಗ್ರಾಮದ ಸಂತೋಷ್ ಕುಮಾರ್ ರವರು ಠಾಣೆಗೆ ಬಂದು ನನ್ನ ತಮ್ಮ ನಾಗೇಂದ್ರನಿಗೆ ಸುಮಾರು ಒಂದು ತಿಂಗಳಿನಿಂದ ಚಳಿಜ್ವರ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಊಟ-ತಿಂಡಿ ಮಾಡಿದರೆ ವಾಂತಿಯಾಗುತ್ತಿತ್ತು. ದಿ: 16/03/2020 ರಂದು ನಾಗೇಂದ್ರನನ್ನು ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದ್ದು, ಅವರು ಪರೀಕ್ಷೆ ಮಾಡಿ ನಾಗೇಂದ್ರನಿಗೆ ಹೊಟ್ಟೆಯಲ್ಲಿ ಗಂಟು ಇದೆ ಎಂದು ತಿಳಿಸಿ, ಎಂಡೋಸ್ಕೋಪಿ ಮಾಡಿ, ಹೆಚ್ಚಿನ ಮಾಹಿತಿ ಪಡೆಯಲು ರಕ್ತದ ಮಾದರಿಯನ್ನು ತೆಗೆದುಕೊಂಡು ಆ ಗಂಟು ಯಾವುದು ಎಂದು ತಿಳಿದುಕೊಳ್ಳುವ ಸಲುವಾಗಿ ರಕ್ತವನ್ನು ಪರೀಕ್ಷೆಗೆ ಹೊರಗಡೆ ಕಳುಹಿಸಿದ್ದು, 10 ದಿನಗಳ ನಂತರ ವರದಿ ಬರುತ್ತದೆ ನಂತರ ನಾವು ಚಿಕಿತ್ಸೆ ಕೊಡುತ್ತೇವೆ, ಅಲ್ಲಿಯವರೆಗೂ ಆಸ್ಪತ್ರೆಯಲ್ಲಿಯೇ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊ ಎಂದು ವೈದ್ಯರು ತಿಳಿಸಿದ್ದು, ಅದಕ್ಕೆ ನನ್ನ ತಮ್ಮ ನಾನು ಊರಿಗೆ ಹೋಗಿ ಸ್ನಾನ ಮಾಡಿ ವಾಪಸ್ ಬರುತ್ತೇನೆ ಎಂದು ವೈದ್ಯರಲ್ಲಿ ಕೇಳಿಕೊಂಡಾಗ ಅವರು ಹೋಗಿ ಬನ್ನಿ ಎಂದು ತಿಳಿಸಿದ್ದರಿಂದ ದಿ: 23/03/2020 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದೆವು. ನಾಗೇಂದ್ರನಿಗೆ ಇದ್ದಕ್ಕಿದ್ದ ಹಾಗೆ ಹೆಚ್ಚಿನ ಹೊಟ್ಟೆನೋವು ಕಾಣಿಸಿಕೊಂಡು ನಾನು ಬದುಕುವುದಿಲ್ಲ, ನನ್ನ ಕೈಲಿ ಹೊಟ್ಟೆ ನೋವು ತಡೆದುಕೊಳ್ಳವುದಿಲ್ಲ ಎಂದು ವಾಂತಿ ಮಾಡಿಕೊಳ್ಳುತ್ತಿದ್ದು, ಇದನ್ನು ನೋಡಿದ ನಾನು ಮತ್ತು ನನ್ನ ತಮ್ಮನ ಹೆಂಡತಿ ಬಸಮ್ಮಣ್ಣಿ ಇಬ್ಬರೂ ನನ್ನ ಕಾರಿನಲ್ಲಿ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ಕರೆದುಕೊಂಡು ಹೋಗಲು ಈದಿನ ದಿ: 26/03/2020 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಬೆಂಡವಾಡಿ ಕೆರೆಯ ಏರಿಯ ರಸ್ತೆಯಲ್ಲಿ ಹೋಗುತ್ತಿದ್ದಾಗ ನಾಗೇಂದ್ರನು ವಾಂತಿ ಬರುತ್ತಿದೆ ಕಾರನ್ನು ನಿಲ್ಲಿಸಿ ಎಂದು ನನಗೆ ಹೇಳಿದ್ದು, ತಕ್ಷಣ ನಾನು ಕಾರನ್ನು ಕೆರೆಯ ಕಲ್ಲಿನ ಮಂಟಪದ ಹತ್ತಿರ ನಿಲ್ಲಿಸಿದೆ. ಆತನೇ ಡೋರ್ ತೆಗೆದು ಕಾರಿನಿಂದ ಇಳಿದು ಓಡಿಹೋಗಿ ನೀರಿಗೆ ಹಾರಿದನು. ನಾನು ಮತ್ತು ನನ್ನ ನಾದಿನಿ ಇಬ್ಬರೂ ಬಾಯಿ ಬಡಿದುಕೊಂಡಾಘ ಯಾರೋ ದಾರಿಹೋಕರು ಕೆರೆ ತುಂಬಾ ಆಳ ಇದೆ, ನೀವು ಇಳಿಯಬೇಡಿ ಎಂದು ನನಗೆ ತಿಳಿಸಿದ್ದರಿಂದ ನಾನು ಇಳಿಯಲಿಲ್ಲ, ಸದರಿ ಕೆರೆಯ ನೀರಿನಲ್ಲಿ ನನ್ನ ತಮ್ಮ ಮುಳಿಗಿಕೊಂಡು ಮೃತಪಟ್ಟಿರುತ್ತಾನೆ. ನನ್ನ ತಮ್ಮನಿಗೆ ಬರುತ್ತಿದ್ದ ಹೊಟ್ಟೆನೋವಿನ ಬಾದೆ ತಾಳಲಾರದೇ ಜೀವನದಲ್ಲಿ ಜಿಗುಪ್ಸೆ ಹೊಂದಿ ಬೆಂಡರವಾಡಿ ಕೆರೆಯ ನೀರಿಗೆ ಮುಳುಗಿ ಮೃತಪಟ್ಟಿರುತ್ತಾನೆ. ವಿನಃ ಈತನ ಸಾವಿನಲ್ಲಿ ಬೇರೆ ಯಾವ ಕಾರಣ ಇರುವುದಿಲ್ಲ. ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ಲಿಖಿತ ದೂರಿನ ಮೇರೆಗೆ.

2.ಚಾಮರಾಜನಗರ ಪೂರ್ವ ಠಾಣೆ (ಮೊ,ನಂ 57/2020) ದಿನಾಂಕ:- 25-03-2020 ರಂದು ಪಿಯರ್ಾದಿ ಶಿವಮಾದಯ್ಯ ಪಿ. ಐ, ಡಿಎಸ್ಬಿ ಬ್ರಾಂಚ್ರವರು ಕಛೇರಿಯಲ್ಲಿದ್ದಾಗ ಚಾಮರಾಜನಗರ ಪೂರ್ವ ಪೊಲೀಸ್ ಠಾಣಾ ಸರಹದ್ದಿನ ಸೋಮವಾರಪೇಟೆ ಗ್ರಾಮದ ಜಿ.ಟಿ.ಸಿ ಕ್ಲಬ್ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂದು ದೊರೆತ ಮಾಹಿತಿ ಮೇರೆಗೆ ಮಾನ್ಯ ಎಸ್.ಪಿ ಸಾಹೇಬರ ಮೌಖಿಕ ಆದೇಶದಂತೆ ಪೂರ್ವ ಠಾಣೆಯ ಪಿಎಸ್ಐ ಶ್ರೀ ಸುನೀಲ್.ಎಸ್.ಪಿ ರವರಿಗೆ ಮಾಹಿತಿ ತಿಳಿಸಿ, ಡಿಎಆರ್ ಹಾಗೂ ಪೂರ್ವ ಠಾಣೆಯ ಸಿಬ್ಬಂದಿಗಳನ್ನು ಮತ್ತು ಪಂಚರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಧಾಳಿ ಮಾಡಿ ಸದರಿ ಮೇಲ್ಕಂಡ 13 ಜನ ಆಸಾಮಿಗಳನ್ನು ಹಿಡಿದಿದ್ದು, ಮತ್ತೊಬ್ಬ ಆಸಾಮಿಯು ಸ್ಥಳದಿಂದ ಓಡಿ ಹೋಗಿರುತ್ತಾನೆ. ನಂತರ ಅಖಾಡದಲ್ಲಿದ್ದ 49,790/-ರೂ ನಗದು, 52 ಇಸ್ಪೀಟ್ ಎಲೆಗಳು, ಮತ್ತು ಒಂದು ಪ್ಲಾಸ್ಟಿಕ್ ತಾಟನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಮುಂದಿನ ಕ್ರಮದ ಬಗ್ಗೆ ವರದಿ, ಮಾಲು, ಮಹಜರ್ ಹಾಗೂ ಆಸಾಮಿಗಳನ್ನು ಠಾಣೆಗೆ ತಂದು ಹಾಜರ್ಪಡಿಸಿದ್ದು, ಇದನ್ನು ಸ್ವೀಕರಿಸಿ ಇದು ಅಸಂಜ್ಞೆಯ ಪ್ರಕರಣವಾಗಿದ್ದು, ನಂತರ ಇದನ್ನು ಸಂಜ್ಞೆಯ ಪ್ರಕರಣವಾಗಿ ದೂರು ದಾಖಲು ಮಾಡಲು ದಿ: 26-03-2020 ರಂದು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದ ಮೇರೆಗೆ ಈ ಪ್ರ.ವ.ವರದಿ.

3.ಕೊಳ್ಳೇಗಾಲ ಪಟ್ಟಣ ಠಾಣೆ (ಯು ಡಿ ಆರ್ ,ನಂ 03/2020) ಪಿರ್ಯಾದಿ ಪದ್ಮ ಬಸ್ತೀಪುರ ಗ್ರಾಮರವರು ನೀಡಿದ ದೂರಿನಲ್ಲಿ ಅವರ ಗಂಡ ಪ್ರತಿದಿನ ಮಧ್ಯಪಾನ ಮಾಡುತ್ತಿದ್ದು ಹಾಗೂ ನನ್ನ ಗಂಡ ಟಿಬಿ ಖಾಯಿಲೆ ಮತ್ತು ಏಡ್ಸ್ ಖಾಯಿಲೆಯಿಂದ ನರಳುತ್ತಿರುತ್ತಾರೆ ನನ್ನ ಗಂಡ ಇದರಿಂದ ಆಗಾಗ ನನ್ನ ಗಂಡ ಸತ್ತುಹೋಗಬೇಕೆಂದು ಹೇಳುತ್ತಿದ್ದು ನಾನು ಸಮಾಧಾನ ಮಾಡುತ್ತಿದ್ದೆ ,ದಿ:24-03-2020 ರಂದು ನನ್ನ ಗಂಡ ಬಹಿದರ್ೆಸೆಗೆಂದು ಹೊರಗೆ ಹೋಗಿದ್ದು ರಾತ್ರಿ ಆದರು ಬಂದಿರಲಿಲ್ಲ ಆದ್ದರಿಂದ ನಾನು ನಮ್ಮ ಸಂಬಂಧಿಕರೆನೆಲ್ಲ ವಿಚಾರ ಮಾಡಿದ್ದು ಯಾರು ಕೂಡ ಬಂದಿರುವ ಬಗ್ಗೆ ಇಲ್ಲವೆಂದು ತಿಳಿಸಿರುತ್ತಾರೆ ಆದರ ಈ ದಿನ ದಿ:26-03-2020 ರಂದು ಯಾರೊ ಬಸ್ತಿಪುರದ ಹಿಂದೆ ಇರುವ ಕರಿಕಲ್ಲು ಕ್ವಾರೆ ಹಳ್ಳದ ನೀರಿನಲ್ಲಿ ಯಾವುದೊ ಹೆಣ ತೇಲುತ್ತ ಇದೆ ಎಂದು ಮಾತನಾಡುತ್ತಿದ್ದಾಗ ನಾನು ಮತ್ತು ನನ್ನಮಗಳು ನಮ್ಮ ಅಣ್ಣ ಹೋಗಿ ನೋಡಿದಾಗ ನನ್ನ ಗಂಡನ ಹೆಣ ತೇಲುತ್ತ ಇತ್ತು ನನ್ನ ಗಂಡ ಟಿ ಬಿ ಕಾಯಿಲೆ ಮತ್ತು ಏಡ್ಸ್ ಖಾಯಿಲೆ ಇದ್ದರಿಂದ ಜೀವನಲ್ಲಿ ಜಿಗುಪ್ಸೆಗೊಂಡು ಅಥವಾ ಬಹಿದರ್ೆಸೆಗೆ ಹೋಗಿ ನೀರು ತೆಗೆದುಕೊಳ್ಳುವ ವೇಳೆ ಕಾಲು ಜಾರಿ ನೀರಿಗೆ ಬಿದ್ದು ತೀರಿಹೋಗಿರುತ್ತಾರೆ ವಿನಹ ಬೇರೆ ಯಾವುದೆ ಕಾರಣವಲ್ಲವೆಂದು ತಾವು ಸ್ಥಳಕ್ಕೆ ಬಂದು ಭೇಟಿ ನೀಡಿ ಪರಿಶೀಲನೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಕೇಳಿಕೊಂಡ ಮೇರೆಗೆ ಯುಡಿಆರ್ ವರದಿ.

4.ಕೊಳ್ಳೇಗಾಲ ಗ್ರಾಮಾಂತರ ಠಾಣೆ (ಯು ಡಿ ಆರ್ ,ನಂ 10/2020) ದಿ:26-03-2020 ರಂದು ಪಿರ್ಯಾದಿ ಆರೋಗ್ಯಮ್ಮ ಸತ್ತೇಗಾಲ ಜಾಗೇರಿ ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರೇನೆೆಂದರೆ ನನ್ನ ಮಗ ಇರುದಯಸೇಸು ದಿ:25-03-2020 ರಂದು ಮಧ್ಯಪಾನ ಮಾಡಿಕೊಂಡು ಮದ್ಯಾಹ್ನ ಸುಮಾರು 02-30 ಗಂಟೆಗೆ ಮನೆಗೆ ವಾಪಸ್ಸು ಬಂದನು. ನಂತರ ಸಂಜೆ 04-30 ಗಂಟೆ ಸಮಯಕ್ಕೆ 4-5 ಬಾರಿ ವಾಂತಿ ಮಾಡಿದನು. ವಾಂತಿ ಮಾಡುವಾಗ ಎದೆ ಹಿಡಿದುಕೊಂಡಂತಾಗಿದೆ, ಎದೆ ಉರಿ ಎಂದು ಎದೆಯನ್ನು ಹಿಡಿದುಕೊಳುತ್ತಿದ್ದನು. ಆಗ ಆತನನ್ನು ಸುಧಾರಿಸಿ ಗಂಜಿ, ನೀರು, ಎಳನೀರುಕೊಟ್ಟು ಸುದಾರಿಸಿದೆವು. ಆದರೆ ಸಂಜೆ ಸುಮಾರು 05-00 ಗಂಟೆ ಸಮಯದಲ್ಲಿ ನೀರು ಕುಡಿದ ನಂತರ ಎದೆ ಹಿಡಿದುಕೊಂಡು ಮನೆಯ ಮುಂದೆ ಬಿದ್ದನು. ಆಗ ತಕ್ಷಣ ನಾವು ಅಂಜಿಸರ್ಕಲ್ ಬಳಿ ಇರುವ ಮಾದೇಶ್ ಎಂಬ ಡಾಕ್ಟರ್ನ್ನು ಬರಮಾಡಿಕೊಂಡು ಪರೀಕ್ಷಿಸಿದಾಗ ಇರುದಯಸೇಸು ಮೃತಪಟ್ಟಿರುವುದಾಗಿ ಅವರು ತಿಳಿಸಿದರು. ಆದ್ದರಿಂದ ಈ ಸಂಬಂಧ ತಾವು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಈ ಯುಡಿ ಆರ್ ವರದಿ.

5. ರಾಮಾಪುರ ಠಾಣೆ (ಯು ಡಿ ಆರ್ ,ನಂ 10/2020) ದಿನಾಂಕ 26-03-2019 ರಂದು ಠಾಣಾ ಸರಹದ್ದು ಹೂಗ್ಯಂ ಗ್ರಾಮದ ಎಸ್.ಸಿ ಸ್ಟರೀಟ್ ಬಳಿ ಸಾರ್ವಜನಿಕ ಸ್ಥಳದುಲ್ಲಿ ಆರೋಪಿ ಸಕರ್ಾರದ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಸಂಗ್ರಹಿಸಿ ಸಾಗಾಣೆ ಮಾಡುತ್ತಿರುವುದಕ್ಕೆ ಯಾವುದಾದರೂ ರಹದಾರಿ ಇದೆಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ರಹದಾರಿ ಇಲ್ಲ ಎಂದು ತಿಳಿಸಿರುತ್ತಾರೆ. ಮಾಹಿತಿಯನ್ನು ಸಂಗ್ರಹಿಸಿ ಪಂಚರುಗಳ ಸಮಕ್ಷಮ ಸಿಬ್ಬಂದಿಯವರುಗಳೊಂದಿಗೆ ಕೃತ್ಯದ ಮೇಲೆ ಧಾಳಿ ಮಾಡಿ ಮಾಲು ಮತ್ತು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿ ವರದಿ ನೀಡಿದ ಮೇರೆಗೆ ಈ ಪ್ರ ವ ವರದಿ.

6. ರಾಮಾಪುರ ಠಾಣೆ (ಯು ಡಿ ಆರ್ ,ನಂ 03/2020) ದಿನಾಂಕ 26-03-2020 ರಂದು ಪಿರ್ಯಾದಿ ಕೊಳಂದೈಸ್ವಾಮಿ ಮಾರ್ಟಳ್ಳಿ ಗ್ರಾಮರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ಪಿರ್ಯಾದಿಯವರ ತಂಗಿಗೆ 15 ವರ್ಷ ಗಳ ಹಿಂದೆ ಕೊಳತ್ತೂರು ಗೆ ಮದುವೆ ಮಾಡಿಕೊಟ್ಟಿದ್ದು ಪಿಟ್ಸ್ ಖಾಯಿಲೆ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದು ಸದರಿಯವರನ್ನು ಮಾರ್ಟಳ್ಳಿ ಯ ಪಾಳಿಮೇಡಿಗೆ ಕರೆದುಕೊಂಡು ಬಂದು ಮನೆಯಲ್ಲಿರಿಸಿ ಚಿಕಿತ್ಸೆ ಕೊಡೆಸುತ್ತಿದ್ದರು ದಿನಾಂಕ 26-03-2020 ರಂದು ಮನೆಯಿಂದ ಇದ್ದಕ್ಕಿಂದಂತೆ ಕಾಣೆಯಾಗಿದ್ದು ಹುಡುಕುತ್ತಿದ್ದಾಗ ಈ ದಿನ ದಿನಾಂಕ 26-03-2020 ರಂದು ಬೆಳಿಗ್ಗೆ ಕೌದಳ್ಳಿ ಅರಣ್ಯ ಪ್ರದೇಶದ (ಅಂಜುನೇಯ ಗುಡ್ಡ) ಬಿದರಳ್ಳಿ ಗ್ರಾಮದ ಹತ್ತಿರ ರಸ್ತೆ ಪಕ್ಕದಲ್ಲಿ ಒಂದು ಶವ ಬಿದ್ದಿರುವುದಾಗಿ ಅರಣ್ಯ ಇಲಾಖೆ ಅದಿಕಾರಿಗಳಿಂದ ಗೊತ್ತಾಗಿ ನಮ್ಮ ಕಡೆಯವರು ಜೊತೆ ಸ್ಥಳಕ್ಕೆ ಬಂದು ನೋಡಿದಾಗ ಶವ ವು ಕೊಳೆತ ಓಗಿದ್ದು ಕೈ ಕೆಲವು ಭಾಗ ವನ್ನು ಕಾಡು ಪ್ರಾಣಿ ಗಳು ತಿಂದಿರುತ್ತದೆ ನಮ್ಮ ಅಕ್ಕ ಅನಾರೋಗ್ಯದಿಂದ ಬಳಲುತ್ತಿದ್ದು ರಸ್ತೆಯಲ್ಲಿ ನಡೆದು ಹೋಗುವಾಗ ಸುಸ್ತಾಗಿ ಆಯಾಸ ಗೊಂಡು ಆರೋಗ್ಯದಲ್ಲಿ ವ್ಯತ್ಯಾಸವಾಗಿ ಮೃತಪಟ್ಟಿರುತ್ತಾರೆ ಈ ಸಾವಿಗೆ ಬೇರೆ ಯಾವುದೇ ಕಾರಣವಿಲ್ಲ ಆದ್ದರಿಂದ ಮುಂದಿನ ಕ್ರಮ ಜರುಗಿಸಬೇಕೆ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ ವರದಿ.


Your Comment

Name :
Email:
Comment:
Submit

Website Designed and Developed by Global Buzz®