• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 14-03-2020

No of views : 5       No of Comments : 0

1. ಚಾಮರಾಜನಗರ ಪಟ್ಟಣ ಠಾಣೆ: (ಮೊ,ನಂ 27/2020) ಪಿರ್ಯಾದಿ ಮಹಮದ್ ಅಮೀನ್ ಗುಂಡ್ಲುಪೇಟೆ ರಸ್ತೆರವರು ನೀಡಿದ ದೂರಿನಲ್ಲಿ ದಿನಾಂಕ 09-03-2020 ರಂದು ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ನಮ್ಮ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ 10-03-2020 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ನಾನು ವಾಪಸ್ ನಮ್ಮ ಮನೆ ಹತ್ತಿರ ಹೋಗಿ ನೋಡಲಾಗಿ ನಾವುಗಳು ಯಾರೂ ಮನೆಯಲ್ಲಿ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲನ್ನು ಮೀಟಿ ಮನೆಯ ಒಳಗೆ ಹೋಗಿ ನಮ್ಮ ತಾಯಿಯವರು ಮಲಗಿಕೊಳ್ಳುವ ರೂಂ ಗೆ ಹೋಗಿ ರೂಂನಲ್ಲಿಟ್ಟಿದ್ದ ಗಾಡ್ರೇಜ್ ಬೀರನ್ನು ಸಹ ಹಾರೆಯಿಂದ ಮೀಟಿ ಬೀರುವಿನ ಒಳಗಿದ್ದ ಬಟ್ಟೆಗಳನ್ನು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬೀಸಾಡಿರುತ್ತಾರೆ, ನಂತರ ಮತ್ತೊಂದು ರೂಂ ಗೆ ಹೋಗಿ ಕಬೋಡರ್್ ಬಾಗಿಲನ್ನು ತೆಗೆದು ಕಬೋಡರ್್ನಲ್ಲಿಟ್ಟಿದ್ದ ಬಟ್ಟೆಗಳನ್ನು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬೀಸಾಡಿರುತ್ತಾರೆ, ಕಳ್ಳರು ಮಹಡಿ ಮೆಟ್ಟಿಲನ್ನು ಹತ್ತಿ ಮೇಲೆ ಹೋಗಿ ಇನ್ನೊಂದು ರೂಂನ ಒಳಗೆ ಹೋಗಿ ಕಬೋಡರ್್ ಬಾಗಿಲನ್ನು ತೆಗೆದು ನಾನು ರಟ್ಟಿನ ಡಬ್ಬದ ಒಳಗೆ ಹಾಕಿ ಇಟ್ಟಿದ್ದ 23,000-00 ರೂ ನಗದು ಹಣವನ್ನು ಕಳುವು ಮಾಡಿಕೊಂಡು ಡಬ್ಬವನ್ನು ಬೀಸಾಡಿ ಹೋಗಿರುತ್ತಾರೆ, ಹಾಗೂ ಕಬೋಡರ್್ನಲ್ಲಿ ಇದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಬೀಸಾಡಿರುತ್ತಾರೆ, ಹಾಗೂ ನನ್ನ ತಮ್ಮ ಮಲಗಿಕೊಳ್ಳುವ ರೂಂಗೆ ಹೋಗಿ ಕಬೋಡರ್್ನ್ನು ತೆಗೆದು ಕಬೋಡರ್್ನಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಬೀಸಾಡಿ ಹೋಗಿರುತ್ತಾರೆ, ಆದ್ದರಿಂದ ತಾವು ನನ್ನ ಬಾಬ್ತು 23,000-00 ರೂಗಳನ್ನು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆಹಚ್ಚಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ.

2. ಚಾಮರಾಜನಗರ ಪಟ್ಟಣ ಠಾಣೆ: (ಮೊ,ನಂ 28/2020) ಪಿರ್ಯಾದಿ ನಾಗರಾಜು ಹಂಗಳ ಗ್ರಾಮರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ರಾಮಸಮುದ್ರ ಪೊಲೀಸ್ ಠಾಣೆ ಮುಂದೆ ಇರುವ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದಾಗ ಅಲ್ಲಿಗೆ ಬಂದ ಅವರ ಷಡ್ಕ ರಾಜು ಬೋಳಿಮಕ್ಕಳೇ ಎಲ್ಲಾ ಸಪೋಟರ್್ಗೆ ಬಂದಿದ್ದೀರಾ ಎಂದು ಜಗಳ ತೆಗೆದು ಕತ್ತಿನ ಪಟ್ಟಿ ಹಿಡಿದುಕೊಂಡು ಬಿಡಿಸಲು ಬಂದ ಪಿರ್ಯಾದಿ ಹೆಂಡತಿ ತಲೆ ಹಿಡಿದಿಕೊಂಡು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದು ರಾಜು ಚಾಕುವಿನಿಂದ ಹಣೆ.ಎದೆ ಕತ್ತಿನ ಕೆಳಭಾಗಕ್ಕೆ ಚುಚ್ಚಿದ್ದು, ಕೊಲೆ ಬೆದರಿಕೆ ಹಾಕಿದ್ದು ಅಲ್ಲಿದ್ದವರು ಬಿಡಿಸಿರುತ್ತಾರೆ. ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ.

3. ಗುಂಡ್ಲುಪೇಟೆ ಠಾಣೆ (ಮೊ,ನಂ 100/2020) ಪಿರ್ಯಾದಿ ಮಣಿ ಕೆ.ಎಸ್.ಎನ್ ಬಡಾವಣೆ ಗುಂಢ್ಲುಪೇಟೆ ಟೌನ್ರವರು ನೀಡಿದ ದೂರಿನಲ್ಲಿ ಕೆ.ಎಸ್.ಎನ್ ಬಡವಾಣೆಯಲ್ಲಿರುವ ಬಸವರಾಜು ರವರು ಪಿರ್ಯಾದಿಯವರನ್ನು ಕರೆದು ಏಕೆ ಭಾಗ್ಯ ರವರನ್ನು ಮಾತನಾಡಿಸುತಿಲ್ಲ ಇಬ್ಬರು ನಮ್ಮ ಮನೆ ಹತ್ತರ ಬನ್ನಿ ನಾನು ಸಮಾದಾನ ಮಾಡಿಸುತ್ತೇನೆಂದು ಕರೆದು ಮೇಲ್ಕಂಡ ಬಸವರಾಠಜು, ದಾಕ್ಷಾಯಿಣಿ, ಭಾಗ್ಯ, ಆನಂದಮೂತರ್ಿರವರುಗಳು ಪಿರ್ಯಾದಿಯವರನ್ನು ಕೈಯಿಂದ ಕಪಾಲಕ್ಕೆ ಹೊಡೆದು ತಲೆಯ ಜುಟ್ಟನ್ನು ಹಿಡಿದು ಎಳೆದಾಡಿ, ಸೀರೆಯನ್ನು ಹಿಡಿದು ಎಳದೆ ಅವಮಾನ ಮಾಡಿ ಕೈಯಿಂದ ಕತ್ತನ್ನು ಹಿಡಿದು ತಳ್ಳಿ ಆನಂದ ಮೂತರ್ಿ ಎಂಬುವನು ಈಕೆಯನ್ನು ಬಿಡಬೇಡಿ ಹೊಡೆದು ಸಾಯಿಸಿ ಎಂದು ಕುಮ್ಮಕ್ಕು ನೀಡಿ ಕೊಲೆ ಬೆದರಿಕೆ ಹಾಕಿದ್ದು ಈ ಸಂಬಂಧ ಅವಮಾನ ತಾಳಲಾರದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಇದೆಲ್ಲದಕ್ಕು ಮೇಲ್ಕಂಡವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

4. ಗುಂಡ್ಲುಪೇಟೆ ಠಾಣೆ (ಮೊ,ನಂ 101/2020) ಪಿಯರ್ಾದಿ ಚಿಕ್ಕಶೆಟ್ಟಿ ಕೂತನೂರು ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ-13-03-2020 ರಂದು ಸಂಜೆ 6.30 ಗಂಟೆ ಸಮಯದಲ್ಲಿ ನಾನು ಕೆಲಸ ಮಾಡುವ ಶಿವಮೂತರ್ಿ ರವರತರಕಾರಿಅಂಗಡಿ ಹತ್ತಿರ ನಿಂತಿದ್ದಾಗ, ಮಹದೇವಸ್ವಾಮಿ ಮತ್ತುಆತನತಮ್ಮಕುಮಾರ, ಅವರತಂದೆ ಸಿದ್ದಶೆಟ್ಟಿ ಮೂರುಜನರು ನಾನಿದ್ದ ಬಳಿಗೆ ಬಂದು ಮಹದೇವಸ್ವಾಮಿ ನನ್ನನ್ನು ನೋಡಿಗುರಾಯಿಸುತ್ತಿದ್ದ. ನಾನು ಏಕೆ ಗುರಾಯಿಸುತ್ತೀಯಾಎಂದು ಕೇಳಿದಾಗ, ಬೋಳಿಮಗನೆ ನೀನು, ನಿಮ್ಮಅಜ್ಜಿಚಿಕ್ಕಗೋಪಮ್ಮಇಬ್ಬರು ಸೇರಿಕೊಂಡು ನಿಮ್ಮ ಅಕ್ಕಳಿಗೆ ಹೇಳಿ ಹುಡುಗಿಯನ್ನುಕೊಡಿಸಲಿಲ್ಲ. ನಿಮ್ಮಿಂದ ನನಗೆ ಹೆಣ್ಣುಕೊಡಲಿಲ್ಲ. ಎಂದು ಬೈಯ್ಯುತ್ತಿದ್ದಾಗ, ನಾನೇನು ಮಾಡಿದೆಎಂದು ಹೇಳಿದಾಗ, ಕುಮಾರಕೈಯಲ್ಲಿದ್ದ ಕೋಲಿನಿಂದ ನನ್ನ ಮೈಕೈಗೆ ಹೊಡೆದನು. ನನಗೆ ಹೊಡೆಯುತ್ತಿದ್ದುದನ್ನು ನೋಡಿ ನಮ್ಮಅಜ್ಜಿಗೋಪಮ್ಮ @ ಚಿಕ್ಕಗೋಪಮ್ಮ, ನಮ್ಮತಾಯಿ ಮಾದಮ್ಮ, ಅಕ್ಕ ಸಿದ್ದಮ್ಮ ರವರು ಬಿಡಿಸಲು ಬಂದಾಗ, ಮಹದೇವಸ್ವಾಮಿ ನಮ್ಮಅಜ್ಜಿಯನ್ನು ನೋಡಿ ಬೋಳಿಮಗಳೆ ನೀನು ಬಂದಿದ್ದೀಯಾ ನಿನ್ನಿಂದ ನನಗೆ ಹುಡುಗಿಕೊಡಲಿಲ್ಲ, ನೀನು ಬದುಕಿದ್ದರೆತಾನೆ ನಿನಗೆ ಒಂದುಗತಿಕಾಣಿಸುತ್ತೇನೆಂದು ಕೊಲೆ ಮಾಡುವಉದ್ದೇಶದಿಂದಲೇತನ್ನಕೈಯಲ್ಲಿದ್ದ ಮಚ್ಚಿನಿಂದ ನಮ್ಮಅಜ್ಜಿಯತಲೆಗೆ ಹೊಡೆದು ರಕ್ತಗಾಯಪಡಿಸಿದನು. ಅಷ್ಟಕ್ಕೆ ಬಿಡಿಸಲು ಬಂದ ನಮ್ಮ ಅಕ್ಕ ಸಿದ್ದಮ್ಮಳಿಗೆ ಸಿದ್ದಶೆಟ್ಟಿ ಕೈಗಳಿಂದ ಮೈಕೈಗೆ ಹೊಡೆದನು. ಅಷ್ಟಕ್ಕೆ ಗಲಾಟೆ ನೋಡಿತಾವರೆಗಟ್ಟೆಶೆಟ್ಟಿ ಮಗ ಮಾದಶೆಟ್ಟಿರವರು ಬಂದು ಜಗಳ ಬಿಡಿಸಿ ಸಮಾಧಾನಪಡಿಸಿದರು. ಮಹದೇವಸ್ವಾಮಿತನ್ನಕೈಯಲ್ಲಿದ್ದ ಮಚ್ಚನ್ನು ಮತ್ತುಕುಮಾರದೊಣ್ಣೆಯನ್ನುಅಲ್ಲಿಯೇ ಬಿಸಾಕಿ ಈ ದಿನ ಬದುಕಿಕೊಂಡಿದ್ದೀರಾಇನ್ನೊಂದು ದಿನ ನಿಮಗೆ ಸರಿಯಾಗಿ ಬುದ್ದಿ ಕಲಿಸುತ್ತೇನೆಂದು ಕೊಲೆ ಬೆದರಿಕೆ ಹಾಕಿ ಹೊರಟು ಹೋದರು. ನನಗೆ ಮತ್ತು ನಮ್ಮಅಜ್ಜಿಗೋಪಮ್ಮ @ ಚಿಕ್ಕಗೋಪಮ್ಮಳ ತಲೆಗೆಏಟಾಗಿರಕ್ತ ಬರುತ್ತಿದ್ದರಿಂದಗುಂಡ್ಲುಪೇಟೆ ಸಕರ್ಾರಿಆಸ್ಪತ್ರೆಗೆಒಂದುಆಟೋದಲ್ಲಿ ಬಂದುಚಿಕಿತ್ಸೆಯನ್ನು ಪಡೆದುಕೊಂಡೆವು. ಮೇಲ್ಕಂಡವರ ಮೇಲೆ ಕಾನೂನು ರೀತಿಕ್ರಮ ಜರುಗಿಸಿ ಎಂದು ನೀಡಿದದೂರು.

5. ಬೇಗೂರು ಠಾಣೆ (ಮೊ,ನಂ 39/2020) ಫಿರ್ಯಾದಿ ನಾಗರಾಜು ಆಲತ್ತೂರು ಗ್ರಾಮರವರು ನೀಡಿದ ದೂರಿನಲ್ಲಿ ಅವರ ಭಾವ ಮಹದೇವಸ್ವಾಮಿ ರವರು ತಮ್ಮ ಬಾಬ್ತು ಕೆಎ-10-ವೈ-1351 ರ ಮೋಟಾರ್ ಬೈಕಿನಲ್ಲಿ ಗರಗನಹಳ್ಳಿ ಗೇಟಿನಿಂದ ಗುಂಡ್ಲುಪೇಟೆ ಕಡೆಗೆ ರಾಷ್ಟ್ರೀಯ ಹೆದ್ದಾರಿ 766 ರ ರಸ್ತೆಯಲ್ಲಿ ಎಡಭಾಗದಲ್ಲಿ ಹೋಗುತ್ತಿದ್ದಾಗ ಎದುರುಗಡೆ ಗುಂಡ್ಲುಪೇಟೆ ಕಡೆಯಿಂದ ಕೆಎ-09-ಇವೈ-6220 ರ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಬೈಕನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದ ಕೆಎ-09-ಹೆಚ್ಬಿ-7891 ರ ಮೋಟಾರ್ ಬೈಕಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿ ನಂತರ ಬೈಕನ್ನು ನಿಯಂತ್ರಿಸಲಾಗದೇ ರಸ್ತೆಯ ಬಲಭಾಗದಲ್ಲಿ ಗುಂಡ್ಲುಪೇಟೆ ಕಡೆಗೆ ಹೋಗುತ್ತಿದ್ದ ಮಹದೇವಸ್ವಾಮಿ ರವರ ಬೈಕಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ ಮಹದೇವಸ್ವಾಮಿ ಮತ್ತು ಇತರರಿಗೆ ಏಟಾಗಿ ರಕ್ತಗಾಯವಾಗಿದ್ದು, ನಂತರ ಸದರಿ ಮೂರೂ ಬೈಕಿನ ಗಾಯಾಳುಗಳನ್ನು ಗುಂಡ್ಲುಪೇಟೆ ಸಕರ್ಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ತಡವಾಗಿ ಬಂದು ದೂರು ನೀಡುತ್ತಿರುವುದಾಗಿ ಕೆಎ-09-ಇವೈ-6220 ರ ನಂಬರಿನ ಮೋಟಾರ್ ಬೈಕ್ ಸವಾರನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

6. ತೆರಕಣಾಂಬಿ ಠಾಣೆ (ಮೊ,ನಂ 28/2020) ದಿನಾಂಕ. 14-03-2020 ರಂದು ಸಂಜೆ 5-30 ಗಂಟೆಯಲ್ಲಿ ಪಿರ್ಯಾದಿ ಶ್ರೀಮತಿ ಪಾರ್ವತಮ್ಮ ಕಬ್ಬಹಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ಗುಂಡ್ಲುಪೇಟೆಯ ಇಕ್ವೀಟಾಸ್ ಬ್ಯಾಂಕಿನಲ್ಲಿ 3 1/2 ಲಕ್ಷ ಹಣವನ್ನು ಸಾಲವಾಗಿ ಪಡೆದಿದ್ದು ಪ್ರತಿ ತಿಂಗಳು ಸಾಲದ ಹಣವನ್ನು ಮರುಪಾವತಿ ಮಾಡುತ್ತಿದ್ದು ಈಗ್ಗೆ 2 ತಿಂಗಳಿನಿಂದ ನನ್ನ ಪತಿಗೆ ಅನಾರೋಗ್ಯವಾದ ಕಾರಣ ಮರು ಪಾವತಿ ಮಾಡಿರಲಿಲ್ಲ ಈ ಬಗ್ಗೆ ನಮ್ಮ ಗಾಡಿಯನ್ನು ದಿನಾಂಕ 15-04-2019 ರಂದು ತೆಗೆದುಕೊಂಡು ಹೋಗಿದ್ದು ನಂತರ ದಿನಾಂಕ 12-03-2020 ರಂದು ಮದ್ಯಾಹ್ನ 12-30 ಗಂಟೆಯ ಸಮಯದಲ್ಲಿ ಬ್ಯಾಂಕಿನ 3 ಜನ ಸಿಬ್ಬಂದಿಗಳು ನಮ್ಮ ಮನೆಯ ಹತ್ತಿರ ಬಂದು ನಮ್ಮ ಬೈಕ್ ಬಿಟ್ಟು ನಾನು ಒಬ್ಬಳೆ ಮನೆಯ ಹತ್ತಿರ ಇದ್ದಾಗ ಅವಾಛ್ಯ ಶಬ್ದಗಳಿಂದ ಬೈದು ನನ್ನನ್ನು ತುಂಬಾ ನಿಂದಿಸಿದರು ಹಣ ಕಟ್ಟಲಿಕ್ಕೆ ಆಗದಿದ್ದರೆ ನೀ ಬಾ ಎಂದು ಮಾನಹೀನಾ ಶಬ್ದಗಳಿಂದ ಬೈದು ಹೋಗಿದ್ದಾರೆ ಸದರಿಯವರ ಮೇಲೆ ಕ್ರಮ ಜರುಗಿಸಬೇಕಾಗಿ ಹಾಗೂ ದಿನಾಂಕ. 15-04-2019 ರಿಂದ 13-03-2020 ರ ವರೆಗೆ ಬೈಕನ್ನು ಬಳಸಿದ್ದಲ್ಲಿ ಅದಕ್ಕೆ ನಾವು ಜವಬ್ದಾರರಲ್ಲ ಈ ಅವದಿಯಲ್ಲಿ ಅವರೇ ಹೊಣೆಗಾರರು ಈ ಬಗ್ಗೆ ಕರೆಯಿಸಿ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ

7. ರಾಮಾಪುರ ಠಾಣೆ (ಮೊ ನಂ 99/2020) ಫಿರ್ಯಾದಿ ಕರುಣಾಕರ್ ಮುತ್ತುಶೆಟ್ಟಿಯೂರು ಗ್ರಾಮರವರು ನೀಡಿದ ದೂರಿನ ಸಾರಾಂಶವೆನೆಂದರೆ ಅವರು 15- 20 ವರ್ಷಗಳಿಂದ ಗ್ರಾಮದ ಪಟ್ಟಲದಮ್ಮ ದೇವಿಯ ಪೂಜೆ ಮಾಡಿಕೊಂಡಿದ್ದು, ಮುಂದಿನ ತಿಂಗಳು ಹಬ್ಬ ವಿರುವುದರಿಂದ ಈ ದಿನ ದಿನಾಂಕ 14-03-2020 ರಂದು ಬೆಳಗಿನ ಜಾವ 04-00 ಗಂಟೆ ಸಮಯದಲ್ಲಿ ದೇವಸ್ಥಾನದ ಪೂಜೆ ಮಾಡುವ ಸಲುವಾಗಿ ಹೋದಾಗ ದೇವಸ್ಥಾನದ ಘಂಟೆಗಳ ಸದ್ದು ಆಗುತ್ತಿದ್ದು ನಂತರ ವೇಲು ರವರನ್ನು ಕರೆದುಕೊಂಡು ಹೋಗಿ ನೋಡಲಾಗಿ ಒಬ್ಬ ಹೆಂಗಸಿನ ಬಳಿ ನೋಡಲಾಗಿ ಮೇಲ್ಕಂಡ ಗಂಟೆಗಳು ಆಕೆಯ ಬ್ಯಾಗಿನಲ್ಲಿ ಇದ್ದವು ಮತ್ತು ಒಬ್ಬ ಗಂಡಸು ಓಡಿಹೋಗಿದ್ದು ಮೇಲ್ಕಂಡ ಆರೋಪಿಯು ಇನ್ನೋಬ್ಬನೊಂದಿಗೆ ಸೇರಿಕೊಂಡು ದೇಸ್ಥಾನದ ಗಂಟೆಗಳನ್ನು ಕಳ್ಳತನ ಮಾಡಿರುತ್ತಾರೆ ಎಂಬಿತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಈ ಪ್ರ ವರದಿ

8. ಹನೂರು ಠಾಣೆ (ಮೊ ನಂ 30/2020) ಪಿರ್ಯಾದಿ ಗಾಯಾಳು ಸುಂದ್ರಮ್ಮ ಕೋಂ ಗುರುಸ್ವಾಮಿರವರು ಗುಳ್ಯದಬಯಲುರವರ ದೂರನ್ನು ಸ್ವೀಕರಿಸಿ ನೋಡಲಾಗಿ ಸಾರಂಶವೇನೆಂದರೆ ದಿನಾಂಕ 13-03-2020 ರಣದು ರಾತ್ರಿ 08-00 ಗಂಟೆ ಸಮಯದಲ್ಲಿ ಪಿರ್ಯಾದಿ ಸುಂದ್ರಮ್ಮರವರ ಮನೆಯ ಮುಂದೆ ಹೊರಾಂಡದಲ್ಲಿ ಸುಬ್ರಮಣಿ ರವರ ಮಗಳಾದ ಮೀನಾಕ್ಷಿಯು ಮಲವಿಸರ್ಜನೆ ಮಾಡುತ್ತಿದ್ದಳು ಇದಕ್ಕೆ ಹೀಗೆ ಮಾಡಿದರೆ ನಮಗೆ ತೊಂದ್ರೆಯಾಗುತ್ತದೆ ಎಂದು ಹೇಳಿದಕ್ಕೆ ಸದ್ರಿ ಮೀನಾಕ್ಷಿಯೂ ನಾನು ಈಗೆ ಮಾಡುವುದು ಸೂಳೆಮುಂಡೆ ನೀನು ಯಾರು ನನ್ನನ್ನು ಕೇಳಲಿಕ್ಕೆ ಎಂದು ತೀಟೆ ಜಗಳ ತೆಗೆದು ನಿನ್ನುನ್ನು ಈ ದಿನ ಸಾಯಿಸದೆ ಬಿಡುವುದಿಲ್ಲವೆಂದು ತನ್ನ ಅಣ್ಣಂದಿರಾದ ಚಾಮುಂಡಿ, ಮುರುಗ, ಇಬ್ಬರನ್ನು ಕರೆಯಿಸಿ ನನ್ನನ್ನು ಹಿಡಿದು ಎಳೆದಾಡಿ ಸೀರೆಯನ್ನು ಎಳೆದು, ಮೈ ಕೈಗೆ ಹೊಡೆದಿರುತ್ತಾರೆ ಹಾಗೂ ಚಾಮುಂಡಿಯು ದೊಣ್ಣೆಯಿಂದ ಬಲ ತೊಡೆಗೆ ಹೊಡೆದು ಗಾಯಪಡಿಸಿದ್ದು, ಅಷ್ಟಕ್ಕೆ ಮೀನಾಕ್ಷಿ, ದೈವ ಹಾಗೂ ಮುನಿಯಮ್ಮ ರವರುಗಳು ಸಹ ಸ್ಥಳಕ್ಕೆ ಬಂದು ಈ ದಿನ ನಿನ್ನನ್ನು ಸಾಯಿಸದೇ ಬಿಡುವುದಿಲ್ಲವೆಂದು ನನಗೆ ಅವಮಾನ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ.

9. ಕೊಳ್ಳೇಗಾಲ ಗ್ರಾಮಾಂತರ ಠಾಣೆ (ಮೊ ನಂ 60/2020) ಪಿರ್ಯಾದಿ ಮಂಗಳಮ್ಮ ಸತ್ತೇಗಾಲ ಗ್ರಾಮರವರು ನೀಡಿದ ದೂರಿನ ಸಾರಾಂಶವೆನೆಂದರೆ ಈ ದಿನ ನನ್ನ ಗಂಡ ವೆಂಕಟಶೆಟ್ಟಿಯು ಗುಡ್ಡಯ್ಯನವರ ಟ್ರ್ಯಾಕ್ಟರ್ನಲ್ಲಿ ಕುಳಿತುಕೊಂಡು ಬರುತ್ತಿದ್ದಾಗ ಕಾಂತರಾಜುರವರ ಮನೆಯ ಮುಂದೆ ಇರುವ ರಸ್ತೆಯ ಹಂಪ್ಸ್ನಲ್ಲಿ ಟ್ರ್ಯಾಕ್ಟರ್ ಚಾಲಕನು ಟ್ರ್ಯಾಕ್ಟರ್ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಂಪ್ಸ್ ದಾಟಿಸುವಾಗ ನಿಮ್ಮ ಗಂಡ ವೆಂಕಟಶೆಟ್ಟಿಯು ಟ್ರ್ಯಾಕ್ಟರ್ನಿಂದ ಬಿದ್ದು ಎಡ ಕೆನ್ನೆಗೆ, ಎಡಭುಜಕ್ಕೆ ಗಾಯವಾಗಿ ಅವರನ್ನು ರಸ್ತೆಯ ಪಕ್ಕಕ್ಕೆ ಎತ್ತಿ ಪಾಲಕ್ಕೆ ಒರಗಿಸಿ ನೀರು ಕುಡಿಸಿ ಸುಧಾರಿಸುತ್ತಿದ್ದೆವು ಅಷ್ಟಕ್ಕೆ ಟ್ರ್ಯಾಕ್ಟರ್ ಚಾಲಕನು ಅಲ್ಲಿಂದ ಹೊರಟು ಹೋದನು ಆದರೆ ವೆಂಕಟಶೆಟ್ಟಿಯವರು ಅಷ್ಟರಲ್ಲಿ ಮೃತಪಟ್ಟರು ಎಂಬುದಾಗಿ ತಿಳಿಸಿದರು ಆದ್ದರಿಂದ ಸದರಿ ಟ್ರ್ಯಾಕ್ಟರ್ ಮತ್ತು ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ ವರದಿ.


Your Comment

Name :
Email:
Comment:
Submit

Website Designed and Developed by Global Buzz®