• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 22-03-2020

No of views : 19       No of Comments : 0

1. ಸಂತೇಮರಳ್ಳಿ ಠಾಣೆ (ಮೊ,ನಂ 12/2020) ದಿ: 22-03-2020 ರಂದು ಬೆಳಗ್ಗೆ 10-45 ಗಂಟೆ ಸಮಯದಲ್ಲಿ ಕೆಂಪನಪುರ ಗ್ರಾಮದಲ್ಲಿ ಮಾರಮ್ಮನ ದೇವಸ್ಥಾನದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಅಂದರ್- ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರನ್ನು ಪಿರ್ಯಾದುದಾರರು ಸಿಬ್ಬಂದಿಗಳೊಂದಿಗೆ ಸುತ್ತುವರೆದು ಹಿಡಿದು ಅಖಾಡದಲ್ಲಿ ಹಾಗೂ ಆಸಾಮಿಗಳ ಬಳಿ ದೊರೆತ ಒಟ್ಟು ನಗದು 1850-00 ಹಾಗೂ 52 ಇಸ್ಪೀಟ್ ಎಲೆಗಳು ಒಂದು ಪ್ಲಾಸ್ಟಿಕ್ ಮಂದಲಿಗೆಯನ್ನು ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ವರದಿ ನೀಡಿದ ಮೇರೆಗೆ ಠಾಣಾ ಜಿ.ಎಸ್.ಸಿ. ನಂ.60/2020 ರಲ್ಲಿ ನಮೂದು ಮಾಡಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಯಾವುದೇ ರಹದಾರಿಯಿಲ್ಲದೆ ಇಸ್ಪೀಟು ಜೂಜಾಟವಾಡುತ್ತಿದ್ದ ಆಸಾಮಿಗಳ ವಿರುದ್ದ ಕಲಂ: 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡುವಂತೆ ಘನ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿಕೊಂಡಿದ್ದು, ಘನ ನ್ಯಾಯಾಲಯ ಅನುಮತಿಯನ್ನು ನೀಡಿದ್ದರ ಮೇರೆಗೆ ಠಾಣಾ ಮೊ. ನಂ. 12/2020 ಕಲಂ: 87 ಕೆ. ಪಿ. ಆಕ್ಟ್ ರೀತ್ಯಾ ಕೇಸು ದಾಖಲಿಸಿರುತ್ತೆ.

2. ಕುದೇರು ಠಾಣೆ (ಮೊ,ನಂ 18/2020) ಫಿರ್ಯಾದಿ ಮಹಾಲಿಂಗ ಹೆಗ್ಗವಾಡಿ ಗಾಮರವರು ನೀಡಿದ ದೂರಿನಲ್ಲಿ ಯವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನೆನ್ನೆ ದಿನಾಂಕ:21.03.2020 ರಂದು ನಮ್ಮ ಗ್ರಾಮದ ಶ್ರೀ.ಚೌಡೇಶ್ವರಿ(ರಾಕಸಮ್ಮನ ದೇವರ ಪೂಜಾ ಕಾರ್ಯಕ್ರಮವಿದ್ದು ಆ ಕಾರ್ಯಕ್ರಮದ ಉಸ್ತುವಾರಿಯನ್ನು ನಾನು ನೋಡಿಕೊಳ್ಳುತ್ತಿದ್ದೆ. ಈ ದಿನ ದಿನಾಂಕ:22.03.2020 ರಂದು ಮುಂಜಾನೆ ಸುಮಾರು 2:15 ಗಂಟೆ ಸಮಯದಲ್ಲಿ ದೇವಸ್ಥಾನದ ಮುಂದೆ ಇದ್ದಾಗ ನಮ್ಮ ಬೀದಿಯ ಮಹೇಶರವರ ಮಗ ಮಂಜುನಾಥ ಎಂಬುವವನು ಹಳೇ ದ್ವೇಷದಿಂದ ನನ್ನನ್ನು ಏಕಾಏಕಿ ಅಡ್ಡಗಟ್ಟಿ ತಡೆದು ಕುತ್ತಿಗೆಪಟ್ಟಿಯನ್ನು ಹಿಡಿದುಕೊಂಡು ಕೆಳಕ್ಕೆ ಬೀಳಿಸಿ ತನ್ನ ಬಲಗೈಯಿಂದ ನನ್ನ ಎದೆಯ ಮೇಲೆ, ಎಡಗಣ್ಣು, ಎಡಗೆನ್ನೆ, ತುಟಿ ಮತ್ತು ಎಡಕಿವಿಗೆ ಜೋರಾಗಿ ಹೊಡೆದನು. ನಂತರ ನನ್ನನ್ನು ಸೂಳೆಮಗನೆ, ಬೋಳಿಮಗನೆ ಎಂದು ಬೈದು ಅಲ್ಲೆ ಪಕ್ಕದಲ್ಲಿ ಬಿದ್ದಿದ್ದ ಒಂದು ರೀಪಿಸ್ ಪಟ್ಟಿಯನ್ನು ತೆಗೆದುಕೊಂಡು ನನ್ನ ಎಡಭಾಗದ ಕೆನ್ನೆಯ ಹ್ತತಿರ ರಕ್ತಗಾಯವಾಯಿತು. ಅಷ್ಟಕ್ಕೆ ನಮ್ಮ ಗ್ರಾಮದ ಯಜಮಾನರಾದ ನಾಗಯ್ಯ ಬಿನ್ ಲೇ.ಚೌಡಯ್ಯ ಬಂದು ಜಗಳಬಿಡಿಸಿ ಸಮಾಧಾನ ಪಡಿಸುತ್ತಿದ್ದಾಗ ತನ್ನ ಬಳಿ ಇದ್ದ ಒಂದು ಮಚ್ಚನ್ನು ಕೈಯಲ್ಲಿ ಹಿಡಿದು ಬೋಳಿಮಗನೆ, ಈ ದಿನ ತಪ್ಪಿಸಿಕೊಂಡೆ ಮುಂದೊಂದು ದಿನ ಸಿಕ್ಕು ಇದೇ ಮಚ್ಚಿನಿಂದ ನಿನ್ನನ್ನು ಕತ್ತರಿಸಿ ಕೊಲೆ ಮಾಡಿ ನಿನ್ನ ಬಾಡಿಯನ್ನು ಕಮರವಾಡಿ ಚಾನೆಲ್ಗೆ ಹಾಕುತ್ತೇನೆಂದು ಕೊಲೆ ಬೆದರಿಕೆ ಹಾಕಿ ಹೋದನು. ನಂತರ ನಮ್ಮ ಅಣ್ಣ ಮಹೇಶರವರು ವಿಚಾರ ತಿಳಿದು ಸ್ಥಳಕ್ಕೆ ಬಂದು ನನ್ನನ್ನು ತಮ್ಮ ಬೈಕಿನಲ್ಲಿ ಚಾಮರಾಜನಗರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ನಾನು ಚಿಕಿತ್ಸೆ ಪಡೆದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಮಂಜುನಾಥನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇದ್ದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.

 3. ಕುದೇರು ಠಾಣೆ (ಮೊ,ನಂ 19/2020) ಈ ದಿನ ದಿನಾಂಕ;-22-03-2020 ರಂದು ಸಂಜೆ ಜನತಾ ಕಪ್ಯರ್ೂ ಸಂಬಂಧ ಸಿಬ್ಬಂದಿಗಳಾದ ಎ.ಎಸ್.ಐ ರಂಗನಾಥ, ಹೆಚ್.ಸಿ-242, ಪಿ.ಸಿ-320, ಪಿ.ಸಿ-159, ಪಿ.ಸಿ-574 ರವರ ಜೊತೆ ಕುದೇರು, ಬಡಗಲಮೋಳೆ, ಹೆಗ್ಗವಾಡಿ, ದೇಮಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ 6:00 ಗಂಟೆ ಸಮಯದಲ್ಲಿ ಮೂಡಲ ಅಗ್ರಹಾರ ಗ್ರಾಮದಲ್ಲಿದ್ದಾಗ ಸುಧಾರಿತ ಗ್ರಾಮಗಸ್ತು ಸಂಖ್ಯೆ-15 ಕ್ಕೆ ಸೇರಿದ ಸಿಬ್ಬಂದಿ ಪಿ.ಸಿ-574 ಶಿವಮೂತರ್ಿರವರಿಗೆ ದೊರೆತ ಮಾಹಿತಿಯನ್ನು ಆಧರಿಸಿ ಪಂಚರುಗಳು ಹಾಗು ಸಿಬ್ಬಂದಿಗಳನ್ನು ಕರೆದುಕೊಂಡು ಸಂಜೆ 6:20 ಗಂಟೆ ಸಮಯದಲ್ಲಿ ಉಮ್ಮತ್ತೂರು ಗ್ರಾಮಕ್ಕೆ ಹೋಗಿ ಸ್ಥಳಕ್ಕೆ ಸ್ವಲ್ಪ ದೂರದಲ್ಲಿ ನೋಡಲಾಗಿ ನಾಯಕರ ಬೀದಿ ಮತ್ತು ಪ.ಜನಾಂಗದ ಬೀದಿಗೆ ಹೋಗುವ ಜಂಕ್ಷನ್ ಹತ್ತಿರ ಇರುವ ಅರಳಿಮರದ ಕೆಳಗೆ, ಸಾರ್ವಜನಿಕ ಸ್ಥಳದಲ್ಲಿ, ಒಬ್ಬ ಆಸಾಮಿಯು ತನ್ನ ಬಳಿ ಮದ್ಯವನ್ನು ಇಟ್ಟುಕೊಂಡು ಗಿರಾಕಿಗಳಿಗೆ ಮದ್ಯಸೇವನೆ ಮಾಡಲು ಸ್ಥಳಾವಕಾಶವನ್ನು ನೀಡಿರುವುದು ಕಂಡು ಬಂದಿದ್ದರಿಂದ ನಂತರ ಅವನನ್ನು ಸಿಬ್ಬಂದಿಗಳ ಸಹಾಯದಿಂದ ಪಂಚರ ಸಮಕ್ಷಮ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಮದ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದಾದರೂ ರಹದಾರಿ ಇದೆಯೇ? ಎಂದು ಕೇಳಿದ್ದಕ್ಕೆ ಯಾವುದೂ ರಹದಾರಿ ಇಲ್ಲ ಎಂದು ತಿಳಿಸಿದಾಗ ಸ್ಥಳದಲ್ಲಿ ಸಂಜೆ 6:30 ಗಂಟೆಯಿಂದ 7:15 ಗಂಟೆವರೆಗೆ ಇಲಾಖಾ ಜೀಪ್ನ ಹೆಡ್ ಲೈಟ್ ಬೆಳಕು ಮತ್ತು ಮೊಬೈಲ್ ಟಾಚರ್್ನ ಸಹಾಯದಿಂದ ಮಹಜರ್ ಕ್ರಮ ಕೈಗೊಂಡು ಮಾಲು ಮತ್ತು ಆಸಾಮಿಯ ಜೊತೆ ಠಾಣೆಗೆ ಬಂದು ವರದಿ ತಯಾರಿಸಿ ಸಂಜೆ 8:00 ಗಂಟೆಗೆ ಪ್ರಕರಣ ದಾಖಲಿಸಿದ ಮೇರೆಗೆ ಈ ಪ್ರ.ವ.ವರದಿ.

4. ಗುಂಡ್ಲುಪೇಟೆ ಠಾಣೆ (ಮೊ,ನಂ 114/2020) ಪಿರ್ಯಾದಿ ಲಕ್ಷ್ಮೀ ಗುಂಡ್ಲುಪೇಟೆ ಟೌನ್ರವರು ಈಗ್ಗೆ 16 ವರ್ಷಗಳ ಹಿಂದೆ ಅದೇ ಬೀದಿಯ ಸಿದ್ದರಾಜು ಎಂಬುವವರನ್ನು ಮದುವೆಯಾಗಿದ್ದು ಇಬ್ಬರು ಮಕ್ಕಳು ಇರುತ್ತಾರೆ. ಆರೋಪಿಯು ಪ್ರತಿ ದಿನ ಕುಡಿದು ಬಂದು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದು ನೆನ್ನೆ ದಿನ ದಿನಾಂಕ; 21.03.2020 ರಂದು ರಾತ್ರಿ 11.00 ಗಂಟೆ ಸಮಯದಲ್ಲಿ ಬಾಗಿಲನ್ನು ಕಲ್ಲಿನಿಂದ ಹೊಡೆದು ಹಾಕಿ, ಕೇಳಲು ಹೋದ ಪಿರ್ಯಾದುದಾರರಿಗೂ ಕಲ್ಲಿನಿಂದ ಹೊಡೆದಿದ್ದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ.

5. ಗುಂಡ್ಲುಪೇಟೆ ಠಾಣೆ (ಮೊ ನಂ 115/2020) ದಿನಾಂಕ: 22.03.2020 ರಂದು ಬೆಳಿಗ್ಗೆ 11.20 ಗಂಟೆ ಸಮಯದಲ್ಲಿ ಪಿರ್ಯಾದಿ ರಾಜಪ್ಪ ಗೋಪಾಲಪುರ ಗ್ರಾಮರವರು ನೀಡಿದ ದೂರಿನಲ್ಲಿ ಅವರು ಕಬ್ಬಿಣ ಕೋಲೇಶ್ವರ ಮಠದಲ್ಲಿ ಇದ್ದಾಗ ಮೇಲ್ಕಂಡ ಅದೇ ಗ್ರಾಮದ ಆರೋಪಿಗಳಾದ ಸಿದ್ದರಾಜಪ್ಪ, ಜಿ.ಬಿ ಮಂಜುನಾಥ, ಜಿ.ಪಿ ಗವಿಯಪ್ಪ, ಜಿ.ಚೇತನ್, ಜಿ.ಬಿ ಪ್ರಶಾಂತ, ಜಿ.ಬಿ ಗುರುಪ್ರಸಾದ್ ಸಿ. ಚನ್ನಪ್ಪ ವಗುಂಪುಕಟ್ಟಿಕೊಂಡು ಬಂದು ಪಿರ್ಯಾಧಿ ರಾಜಪ್ಪ ರವರ ಕುತ್ತಿಗೆ ಪಟ್ಟಿ ಹಿಡಿದು ಬನ್ನಿಗುಂಟೆಯಿಂದ ಬಲಗೈಗೆ ಹೊಡೆದು ನೋವುಂಟು ಮಾಡಿ ಉಳೀದ ಆರೋಪಿಗಳೆಲ್ಲರು ಎಲ್ಲರೂ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

6. ಗುಂಡ್ಲುಪೇಟೆ ಠಾಣೆ (ಮೊ ನಂ 116/2020) ದಿ: 22.03.2020 ರಂದು ಬೆಳಿಗ್ಗೆ 11.30 ಗಂಟೆಯಲ್ಲಿ ಪಿರ್ಯಾದಿ ಗೋಪಾಲಪುರ ಗ್ರಾಮದ ಸಿದ್ದರಾಜಪ್ಪರ ವರು ನೀಡಿದ ದೂರಿನಲ್ಲಿ ಅವರು ಮತ್ತು ಅವರ ಸಂಬಂಧಿ ಸಿದ್ದಪ್ಪ, ಮದೇಶ ಎಂಬುವರ ಮೇಲೆ ಮಠದ ಜಮೀನು ವಿಚಾರ ಸಂಬಂಧ ಮಹದೇವಪ್ಪ, ಬಸವರಾಜು, ರಾಜಶೇಖರ್, ಮಂಜುನಾಥ, ಮಹದೇವಸ್ವಾಮಿ, ರಾಜಪ್ಪ, ಬಸಪ್ಪರವರುಗಳು ಅವ್ಯಾಚ್ಚ ಶಬ್ದಗಳಿಂದ ಬೈದು ಹಲ್ಲೆ ನಂತರ ಒಂದು ಮಚ್ಚಿನಿಂದ ಹೊಡೆದಿರುವ ಬಗ್ಗೆ ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

7. ಗುಂಡ್ಲುಪೇಟೆ ಠಾಣೆ (ಮೊ ನಂ 117/2020) ದಿನಾಂಕ: 22.03.2020 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ನಾನು ನಮ್ಮೂರಿನ ಮಠದ ಬಳಿ ಬರುತ್ತಿದ್ದಾಗ ಮೇಲ್ಕಂಡ ಆರೋಪಿಗಳು ಗುಂಪುಕಟ್ಟಿಕೊಂಡು ಬಂದು ಕತ್ತಿ ಪಟ್ಟಿ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು, ಕಪಾಲಕ್ಕೆ ಹೊಡೆದು ದೊಣ್ಣೆಯಿಂದ ತಲೆಗೆ ಹೊಡೆದು ನೋವುಂಟು ಮಾಡಿ ಕೆಳಕ್ಕೆ ಕಡೆವಿ ನೋವುಂಟು ಮಾಡಿರುತ್ತಾರೆ ಇದಕ್ಕೆ ಲೋಕೇಶ ಎಂಬುವನು ಕುಮ್ಮಕ್ಕು ನೀಡುತ್ತಿದ್ದನು, ನಂತರ ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಮಲ್ಲಿಗಾ ಹಾಗೂ ಮಗಳಾದ ನೇತ್ರ ರವರಿಗೆ ದೊಣ್ಣೆಯಿಂದ ಹೊಡೆದು ನೇತ್ರಾಳ ಜುಟ್ಟು ಹಿಡಿದು ಎಳೆದಾಡಿ ಕಾಲಿನಿಂದ ಹೊದ್ದು ನೋವುಂಟು ಮಾಡಿದ್ದು ಆಗ ಅಕ್ಕಪಕ್ಕದವರು ಜಗಳ ಬಿಡಿಸಿದಾಗ ಈ ದಿನ ನೀವು ತಪ್ಪಿಸಿಕೊಂಡಿದ್ದೀರಿ ಇನ್ನೊಂದು ದಿನ ಸಿಕ್ಕಿ ನಿಮ್ಮನ್ನು ಸಾಯಿಸುತ್ತೇವೆಂದು ಕೊಲೆ ಬೆದರಿಕೆ ಹಾಕಿ ನಂತರ ಗಾಯಗೊಂಡಿದ್ದ ನಾವು ಗುಂಡ್ಲುಪೇಟೆ ಸಕರ್ಾರಿ ಆಸ್ಪತ್ರೆಗೆ ಬಂದು ಚಿತ್ಸೆಗೆ ದಾಖಲಾಗಿ ಈಗ ಬಂದು ದೂರು ನೀಡುತ್ತಿದ್ದ ಮೇಲ್ಕಂಡ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಿನ ಮೇರೆಗೆ ಪ್ರ ವ ವರದಿ

8. ಯಳಂದೂರು ಠಾಣೆ (ಮೊ ನಂ 28/2020) ಪಿಎಸ್ಐರವರು ಗಸ್ತಿಯನಲ್ಲಿ ಇದ್ದಾಗ ಬಂದ ಮಾಹಿತಿ ಮೇರೆಗೆ , ಹೊನ್ನೂರು ಗ್ರಾಮದ ಅಂಬೇಡ್ಕರ್ ಬೀದಿ ಶ್ರೀ ರಾವಳೇಶ್ವರ ದೇವಸ್ಥಾನದ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ಅಸಾಮಿಯು ಅಕ್ರಮವಾಗಿ ಮದ್ಯದ ಪೌಚ್ಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ಜನರನ್ನು ಕೂಗಿ ಕರೆಯುತ್ತಾ ಮಧ್ಯದ ಪೌಚ್ಗಳನ್ನು ನೀಡಿ ಮದ್ಯಪಾನ ಮಾಡಲು ಅವಕಾಶ ನೀಡುತ್ತಿದುದ್ದು ದೃಡಪಟ್ಟ ಮೇರೆಗೆ ಅಸಾಮಿಯನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ಮಾಲುಗಳನ್ನು ಸ್ಥಳದಲ್ಲಿ ಪಂಚರ ಸಮಕ್ಷಮ ವರದಿಯೊಂದಿಗೆ ಆಸಾಮಿಯನ್ನು ಮಾಲು ಸಮೇತ ಠಾಣಾಧಿಕಾರಿಗಳಿಗೆ ನೀಡಿ ಮುಂದಿನ ಕ್ರಮಕ್ಕಾಗಿ ಸೂಚಿಸಿರುತ್ತೇನೆಂದು ನೀಡಿದ ವರದಿ ದೂರಿನ ಮೇರೆಗೆ ಈ ಪ್ರ ವ ವರದಿ.

9. ಕೊಳ್ಳೇಗಾಲ ಗ್ರಾಮಾಂತರ ಠಾಣೆ ( ಮೊ,ನಂ 65/2020) ಪಿರ್ಯಾದಿ ಮಂಚಯ್ಯ ಸತ್ತೇಗಾಲ ಗ್ರಾಮರವರು ನೀಡಿದ ದೂರಿನಲ್ಲಿ ಅವರ ಮಗ ಶಿವಮಲ್ಲು ವಿಜಯಕುಮಾರನನ್ನು ಕೆಎ-10 ಕ್ಯೂ -5470 ನಂಬರಿನ ಬಜಾಜ್ ಪಲ್ಸರ್ ಮೋಟಾರು ಬೈಕಿನಲ್ಲಿ ಊರಿಗೆ ಬರುತ್ತಿದ್ದಾಗ ಕಂದಸ್ವಾಮಿರವರ ತೋಟದ ಬಳಿ ಬರುತ್ತಿದ್ದಾಗ ಎದುರುಗಡೆಯಿಂದ ಅಂದರೆ ನಮ್ಮೂರಿನ ಕಡೆಯಿಂದ ಬಂದ ಕಾರಿನ ಚಾಲಕ ಕಆರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿಗೊಳಿಸಿ ಕಾರನ್ನು ನಿಲ್ಲಿಸದೆ ಹೊರಟು ಹೋಗಿದ್ದು, ಮೈಸೂರು ಕೆ, ಆರ್, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿರುತ್ತೇವೆ, ನಾನು ಮತ್ತು ವಿಜಯಕುಮಾರನ ತಂದೆ ಇಬ್ಬರೂ ನಮ್ಮ ಮಕ್ಕಳ ಜೊತೆ ಮೈಸೂರಿಗೆ ಹೋಗಿ ಅವರಿಗೆ ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆ, ಸದರಿ ಕಾರು ಚಾಲಕನ ಮೇಲೆ ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಈ ಪ್ರ ವ ವರದಿ.


Your Comment

Name :
Email:
Comment:
Submit

Website Designed and Developed by Global Buzz®