• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 17-03-2020

No of views : 15       No of Comments : 0

1. ಚಾಮರಾಜನಗರ ಗ್ರಾಮಾಂತರ ಠಾಣೆ (ಮೊ,ನಂ 28/2020) ಗಸ್ತಿನಲ್ಲಿದ್ದ ಪಿರ್ಯಾದಿ ಪಿಎಸ್ಐಯವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಾರ್ಗ ಮಧ್ಯೆ ಇಬ್ಬರು ಪಂಚರನ್ನು ಕರೆದುಕೊಂಡು ಠಾಣಾ ವ್ಯಾಪ್ತಿಯ ಚಾ-ನಗರ ತಾ|| ನಂಜೇದೇವನಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಜೂಜಾಟ ಆಡುತ್ತಿದ್ದ ಆಸಾಮಿಗಳ ಮೇಲೆ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ, ಅಕ್ರಮ ಜೂಜಾಟ ಆಡುತ್ತಿದ್ದವರನ್ನು ವಶಕ್ಕೆ ತೆಗೆದುಕೊಂಡು, ಅಖಾಡದಲ್ಲಿದ್ದ ಮತ್ತು ಜೂಜಾಟ ಆಡುತ್ತಿದ್ದವರ ವಶದಲ್ಲಿದ್ದ ಒಟ್ಟು 2,700/- ರೂ. ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ತಾಟು, ಇವುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು ಸಮೇತ, ವಶಕ್ಕೆ ತೆಗೆದುಕೊಂಡ ಆಸಾಮಿಗಳನ್ನು ಠಾಣೆಗೆ ಕರೆತಂದು, ಆಸಾಮಿಗಳ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ವರದಿ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

2. ಬೇಗೂರು ಠಾಣೆ (ಮೊ,ನಂ 40/2020) ಪಿರ್ಯಾದಿ ಸಿ.ಪಿ.ಐ ಗುಂಡ್ಲುಪೇಟೆ ವೃತ್ತರವರಿಗೆ ಭಾತ್ಮೀದಾರರಿಂದ ಬೇಗೂರು ಪೊಲೀಸ್ ಠಾಣಾ ಸರಹದ್ದು ಕಮರಹಳ್ಳಿ ಗ್ರಾಮದ ಕೆರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನ ಆಸಾಮಿಗಳು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟವಾಡುತ್ತಿರುವ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ಸಿಬ್ಬಂದಿ ಪಂಚರ ಸಮಕ್ಷಮ ಕಮರಹಳ್ಳಿ ಕೆರೆಯಲ್ಲಿರುವ ನೀಲಗಿರಿ ತೋಪಿನ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ನೀಲಗಿರಿ ತೋಪಿನ ಮಧ್ಯೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನ ಆಸಾಮಿಗಳು ವೃತ್ತಾಕಾರವಾಗಿ ಕುಳಿತು ನೆಲದ ಮೇಲೆ ಪ್ಲಾಸ್ಟಿಕ್ ತಾಟನ್ನು ಹಾಸಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಎಂಬ ಇಸ್ಪೀಟಿನ ಜೂಜಾಟವನ್ನು ಆಡುತ್ತಿದ್ದದು ಖಚಿತ ಪಡಿಸಿಕೊಂಡು ಪಿರ್ಯಾದಿಯವರು ಸಿಬ್ಬಂದಿಯವರ ಸಹಾಯದಿಂದ ಸದರಿಯವರ ಮೇಲೆ ದಾಳಿ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದ ಮೇರೆಗೆ ಮೇರೆಗೆ, ಘನ ನ್ಯಾಯಾಲಯದ ಅನುಮತಿ ಮೇರೆಗೆ ಪ್ರ.ವ.ವರದಿ.

3. ಬೇಗೂರು ಠಾಣೆ (ಮೊ,ನಂ 41/2020) ಪಿರ್ಯಾದಿ ಪಿಎಸ್ಐರವರು ಠಾಣೆಯಲ್ಲಿರುವಾಗ ಭಾತ್ಮೀದಾರರಿಂದ ದೊರೆತ ಮಾಹಿತಿ ಮೇರೆಗೆ ಹೆಗ್ಗಡಹಳ್ಳಿಯಿಂದ ವೀರನಪುರ ಗ್ರಾಮಕ್ಕೆ ಹೋಗುವ ರಸ್ತೆಯ ಪಕಕ್ದಲ್ಲಿರುವ ಹುಣಸೇಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನ ಆಸಾಮಿಗಳು ವೃತ್ತಾಕಾರವಾಗಿ ಕುಳಿತು ನೆಲದ ಮೇಲೆ ಪ್ಲಾಸ್ಟಿಕ್ ತಾಟನ್ನು ಹಾಸಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಎಂಬ ಇಸ್ಪೀಟಿನ ಜೂಜಾಟವನ್ನು ಆಡುತ್ತಿದ್ದದು ಖಚಿತ ಪಡಿಸಿಕೊಂಡು ಪಿರ್ಯಾದಿಯವರು ಸಿಬ್ಬಂದಿಯವರ ಸಹಾಯದಿಂದ ಸದರಿಯವರ ಮೇಲೆ ದಾಳಿ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದ ಮೇರೆಗೆ, ಠಾಣೆಯಲ್ಲಿ ಜಿಎಸ್ಸಿ 72-2020 ರಲ್ಲಿ ನೋಂದಾಯಿಸಿ, ನಂತರ ಘನ ನ್ಯಾಯಾಲಯದ ಅನುಮತಿ ಮೇರೆಗೆ ಪ್ರ.ವ.ವರದಿ. ದಾಖಲಿಸಲಾಗಿದೆ.

4. ಹನೂರು ಠಾಣೆ (ಮೊ,ನಂ 33/2020) ಪಿರ್ಯಾದಿ ನಾಗೇಶ ಯಡಮಾರನಹಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ಅವರು ಅವರ ಸ್ನೇಹಿತ ಕೃಷ್ಣ ಹಾಗೂ ಕೃಷ್ನನ ಸ್ನೇಹಿತರುಗಳು ಮಲೈಮಹದೇಶ್ವರ ಬೆಟ್ಟಕ್ಕೆ ಕೃಷ್ಣನು ವಿಜಯನಗರ ಡೈವಜೀ ಕಂಪನಿಯಿಂದ ಈ ದಿನ ಬೆಳಿಗ್ಗೆ ಕೆಎ-51 ಎಬಿ-6219 ರೀಜಿಸ್ಟರ್ ನಂಬರ್ನ ಸ್ಕಾಪರ್ಿಯೋ ಕಾರನ್ನು ಬಾಡಿಗೆಗೆ ತಂದಿದ್ದ ಆತನ ಸ್ನೇಹಿತರಾದ ಸಚಿನ್, ಸಂಜಯ್, ಲಾಲುಪ್ರಸಾದ್, ಉಮೇಶ್ ಸಂತೋಷ್ರವರುಗಳು ಮತ್ತು ಪಿರ್ಯಾದಿಯವರನ್ನು ಕರೆದುಕೊಂಡು ಕೃಷ್ನನು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದಲೆ ಓಡಿಸುತ್ತಿದ್ದು ಎಲ್ಲೇಮಾಳ ಗ್ರಾಮದಿಂದ ಸ್ವಲ್ಪ ಹಿಂದೆ ರಸ್ತೆಯಲ್ಲಿ ಎದುರಿನಿಂದ ಬಂದ ಯಾವುದು ಬಸ್ಸಿಗೆ ಸೈಡು ಬಿಡಲು ಕಾರನ್ನು ಏಕಾಏಕಿ ಎಡಕ್ಕೆ ತಿರುಗಿಸಿದಾಗ ಈತನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಪುಟ್ಪಾತ್ ಆಚೆಗಿನ ಮರ ಒಂದಕ್ಕೆ ಬಲಭಾಗಕ್ಕೆ ಡಿಕ್ಕಿಹೊಡೆದು ಪಕ್ಕಕ್ಕೆ ಮೊಗಚಿಕೊಂಡು ಹಳ್ಳಕ್ಕೆ ಬಿತ್ತು. ನೋಡಲಾಗಿ ಸಂಜಯ್ ಕುಮಾರಿಗೆ ಮುಖದ ಬಲಭಾಗ ಕಿತ್ತು ರಕ್ತಗಾಯವಾಗಿತ್ತು, ಲಾಲುಪ್ರಸಾದ್ಗೆ ಎಡಗೈರಕ್ತಗಾಯವಾಗಿತ್ತು ಕಾರನ್ನು ಓಡಿಸುತ್ತಿದ್ದ ಕೃಷ್ಣನಿಗೆ ಹಣೆ ಮೂಗು ಏಟಾಗಿ ಬಾಯಿ ಮತ್ತು ಮೂಗಿನಿಂದ ರಕ್ತ ಸುರಿಯುತ್ತಿತ್ತು ಉಳಿದವರಿಗೇಲ್ಲಾ ಅಲ್ಲಲ್ಲಿ ಮೂಗೆಟಾಗಿತ್ತು. ನಂತರದಲ್ಲಿ ನಾವೇಲ್ಲಾ ಸೇರಿ ಆ ಮಾರ್ಗದಲ್ಲಿ ಬಂದ ವಾಹನ ಒಂದರಲ್ಲಿ ಗಾಯಾಳುಗಳಾದ ಕೃಷ್ಣ ಸಂಜಯ್ ಕುಮಾರು, ಲಾಲುಪ್ರಸಾದ್, ಅವರನ್ನು ಹನೂರಿ ಸಕರ್ಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ, ಕೃಷ್ಣನು ಮಾರ್ಗಮದ್ಯದಲ್ಲಿ ಸತ್ತುಹೋಗಿರುತ್ತಾನೆ, ಸಂಜಯ್ ಕುಮಾರ, ಲಾಲು ಪ್ರಸಾದ್ಗೆ ಹನೂರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋಡಿಸಿದ್ದು ಇಲಿಂದ ಹೆಚ್ಚಿನ ಚಿಕಿತ್ಸೆಗೆ ಹೋಗಿರುತ್ತಾರೆ. ಕೃಷ್ಣರವರ ಶವ ಹನೂರು ಆಸ್ಪತ್ರೆಯ ಶವಗಾರದಲ್ಲಿ ಇರಿಸಿರುತ್ತದೆ ಈ ಅಪಘಾತಕ್ಕೆ ಕೃಷ್ಣನ ಅತಿವೇಗ & ಅಜಾಗರೂಕತೆಯೇ ಕಾರಣವಾಗಿರುತ್ತದೆ ಹೊರತು ಬೇರೇನು ಕಾರಣ ಇರುವುದಿಲ್ಲ ಎಂದು ಮುಂದಿನ ಕಾನೂನು ಕ್ರಮ ಜರೂಗಿಸಿಬೇಕೆಂದು ನೀಡಿದ ದೂರಿನ ಮೆರೆಗೆ.

5. ಗುಂಡ್ಲುಪೇಟೆ ಠಾಣೆ (ಮೊ ನಂ 103/2020) ದಿನಾಂಕ-17.03.2020 ರಂದು ರಾತ್ರಿ ಸುಮಾರು 8.15 ಗಂಟೆ ಸಮಯದಲ್ಲಿ ಕೋಡಹಳ್ಳಿ ಗ್ರಾಮದ ಶಿವಮೂತರ್ಿ ಮತ್ತು ಬನ್ನಿತಾಳಪುರ ಗ್ರಾಮದ ಮಹೇಶ್ ಎಂಬುವರು ಕೆ.ಎ-10-ಜೆ-6978 ಮೋಟಾರ್ ಬೈಕಿನಲ್ಲಿ ಗುಂಡ್ಲುಪೇಟೆ ಕಡೆಯಿಂದ ಬನ್ನಿತಾಳಪುರ ಗ್ರಾಮಕ್ಕೆ ಹೋಗಲು ಬಂದು ಎ.ಪಿ.ಎಂ.ಸಿ ಮಾರುಕಟ್ಟೆ ಎದುರುಗಡೆ ಇರುವ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲನ್ನು ಹಾಕಿಸಿಕೊಂಡು ಮುಖ್ಯ ರಸ್ತೆಗೆ ಬಂದು ಬನ್ನಿತಾಳಪುರ ಗ್ರಾಮಕ್ಕೆ ಎ.ಪಿ.ಎಂ.ಸಿ ಮಾರುಕಟ್ಟೆ ಮುಂಭಾಗ ಹೋಗುತ್ತಿದ್ದಾಗ, ನಂಜನಗೂಡು ಕಡೆಯಿಂದ ಗುಂಡ್ಲುಪೇಟೆ ಕಡೆಗೆ ಬಂದ ಕೆ.ಎ-10-ಎಫ್-0237 ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಶಿವಮೂತರ್ಿಯ ಮೋಟಾರ್ ಬೈಕ್ಗೆ ಡಿಕ್ಕಿ ಮಾಡಿಸಿದ್ದು, ಶಿವಮೂತರ್ಿ ಮತ್ತು ಮಹೇಶ ಕೆಳಕ್ಕೆ ಬಿದ್ದುಕೊಂಡಾಗ, ಮೋಟಾರ್ ಬೈಕ್ ಚಾಲನೆ ಮಾಡುತ್ತಿದ್ದ ಶಿವಮೂತರ್ಿಯ ತಲೆ, ಮೈಕೈಗೆ ಏಟಾಗಿ ರಕ್ತಶ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮಹೇಶನಿಗೆ ತಲೆ, ಮೈಕೈಗೆ ಏಟಾಗಿ 108 ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗೆ ಸಂಬಂಧ ಆಸ್ಪತ್ರೆಗೆ ದಾಖಲಿಸಿರುತ್ತದೆ. ಶಿವಮೂತರ್ಿಯನ್ನು ಒಂದು ಕಾರಿನಲ್ಲಿ ಹಾಕಿಕೊಂಡು ಗುಂಡ್ಲುಪೇಟೆ ಸಕರ್ಾರಿ ಆಸ್ಪತ್ರೆಗೆ ಹಾಕಲಾಗಿರುತ್ತದೆ. ಈ ಅಪಘಾಥಕ್ಕೆ ಕಾರಣನಾದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ.


Your Comment

Name :
Email:
Comment:
Submit

Website Designed and Developed by Global Buzz®