• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 24-03-2020

No of views : 16       No of Comments : 0

1. ಬೇಗೂರು ಠಾಣೆ (ಮೊ,ನಂ 47/2020) ಪಿರ್ಯಾದಿ ಕು|| ಮಾಲಿನಿ ರಾಘವಾಪುರ ಗ್ರಾಮರವರು ಎಂಬುವರು ನೀಡಿದ ದೂರಿನಲ್ಲಿ ಸಾರಾಂಶವೇನೆಂದರೆ, ದಿನಾಂಕ :12-02-2020 ರಂದು ರಾತ್ರಿ ಸುಮಾರು 9:00 ಗಂಟೆಯ ಸಮಯದಲ್ಲಿ ನನ್ನ ತಾಯಿ ಶಿವಮ್ಮ ರವರು ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ನನ್ನ ಸೋದರ ಮಾವ ಅರಸಯ್ಯ ಎಂಬುವರು ನನ್ನ ತಾಯಿಯನ್ನು ನೋಡಲು ಬಂದಾಗ ನನ್ನ ಚಿಕ್ಕಪ್ಪಂದಿರಾದ ಮಹೇಶ ಹಾಗೂ ಮಧುಸೂಧನ್ ರವರುಗಳು ನನ್ನ ಸೋದರ ಮಾವನನ್ನು ಅವಾಚ್ಯ ಶಬ್ದಗಳಿಂದ ಬೈದು ಮಹೇಶ ಎಂಬುವರು ಹೆಲ್ಮೇಟ್ ನಿಂದ ಹಲ್ಲೆ ಮಾಡಿದಾಗ, ಮಧುಸೂಧನ್ ಎಂಬುವರು ಕೊಲೆ ಬೆದರಿಕೆ ಹಾಕಿರುತ್ತಾರೆ. 1. ಮಹೇಶ ಬಿನ್ ಮಹದೇವಯ್ಯ2.ಮಧುಸೂದನ್ ಬಿನ್ ಮಹದೇವಯ್ಯ3.ಭಾಗ್ಯಲಕ್ಷ್ಮಿ ಕೋಂ ಮಹೇಶ4.ಸುಜಾತ ಕೋಂ ಮಧುಸೂದನ್5.ಮಹದೇವಯ್ಯ ಬಿನ್ ಲೇ ಬಸವಯ್ಯ ಅದೇ ಗ್ರಾಮರವರುಗಳು ಆರೋಪಿತರುಗಳು ನನಗೆ ಆಸ್ತಿಯಲ್ಲಿ ಭಾಗ ಕೊಡಬೇಕಾಗುತ್ತೆಂದು ಎಲ್ಲರೂ ಸೇರಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದರು. ಆಗ ನಾನು ಯಾಕೆ ಬೈಯ್ಯುತ್ತೀರಿ ಎಂದು ಪ್ರಶ್ನೆಮಾಡಿದಾಗ ಆರೋಪಿತರಾದ 05 ರವರು ಹಲ್ಲೆ ಮಾಡಿರುತ್ತಾರೆ. ಆರೋಪಿತರಾದ 01 ರವರು ನನ್ನ ಕತ್ತನ್ನು ಹಿಡಿದುಕೊಂಡಿರುತ್ತಾರೆ. ಆರೋಪಿತರಾದ 02 ರವರು ನನ್ನ ಬಟ್ಟೆ ಹಿಡಿದು ಎಳೆದಾಡಿ ಅಪಮಾನ ಮಾಡಿರುತ್ತಾರೆ. ಆರೋಪಿತರಾದ 03 ಮತ್ತು 04 ರವರುಗಳು ನನ್ನ ತಲೆ ಜುಟ್ಟು ಹಿಡಿದು ಎಳೆದಾಡಿ ಅಪಮಾನ ಪಡಿಸಿ, ಎಲ್ಲರೂ ಸೇರಿ ನನ್ನನ್ನು ಒಂದು ದಿನ ಮನೆಯಲ್ಲಿ ಗೃಹ ಬಂಧನದಲ್ಲಿಟ್ಟುರುತ್ತಾರೆ ಆ ಸಮಯದಲ್ಲಿ ನನ್ನ ಸೋದರ ಮಾವಂದಿರಾದ ಬಸವಣ್ಣ ಮತ್ತು ಅರಸಯ್ಯ ರವರು ಗ್ರಾಮದ ಯಜಮಾನರನ್ನು ಕರೆದುಕೊಂಡು ಬಂದು ಬಿಡಿಸಿರುತ್ತಾರೆ. ಆದ್ದರಿಂದ ಮೇಲ್ಕಂಡವರುಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

2. ಕುದೇರು ಠಾಣೆ (ಮೊ,ನಂ 21/2020) ಪಿಎಸ್ಐರವರು ಗಸ್ತು ಮಾಡುತ್ತಿದ್ದಾಗ ಬೆಳಿಗ್ಗೆ 10:15 ಗಂಟೆ ಸಮಯದಲ್ಲಿ ಜೊತೆಯಲ್ಲಿದ್ದ ಸಿಬ್ಬಂದಿ ಪಿ.ಸಿ-43 ರವರಿಗೆ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ ದಾಸನೂರು-ಉಮ್ಮತ್ತೂರು ಕ್ರಾಸ್ನ ಅರಳಿಮರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಆಸಾಮಿಯು ಗಿರಾಕಿಗಳಿಗೆ ಮದ್ಯಸೇವನೆ ಮಾಡಲು ಸ್ಥಳಾವಕಾಶವನ್ನು ನೀಡಿದ್ದಾನೆ ಎಂಬ ಮಾಹಿತಿ ಬಂದಿದ್ದು ಸದರಿ ಮಾಹಿತಿಯ ಮೇರೆಗೆ ಪಂಚರು ಮತ್ತು ಸಿಬ್ಬಂದಿಗಳ ಜೊತೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಅವನನ್ನು ಸಿಬ್ಬಂದಿಗಳ ಸಹಾಯದಿಂದ ಪಂಚರ ಸಮಕ್ಷಮ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಮದ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದಾದರೂ ರಹದಾರಿ ಇದೆಯೇ? ಎಂದು ಕೇಳಿದ್ದಕ್ಕೆ ಯಾವುದೂ ರಹದಾರಿ ಇಲ್ಲ ಎಂದು ತಿಳಿಸಿದಾಗ ಸ್ಥಳದಲ್ಲಿ ಬೆಳಿಗ್ಗೆ 10:45 ಗಂಟೆಯಿಂದ 11:30 ಗಂಟೆವರೆಗೆ ಮಹಜರ್ ಕ್ರಮ ಕೈಗೊಂಡು ಮಾಲು ಮತ್ತು ಆಸಾಮಿಯ ಜೊತೆ ಠಾಣೆಗೆ ಬಂದು ವರದಿ ತಯಾರಿಸಿ ಮದ್ಯಾಹ್ನ 12:00 ಗಂಟೆಗೆ ಪ್ರಕರಣ ದಾಖಲಿಸಿದ ಮೇರೆಗೆ ಈ ಪ್ರ.ವ.ವರದಿ.

3. ಕುದೇರು ಠಾಣೆ (ಮೊ,ನಂ 22/2020) ಪಿಎಸ್ಐರವರು ಗಸ್ತಿನಲ್ಲಿದ್ದಾಗ ದೊರೆತ ಮಾಹಿತಿ ಮೇರೆಗೆ ಒಬ್ಬ ಆಸಾಮಿಯು ತನ್ನ ಬೈಕಿನ ಮುಂಭಾಗದಲ್ಲಿ ಒಂದು ಬಿಳಿಚೀಲವನ್ನು ಇಟ್ಟುಕೊಂಡು ಗಣಗನೂರು ಕಡೆಯಿಂದ ಬರುತ್ತಿದ್ದು ನಮ್ಮ ಜೀಪನ್ನು ನೋಡಿದ ತಕ್ಷಣ ತನ್ನ ಮೋಟಾರ್ ಬೈಕನ್ನು ಮುಖ್ಯರಸ್ತೆಯಲ್ಲಿರುವ ರಂಗೇಗೌಡರ ತೆಂಗಿನತೋಟದ ಜಮೀನಿನ ಹತ್ತಿರ ರಸ್ತೆಯಲ್ಲಿ ನಿಲ್ಲಿಸಿ ತಪ್ಪಿಸಿಕೊಂಡು ಓಡಿಹೋದನು. ನಂತರ ಅವನ ಬೈಕಿನ ಹತ್ತಿರ ಬಂದು ನೋಡಲಾಗಿ ಸದರಿ ಬೈಕ್ ಕೆ.ಎ-10 ಆರ್-9777 ನೊಂದಣಿ ಸಂಖ್ಯೆಯ ಕಪ್ಪುಬಣ್ಣದ ಹೊಂಡಾ ಯೂನಿಕಾನರ್್ ಆಗಿರುತ್ತದೆ. ಬೈಕಿನ ಮುಂಭಾಗ ಪೆಟ್ರೋಲ್ ಟ್ಯಾಂಕ್ ಮೇಲೆ ಇದ್ದ ಒಂದು ಬಿಳಿ ಚೀಲದ ಒಳಗೆ ಯಾವುದೊ ವಸ್ತು ಇರುವುದನ್ನು ನೋಡಿ ಪಂಚರ ಸಮಕ್ಷಮ ಚೀಲದ ಬಾಯಿಯನ್ನು ಬಿಚ್ಚಿಸಿ ನೋಡಲಾಗಿ ಮದ್ಯ ತುಂಬಿದ ಟೆಟ್ರಾ ಪ್ಯಾಕ್ಗಳು ಇರುವುದು ಕಂಡು ಬಂದಿತು. ಅವುಗಳನ್ನು ನೆಲಕ್ಕೆ ಸುರಿದು ಲೆಕ್ಕ ಮಾಡಿ ನೋಡಲಾಗಿ 90 ಎಂ.ಎಲ್ ಪ್ರಮಾಣದ ಹೈವಾಡ್ಸರ್್ ಚಿಯರ್ಸ್ ವಿಸ್ಕಿಯ ಒಟ್ಟು 140 ಟೆಟ್ರಾ ಪ್ಯಾಕ್ಗಳು ಕಂಡು ಬಂದಿರುತ್ತದೆ. ಮೋಟಾರ್ ಬೈಕ್ ಮತ್ತು ಆಸಾಮಿಯ ವಿರುದ್ದ ಕಲಂ 32,34,38(ಎ) ಕೆ. ಇ. ಆಕ್ಟ್ ರಿತ್ಯಾ ಪ್ರಕರಣ ದಾಖಲಿಸಿದ ಮೇರೆಗೆ ಈ ಪ್ರ,ವ,ವರದಿ,

4. ರಾಮಾಪುರ ಠಾಣೆ ( ಯು.ಡಿ.ಆರ್ ನಂ 02/2020) ಪಿರ್ಯಾದಿ ಬಸವರಾಜು ಹೊಸೂರು ಗ್ರಾಮರವರು ನೀಡಿದೆ ದೂರಿನಲ್ಲಿ ಪಿರ್ಯಾದಿಯವರ ತಾಯಿಗೆ ಆಗಾಗ್ಗೆ ತುಂಬ ತಲೆನೋವು ಬರುತ್ತಿದ್ದು, ಈ ತಲೆನೋವಿನ ಬಾದೆ ತಾಳಲಾರದೇ ದಿನಾಂಕ:-23/03/2020 ರಂದು ಸುಮಾರು ಬೆಳಿಗ್ಗೆ 08.30 ಗಂಟೆ ಸಮಯದಲ್ಲಿ ಬೆಳೆಗೆ ಹಾಕುವ ಫೀಡಂ ಕಾಳನ್ನು ಸೇವಿಸಿದ್ದು, ಚಿಕಿತ್ಸೆಗಾಗಿ ಜೆ ಎಸ್ ಎಸ್ ಆಸ್ಪತ್ರೆ ಮೈಸೂರಿಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ:- 24/03/2020 ರ ಮದ್ಯಾಹ್ನ 02.00 ಗಂಟೆ ಸಮಯದಲ್ಲಿ ಮರಣ ಹೊಂದಿರುತ್ತಾರೆ. ಈ ಸಾವಿಗೆ ಬೇರೆ ಯಾವುದೇ ಕಾರಣವಿಲ್ಲ ಆದ್ದರಿಂದ ಮುಂದಿನ ಕ್ರಮ ಜರುಗಿಸಬೇಕೆ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ ವರದಿ.


Your Comment

Name :
Email:
Comment:
Submit

Website Designed and Developed by Global Buzz®