• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 18-03-2020

No of views : 24       No of Comments : 0

1. ಚಾಮರಾಜನಗರ ಗ್ರಾಮಾಂತರ ಠಾಣೆ (ಮೊ,ನಂ 28/2020) ಪಿರ್ಯಾದಿ ಯರಗನಹಳ್ಳಿ - ಹರದನಹಳ್ಳಿ ಮುಖ್ಯರಸ್ತೆಯಲ್ಲಿ ರೋಡ್ ಕೆಲಸವನ್ನು ಮಾಡಿಸುತ್ತಿದ್ದ ಜಿ. ಹೊನ್ನಪ್ಪನ್ ರವರು ನೀಡಿದ ದೂರಿನಲ್ಲಿ ಯರಗನಹಳ್ಳಿ ಗ್ರಾಮದ ಹತ್ತಿರ ರಸ್ತೆಗೆ ಕೆಲಸ ಮಾಡಿಸುತ್ತಿದ್ದಾಗ ಮುರುಗನ್ ರವರು ಗ್ರಾವಲ್ ಲೆವಲ್ ಮಾಡುವ ವಾಹನವನ್ನು ಸತ್ಯಮೂರ್ತಿ ಎಂಬುವವರು ಓಡಿಸುತ್ತಿದ್ದರು. ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ಸತ್ಯಮೂರ್ತಿರವರು ಸದರಿ ನೆಲಸಮ ಮಾಡುವ ಗ್ರೀಡರ್ ವಾಹನವನ್ನು ಅತಿವೇಗವಾಗಿ ಹಾಗೂ ನಿರ್ಲಕ್ಷತನದಿಂದ ರಿವರ್ಸ್ ಬರುತ್ತಿದ್ದಾಗ ಪಕ್ಕದಲ್ಲಿದ್ದ ಮುರುಗನ್ ರವರಿಗೆ ಅಪಘಾತ ಮಾಡಿಸಿದ್ದು, ಈ ಅಪಘಾತದಲ್ಲಿ ಮುರುಗನ್ ರವರಿಗೆ ಎಡಗಾಲಿನ ನಡು, ತೊಡೆ ಹಾಗೂ ಇತರ ಕಡೆ ಪೆಟ್ಟಾಗಿ ರಕ್ತಗಾಯವಾಗಿದ್ದು, ಅಷ್ಟಕ್ಕೆ ಪಕ್ಕದಲ್ಲಿದ್ದ ನಾನು ಹಾಗೂ ಇಂಜಿನಿಯರ್ ಕಾರ್ತಿಕೇಯನ್, ಸಹದೇವನ್, ನವೀನ್ ಹಾಗೂ ಇತರರು ಉಪಚರಿಸಿ ಒಂದು ಕಾರಿನಲ್ಲಿ ಚಾ-ನಗರ ಜೆ.ಎಸ್.ಎಸ್. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದೆವು, ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಆಸ್ಪತ್ರೆ ಆಂಬುಲೆನ್ಸ್ ನಲ್ಲಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ, ಮುರುಗನ್ ರವರು ಆಸ್ಪತ್ರೆ ಹತ್ತಿರ ರಾತ್ರಿ 9-30 ಗಂಟೆಯಲ್ಲಿ ಸತ್ತುಹೋದರು, ಸದರಿ ವಿಚಾರವನ್ನು ಮುರುಗನ್ ರವರ ಮನೆಗೆ ತಿಳಿಸಿ ದೂರನ್ನು ತಡವಾಗಿ ನೀಡುತ್ತಿದ್ದು, ಸದರಿ ಘಟನೆಗೆ ಕಾರಣವಾದ ಖಿಓ-36-ಃಚ-1848 ವಾಹನದ ಚಾಲಕನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ. ವ. ವರದಿ..

2. ಚಾಮರಾಜನಗರ ಪೂರ್ವ ಠಾಣೆ (ಮೊ,ನಂ 48/2020) ಪಿಎಸ್ಐ ಶ್ರೀ ಸುನೀಲ್, ಎಸ್.ಪಿ ಹಾಗೂ ಸಿಬ್ಬಂದಿಗಳ ಜೊತೆ ಹೊಂಗನೂರು ಗ್ರಾಮದ ಕಡೆ ಗಸ್ತಿನಲ್ಲಿ ಇರುವಾಗ ರಂಗರಾಜಪುರ ಗ್ರಾಮದ ಅಂಬೇಡ್ಕರ್ ಭವನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಆಸಾಮಿಯೊಬ್ಬ ಮದ್ಯ ಕುಡಿಯುವವರಿಗೆ ಸಹಕರಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾನೆ ಎಂದು ಖಚಿತ ಮಾಹಿತಿ ಬಂದಿದ್ದು ಸಿಬ್ಬಂದಿಯವರನ್ನು ಹಾಗೂ ಪಂಚರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ರಂಗಸ್ವಾಮಿ ಬಿನ್ ಲೇಟ್ ದೊಡ್ಡಮಾದಯ್ಯ, 36 ವರ್ಷ, ಪರಿಶಿಷ್ಟ ಜಾತಿ, ಚಿಲ್ಲರೆ ಅಂಗಡಿ ವ್ಯಾಪಾರ, ನಂಜರಾಜಪುರ ಗ್ರಾಮ ಎಂಬುವರನ್ನು ಹಿಡಿದು ವಿಚಾರ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅನುವು ಮಾಡಿಕೊಟ್ಟಿರುವ ಬಗ್ಗೆ ರಹದಾರಿ ಇದೆಯೇ ಎಂದು ವಿಚಾರ ಮಾಡಿದಾಗ ಅವರು ಯಾವುದೇ ರಹದಾರಿ ಇರುವುದಿಲ್ಲ ಎಂದು ತಿಳಿಸಿ ಸಾರ್ವಜನಿಕವಾಗಿ ಮದ್ಯ ಸೇವನೆ ಮಾಡಲು ಸ್ಥಳವಾಕಾಶ ನೀಡಿ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಸಹಕರಿಸುತ್ತಿರುವುದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ 90 ಎಂ.ಎಲ್ ನ ಹೈವಾಡರ್್ ಚೀರ್ಸ್ ವಿಸ್ಕಿಯ 5 ಪೌಚ್ಗಳು ಹಾಗೂ 04 ಪ್ಲಾಸ್ಟಿಕ್ ಗ್ಲಾಸ್ಗಳನ್ನು ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಆರೋಪಿಯ ಸಮೇತ ಠಾಣೆಗೆ ಹಾಜರಾಗಿ ವರದಿ ತಯಾರಿಸಿದ ಮೇರೆಗೆ ಈ ಪ್ರ.ವ.ವರದಿ.

3. ಚಾಮರಾಜನಗರ ಪೂರ್ವ ಠಾಣೆ (ಮೊ,ನಂ 49/2020) ಪಿಯರ್ಾದಿ ನೀಲಮ್ಮ ಮುಖ್ಯ ಶಿಕ್ಷಕರು ಶಾಲೆಗೆ ಬಂದು ಕೊಠಡಿಗಳನ್ನು ತೆರೆಯುವ ಸಮಯದಲ್ಲಿ ನೋಡಿದಾಗ ಯಾರೋ ಕಳ್ಳರು ಅಂಐಅ ಕೊಠಡಿಗೆ ಹಾಕಿದ್ದ ಗ್ರಿಲ್ಸ್ ಡೋರ್ ನ ಬೀಗಗಳು ಮತ್ತು ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗ ಮತ್ತು ಇನ್ನರ ಲಾಕ್ ಅನ್ನು ಯಾವುದೋ ರಾಡಿನಿಂದ ಒಡೆದು ಬಾಗಿಲನ್ನು ನಮ್ಮ ಶಾಲೆಯ ಅಂಐಅ ಕೊಠಡಿಯ ಗ್ರಿಲ್ಸ್ ಬಾಗಿಲು ಹಾಗೂ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಇನ್ನರ್ ಲಾಕ್ಗಳನ್ನು ಮುರಿದು ಕೊಠಡಿಯಲ್ಲಿದ್ದ 09 ಇಥಜಜ ಕಠತಿಜಡಿ ಖಚಿಜಿಜ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಅಂದಾಜು ಬೆಲೆ 24,000/- ರೂ ಆಗಿರುತ್ತದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಂಡು ಕಳವು ಆಗಿರುವ ಬ್ಯಾಟರಿಗಳನ್ನು ಪತ್ತೆ ಹಚ್ಚಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

4. ಗುಂಡ್ಲುಪೇಟೆ ಠಾಣೆ (ಮೊ,ನಂ 104/2020) ಪಿರ್ಯಾದಿ ಮಹದೇವಪ್ರಸಾದ್ ಎಪಿಸಿ 282 ರವರು ನೀಡಿದ ದೂರಿನಲ್ಲಿ ಅವರು ಎ.ಎನ್.ಎಫ್ ಕರ್ತವ್ಯದ ನಿಮಿತ್ತ ಇಲಾಖಾ ಬೈಕ್ ಕೆಎ 20 ಜಿ 455 ನ್ನು ತೆಗೆದುಕೊಂಡು ಹೋಗಿದ್ದು ರಾತ್ರಿ 10:30 ರ ವೇಳೆಯಲ್ಲಿ ಗುಂಡ್ಲುಪೇಟೆ ಪಟ್ಟಣದಲ್ಲಿನ ದರ್ಶನ ಲೇ ಔಟ್ನಲ್ಲಿ ತನ್ನ ಸ್ನೇಹಿತನ ಮನೆ ಮುಂದೆ ನಿಲ್ಲಿಸಿ, ಮನೆಯಲ್ಲಿ ತಂಗಿದ್ದು, ಬೆಳಗ್ಗೆ 04:30 ಗಂಟೆಗೆ ಎದ್ದು ನೋಡಲಾಗಿ ಬೈಕ್ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಲಾಗಿ ಸಿಗಲಿಲ್ಲ. ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ.

 5. ಗುಂಡ್ಲುಪೇಟೆ ಠಾಣೆ (ಮೊ ನಂ 105/2020) ಪಿರ್ಯಾದಿ ಕಾಳಸ್ವಾಮಿ ಭೀಮನಬೀಡು ಗ್ರಾಮರವರು ನೀಡಿದ ದೂರಿನಲ್ಲಿ ದಿನಾಂಕ; 17.03.2020 ರಂದು ಮಧ್ಯಾಹ್ನ 1.30 ಗಂಟೆ ಸಮಯದಲ್ಲಿ ಪಿರ್ಯಾದಿಯ ಮಾವ ದೊಡ್ಡಗಂಡಶೆಟ್ಟಿ ರವರು ತಮ್ಮ ಜಮೀನಿಗೆ ಹೋಗಿದ್ದು ವಾಪಸ್ಸು ತಮ್ಮ ಮನೆಗೆ ಬರಲು ಗುಂಡ್ಲುಪೇಟೆ ಕ್ಯಾಲಿಕಟ್ ಮುಖ್ಯ ರಸ್ತೆಯ ಭೀಮನಬೀಡು ಗ್ರಾಮದ ಬಸ್ ನಿಲ್ದಾಣದ ಹತ್ತಿರ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಬರುತ್ತಿದ್ದಾಗ ಕೆ.ಎ. 10 ಇ.ಬಿ. 3051 ರ ಬೈಕ್ ಸವಾರ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದೊಡ್ಡಗಂಡಶೆಟ್ಟಿ ರವರಿಗೆ ಡಿಕ್ಕಿ ಮಾಡಿದ್ದು ಏಟಾಗಿರುತ್ತದೆಂದು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ. 

6. ತೆರಕಣಾಂಬಿ ಠಾಣೆ (ಮೊ ನಂ 30/2020) ಫಿಯರ್ಾದಿ ಬಸಮ್ಮಣ್ಣಿ ತೆರಕಣಾಂಬಿ ಗ್ರಾಮರವರು ನೀಡಿದ ದೂರಿನಲ್ಲಿ ಅವರು ಬೆಳಿಗ್ಗೆ 5-15 ಗಂಟೆ ಸಮಯದಲ್ಲಿ ನನ್ನ ಮನೆಯ ಮುಂದೆ ಬಟ್ಟೆಯನ್ನು ಓಗೆಯುತ್ತೀದ್ದಾಗ ಇಬ್ಬರು ವ್ಯಕ್ತಿಗಳು ಬೈಕ್ ನಲ್ಲಿ ಬಂದು ನಮ್ಮ ಮನೆಯಿಂದ ಸ್ವಲ್ಪ ಮುಂದೆ ಬೈಕ್ ನಿಲ್ಲಿಸಿ ಆ ಪೈಕಿ ಒಬ್ಬ ಬೈಕ್ ನಿಂದ ಇಳಿದು ಬಂದು ಕಾಳೇಗೌಡರ ಮನೆ ಎಲ್ಲಿ ಬರುತ್ತದೆ ಎಂದು ನನ್ನನ್ನು ಕೇಳಿದಾಗ ನಾನು ಎದ್ದು ನಿಂತು ನನಗೆ ಗೊತ್ತಿಲ್ಲ ಎಂದು ಹೇಳಿ ಮನೆಯ ಒಳಗೆ ಹೋಗಲು ತಿರುಗಿದಾಗ ಆ ವ್ಯಕ್ತಿಯು ನನ್ನ ಕುತ್ತಿಗೆಗೆ ಕೈ ಹಾಕಿ ನನ್ನ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯದ ಸರವನ್ನು ಕಿತ್ತುಕೊಳ್ಲಲು ಪ್ರಯತ್ನಿಸಿದನು.ಆಗ ನಾನು ಎರಡು ಕೈಗಳಿಂದ ಬಿಗಿಯಾಗಿ ಸರವನ್ನು ಹಿಡಿದುಕೊಂಡಾಗ ಆತ ನನ್ನನ್ನು ಕೆಳಗೆ ಬೀಳಿಸಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ತಾನು ಬಂದಿದ್ದ ಬೈಕಿನಲ್ಲಿದ್ದ ವ್ಯಕ್ತಿಯ ಜೊತೆ ಬೈಕಿನಲ್ಲಿ ಹೊರಟುಹೋದನು. ಸರವನ್ನು ಕಿತ್ತುಕೊಂಡ ವ್ಯಕ್ತಿ ತಲೆಗೆ ಮಂಕಿ ಕ್ಯಾಪ್ ಹಾಕಿದ್ದು ಮುಖವನ್ನು ಮುಚ್ಚಿಕೊಂಡಿದ್ದು ಯಾರು ಎಂದು ನನಗೆ ಗೊತ್ತಿಲ್ಲ. ನನ್ನ ಮಾಂಗಲ್ಯ ಸರವನ್ನು ಈಗ್ಗೆ 20 ವರ್ಷಗಳ ಹಿಂದೆ ಮಾಡಿಸಿಕೊಂಡಿದ್ದು 40 ಗ್ರಾಂ ತೂಕವಿದ್ದು ಸುಮಾರು 1 ಲಕ್ಷದ 20 ಸಾವಿರ ಬೆಲೆ ಆಗುತ್ತದೆ. ನನ್ನ ಸರವನ್ನು ಕಿತ್ತುಕೊಳ್ಳುವಾಗ ನನ್ನ ಎಡಕಿವಿಗೆ ಗಾಯವಾಗಿರುತ್ತದೆ, ಆದ್ದರಿಂದ ನನ್ನ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ನನ್ನ ಚಿನ್ನದ ಮಾಂಗಲ್ಯ ಸರವನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.

7. ಕೊಳ್ಳೇಗಾಲ ಪಟ್ಟಣ ಠಾಣೆ (ಮೊ ನಂ 47/2020) ಗಾಯಾಳು ನಾಗರಾಜು ಉಗನಿಯ ಗ್ರಾಮರವರು ನೀಡಿದ ದೂರಿನಲ್ಲಿ ಅವರು ಆಸ್ಪತ್ರೆಯಲ್ಲಿ ನೀಡಿದ ದೂರಿನ ಸಾರಂಶವೆನೆಂದರೆ ಗಾಯಾಳುರರವರು ಪ್ರತಿ ದಿನ ಮುಡಿಗುಂಡ ಗ್ರಾಮಕ್ಕೆ ಹೋಗಿ ರೇಷ್ಮೆ ಮಾರುಕಟ್ಟೆಯಲ್ಲಿ ರೇಷ್ಮೆಗೂಡು ಖರೀದಿ ಮಾಡಿ ವ್ಯಾಪಾರ ಮಾಡುತ್ತಿದ್ದು ಎಂದಿನಂತೆ ಈ ದಿನ ದಿನಾಂಕ: 18-03-2020 ರಂದು ಮುಡಿಗುಂಡಗ್ರಾಮಕ್ಕೆ ಹೋಗುವ ಸಲುವಾಗಿ ಕೊಳ್ಳೇಗಾಲಕ್ಕೆ ಬಂದು ಕೊಳ್ಳೇಗಾಲದಿಂದ ಬಸ್ ಹತ್ತಿಕೊಂಡು ಮುಡಿಗುಂಡಗ್ರಾಮದ ಬಸ್ ನಿಲ್ದಾಣದಲ್ಲಿ ಇಳಿದು ರೇಷ್ಮೆ ಮಾರುಕಟ್ಟೆಗೆ ಹೋಗುವ ಸಲುವಾಗಿ ರಸ್ತೆ ದಾಟುತ್ತಿದ್ದಾಗ ಕೊಳ್ಳೇಗಾಲ ಕಡೆಯಿಂದ ಮೈಸೂರಿನ ಕಡೆಗೆ ಬರುತ್ತಿದ್ದ ಮಿನಿ ಬಸ್ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಡಿಕ್ಕಿ ಹೊಡೆಸಿದ್ದರಿಂದ ನಾನು ರಸ್ತೆಗೆ ಬಿದ್ದಾಗ ನನಗೆ ತಲೆಯ ಹಣೆಭಾಗ, ಎದೆ,ಎಡ ಮುಂಗೈನಲ್ಲಿ ಗಾಯಗಳಾಗಿ ಸುಸ್ತಾಗಿ ಬಿದ್ದಿದಾಗ ನಮ್ಮೂರಿನ ಮಹದೇವ ಮಗ ಸೋಮೇಶ ಹಾಗೂ ಮುಡಿಗುಂಡ ಗ್ರಾಮದ ರವಿ ಅಲಿಯಾಸ್ ರಂಗಸ್ವಾಮಿ ರವರು ಬಂದು ನನ್ನನ್ನು ಸುಧಾರಿಸಿದಾಗ ಮಿನಿ ಬಸ್ ಚಾಲಕ ಬಸ್ನ್ನು ನಿಲ್ಲಿಸಿ ಓಡಿ ಹೋಗಿರುತ್ತಾರೆ ಬಸ್ ನಂ ಕೆಎ-19-ಬಿ-5508 ಆಗಿದ್ದು ನಂತರ ಗಾಯಗೊಂಡಿದ್ದ ನನ್ನನ್ನು ನಮ್ಮೂರಿನ ಸೋಮೇಶ ರವರು ಚಿಕಿತ್ಸೆ ದಾಖಲು ಮಾಡಿರುತ್ತಾರೆ ಆದ್ದರಿಂದ ಮೇಲ್ಕಂಡ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರ ವರದಿ.

8. ಕೊಳ್ಳೇಗಾಲ ಗ್ರಾಮಾಂತರ ಠಾಣೆ (ಮೊ ನಂ 61/2020) ದಿ:17-03-2020ರಂದು ಪಿಎಸ್ಐರವರು ನೀಡಿದ ವರದಿ ಏನೆಂದರೆ ದಿ:17-03-2020 ರಂದು ಭಾತ್ಮೀದಾರರಿಂದ ನನಗೆ ದೊರೆತ ಮಾಹಿತಿ ಏನೆಂದರೆ, ತಿಮ್ಮರಾಜಿಪುರ ಗ್ರಾಮದ ಹೊರವಲಯದಲ್ಲಿರುವ ಮೊರಾಜರ್ಿ ದೇಸಾಯಿ ಶಾಲಾ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆಂದು ದೊರೆತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಹೋಗಿ ಪಂಚರನ್ನು ಬರಮಾಡಿಕೊಂಡು ಕಾನೂನು ಬಾಹಿರವಾಗಿ ಜೂಜಾಟವನ್ನು ಆಡುತ್ತಿದ್ದವರ ಮೇಲೆ ಸಿಬ್ಬಂದಿಗಳೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ಅಮಾನತ್ತು ಮಹಜರ್ ಮುಖೇನ ಮಾಲು ಮತ್ತು 04 ಜನ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು 05 ಆಸಾಮಿಗಳು ಓಡಿ ಹೋಗಿದ್ದು ಠಾಣೆಗೆ ಬಂದು ವರದಿ ನೀಡಿದ್ದು ನಂತರ ಎನ್ ಸಿ ಆರ್ ನಂ 137/2020 ರಲ್ಲಿ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿದ ಮೇರೆಗೆ ಈ ಪ್ರ ವ ವರದಿ.

9. ಕೊಳ್ಳೇಗಾಲ ಗ್ರಾಮಾಂತರ ಠಾಣೆ (ಮೊ ನಂ 62/2020) ದಿಃ18-03-2020ರಂದು ಗಾಯಾಳು ವಿಜಯಕುಮಾರರ ಕೆಂಪನಪಾಳ್ಯ ಗ್ರಾಮರವರು ನೀಡಿದ ಹೇಳಿಕೆ ಏನೆಂದರೆ ನಮ್ಮ ಮನೆಯ ಹಿಂಭಾಗದ ಖಾಲಿ ಮನೆಯ ವಿಚಾರವಾಗಿ ಸಿಧ್ದಾರ್ಥನ ಮನೆಯವರು ನಮ್ಮ ಮೇಲೆ ವೈಮನಸ್ಸು ಹೊಂದಿದ್ದು ಈ ವಿಚಾರವಾಗಿ ಗಲಾಟೆ ಮಾಡಿದ ಬಗ್ಗೆ ನಾವು ಪೊಲೀಸ್ ಕಂಪ್ಲೆಂಟ್ ನೀಡಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ದಿನ ದಿಃ18-03-2020 ರಂದು ನಮ್ಮ ದಾಯಾದಿ ಸಂಬಂಧಿ ಮಗ ಸಿಧ್ದಾರ್ಥ ಮತ್ತು ನಮ್ಮ ಗ್ರಾಮದ ಜಡೇನಾಯಕರವರ ಮಗನಾದ ರಾಜೇಂದ್ರರವರು ಮೋಟಾರ ಬೈಕನಲ್ಲಿ ಬಂದು ನನಗೆ ನನ್ನನ್ನು ಹಿಡಿದುಕೊಂಡು ಬೋಳಿಮಗನೆ ಸೂಳೆ ಮಗನೆ ಎಂದು ಬೈಯ್ದು ಕಪಾಳಕ್ಕೆ ತುಟಿಗೆ ಕೈಯಿಂದ ಹೊಡೆದು ರಕ್ತಗಾಯಪಡಿಸಿದ್ದು ಹಾಗೂ ನನ್ನ ತಾಯಿಯ ಮೇಲೆ ಗಲಾಟೆ ತೆಗೆದು ಹಲ್ಲೆ ಮಾಡಿ ಅವಮಾನ ಮಾಡಿದ್ದು ನನಗೆ ನೋವಾಗಿದ್ದರಿಂದ ನಾನು ಕೊಳ್ಳೇಗಾಲ ಸಕರ್ಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದು ದಾಖಲಾಗಿರುತ್ತೇನೆ ನಮ್ಮ ಮೇಲೆ ವಿನಾ ಕಾರಣ ಗಲಾಟೆ ತೆಗೆದು ಹಲ್ಲೆ ಮಾಡಿ ಬೆದರಿಕೆ ಹಾಕಿ ನನ್ನ ತಾಯಿಗೆ ಹೊಡೆದು ಅವಮಾನ ಪಡಿಸಿರುವ ಸಿಧ್ದಾರ್ಥ ಮತ್ತು ರಾಜೇಂದ್ರನ ಮೇಲೆ ಕಾನೂನು ಕ್ರಮ ಕೈ ಗೊಳ್ಳಬೇಕೆಂದು ಕೊಟ್ಟ ಹೇಳಿಕೆ ಮೇರೆಗೆ ಈ ಪ್ರ ವರದಿ.

10. ಕೊಳ್ಳೇಗಾಲ ಗ್ರಾಮಾಂತರ ಠಾಣೆ (ಮೊ ನಂ 63/2020) ಪಿರ್ಯಾದಿ ಸತ್ತೇಗಾಲ ಗ್ರಾಮರವರು ನೀಡಿದ ದೂರಿನಲ್ಲಿ ಈ ದಿನ ದಿಃ 18-03-2020 ರಂದು ಸಂಜೆ 18-45 ಗಂಟೆ ಸಮಯದಲ್ಲಿ ನಾನು ನಮ್ಮ ಗ್ರಾಮದ ಮಾರಮ್ಮನ ದೇವಸ್ಥಾನದ ಮುಂದಿರುವ ಅರಳಿಮರದ ಕಟ್ಟೆಯ ಮೇಲೆ ಕುಳಿತಿದ್ದ ಪ್ರಕಾಶನು ವಾಧ್ಯದವರನ್ನು ಕರೆದು ವಾದ್ಯ ಬಾರಿಸಿ ನಾನು ಕುಣಿಯಬೇಕೆಂದು ಕೂಗಾಡುತ್ತಿದ್ದನು ಆಗ ನಾನು ಈ ಬಾರಿ ಹಬ್ಬವನ್ನು ಜೋರಾಗಿ ಆಚರಣೆ ಮಾಡಬಾರದೆಂದು ಸರ್ಕಾರ ತಿಳಿಸಿದ್ದಾರೆ ಎಂದು ಹೇಳಿದೆ ಆಗ ಪ್ರಕಾಶ್ನು ನನ್ನ ಮೇಲೆ ಕೋಪಗೊಂಡು ನಿನ್ನನ್ನು ಯಾರು ಕೇಳಿದವರು ಬೋಳಿ ಮಗನೇ ಸೂಳೆ ಮಗನೇ ಎಂದು ಬೈದು ಏಕಾಏಕಿ ತನ್ನ ತಲೆಯಿಂದ ನನ್ನ ಬಾಯಿಗೆ ಗುದ್ದಿದನು ಆಗ ನಾನು ಈ ಹಿಂದೆ ಕೃತಕವಾಗಿ ಕಟ್ಟಿಸಿದ ಮೇಲ್ಬಾಗದ ಮುಂದಿನ ಹಲ್ಲುಗಳು ಸೆಟ್ ಕಳೆದು ಬಿದ್ದು ಹಾಗೂ ಒಂದು ಹಲ್ಲು ಅಲ್ಲಾಡುತ್ತಿದ್ದು ನೋವಾಯ್ತು ನಂತರ ಅಲ್ಲೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ಎಡಗಣ್ಣಿನ ಉಬ್ಬಿನ ಬಳಿ ಹೊಡೆದು ರಕ್ತಗಾಯ ಪಡಿಸಿದನು ನಂತರ ನನ್ನನ್ನು ನನ್ನ ತಮ್ಮನ ಮಗ ಮಹೆಶ್ ನು ಚಿಕಿತ್ಸೆಗಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಕರೆತಂದು ಸೇರಿಸಿದನು ನನ್ನ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿರುವ ಪ್ರಕಾಶ್ನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಹೇಳಿಕೆ ಮೇರೆಗೆ ಈ ಪ್ರ ವರದಿ.

11. ರಾಮಾಪುರ ಠಾಣೆ (ಮೊ ನಂ 26/2020) ಪಿರ್ಯಾದಿ ಟಿ ಶಂಕರಯ್ಯ ಕೆಂಪಯ್ಯನಹಟ್ಟಿ ಗ್ರಾಮರವರು ನೀಡಿದ ದೂರಿನಲ್ಲಿ ನವ್ಮ್ಮ ದೊಡ್ಡವ್ಮ್ಮ ವರದವ್ಮ್ಮರವರಿಗೆ ದೊಡ್ಡಾಲತ್ತೂರು ಗ್ರಾಮದಲ್ಲಿ ಅಪಘಾತವಾಗಿ ನಿಧನವಾಗಿರುವ ವಿಚಾರ ಗೊತ್ತಾಗಿ ನಾನು ಸ್ಥಳಕ್ಕೆ ಹೋಗಿ ನೋಡಿದಾಗ ನಮ್ಮ ದೊಡ್ಡಮ್ಮ ರವರಿಗೆ ತಲೆ ಏಟಾಗಿ ರಕ್ತ ಬಂದು ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ, ಪಕ್ಕದಲ್ಲಿ ಕೆಎ-10-ಟಿ-8338 ಟ್ರ್ಯಾಕ್ಟರ್ ನಿಂತಿದ್ದು, ಶವದ ಪಕ್ಕ ಟಿಎನ್-36-ಯು-2120 ಬೈಕ್ ಸಹ ಇತ್ತು, ಅಪಘಾತದ ಬಗ್ಗೆ ಅಕ್ಕ-ಪಕ್ಕದವರನ್ನು ವಿಚಾರ ಮಾಡಿದಾಗ ವರದಮ್ಮ ರವರು ಸಂಜೆ ಸುಮಾರು 07-00 ಗಂಟೆಯಲ್ಲಿ ಮೇಲ್ಕಂಡ ಬೈಕ್ ನಲ್ಲಿ ಡ್ರಾಪ್ ಪಡೆದು ಬೈಕ್ ನಲ್ಲಿ ಕುಳಿತು ಹೊರಡುವಾಗ ಬೈಕ್ ನಿಂದ ರಸ್ತೆಗೆ ಬಿದ್ದಿದ್ದು, ಅಷ್ಟಕ್ಕೆ ಕೆಂಪಯ್ಯನಹಟ್ಟಿ ಕಡೆಯಿಂದ ಬಂದ ಕೆಎ-10-ಟಿ-8338 ಟ್ರ್ಯಾಕ್ಟರ್ ನ ಚಾಲಕ ಶಿವಕುಮಾರ್ ಟ್ರ್ಯಾಕ್ಟರ್ ನ್ನು ಅತೀವೇಗವಾಗಿ ಅಜಾಗರೂಕತೆಯಿಂದ ಓಡಿಸಿ ವರದಮ್ಮ ರವರಿಗೆ ಗುದ್ದಿಸಿ ಅವರ ತಲೆಯ ಮೇಲೆ ಹತ್ತಿ ಸ್ಥಳದಲ್ಲಿ ಮೃತಪಟ್ಟಿದ್ದು, ಈ ಬಗ್ಗೆ ಮೇಳ್ಕಂಡ ಟ್ರ್ಯಾಕ್ಟರ್ ಚಾಲಕನ ಮೇಳೆ ಕ್ರಮ ಕೈಗೊಳ್ಳಲು ಕೋರಿಕೆ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.


Your Comment

Name :
Email:
Comment:
Submit

Website Designed and Developed by Global Buzz®