• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 23-03-2020

No of views : 14       No of Comments : 0

1. ಚಾಮರಾಜನಗರ ಪಟ್ಟಣ ಠಾಣೆ (ಮೊ,ನಂ 18/2020) ಪಿರ್ಯಾದಿ ಜಕೀವುಲ್ಲಾ ಚಾಮರಾಜನಗರ ಟೌನ್ರವರು ನೀಡಿದ ದೂರಿನಲ್ಲಿ ಅವರು ನಾನು ಕವಲಂದೆ ಗ್ರಾಮದ ಪಾಷಾ ಲಾಲ್ ರವರಮಗಳಾದ ಸಲ್ಮಾ ಭಾನು ರವರನ್ನು ಮದುವೆಯಾಗಿದ್ದು, ನನಗೆ 2 ವರ್ಷದ ಹೆಣ್ಣು ಮಗಳಿರುತ್ತಾಳೆ. ದಿ:23/03/2020 ರಂದು ಬೆಳಿಗ್ಗೆ 6:00 ಗಂಟೆ ಸಮಯದಲ್ಲಿ ಚಾಮರಾಜನಗರ ಆಲ ಮಸೀದಿ ಪಕ್ಕ ಕೆ.ಎಸ್.ಆರ್.ಟಿ.ಸಿ ಹಿಂಭಾಗ ನನ್ನ ಮನೆಯಿಂದ ನನ್ನ ಹೆಂಡತಿಯಾದ ಸಲ್ಮಾ ಭಾನು ಹಾಗೂ 2 ವರ್ಷದ ಹೆಣ್ಣು ಮಗು ಬೀ ಬೀ ಫಾತೀಮಾ ರವರು ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ, ನನಗೆ ಬಡು ಎಂಬುವವನು ಕರೆದುಕೊಂಡು ಹೋಗಿರಬಹುದೆಂದು ಅನುಮಾನವಿದ್ದು, ಎಲ್ಲಾ ಕಡೆ ಹುಡುಕಾಡಲಾಗಿ ಸಿಗದಿದ್ದರಿಂದ ನನ್ನ ಹೆಂಡತಿ ಹಗೂ ಮಗಳನ್ನು ಹುಡುಕಿಕೊಡಬೇಕಾಗಿ ನೀಡಿದ ದೂರಿನ ಮೇರೆಗೆ.

2. ಚಾಮರಾಜನಗರ ಗ್ರಾಮಾಂತರ ಠಾಣೆ (ಮೊ,ನಂ 32/2020) ಪಿರ್ಯಾದಿ ಚೈತ್ರ ಮಲೆಯೂರು ಗ್ರಾಮರವರು ನೀಡಿದ ದೂರಿನಲ್ಲಿ ನಮಗೂ ನಮ್ಮ ದೊಡ್ಡಪ್ಪನ ಮಗ ಬಸವರಾಜುರವರಿಗೂ ಮನೆಯ ಪಕ್ಕದ ಜಾಗದ ವಿಚಾರವಾಗಿ ತಕರಾರಾಗಿ ಈಗ್ಗೆ 03 ವರ್ಷಗಳಿಂದ ನಾವು ಅವರು ಮಾತನಾಡಿಸುತ್ತಿರಲಿಲ್ಲ. ನೆನ್ನೆ ದಿನ ದಿನಾಂಕ: 22/03/2020 ರಂದು ನಮ್ಮ ಮನೆಯಲ್ಲಿ ಕೇಬಲ್ ತೊಂದರೆಯಾಗಿ ಟಿ.ವಿ ಬರುತ್ತಿರಲಿಲ್ಲ ಆದರಿಂದ ಕೇಬಲ್ ನೋಡಿಕೊಳ್ಳುವ ನಮ್ಮೂರಿನ ಕಿರಣ್ ಎಂಬುವವರಿಗೆ ಕೇಬಲ್ ತೊಂದರೆಯಾಗಿರುವ ಬಗ್ಗೆ ತಿಳಿಸಿದ್ದು, ಅವರು ನಮ್ಮೂರಿನ ಒಬ್ಬ ಹುಡುಗನನ್ನು ಕೇಬಲ್ ರಿಪೇರಿ ಮಾಡಲು ಕಳುಹಿಸಿದ್ದು ಸಂಜೆ ಸದರಿಯವರು 07-30 ಗಂಟೆ ಸಮಯದಲ್ಲಿ ನಮ್ಮ ಪಕ್ಕದ ಮನೆಯ ನಮ್ಮ ದೊಡ್ಡಪ್ಪನ ಮಗ ಬಸವರಾಜು ಬಿನ್ ಸಿದ್ದಪ್ಪರವರ ಮನೆಯಲ್ಲಿ ಕೇಬಲ್ ಆಂಪ್ಲಿಪೇರ್ ಇಟ್ಟಿದ್ದು ಸದರಿ ಹುಡುಗ ಅವರ ಮನೆಯ ಆಂಪ್ಲಿಪೇರ್ನಲ್ಲಿ ನಮ್ಮ ಮನೆಗೆ ಕೇಬಲ್ ವೈರ್ ಸರಿಪಡಿಸುತ್ತಿದ್ದಾಗ ನನ್ನ ದೊಡ್ಡಪ್ಪನ ಮಗ ಬಸವರಾಜು ಮನೆಯ ಮುಂದೆ ನಿಂತುಕೊಂಡು ಯಾವ ಲೋಫರ್ ಸೂಳೇ ಮಗಳ ಮನೆಗೆ ನೀನು ಕೇಬಲ್ ರಿಪೇರಿ ಮಾಡುವುದು ? ಆ ಲೋಫರ್ ಮುಂಡೆ ಮನೆಗೆ ನಮ್ಮ ಮನೆಯಿಂದ ಯಾಕೆ ಕೇಬಲ್ ಎಳೆಯುತ್ತೀಯಾ? ಎಂದು ನಮ್ಮನ್ನು ಹೀನಮಾನವಾಗಿ ಬೈಯುತ್ತಾ, ಅವರನ್ನು ಮನೆಯಲ್ಲಿ ಇರಲು ಬಿಡುವುದಿಲ್ಲ ಎಂದು ತುಂಬಾ ಅವಾಚ್ಯ ಪದಗಳಿಂದ ಬೈಯುತ್ತಿದ್ದಾಗ ನಾನು ನಮ್ಮ ಮನೆಯ ಮುಂದೆ ನಿಂತಿದ್ದು ಯಾಕೆ ಈ ರೀತಿ ನಮ್ಮ ಜೊತೆ ಗಲಾಟೆಗೆ ಬರುತ್ತೀರಿ ಎಂದು ಕೇಳಿದ್ದಕ್ಕೆ ಬಸವರಾಜು ಏಕಾಏಕಿ ನನ್ನ ಬಳಿ ಬಂದು ಕೈ ಯಿಂದ ನನ್ನ ಬಲ ಕಪಾಳಕ್ಕೆ ಹೊಡೆದನು, ಅಷ್ಟಕ್ಕೆ ಮನೆಯಲ್ಲಿದ್ದ ಬಸವರಾಜುವಿನ ಮಗ ಮಂಜು, ಬಸವರಾಜುವಿನ ಹೆಂಡತಿ ಭಾಗ್ಯ ರವರುಗಳು ನನ್ನ ಜೊತೆ ಗಲಾಟೆಗೆ ಬಂದು ಇಬ್ಬರು ನನ್ನನ್ನು ಬಾಯಿಗೆ ಬಂದಂತೆ ಹೀನಮಾನವಾಗಿ ಬೈಯುತ್ತಾ ಮಂಜು ಕೈಯಿಂದ ನನ್ನ ಬೆನ್ನಿಗೆ ಗುದ್ದಿ ನಿನ್ನನ್ನು ಸಾರ್ವಜನಿಕವಾಗಿ ಅವಮಾನ ಮಾಡುತ್ತೇನೆಂದು ಹೇಳುತ್ತಾ ನಾನು ಹಾಕಿದ್ದ ನೈಟಿಯನ್ನು ಹಿಡಿದು ಎಳೆದಾಡಿ ಹರಿದು ಹಾಕಿದನು ಹಾಗೂ ಭಾಗ್ಯ ನನ್ನ ಮುಂದಲೆ ಜುಟ್ಟನ್ನು ಹಿಡಿದುಕೊಂಡು ಎಳೆದಾಡಿದಳು ಅಷ್ಟಕ್ಕೆ ನನ್ನ ಅಣ್ಣ ನಂಜುಂಡಸ್ವಾಮಿ ಹಾಗೂ ನನ್ನ ತಾಯಿ ಚಿಕ್ಕತಾಯಮ್ಮರವರು ಬಂದು ಅವರಿಂದ ಜಗಳ ಬಿಡಿಸಿದರು, ಗಲಾಟೆ ಸಮಯದಲ್ಲಿ ನಾನು ಕತ್ತಿಗೆ ಹಾಕಿದ್ದ ಚಿನ್ನದ ತಾಳಿ ಗುಂಡುಗಳ ಸರ ಕಿತ್ತು ಹೋಗಿರುತ್ತದೆ ನಂತರ ಹೋಗುವಾಗ ಬಸವರಾಜು ನೀವುಗಳು ಆ ಮನೆಯಲ್ಲಿ ಹೇಗೆ ಇರುತ್ತಿರೋ ನೋಡಿಕೊಳ್ಳುತ್ತೇನೆ ಮನೆಗೆ ಬೆಂಕಿ ಹಚ್ಚಿ ನಿಮ್ಮನ್ನು ಓಡಿಸುತ್ತೇನೆಂದು ಬೆದರಿಕೆ ಹಾಕಿದನು ನೆನ್ನೆ ದಿನ ಬಸ್ ಸೌಲಭ್ಯವಿಲ್ಲದ ಕಾರಣ, ಈ ದಿನ ಸ್ಟೇಷನ್ಗೆ ಬಂದು ದೂರು ನೀಡುತ್ತಿದ್ದು ನನ್ನ ಜೊತೆ ಗಲಾಟೆ ಮಾಡಿ, ಮಾನಭಂಗ ಮಾಡಲು ಯತ್ನಿಸಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ. ವ. ವರದಿ.

3. ಚಾಮರಾಜನಗರ ಗ್ರಾಮಾಂತರ ಠಾಣೆ (ಮೊ,ನಂ 33/2020) ಚಾ-ನಗರ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುವಾಗಿ ಚಿಕಿತ್ಸೆ ಪಡೆಯುತ್ತಿದ್ದ ಹರೀಶ್ ರವರು ವೈದ್ಯರ ಸಮಕ್ಷಮದಲ್ಲಿ ಚಾಮರಾಜನಗರ ತಾ|| ಬೊಕ್ಕೆಪುರ ಗ್ರಾಮದ ಹತ್ತಿರವಿರುವ ಸ. ನಂ. 23 ರಲ್ಲಿ ರಾಗಿಕಲ್ಲು ಗುಡ್ಡದಲ್ಲಿರುವ ವೈದ್ಯಲಿಂಗೇಶ್ವರ ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರದ ವತಿಯಿಂದ ವಿದ್ಯುತ್ ಲೈನ್ ಅನ್ನು ಎಳೆಯಲು ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಆದ ಚಾ-ನಗರದ ಮುರಳಿರವರು ವಹಿಸಿಕೊಂಡಿದ್ದು, ದಿನಾಂಕ: 23/03/2020 ರಂದು ಬೆಳಿಗ್ಗೆ ಮುರಳಿರವರು ವಿದ್ಯುತ್ ಕಂಬಗಳನ್ನು ನೆಡಲು ಆಳುಗಳನ್ನು ಕಳುಹಿಸಿದ್ದು, ಆಳುಗಳು ಕೆಲಸ ಮಾಡುತ್ತಿದ್ದಾಗ ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದುದಾರರು ತಮ್ಮ ಬಾಬ್ತು ಕೆಎ-10-ಟಿ-9982/ಕೆಎ-10-ಟಿ-702 ಟ್ರಾಕ್ಟರ್ ಹಾಗೂ ಟ್ರೈಲರ್ ನಲ್ಲಿ ಕಂಬಗಳನ್ನು ನೆಡುವ ಸಲುವಾಗಿ ಹಳ್ಳ ತೋಡಿರುವ ಜಾಗಕ್ಕೆ ಡಂಪ್ ಮಾಡುತ್ತಿದ್ದಾಗ ಚಾ-ನಗರ ಟೌನ್ ವಾಸಿ ಡಿ. ಸುರೇಂದ್ರ ಕುಮಾರ್, ಜಕಾವುಲ್ಲಾ, ನಕುಲ್ ಹಾಗೂ ಸುರೇಂದ್ರ ಕುಮಾರ್ ಕೆಲಸ ಮಾಡುತ್ತಿರುವ ಸುಮಾರು 20 ಜನ ಆಳುಗಳು ಬಂದರು, ಸುರೇಂದ್ರ ಕುಮಾರ್ ಈ ಜಾಗ ನಮಗೆ ಸೇರಿದ್ದು, ಇಲ್ಲೇಕೆ ಕಂಬಗಳನ್ನು ನೆಟ್ಟಿದ್ದೀರಿ ಎಂದು ನನ್ನ ಮೇಲೆ ಜಗಳ ತೆಗೆದು ಸುರೇಂದ್ರ ಕುಮಾರ್, ಜಕಾವುಲ್ಲಾ, ನಕುಲ್ ಹಾಗೂ ಇತರರು ಬೋಳಿಮಗನೇ, ಸೂಳೆಮಗನೇ ಎಂದು ಬೈಯುತ್ತಾ ತಬ್ಬಿ ಹಿಡಿದು ಕೆಳಕ್ಕೆ ಕೆಡವಿಕೊಂಡು ಕೈಯಿಂದ ಹೊಡೆದು, ಕಾಲುಗಳಿಂದ ತುಳಿದು, ಬೊಲೆರೋ ಕಾರಿನಲ್ಲಿ ಕೂರಿಸಿಕೊಂಡು ಎಣ್ಣೆಹೊಳೆ ದೇವಸ್ಥಾನದ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ನನಗೆ ಕೈಯಿಂದ ಹೊಡೆದು ಎದೆಗೆ, ತಲೆಗೆ ಪೆಟ್ಟಾಗಿದ್ದು, ಅದೇ ಕಾರಿನಲ್ಲಿ ಅವರ ಮನೆ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿಂದ ಚಾ-ನಗರ ಗ್ರಾಮಾಂತರ ಪೊಲೀಸ್ ಠಾಣೆಯ ಹತ್ತಿರ ಬಿಟ್ಟು, ನೀನೇನಾದರೂ ಮತ್ತೆ ಕಂಬಗಳನ್ನು ನೆಡಲು ಯತ್ನಿಸಿದರೆ ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಸ್ಥಳದಲ್ಲೇ ಕೊಲೆ ಬೆದರಿಕೆ ಹಾಕಿರುತ್ತಾರೆ, ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ಹೇಳಿಕೆಯ ದೂರಿನ ಮೇರೆಗೆ ಈ ಪ್ರ.ವ. ವರದಿ.

4. ಚಾಮರಾಜನಗರ ಪೂರ್ವ ಠಾಣೆ (ಮೊ,ನಂ 55/2020) ಪಿಎಸ್ಐರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದೊಡ್ಡರಾಯಪೇಟೆ ಗ್ರಾಮದ ಪರಿಶಿಷ್ಟರ ಬೀದಿಯ ಚಿಕ್ಕಣ್ಣ ಎಂಬುವರ ಮನೆಯ ಹತ್ತಿರ ಹೋಗಿ ನೋಡಲಾಗಿ ಸಾರ್ವಜನಿಕ ರಸ್ತೆಯಲ್ಲಿ ವಿದ್ಯುತ್ ದೀಪದ ಕೆಳಗೆ ಕೆಲವು ಆಸಾಮಿಗಳು ವೃತ್ತಾಕಾರವಾಗಿ ಕುಳಿತುಕೊಂಡು ನೆಲದ ಮೇಲೆ ಪ್ಲಾಸ್ಟಿಕ್ ಚೀಲವನ್ನು ಹಾಸಿಕೊಂಡಿದ್ದು ಒಬ್ಬ ಆಸಾಮಿಯು ಇಸ್ಪೀಟ್ ಎಲೆ ಹಿಡಿದುಕೊಂಡು ಹಿಂದೆ ಮುಂದೆ ಹಾಕುತ್ತಾ ರಾಜ 100/- ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿಯು 100/_ ರೂ ಬಾಹರ್ ಎಂದು ಹೇಳುತ್ತಿದ್ದುದು ಕಂಡು ಬಂದಿದ್ದರಿಂದ ಆಸಾಮಿಗಳನ್ನು ಸುತ್ತುವರಿದು ತಡೆ ಹಿಡಿದು ನೋಡಲಾಗಿ ಪ್ಲಾಸ್ಟಿಕ್ ಚೀಲದ ಮೇಲೆ ಇಸ್ಪೀಟ್ ಎಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಹಣವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನಂತರ ಅಸಾಮಿಗಳನ್ನು ಹೆಸರು ವಿಳಾಸ ಕೇಳಿ ಪಂಚರ ಹಾಗೂ ಸಿಬ್ಬಂದಿಗಳ ಸಮೇತ ಆಸಾಮಿಗಳನ್ನು ಸುತ್ತುವರಿದು ಹಿಡಿದು ವಶಕ್ಕೆ ತಗೆದುಕೊಂಡು ಠಾಣೆಗೆ ಬಂದು ವರದಿ ತಯಾರಿಸಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲು ಮಾಡಿರುತ್ತೇನೆ

5. ಚಾಮರಾಜನಗರ ಪೂರ್ವ ಠಾಣೆ (ಮೊ,ನಂ 56/2020) ಪಿಯರ್ಾದಿಯವರು ನಲ್ಲೂರು ಮೋಳೆ ಗ್ರಾಮದ ಕಡೆಯಲ್ಲಿ ಗಸ್ತಿನಲ್ಲಿದ್ದಾಗ ನನಗೆ ಹೊಂಗನೂರು ಗ್ರಾಮದ ಪರಿಶಿಷ್ಟ ಜನಾಂಗದ ಬೀದಿಯಲ್ಲಿರುವ ಅರೆಕಲ್ಲು ಬೀದಿಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ವಿದ್ಯುತ್ ಲೈಟ್ ಬೆಳಕಿನಲ್ಲಿ ಕೆಲವು ಆಸಾಮಿ ಗಳು ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಜೂಜಾಟ ಆಡುತ್ತಿದ್ದಾರೆಂದು ಭಾತ್ಮೀದಾರರಿಂದ ಖಚಿತ ಮಾಹಿತಿ ಬಂದಿದ್ದು. ಕೂಡಲೇ ಈ ಮಾಹಿತಿಯನ್ನು ಸಿಬ್ಬಂದಿಗೆ ತಿಳಿಸಿ ರಾತ್ರಿ 7.15 ಗಂಟೆಯ ಸಮಯದಲ್ಲಿ ಹೊಂಗನೂರು ಗ್ರಾಮದ ಬಸ್ಸ್ ನಿಲ್ದಾಣದ ವಿದ್ಯುತ್ ಲೈಟ್ ಕೆಳಗೆ ಸಾರ್ವಜನಿಕ ರಸ್ತೆಯಲ್ಲಿ ಕೆಲವು ಜನ ಆಸಾಮಿಗಳು ವೃತ್ತಾಕಾರವಾಗಿ ಕುಳಿತುಕೊಂಡಿದ್ದು. ನೆಲದ ಮೇಲೆ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ತಾಟನ್ನು ಹಾಸಿಕೊಂಡಿದ್ದು, ಅವರಲ್ಲಿ ಒಬ್ಬ ಆಸಾಮಿಯು ಇಸ್ಪೀಟ್ ಎಲೆಗಳನ್ನು ಹಿಂದೆ ಮುಂದೆ ಹಾಕುತ್ತ 100/- ರೂ ಅಂದರ್ ಎಂತಲ್ಲೂ ಮತ್ತೊಬ್ಬ 100/- ಬಹರ್, ಎಂತಲು ಒಬ್ಬರು 100 ರೂ ಗೆಲುತ್ತೆ, ಎಂತಲು, ಒಬ್ಬರು 100 ರೂ ಸೋಲುತ್ತೆ ಎಂದು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ವೀಟ್ ಜುಜಾಟವಾಡುತ್ತಿದ್ದಾಗ ಪಂಚರ ಹಾಗೂ ಸಿಬ್ಬಂದಿಗಳ ಸಮೇತ ಆಸಾಮಿಗಳನ್ನು ಸುತ್ತುವರಿದು ಹಿಡಿದು ವಶಕ್ಕೆ ತಗೆದುಕೊಂಡು ಠಾಣೆಗೆ ಬಂದು ವರದಿ ತಯಾರಿಸಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲು ಮಾಡಿರುತ್ತೇನೆ.

6. ಕುದೇರು ಠಾಣೆ (ಮೊ ನಂ 20/2020) ಫಿರ್ಯಾದಿ ಮಹದೇವಚಿ್ಯು ಉಮ್ಮತ್ತೂರು ಗ್ರಾಮರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಜಾಗದ ವಿಚಾರದಲ್ಲಿ ಅವರ ತಮ್ಮ ಪುಟ್ಟಸ್ವಾಮಿಯ ಹೆಂಡತಿ ನಾಗಮಣಿ@ಮಾಯಮ್ಮ ಎಂಬುವವಳು ನನ್ನ ಹೆಂಡತಿ ಜೊತೆ ಜಗಳ ತೆಗೆದು ಬೈಯ್ಯುತ್ತಿದ್ದಾಗ ಯಾಕೆ ಈ ರೀತಿ ಬೈಯ್ಯುತ್ತಿಯಾ ಎಂದು ಕೇಳಿದ್ದಕ್ಕೆ ನನ್ನ ತಮ್ಮ ಪುಟ್ಟಸ್ವಾಮಿ ನನ್ನನ್ನು ತಡೆದು ನನ್ನ ಎದೆಪಟ್ಟಿಯನ್ನು ಹಿಡಿದು ತನ್ನ ಬಲಗೈಯಿಂದ ನನ್ನ ಬೆನ್ನಿಗೆ ಹೊಡೆದನು ಅಷ್ಟಕ್ಕೆ ನನ್ನ ಹೆಂಡತಿ ಮಹದೇವಮ್ಮ ಜಗಳ ಬಿಡಿಸಲು ಬಂದಾಗ ನಾಗಮಣಿ ಒಂದು ಸೌದೆ ಸೀಳು ದೊಣ್ಣೆಯಿಂದ ನನ್ನ ಹೆಂಡತಿ ತಲೆಗೆ ಹೊಡೆದು ರಕ್ತಗಾಯಪಡಿಸಿದಳು. ಅಷ್ಟಕ್ಕೆ ನಮ್ಮ ಬೀದಿಯ ಸಿದ್ದಬಸವಯ್ಯ ಬಂದು ಜಗಳ ಬಿಡಿಸುತ್ತಿದ್ದಾಗ ನನ್ನ ತಮ್ಮನ ಮಗ ನಾಗೇಶ ನಮ್ಮನ್ನು ಉದ್ದೇಶಿಸಿ ಈ ಸೂಳೆಮಕ್ಕಳನ್ನು ಬಿಡಬಾರದು ಮುಗಿಸಿಬಿಡಬೇಕೆಂದು ಕೊಲೆಬೆದರಿಕೆ ಹಾಕಿದನು. ನಂತರ ನಾನು ನನ್ನ ಹೆಂಡತಿಯನ್ನು ಕುದೇರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ನಂತರ ಠಾಣೆಗೆ ಬಂದು ದೂರು ನೀಡುತ್ತಿದ್ದು ಮೇಲ್ಕಂಡವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.

7 ಗುಂಡ್ಲುಪೇಟೆ ಠಾಣೆ (ಮೊ ನಂ 118/2020) ಪಿರ್ಯಾದಿಯವರದ ಪಿಎಸ್ಐ ರವರು ಸಿಬ್ಬಂದಿಗಳೊಂದಿಗೆ ಪುರಸಭೆ ವ್ಯಾಪ್ತಿಗೆ ಸೇರಿದ ಹಳೆ ರಂಗಮಂದಿರದ ಖಾಲಿ ನಿವೇಶನದಲ್ಲಿ ನೌಷದ್ ಹಾಗೂ ಇತರರು ದನಗಳನ್ನು ಕಟ್ಟಿಹಾಕಿ ಗಲೀಜು ಮಾಡುತ್ತಿದ್ದ ಬಗ್ಗೆ ದನಗಳನ್ನು ತೆರವುಗೊಳಿಸಲು ನಾನು ಮತ್ತು ಸಿಬ್ಬಂದಿರವರುಗಳು ಹೋಗಿದ್ದರಿಂದ ನೌಷದ್ ಹಾಗೂ ಇತರರು ದನಗಳನ್ನು ಕಸಾಯಿಖಾನೆಗೆ ಸಾಗಾಣಿಕೆ ಮಾಡುವ ಉದ್ದೇಶದಿಂದ ಕಟ್ಟಿ ಹಾಕಿಕೊಂಡಿದ್ದಲ್ಲದೆ, ದನಗಳನ್ನು ಸ್ಥಳಾಂತರಗೊಳಿಸಲು ಮುಂದಾದಾಗ ನೌಷದ್ ಹಾಗೂ ಇತರರು ಗುಂಪುಕಟ್ಟಿಕೊಂಡು ಬಂದು ನಮ್ಮಗಳನ್ನು ತಡೆದು ಕಲ್ಲಿನಿಂದ ಜೀಪ್ ಚಾಲಕ ಕುಮಾರನಿಗೆ ಹೊಡೆದು ನೋವುಂಟು ಮಾಡಿ, ಸಕರ್ಾರಿ ಕೆಲಸ ನಿರ್ವಹಿಸಲು ಅಡ್ಡಿಪಡಿಸಿದ್ದಲ್ಲದೆ, ನಮ್ಮಗಳನ್ನು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ

8 ಗುಂಡ್ಲುಪೇಟೆ ಠಾಣೆ (ಮೊ ನಂ 119/2020) ಪಿರ್ಯಾದಿ ರಾಣಮ್ಮ ಬೊಮ್ಮಲಾಪುರ ಗ್ರಾಮರವರು ನೀಡಿದ ದೂರಿನಲ್ಲಿ ಅವರ ಜೊತೆ ಅದೇ ಗ್ರಾಮದ ಕುನ್ನಮಾದಯ್ಯ, ರತ್ನಮ್ಮ, ಅರಸಮ್ಮರವರುಗಳೂ ತೀಟೆ ಜಗಳ ತೆಗೆದು ದಿನಾಂಕ; 21.03.2020 ರಂದು ಬೆಳಗ್ಗೆ 9.00 ಗಂಟೆ ಸಮಯದಲ್ಲಿ ಪಿರ್ಯಾದುದಾರರನ್ನು ಅಡ್ಡಗಟ್ಟಿ ಕೈಯಿಂದ ಮೈಕೈಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಕೊಟ್ಟ ದೂರಿನ ಮೇರೆಗೆ

9. ಯಳಂದೂರು ಠಾಣೆ ( ಮೊ,ನಂ 29/2020) ಫಿರ್ಯಾದಿ ಪಿಎಸ್ಐರವರು ನೀಡಿದ ವರದಿ ದೂರಿನ ಸಾರಾಂಶವೆನೆಂದರೆ, ಮದ್ದೂರು ಗ್ರಾಮದ ಎಳ್ಳೇಪಿಳ್ಳಾರಿ ದೇವಸ್ಥಾನದ ಭವನದ ಹಿಂಭಾಗ ಸಾರ್ವಜನಿಕ ರಸ್ತೆಯಲ್ಲಿ 1) ಅನಿಲ್ ಬಿನ್ ಮದೇವನಾಯಕ 22 ವರ್ಷ ನಾಯಕ ಜನಾಂಗ. ಓಲಗಬೀದಿ, ನಾಯಕ ಬೀದಿ, ಅಗರ ಗ್ರಾಮ. ಯಳಂದೂರು ತಾಲ್ಲೋಕು. ಎಂಬುದಾಗಿ ಮತ್ತೊಂಬ್ಬ 2) ಸುಂದ್ರ ಬಿನ್ ಕುಂದುರಸ್ವಾಮಿ 27 ವರ್ಷ ನಾಯಕ ಜನಾಂಗ ನೀರಗಟ್ಟಿ ಬೀದಿ ನಾಯಕ ಬೀದಿ, ಅಗರ ಗ್ರಾಮ ಯಳಂದೂರು ತಾಲ್ಲೋಕು. ರವರುಗಳು ಸಾರ್ವಜನಿಕರಿಗೆ ಅಕ್ರಮವಾಗಿ ಸಾರ್ವಜನಿಕ ರಸ್ತೆಯಲ್ಲಿ ಹೋಗಿ ಬರುವವರಿಗೆ ಮದ್ಯಪಾನ ಮಾಡಲು ಅವಕಾಶ ನೀಡುತ್ತಿದುದ್ದು ದೃಡಪಟ್ಟ ಮೇರೆಗೆ ಇ ಆಸಾಮಿಯನ್ನು ಮಾಲು ಸಮೇತ ಠಾಣಾಧಿಕಾರಿಗಳಿಗೆ ನೀಡಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿ ಮೇರೆಗೆ.


Your Comment

Name :
Email:
Comment:
Submit

Website Designed and Developed by Global Buzz®