• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 20-03-2020

No of views : 4       No of Comments : 0

1. ಚಾಮರಾಜನಗರ ಸಂಚಾರ ಠಾಣೆ (ಮೊ,ನಂ 26/2020) ಪಿರ್ಯಾದಿ ಸಿದ್ದಯ್ಯ ಅಂಕಹಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ಅವರು ದಿನಾಂಕ:20.03.2020 ರಂದು ಮದ್ಯಾಹ್ನ 3.50 ಗಂಟೆ ಸಮಯದಲ್ಲಿ ಅವರ ಬಾಬ್ತು ಕೆಎ10ಎಸ್-0915 ರ ಮೊಟಾರ್ ಸೈಕಲ್ ನಲ್ಲಿ ಅವರ ವೈಯಕ್ತಿಕ ಕೆಲಸದ ನಿಮಿತ್ತ ಚಾಮರಾಜನಗರಕ್ಕೆ ಬರುತ್ತಿರುವಾಗ, ಚಾಮರಾಜನಗರ ಟೌನ್ ನ ಖಾಸಗಿ ಬಸ್ ನಿಲ್ದಾಣದ ಬಳಿ ಹಳೇ ಆರ್.ಟಿ.ಒ ಆಪೀಸ್ ಗೆ ಹೋಗುವ ರಸ್ತೆಯಲ್ಲಿ ಎದುರುಗಡೆಯಿಂದ ಕೆಎ10ಎ-4330 ರ ಗೂಡ್ಸ್ ವಾಹನದ ಚಾಲಕ ತಮ್ಮ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಒಡಿಸಿಕೊಂಡು ಬಂದು ಪಿರ್ಯಾದಿಯ ಮೊಟಾರ್ ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿಗೆ ಮೂಗು, ಎಡ ಕಣ್ಣಿನ ಹುಬ್ಬು, ಬಲಕೈ, ಎಡಕೈ, ಬಲ ಮಂಡಿಯ ಬಳಿ ರಕ್ತ ಗಾಯವಾಗಿರುತ್ತದೆ. ವಿಚಾರ ತಿಳಿದು ಅಲ್ಲಿಗೆ ಬಂದ ಪಿರ್ಯಾದಿಯ ಸ್ನೇಹಿತ ಕಗ್ಗಳದ ಹುಂಡಿ ಗ್ರಾಮದ ಗಂಗಾಧರರವರು ಪಿರ್ಯಾದಿಯನ್ನು ಸಮಾಧಾನ ಪಡಿಸಿ ಒಂದು ಅಟೋದಲ್ಲಿ ಚಾನಗರ ಜಿಲ್ಲಾಸ್ಪತ್ರೆಗೆ ತಂದು ಸೇರಿಸಿದ್ದು, ಈ ದಿನ ಪಿರ್ಯಾದಿಯು ಅಪಘಾತ ಮಾಡಿ ತಮ್ಮ ವಾಹನವನ್ನು ಅಲ್ಲೆ ಬಿಟ್ಟು ಹೋಗಿರುವ ಕೆಎ10ಎ-4330 ರ ಗೂಡ್ಸ್ ವಾಹನದ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ದೂರಿನ ಮೇರೆಗೆ ಈ ಪ್ರ.ವ.ವರದಿ.

2. ಚಾಮರಾಜನಗರ ಪೂರ್ವ ಠಾಣೆ (ಮೊ,ನಂ 53/2020) ಪಿರ್ಯಾದಿ ರಾಜು ಹರದನಹಳ್ಳಿ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿ: 18-03-2020 ರಂದು ಮಧ್ಯಾಹ್ನ ನಾನು ಮತು ನನ್ನ ಸ್ನೇಹಿತ ಬಸವಾಪುರಗ್ರಾಮದ ಮಣಿಕಂಠ ರವರನ್ನು ಕೆಎ-10, ವೈ-5696 ರ ಹಿರೋ ಬೈಕ್ನಲ್ಲಿ ಕರೆದುಕೊಂಡು ನಾಗವಳ್ಳಿಗೆ ನಮ್ಮ ಸಂಬಂಧಿಕರ ಮನೆಗೆ ಊಟಕ್ಕೆ ಹೋಗಿದ್ದು, ಊಟ ಮಾಡಿಕೊಂಡು ಮಣಿಕಂಠನನ್ನು ಅವರ ಊರಿಗೆ ಬೀಡಲು ಹೋಗುತ್ತಿದ್ದು, ನಾನು ಬೈಕ್ ಓಡಿಸುತ್ತಿದ್ದು, ಹಿಂಬದಿ ಮಣಿಕಂಠ ಕುಳಿತ್ತಿದ್ದನು. ಮಧ್ಯಾಹ್ನ ಸುಮಾರು 4:00 ಗಂಟೆಯಲ್ಲಿ ಬೈಕ್ ಓಡಿಸಿಕೊಂಡು ಕೋಡಿಮೋಳೆ-ಬಸವನಪುರ ರಸ್ತೆ ಶಿಂಡಿಗೆರೆ ಹತ್ತಿರದ ರಸ್ತೆಯಲಿ ಬ್ಯಾಡಮೂಡ್ಲು ಕಡೆ ಹೋಗುವಾಗ ಎದುರುಗಡೆಯಿಂದ ಬಂದ ಕೆಎ-10, ವಿ-5194 ರ ಡಿಸ್ಕವರ್ ಬೈಕ್ ಚಾಲಕ ಬೈಕನ್ನು ಸ್ಪೀಡಾಗಿ ಮತ್ತು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ನಮ್ಮ ಬೈಕಿಗೆ ಗುದ್ದಿಸಿದ ಪರಿಣಾಮ ಬೈಕ್ ಸಮೇತ ಕೆಳಕ್ಕೆ ಬಿದ್ದುಕೊಂಡಿದ್ದು, ನನ್ನ ಬಲಗೈ ಹಸ್ತಕ್ಕೆ ಪೆಟ್ಟಾಯಿತು. ಮಣಿಕಂಠನಿಗೆ ಬಲಗಾಲಿನ ಮಂಡಿಗೆ ಪೆಟ್ಟಾಯಿತು. ಅಪಘಾತ ಮಾಡಿದ ಬೈಕ್ ಚಾಲಕ ಬ್ಯಾಡಮೂಡ್ಲು ಗ್ರಾಮದ ರಾಜೇಂದ್ರ ಎಂದು ತಿಳಿಯಿತು. ನಾನು ಚಾ||ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನನ್ನ ಸಂಬಂಧಿ ರಮೇಶ ರವರೊಂದಿಗೆ ಚಚರ್ಿಸಿ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಬೈಕ್ ಚಾಲಕ ರಾಜೇಂದ್ರನ ಮೇಲೆ ಕಾನೂನು ಕ್ರಮ ಜರುಗಿಸಿ ಎಂಬಿತ್ಯಾದಿಯಗಿ ಇದ್ದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.

 3. ಯಳಂದೂರು ಠಾಣೆ (ಮೊ,ನಂ 26/2020) ಪಿಎಸ್ಐರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ, ಶಿವಣ್ಣ ಬಿನ್ ಲೇಟ್ ಮಲ್ಲಯ್ಯ, 56 ವರ್ಷ, ಪರಿಶಿಷ್ಠ ಜನಾಂಗ ಕೂಲಿ ಕೆಲಸ, ಗೌತಮ್ ಬಡಾವಣೆ. 4ನೇ ವಾಡರ್್ ಯಳಂದೂರು ಟೌನ್. ಸದರಿ ಅಸಾಮಿಯು ಮಧ್ಯ ತುಂಬಿದ ಪೌಚ್ಗಳನ್ನು ಅಕ್ರಮವಾಗಿ ತನ್ನ ಬಳಿ ಇಟ್ಟುಕೊಂಡು ರಸ್ತೆಯಲ್ಲಿ ಹೋಗಿ ಬರುವವರಿಗೆ ಮದ್ಯಪಾನ ಮಾಡಲು ಅವಕಾಶ ನೀಡುತ್ತಿದುದ್ದು ದೃಡಪಟ್ಟ ಮೇರೆಗೆ ಅಸಾಮಿಯನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ಮಾಲುಗಳನ್ನು ಸ್ಥಳದಲ್ಲಿ ಪಂಚರ ಸಮಕ್ಷಮ ಬೆಳಿಗ್ಗೆ 10-30 ಗಂಟೆಯಿಂದ ಬೆಳಿಗ್ಗೆ 11-15 ಗಂಟೆಯವರೆಗೆ ಸ್ಥಳ ಮತ್ತು ಅಮಾನತ್ತು ಮಹಜರ್ ಕ್ರಮ ಜರುಗಿಸಿ. ನಂತರ ಮಾಲು ಸಮೇತವಾಗಿ ಆಸಾಮಿಯನ್ನು ಠಾಣೆಗೆ ಬೆಳಿಗ್ಗೆ 11-30 ಗಂಟೆಗೆ ಬಂದು ಸ್ವಯಂ ವರದಿ ತಯಾರಿಸಿ ಬೆಳಿಗ್ಗೆ 11-45 ಗಂಟೆಗೆ ವರದಿಯೊಂದಿಗೆ ಆಸಾಮಿಯನ್ನು ಮಾಲು ಸಮೇತ ಠಾಣಾಧಿಕಾರಿಗಳಿಗೆ ನೀಡಿ ಮುಂದಿನ ಕ್ರಮಕ್ಕಾಗಿ ಸೂಚಿಸಿರುತ್ತೇನೆಂದು ನೀಡಿದ ವರದಿಯನ್ನು ಸ್ವೀಕರಿಸಿದ ಮೇರೆಗೆ ಈಪ್ರ.ವ.ವರದಿ.

4. ಕೊಳ್ಳೇಗಾಲ ಪಟ್ಟಣ ಠಾಣೆ (ಮೊ,ನಂ 48/2020) ದಿನಾಂಕ:20-03-2020 ರಂದು ಗಾಯಾಳು ನಾಗೇಂದ್ರ ಜಿ ರವರು ಆಸ್ಪತ್ರೆಯಲ್ಲಿ ನೀಡಿದ ಲಿಖಿತ ದೂರಿನ ಸಾರಂಶವೆನೆಂದರೆ ಈ ದಿನ ದಿನಾಂಕ:20-03-2020 ರಂದು ನನ್ನ ಬಾಬ್ತು ಕೆಎ-10-ಎಸ್-7655 ನಂಬರಿನ ಮೊಟಾರ್ ಬೈಕಿನ ಹಿಂಬದಿಯಲ್ಲಿ ಕಾಂತರಾಜು ರವರನ್ನು ಕೂರಿಸಿಕೊಂಡು ನಾನು ಮೊಟಾರ್ ಬೈಕ್ನ್ನು ನಮ್ಮೂರಿನಿಂದ ಓಡಿಸಿಕೊಂಡು ಕೊಳ್ಳೇಗಾಲಕ್ಕೆ ಬರುತ್ತಿದ್ದಾಗ ಸಿದ್ದಯ್ಯನಪುರ ಗ್ರಾಮದ ಹರಳಿ ಮರದ ಹತ್ತಿರದ ರಸ್ತೆಯಲ್ಲಿ ಬರುತ್ತಿದ್ದಾಗ ನನ್ನ ಹಿಂದೆ ತಮಿಳುನಾಡಿನ ಹಾವರ್ಿಸ್ಟರ್ ವಾಹನದ ಚಾಲಕ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ಮೊಟಾರ್ ಬೈಕಿಗೆ ಡಿಕ್ಕಿ ಹೊಡೆದಿದ್ದರಿಂದ ನಾನು ಮತ್ತು ಕಾಂತರಾಜು ಇಬ್ಬರೂ ಮೊಟಾರ್ ಬೈಕ್ ಸಮೇತ ರಸ್ತೆಗೆ ಬಿದ್ದಾಗ ಹಾವರ್ಿಸ್ಟರ್ನ ಇಂಜಿನಭಾಗ ಮತ್ತು ಜಾಲರಿ ಭಾಗ ಬಡಿದ ಪರಿಣಾಮ ನನಗೆ ತಲೆಯ ಎಡಭಾಗ,ಎಡ ಮುಂಗೈ, ಬಲ ಮಂಡಿ ಹಾಗೂ ಎಡಗಾಲಿನ ಮಂಡಿ ರಕ್ತಗಾಯವಾಯಿತು, ಕಾಂತರಾಜುಗೆ ಎರಡು ಕಾಲುಗಳು ರಕ್ತಗಾಯವಾಗಿ ಹೊಟ್ಟೆಯ ಬಳಿ ರಕ್ತಗಾಯವಾಯಿತು ನಂತರ ನಾನು ನೋವಿನಲ್ಲೂ ಹಾವರ್ಿಸ್ಟರ್ ನಂಬರ್ ನೋಡಲಾಗಿ .ಟಿಎನ್-25-ಎಕ್ಯೂ-5397 ಆಗಿದ್ದು ಮೇಲ್ಕಂಡ ಹಾವರ್ಿಸ್ಟರ್ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರ ವ ವರದಿ.

5. ಕೊಳ್ಳೇಗಾಲ ಪಟ್ಟಣ ಠಾಣೆ (ಮೊ ನಂ 49/2020) ದಿ:20-03-2020 ರಂದು ಪಿರ್ಯಾದಿ ಆಹಾರ ನಿರೀಕ್ಷಕರುರವರು ದಾರರು ಕೊಳ್ಳೇಗಾಲ ತಾಲ್ಲೂಕು ಕಛೇರಿ ಮುಂಭಾಗ ಕರ್ತವ್ಯದಲ್ಲಿದ್ದಾಗ ಕೊಳ್ಳೇಗಾಲ ಪಟ್ಟಣದ ಸಾಮಂತ್ಗೇರಿಯಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕಡೆಗೆ ಒಬ್ಬ ಅಸಾಮಿಯು ಪಡಿತರ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ಕಿಯ ಮೂಟೆಗಳನ್ನು ಸಂಗ್ರಹಿಸಿ ಆಟೋದಲ್ಲಿ ಸಾಗಾಣಿಕೆ ಮಾಡಿಕೊಂಡು ಬರುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಪಿರ್ಯಾದುದಾರರು ಕೊಳ್ಳೇಗಾಲದ ಪಟ್ಟಣ ಠಾಣೆಯ ಎಎಸ್ಐ ಸೋಮರಾಧ್ಯ, ಹೆಚ್ಸಿ-273 ರಾಮಚಂದ್ರ ರವರಿಗೆ ಮೇಲ್ಕಂಡ ಮಾಹಿತಿ ತಿಳಿಸಿ ಸದರಿ ಸ್ಥಳಕ್ಕೆ ನಾನು ಮತ್ತು ಪೊಲೀಸ್ ಸಿಬ್ಬಂದಿಗಳು ಹಾಗೂ ಪಂಚರ ಜೊತೆಯಲ್ಲಿ ಕೊಳ್ಳೇಗಾಲ ಪಟ್ಟಣದ ಹೊಸಅಣಗಳ್ಳಿ ಗ್ರಾಮದ ರಸ್ತೆಯಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಹೋದಾಗ ಕೆಎ-06-ಎ-4277 ಆಟೋ ನಿಂತಿದ್ದು ಪರಿಶೀಲಿಸಿ ನೋಡಲಾಗಿ 04 ಪ್ಲಾಸ್ಟೀಕ್ ಚೀಲದಲ್ಲಿ ಅಕ್ಕಿಯಿದ್ದು ಯಾವುದೇ ರಹದಾರಿ ಇಲ್ಲದೆ ಮನೆ ಮನೆಗಳಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟಮಾಡಲು ಆರೋಪಿ-01 ರವರು ಆರೋಪಿ 02 ರವರ ಜೊತೆ ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿಸಿದ ಮೇರೆಗೆ ( 1) 187 ಕೆ.ಜಿ ತೂಕವುಳ್ಳ 04 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಪಡಿತರ ಅಕ್ಕಿ 2) ಸ್ಯಾಂಪಲ್ ಗಾಗಿ ತೆಗೆದ 05 ಕೆ.ಜಿ ಪಡಿತರ ಅಕ್ಕಿ (3) ಕೆಎ-06-ಎ-4277 ನಂಬರಿನ ಆಟೋವನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಠಾಣೆಗೆ ಬಂದು ನೀಡಿದ ವರದಿ ಮೇರೆಗೆ ಪ್ರ ವರದಿ

6. ಬೇಗೂರು ಠಾಣೆ (ಮೊ ನಂ 43/2020) ಪಿಎಸ್ಐರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಠಾಣಾ ಸರಹದ್ದು ಬೆಳಚಲವಾಡಿ ಹೊರೆಯಾಲ ಗ್ರಾವ್ಮದ ಓಣಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ದಾಳಿ ಮಾಡಿ ವಶಕ್ಕೆ ತೆಗೆದುಕೊಂಡು ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ.

7. ಬೇಗೂರು ಠಾಣೆ (ಮೊ ನಂ 44/2020) ಪಿಎಸ್ಐರವರಿಗೆ ಯಾರೋ ಬಾತ್ಮಿದಾರರು ಬೇಗೂರು ಪೊಲೀಸ್ ಠಾಣಾ ಸರಹದ್ದಿನ ಬೆಳಚಲವಾಡಿ-ಹೊರೆಯಾಲ ಗ್ರಾಮದ ಓಣಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನ ಆಸಾಮಿಗಳು ಕಾನೂನು ಬಾಹಿರ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾರೆಂದು ಖಚಿತ ಮಾಹಿತಿ ನೀಡಿದ್ದು, ಸಂಜೆ 4-10 ಗಂಟೆಗೆ ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಆಟದಲ್ಲಿ ತೊಡಗಿದ್ದರಿಂದ ಸದರಿಯವರ ಮೇಲೆ ಮುಂದಿನ ಕ್ರಮದ ಬಗ್ಗೆ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಿದ ಮೇರೆಗೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.,

8. ಹನೂರು ಠಾಣೆ (ಮೊ ನಂ 36/2020) ದಿನಾಂಕ 20.03.2020 ರಂದು ಪಿಯರ್ಾದಿ ಎಎಸ್ಐ ತೋಂಟದಾರ್ಯಸ್ವಾಮಿರವರು ಸಾಯಾಂಕಲ 04.30 ಗಂಟೆ ಸಮಯದಲ್ಲಿ ಹನೂರು ಪೊಲೀಸ್ ಠಾಣಾ ಪ್ರಭಾರದಲ್ಲಿದ್ದಾಗ, ಠಾಣೆಯ ಮುಂಭಾಗವಿರುವ ಅಂಬೇಡ್ಕರ್ ಸರ್ಕಲ್ ಬಳಿ ಕೆಲವು ಜನರು ಎತ್ತರದ ಧ್ವನಿಯಲ್ಲಿ ಕೂಗಾಡುತ್ತಿದ್ದ್ರು ನಂತರ ನಾನು ಸ್ಥಳಕ್ಕೆ ಹೋಗಿ ನೋಡಿದಾಗ 15-20 ಜನರೂ ಹುಡುಗರು ಒಬ್ಬರನ್ನೊಬ್ಬರು ತಳ್ಳಾಡಿಕೊಂಡು ಗಲಾಟೆಮಾಡುತ್ತಾ ಕೂಗಾಡುತ್ತಿದ್ದರು, ನಂತರ ನಾನು ಆ ಹುಡುಗರಿಗೆ ಎಷ್ಟೇ ತಿಳಿ ಹೇಳಿದರು ಅವರೂ ಹಾಗೇ ಒಬ್ಬರನ್ನೊಬ್ಬರು ತಳ್ಳಾಡಿಕೊಂಡು ಗಲಾಟೆ ಮುಂದುವರಿಸಿದ್ದರಿಂದ ಸದರಿ ಗುಂಪಿನಲ್ಲಿ ಇಬ್ಬರೂ ಆಸಾಮಿಗಳನ್ನು ಹಿಡಿದುಕೊಂಡಾಗ ಉಳಿದವರು ಚದುರಿ ಓಡಿ ಹೋದರು ನಂತರ ನಾನು ಮತ್ತು ನಮ್ಮ ಸಿಬ್ಬಂದಿಯವರು ಹಿಡಿದುಕೊಂಡಿದ್ದ ಆಸಾಮಿಗಳ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 01. ಹೇಮಂತ್ ಬಿನ್ ಮುತ್ತುರಾಜ್,19 ವರ್ಷ, ಒಕ್ಕಲಿಗ ಜನಾಂಗ, ಹನೂರು ಪಟ್ಟಣ 02. ಸಚಿನ್ ಬಿನ್ ಶಿವಣ್ಣ, 22 ವರ್ಷ, ಪ.ಜಾತಿ, ಹನೂರು ಪಟ್ಟಣ 03. ಚೇತನ್ ಬಿನ್ ಸೋಮಣ್ಣ, 19 ವರ್ಷ, ಒಪಕ್ಕಲಿಗ ಜನಾಂಗ, ಹನೂರು ಪಟ್ಟಣ. 04. ಭಾನುಪ್ರಕಾಶ್ ಬಿನ್ ಮಹೇಶ, 20 ವರ್ಷ, ಪ.ಜಾತಿ , ಹನೂರು ಪಟ್ಟಣ ಎಂದು ತಿಳಿಸಿದ ಮೇರೆಗೆ ಸದರಿ 04 ಜನ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಸಾರ್ವಜನಿಕ ಸ್ಥಳದಲ್ಲಿ ಗುಂಪುಕಟ್ಟಿಕೊಂಡು ಗಲಾಟೆಮಾಡುತ್ತಿದ್ದರಿಂದ ಸದರಿ 04 ಜನ ಹಾಗೂ ಸದುರಿ ಹೋದ ಆಸಾಮಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಮೇರೆಗೆ.

9. ಚಾಮರಾಜನಗರ ಗ್ರಾಮಾಂತರ ಠಾಣೆ (ಪಿ ಸಿ ಆರ್ ನಂ 01/2020) ಪಿರ್ಯಾದಿ ಪಿಎಸ್ಐರವರು ಗಸ್ತಿನಲ್ಲಿದ್ದಾಗ ಅವರಿಗೆ ಚಾ|| ನಗರ ತಾ|| ಹಳೇಪುರ ಗ್ರಾಮದ ಹತ್ತಿರ ಬರುತ್ತಿದ್ದ ಕೆಎ-15-ಎ-0987 ಟೊಯೋಟಾ ಇತಿಯೋಸ್ ವಾಹನವನ್ನು ಅನುಮಾನ ಬಂದು ಚೆಕ್ ಮಾಡಿದಾಗ ಸದರಿ ವಾಹನದಲ್ಲಿದ್ದ ಆರೋಪಿಗಳು ರಾತ್ರಿ ವೇಳೆಯಲ್ಲಿ ಯಾವುದೇ ರಹದಾರಿಯಿಲ್ಲದೆ ಅಕ್ರಮವಾಗಿ ಬಂದೂಕಿನಿಂದ ಮತ್ತು ಇತರೆ ಆಯುಧಗಳಿಂದ ಮುಳ್ಳುಹಂದಿಯನ್ನು ಬೇಟೆಯಾಡಿ ಸಾಯಿಸಿ ತಮ್ಮ ಬಾಬ್ತು ಕೆಎ 15 ಎ 0987 ಟಾಟಾ ಇತಿಯೋಸ್ ಕಾರಿನ ಡಿಕ್ಕಿನಲ್ಲಿ ಹಾಕಿಕೊಂಡು ಸಾಗಿಸುತ್ತಿದ್ದು, ಪಿಯರ್ಾದಿಯವರು ಮತ್ತು ಸಿಬ್ಬಂದಿಗಳು ಅಸಾಮಿಗಳನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿದ್ದ ಮುಳ್ಳು ಹಂದಿ ಮತ್ತು ಇತರ ವಸ್ತುಗಳನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡಿರುತ್ತೆ ಹಾಗೂ ಮುಂದಿನ ಕ್ರಮಕ್ಕಾಗಿ ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿಕೊಂಡ ಮೇರೆಗೆ ಈ ಪಿ.ಸಿ.ಆರ್. ವರದಿ


Your Comment

Name :
Email:
Comment:
Submit

Website Designed and Developed by Global Buzz®