• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 15-03-2020

No of views : 16       No of Comments : 0

1. ಚಾಮರಾಜನಗರ ಪೂರ್ವ ಠಾಣೆ (ಮೊ,ನಂ 46/2020) ಪಿರ್ಯಾದಿ ಸಿ .ಎಸ್ ಸುಂದರ್ ಚಾಟೀಪುರ ಗ್ರಾಮರವರು ನೀಡಿದ ದೂರಿನಲ್ಲಿ, ದಿ: 14-03-2020 ರಂದು ರಾತ್ರಿ ಸುಮಾರು 09:30 ಗಂಟೆಯಲ್ಲಿ ನನ್ನ ಮಗ ಅರುಣ್ ನನಗೆ ಫೋನ್ ಮಾಡಿ ನಮ್ಮ ಬೀದಿಯ ಸುಂದರರಾಜುವಿಗೆ ಇರಸವಾಡಿ ಕೋಡಿ ಹತ್ತಿರ ರಸ್ತೆಯಲ್ಲಿ ಅಕ್ಸಿಡೆಂಟ್ ಆಗಿ ಪೆಟ್ಟಾಗಿದೆ ಎಂದು ತಿಳಿಸಿದಾಗ ನಾನು ಹಾಗೂ ನಮ್ಮ ಗ್ರಾಮದ ರಾಘವೇಂದ್ರ, ಗಿರೀಶ ರವರು ಹೋಗಿ ನೋಡಲಾಗಿ ನಮ್ಮ ಬೀದಿಯ ಸುಂದರರಾಜುವಿಗೆ ಎರಡೂ ಕೈಗಳು, ಬಲದ ಕಾಲು, ಮೂಗಿಗೆ ಏಟಾಗಿದ್ದು, ಮುಜು ಎಂಬುವರಿಗೆ ತಲೆಯ ಹಿಂಭಾಗಕ್ಕೆ ಏಟಾಗಿ ಕಿವಿ ಹಾಗೂ ಮೂಗಿನಿಂದ ರಕ್ತ ಬರುತ್ತಿತ್ತು. ಪಕ್ಕದಲ್ಲಿಯೇ ಕೆಎ-10, ವೈ-5196 ರ ಹೋಡಾ ಐನ್ ಬೈಕ್ ಸಹ ಬಿದ್ದಿತ್ತು. ನನಗೆ ಸುಂದರರಾಜು ಯಳಂದೂರು ಕಡೆಯಿಂದ ತನ್ನ ಬೈಕ್ ನಲ್ಲಿ ನಮ್ಮ ಊರಿಗೆ ಬರುವಾಗ ಮುಜುನನ್ನು ಸಹ ತನ್ನ ಬೈಕಿನಲ್ಲಿ ಕೂರಿಸಿಕೊಂಡು ನಮ್ಮೂರಿನ ಕಡೆಗೆ ಬರುವಾಗ ರಾತ್ರಿ ಸುಮಾರು 09:15 ಗಂಟೆಯಲ್ಲಿ ರಸ್ತೆಯ ತಿರುವಿನಲ್ಲಿ ಬೈಕನ್ನು ಜೋರಾಗಿ ಮತ್ತು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬೈಕ್ ಕಂಟ್ರೋಲ್ ಮಾಡಲಾಗದೇ ರಸ್ತೆಯ ಬದಿಯ ಹಳ್ಳಕ್ಕೆ ಬಿಟ್ಟ ಪರಿಣಾಮ ಈ ಅಪಘಾತವಾಗಿರುತ್ತದೆ ಎಂದು ತಿಳಿಸಿದನು. ನಂತರ ಇವರನ್ನು ಚಿಕಿತ್ಸೆಗಾಗಿ ಯಳಂದೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದುಕೊಂಡು ಹೋಗಿ ಈ ದಿನ ತಡವಾಗಿ ಬಂದು ಅಪಘಾತದ ಸಂಬಂಧ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ,ವ,ವರದಿ.

2. ಹನೂರು ಠಾಣೆ (ಮೊ,ನಂ 31/2020) ಗಾಯಾಳು ಮುನಿಯಮ್ಮ ಗೂಳ್ಯದ ಬಯಲು ಗ್ರಾಮರವರು ನೀಡಿದ ದೂರಿನಲ್ಲಿ ಹೇಳಿಕೆ ಸಾರಾಂಶವೇನೆಂದರೆ, ದಿನಾಂಕ 14.03.2020 ರಂದು ಸಂಜೆ 7.00 ಗಂಟೆ ಸಮಯದಲ್ಲಿ ನಮ್ಮ ಮಗಳ ಮಕ್ಕಳು ಬಯಲುದೇಸಿಗೆ ರಸ್ತೆ ಬದಿಗೆ ಹೋಗುತ್ತಿದ್ದಾಗ ನಮ್ಮ ಗ್ರಾಮದ ಸುಂದರಮ್ಮ, ಚಂದ್ರಮ್ಮ,ನಿಂಗಮ್ಮರವರುಗಳು ನಮ್ಮ ಮೊಮ್ಮಗಳನ್ನು ಏಕೆ ಇಲ್ಲಿ ಬಯಲುದೇಸೆಗೆ ಬಂದ್ದೀರಾ? ಎಂದು ಬೈಯುತ್ತಿದ್ದಾಗ ನಾನು ಮತ್ತು ನಮ್ಮ ಮಗಳು ಮೀನಾಕ್ಷಿ ಇಬ್ಬರು ಏಕೆ ಮಕ್ಕಳನ್ನು ಬೈಯುತ್ತಿದ್ದೀಯ ಜಾಗ ನಿಮ್ಮದಲ್ಲಾ ಹೋಗಲಿ ಬಿಡು ಎಂದು ಹೇಳಿದಾಗ ಸೊಳೆಮುಂಡೆ ನಿಮಗೆ ಎಷ್ಟು ಹೇಳಿದರು ನಿಮ್ಮ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬರುತ್ತೀರಾ ನಿಮಗೆ ಈ ದಿನ ಒಂದು ಗತಿ ಕಾಣಿಸುತ್ತೇನೆಂದು ಸುಂದ್ರಮ್ಮ ನನ್ನನ್ನು ಹಿಡಿದುಕೊಂಡು ಕೈಗಳಿಂದ ಬೆನ್ನಿಗೆ ಹೊಡೆದು ನನ್ನ ತಲೆ ಕೂದಲನ್ನು ಹಿಡಿದು ನನ್ನ ಎಳೆದು ಕೆಳಕ್ಕೆ ಬಿಳಿಸಿ ಕಾಲುಗಳಿಂದ ಒದೆಯುತ್ತಿದ್ದಾಗ, ನನ್ನ ಮಗಳು ಮೀನಾಕ್ಷಿ ಓಡಿ ಬಂದು ನನ್ನನ್ನು ಬಿಡಿಸುವಾಗ ಸುಂದ್ರಮ್ಮ, ಮತ್ತು ಚಂದ್ರಮ್ಮ ನಿಂಗಮ್ಮರವರುಗಳು ನನ್ನ ಮಗಳ ತಲೆ ಕೂದಲನ್ನು ಹಿಡಿದು ಎಳೆದಾಡಿ ಹೊಡೆಯುತ್ತಿದ್ದರು ನಾನು ಸುಧಾರಿಸಿಕೊಂಡು ಜಗಳ ಬಿಡಿಸಲು ಹೋದಾಗ ಮತ್ತೆ ನನಗೂ ಚಂದ್ರಮ್ಮ ಮತ್ತು ನಿಂಗಮ್ಮ ಹಿಡಿದು ಹೊಡೆಯುತ್ತಿದ್ದರು ಆಗ ಸುಂದ್ರಮ್ಮ ಅಲ್ಲೆ ಬಿದ್ದಿದ್ದ ದೊಣ್ಣೆಯಿಂದ ನನ್ನ ಕೈ ಮತ್ತು ಬೆನ್ನಿಗೆ ಹೊಡೆದಾಗ ನಾನು ಕೆಳಗೆ ಬಿದ್ದುಬಿಟ್ಟೆ ನಂತರ ನನ್ನ ಮಗಳನ್ನು ಹೊಡೆಯಲು ಮುಂದದಾಗ ನನ್ನ ಗ್ರಾಮದ ರತ್ನಮ್ಮ ಮತ್ತು ಮಂಜರವರುಗಳು ಬಂದು ಜಗಳ ಬಿಡಿಸಿ ನಮ್ಮನ್ನು ಸುಧಾರಿಸಿದರು. ನಂತರ ಸುಂದ್ರಮ್ಮ ನನಗೆ ಹೊಡೆದ ದೊಣ್ಣೆಯನ್ನು ಎತ್ತಿಇಟ್ಟು ನಾನು ಮತ್ತು ನನ್ನ ಮಗಳ ಕೊಳ್ಳೇಗಾಲ ಸಕರ್ಾರಿ ಆಸ್ಪತ್ರೆಗೆ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾದೇವು ಆದ್ದರಿಂದ ನನ್ನ ಮತ್ತು ನನ್ನ ಮಗಳ ಮೇಲೆ ಹೊಡೆದು ನೋವುಂಟು ಮಾಡಿದ ಸುಂದ್ರಮ್ಮ ಚಂದ್ರಮ್ಮ ನಿಂಗಮ್ಮ ರವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ

5.ಹನೂರು ಠಾಣೆ (ಮೊ,ನಂ 32/2020) ಮಂಗಲ ಗ್ರಾಮದ ಗುಂಡಾಲ್ ಜಲಾಶದ ಚಾನಲ್ನ ಪಕ್ಕದಲ್ಲಿರುವ ಪರಿಶಿಷ್ಟ ಜನಾಂಗದವರ ರುಧ್ರಭೂಮಿ ಬಳಿ ಹತ್ತಿರ ಜೀಪನ್ನು ಮರೆಯಾಗಿ ನಿಲ್ಲಿಸಿ, ನೋಡಲಾಗಿ ಗುಂಡಾಲ್ ಜಲಾಶದ ಚಾನಲ್ನ ಪಕ್ಕದಲ್ಲಿ ಹಾದು ಹೋಗಿರುವ ಸಾರ್ವಜನಿಕರು ತಿರುಗಾಡುವ ಹೋಣಿ ರಸ್ತೆಯ ಬದಿಯಲ್ಲಿರುವ ಬೇವಿನ ಮರೆದ ಕೆಳಗಡೆ ಕೆಲವು ಆಸಾಮಿಗಳು ಒಂದು ಪ್ಲಾಸ್ಟಿಕ್ ತಾಟಿನ ಮೇಲೆ ವೃತ್ತಾಕಾರದಲ್ಲಿ ಕುಳಿತು ಇಸ್ಪೀಟ್ ಕಾರ್ಡನ್ನು ಇಟ್ಟುಕೊಂಡು ಹಣವನ್ನು ಪಣವನ್ನಾಗಿ ಕಟ್ಟಿಕೊಂಡು ಆಡುತ್ತಿರುವುದು ಖಚಿತವಾದ ಮೇರೆಗೆ ನಾವುಗಳೆಲ್ಲಾ ಅವರನ್ನು ಸುತ್ತುವರಿದು ಹಿಡಿದುಕೊಂಡು ಕಲಂ-07 ರಲ್ಲಿ ಕಂಡ ಆರೋಪಿಗಳನ್ನು ಅಲ್ಲಿಯೇ ಕೂರಿಸಿ ಒಂದು ಲಿಖಿತ ದೂರನ್ನು ಪಿಸಿ-358 ಶಿವಕುಮಾರಸ್ವಾಮಿ ರವರ ಹಸ್ತ ಠಾಣೆಗೆ ಕೊಟ್ಟು ಕಳುಹಿಸಿ ಮುಂದಿನ ಕ್ರಮವನ್ನು ಕೈಗೊಂಡು ಮಹಜರ್ ಕ್ರಮವನ್ನು ಜರುಗಿಸಿಕೊಂಡು ಆರೋಪಿತರುಗಳಿಗೆ ಪಂಚರುಗಳ ಸಮಕ್ಷಮ ಸಿಆರ್ಪಿಸಿ 41 (ಎ) ರೀತ್ಯಾ ನೋಟೀಸ್ ಜಾರಿ ಮಾಡಿ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ ಹಿಂತಿರುಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ಸೂಚಿರುತ್ತೇನೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 6. ಯಳಂದೂರು ಠಾಣೆ (ಮೊ,ನಂ 23/2020) ಫಿರ್ಯಾಧಿಯವರಾದ ಆರ್. ಕುಮಾರ ವೈ. ಕೆ. ಮೋಳೆ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ನನ್ನ ಎರಡನೇ ಮಗ ಸಿದ್ದಾರ್ಥ , ಬ ನಮ್ಮ ಮನೆಯ ಹತ್ತಿರವಿರುವ ಯರಿಗಯ್ಯನ ಕೆರೆ ಹತ್ತಿರ ಕರೆದುಕೊಂಡು ಹೋದೆನು. ಕೆರೆಯ ತೂಬಿನ ನೇರದಲ್ಲಿರುವ ಯಳಂದೂರು - ಕಾಗಲವಾಡಿ ರಸ್ತೆಯ ಎಡಭಾಗದಲ್ಲಿ ನನ್ನ ಮಗ ರಸ್ತೆ ಅಂಚಿನಲ್ಲಿ ಸುಮಾರು 09:40 ರಲ್ಲಿ ನಿಂತಿರುವಾಗ ಟಿಎನ್36 ಎಕ್ಸ್ 9326 ಕಾರ್ ಚಾಲಕ ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಪಕ್ಕದಲ್ಲಿ ನಿಂತಿದ್ದ ನ್ನನ ಮಗನಿಗೆ ಡಿಕ್ಕಿ ಹೊಡೆದನು ನೋಡಲಾಗಿ ನನ್ನ ಮಗನು ನೆಲದ ಮೇಲೆ ಬಿದ್ದಿದನು. ನೋಡಲಾಗಿ ಆತನ ಎರಡು ಮಂಡಿಗಳು, ಬಲಗಾಲಿನ ತೊಡೆಗೆ ಮತ್ತು ಇತರ ಕಡೆಗಳಿಗೆ ಪೆಟ್ಟಾಗಿದ್ದವು. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರ ಮೇರೆಗೆ ಹೋಗಿ ಜಿಲ್ಲಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿ ಬಲಗಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು ಆ ಕಾರಣದಿಂದ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದೇನೆ. ಆದ್ದರಿಂದ ಅಪಘಾತ ಮಾಡಿದ ಕಾರ್ ನಂಬರ್ ಟಿಎನ್ 36 ಎಕ್ಸ್ 9326 ಮಾರುತಿ ಡಿಜರ್ ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ ವ ವರದಿ.

7. ಯಳಂದೂರು ಠಾಣೆ (ಮೊ,ನಂ 24/2020) ಪಿರ್ಯಾದಿ ಕೆ. ನಂಜುಂಡಸ್ವಾಮಿ ಕೆಸ್ತೂರು ಗ್ರಾಮರವರು ನೀಡಿದ ಲಿಖಿತ ದೂರಿನ ಸಾರಾಂಶವೆಂದರೆ ಅವರ ಅಣ್ಣ ಚಿನ್ನಸ್ವಾಮಿ ಮತ್ತು ಜೆ.ಮಹದೇವಪ್ಪ ಬೈಕ್ನಲ್ಲಿ ಕೆಸ್ತೂರು ಗ್ರಾಮದಿಂದ ಯಳಂದೂರು ಕಡೆಗೆ ಕೆ.ಎ.-09 ಈ.ಜಿ-4302 ಸಿಟಿ-100 ಬೈಕ್ನಲ್ಲಿ ಬರುತ್ತಿದ್ದಾಗ, ನಮ್ಮ ಗ್ರಾಮದ ಪುಟ್ಟರಾಜಗೌಡರ ಜಮೀನಿನ ಹತ್ತಿರ ರಸ್ತೆಯಲ್ಲಿ ಯಳಂದೂರು ಕಡೆಯಿಂದ ಕೆಸ್ತೂರು ಗ್ರಾಮದ ಕಡೆ ಹೋಗುತ್ತಿದ್ದು, ಕೆ.ಎ.-10 ಕ್ಯೂ-5830 ಹೋಂಡಾ ಶೈನ್ ಬೈಕ್ ಬೈಕ್ ಸವಾರ ಅತೀ ವೇಗವಾಗಿ ಅಜಾಗರೂಕತೆಯಿಂದ ಬೈಕ್ಅನ್ನು ಓಡಿಸಿಕೊಂಡು ಬಂದು ಡಿಕ್ಕಿಹೊಡೆಸಿದ ಪರಿಣಾಮ ಅವರ ಅಣ್ಣ ಬೈಕ್ ಓಡಿಸುತ್ತಿದ್ದು ಹಿಂಭಾಗದಲ್ಲಿ ಕುಳಿತಿದ್ದ ಮಹದೇವಪ್ಪ ಬೈಕ್ ಸಮೇತ ರೋಡಿಗೆ ಬಿದ್ದು ಅವರ ಅಣ್ಣನಿಗೆ ಬಲಗಾಲಿಗೆ ರಕ್ತಗಾಯವಾಗಿರುತ್ತದೆ. ಮಹದೇವಪ್ಪನಿಗೆ ಕಾಲಿನಲ್ಲಿ ಏಟಾಗಿದೆ. ಆದ್ದರಿಂದ ನನ್ನ ಅಣ್ಣ ಚಿನ್ನಸ್ವಾಮಿಗೆ ಅಪಘಾತ ಪಡಿಸಿರುವ ಕೆ.ಎ.-10 ಕ್ಯೂ-5830 ಬೈಕ್ ಮತ್ತು ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.


8. ಕೊಳ್ಳೇಗಾಲ ಪಟ್ಟಣ ಠಾಣೆ (ಮೊ ನಂ 44/2020) ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಮಚಂದ್ರ ಹೆಚ್ಸಿ-273 ರವರು ಠಾಣಾ ಸಿಬ್ಬಂದಿಗಳಾದ ಪಿಸಿ-301,ಪಿಸಿ-302 ರವರ ಜೊತೆಯಲ್ಲಿ ಗಸ್ತು ಮಾಡುತ್ತಿದ್ದಾಗ ಬಾಪುನಗರದ ಕ್ರಾಸ್ ಬಳಿ ನಾವು ಮೂರು ಜನರು ಸೇರಿ ಟಿ.ವಿ.ಎಸ್. ಎಕ್ಸ್ಎಲ್ ಮೊಪೆಡ್ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ತಡೆದಾಗ, ಆ ವ್ಯಕ್ತಿಯು ನಮ್ಮನ್ನು ನೋಡಿ ಟಿ.ವಿ.ಎಸ್ ಮೊಪೆಡ್ನ್ನು ಮರಳಿನ ಮೂಟೆಗಳ ಸಮೇತ ಬಿಟ್ಟು ಓಡಿ ಹೋದನು. ವಾಹನವನ್ನು ಪರಿಸಿಶೀಲಿಸಿ ನೋಡಿದಾಗ ಏಂ-10-ಇ-9805 ಖಿಗಿಖ ಘಿಐ ಖಣಠಿಜಡಿ ಮೊಪೆಡ್ ಆಗಿದ್ದು, ಸದರಿ ಆಸಾಮಿಯು ಮರಳನ್ನು ಕಳ್ಳತನ ಮಾಡಿಕೊಂಡು ರಾಜಧನ ನೀಡದೆ, ಅಕ್ರಮವಾಗಿ ಟಿ.ವಿ.ಎಸ್. ಮೊಪೆಡ್ನಲ್ಲಿ ಮೂರು ಮರಳಿನ ಮೂಟೆಗಳನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿರುವುದು ದೃಢಪಟ್ಟಿದ್ದರಿಂದ ಮೇಲ್ಕಂಡ ಏಂ-10-ಇ-9805 ಖಿಗಿಖ ಘಿಐ ಖಣಠಿಜಡಿ ಮೊಪೆಡ್ ಮತ್ತು ಮೂರು ಮರಳಿನ ಮೂಟೆಗಳನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿ ಮೇರೆಗೆ ಪ್ರ ವ ವರದಿ
9. ಕೊಳ್ಳೇಗಾಲ ಪಟ್ಟಣ ಠಾಣೆ (ಮೊ ನಂ 43/2020) ದಿನಾಂಕ:-15-03-2020 ರಂದು ಪಿರ್ಯಾದಿ ಪುಷ್ಪಲತಾ ಕೊಳ್ಳೇಗಾಲ ಟೌನ್ರವರು ನೀಡಿದ ದೂರಿನಲ್ಲಿ ದಿನಾಂಕ 10-03-2020 ರಂದು ಬೆಳಿಗ್ಗೆ 09:00 ಗಂಟೆಗೆ ನನ್ನ ಗಂಡನಾದ ವಿಎಸ್ ವರದರಾಜು ರವರು ಮನೆಯಲ್ಲಿದ್ದಾಗ ನಾನು ನಮ್ಮ ತಾಯಿಯ ಮನೆಗೆ ಹೋಗಿ ತಿಂಡಿ ತೆಗೆದುಕೊಂಡು ವಾಪಸ್ ಬೆಳಿಗ್ಗೆ 10:30 ಗಂಟೆಗೆ ನನ್ನ ಗಂಡನ ಮನೆಗೆ ಬಂದಾಗ ನನ್ನ ಗಂಡ ವಿ ಎಸ್ ವರದರಾಜು ರವರು ಇರಲ್ಲಿಲ್ಲ ನಂತರ ನನ್ನ ಗಂಡನನ್ನು ಎಲ್ಲಾಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಆದ್ದರಿಂದ ಕಾಣೆಯಾಗಿರುವ ನನ್ನ ಗಂಡನನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರ ವ ವರದಿ.


Your Comment

Name :
Email:
Comment:
Submit

Website Designed and Developed by Global Buzz®