• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 12-03-2020

No of views : 28       No of Comments : 0

1. ಚಾಮರಾಜನಗರ ಪಟ್ಟಣ ಠಾಣೆ: (ಮೊ,ನಂ 24/2020) ಪಿರ್ಯಾದಿ ರಜೀಕ್ ಅಹಮದ್ ಚಾಮರಾಜನಗರ ಟೌನ್ರವರು ನೀಡಿದ ದೂರಿನಲ್ಲಿ ಅವರ ತಮ್ಮ ರಶೀದ್ ಅಹಮದ್ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು ಪಿರ್ಯಾದಿಯವರು ಏಕೆ ಏನಾಯಿತು ಎಂದು ಕೇಳಿದ್ದಕ್ಕೆ ನನ್ನ ತಮ್ಮನಿಗೆ ವ್ಯಾಪಾರದ ಸಂಬಂಧ
ಶಹಜಹಾನ್ ಮತ್ತು ತಬಸೀರ್ರವರುಗಳು ಲಾರಿ ನಿಲ್ದಾಣದಲ್ಲಿ ಅಂಗಡಿಗೆ ಬಂದು ಡಿಚ್ಚಿ ಹೊಡೆದು, ತಬಸೀರ್ ಮೂಗಿಗೆ ಹೊಡೆದಿದ್ದು , ಈ ಬಗ್ಗೆ ಪಿರ್ಯಾದಿ ಠಾಣೆಗೆ ದೂರು ನೀಡಿದ್ದು, ಮನೆಗೆ ಹೋಗುವಾಗ ಎಸ್.ಪಿ.ಎಸ್ ಮನೆಯ ಹತ್ತಿರ ಸುಮಾರು 11 ಗಂಟೆಗೆ ಫಾರೂಕ್ರವರನ್ನು ಯಾತಕ್ಕೆ ಸುಮ್ಮನೆ ನನ್ನ ತಮ್ಮನನ್ನು ಹೊಡೆದೆ ಎಂದು ಕೇಳುತ್ತಿದ್ದಾಗ ಆತನ ಮಗ ತಬಸೀರ್ ಕತ್ತಿಯನ್ನು ತೆಗೆದುಕೊಂಡು ಬಂದು ಎಡಗೈ ಬೆರಳು ಹತ್ತಿರ ಹೊಡೆದು ಶಹಜಹಾನ್ ರಾಡ್ನಿಂದ ಆತನ ಮಗ ಫಾರೂಖ್ ಗನ್ನಿಂದ ಎಡ ತೊಡೆಗೆ ಹೊಡೆದಿದ್ದು, ನಾನು ಕುಸಿದು ಬಿದ್ದಿರುತ್ತೇನೆ. ಅವರುಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ.

2. ಚಾಮರಾಜನಗರ ಪಟ್ಟಣ ಠಾಣೆ: (ಮೊ,ನಂ 25/2020) ಪಿರ್ಯಾದಿ ಹಸೀನ್ತಾಜ್ ಚಾಮರಾಜನಗರ ಟೌನ್ರವರು ನೀಡಿದ ದೂರಿನಲ್ಲಿ ನನ್ನ ಯಜಮಾನರು ಮನೆಗೆ ಬಂದು ನಮ್ಮೊಡನೆ ಊಟ ಮಾಡಿಕೊಂಡು ಕೂತಿದ್ದಾಗ ಅವರು ಸಂಜೆ ರಶಾದ್ ಅಹಮದ್ ಬಿನ್ ರಮೀಜ್ ಅಹಮದ್ ಇವರು ಮತ್ತು ತಮ್ಮ ಅಣ್ಣನ ಮಗನ ಮೇಲೆ ಹಲ್ಲೆಯಾದ ವಿಷಯವಾಗಿ ನಾವು ಚಚರ್ಿಸುತ್ತಿರುವಾಗ ಏಕಾ ಏಕಿ ನಮ್ಮ ಮನೆಯ ಹಿಂಭಾಗಿಲಿನಿಂದ ಜೋರಾಗಿ ಶಬ್ದ ಬಂದು ನಾವು ಯಾರೆಂದು ನೋಡಲು ಹೋದಾಗ ಮನೆಯ ಒಳ ಬಾಗಿಲಿಗೆ ಜೋರಾಗಿ ಕಾಲಿನಿಂದ ಒದ್ದು ಮುರಿಯಲು ಪ್ರಯತ್ನ ಪಡುತ್ತಿದ್ದನ್ನು ನಾವು ನೋಡಿ ಒಳಗಡೆಯಿಂದ ಬಾಗಿಲನ್ನು ಅಮಿಕಿ ಹಿಡಿದಿದ್ದು, ಆ ಸಮಯ ಹಲವಾರು ಜನ ನಮ್ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದು ಹೊರಗಡೆ ಬರಲು ಚಾಲೆಂಜ್ ಮಾಡುತ್ತಿದ್ದರು. ಎಷ್ಟೆ ಕಷ್ಟ ಪಟ್ಟರು ಅವರುಗಳು ಜೋರು ಮಾಡಿ ಬಾಗಿಲ ಚೀಲಕವನ್ನು ಒದ್ದು ಮುರಿದಿದ್ದು ಮನೆಯೊಳಗಡೆ ನುಗ್ಗಿದಾಗ ಇವರಲ್ಲಿ ಎಲ್ಲರ ಮುಂದೆ ರಜಾಕ್ ಅಹಮದ್ ತನ್ನ ಕೈಯಲ್ಲಿ ಆಯುಧ ಹಿಡಿದಿದ್ದು ಇವರ ಜೊತೆಗೆ ಇದ್ದ ಇತರರು ಕೂಡ ತಮ್ಮ ಜೊತೆಯಲ್ಲಿ ಆಯುಧಗಳನ್ನು ಹಿಡಿದಿದ್ದರು. ಇವರಲ್ಲಿ ರಜಾಕ್ ಅಹಮದ್ ತನ್ನ ಕೈಯಲ್ಲಿದ್ದ ಆಯುಧವನ್ನು ನನ್ನ ಗಂಡನ ಕುತ್ತಿಗೆ ಹೊಡೆಯಲು ಬೀಸಿದಾಗ ಅವರನ್ನು ನಾನು ಹಿಂದುಗಡೆಯಿಂದ ಎಳೆದುಕೊಂಡೆ ಆಗ ಆಯುಧವು ಅವನ ಎಡಗೈಗೆ ತಾಗಿತ್ತು. ಅವನ ಜೊತೆಗಿದ್ದ ಇತರರು ನನ್ನ ಮಕ್ಕಳು ನನ್ನ ಗಂಡನನ್ನು ಕಾಲಿನಿಂದ ಒದ್ದು ಕೆಳಗೆ ಬೀಳಿಸಿದರು. ಮತ್ತು ಅವರ ಮೇಲೆ ಹಲ್ಲೆ ಮಾಡಿದರು. ನಮ್ಮಗಳ ಕಿರುಚಾಟಗಳು ಕೇಲಿದ ನಾಲ್ಕೈದ್ ಜನರು ಮನೆಯೊಳಗೆ ಬಂದು ಮನೆ ನುಗ್ಗಿದ ರಜಾಕ್ ಮತ್ತು ಇತರರನ್ನು ಮನೆಯ ಹೊರಗಡೆ ಕರೆದುಕೊಂಡು ಹೋದರು. ಆ ಸಮಯ ನಮ್ಮ ಯಾಜಮಾನರು ಬಂದಿದ್ದರಲ್ಲಿ ರಮೀಜ್ ಅಹಮದ್ ರವರ ಮಗ ರಾಜಿಕ್, ಅಫರ್ಾಜ್ ಅಹಮದ್ ಮತ್ತು ಅವರ ಸ್ನೇಹಿತರು ಎಂದು ತಿಳಿಸಿದರು. ಇವರುಗಳನ್ನು ಪುನಃ ನೋಡಿದರೆ ನಾನು ಗುತರ್ಿಸುತ್ತೇನೆ. ಈ ಸನ್ನೀವೇಶಗಳಿಂದ ನಾನು ಗಾಬರಿಯಗಿದ್ದು ನಾನು, ದಿಕ್ಕು ತೋಚದೆ ಮತ್ತು ಎನು ಮಾಡಬೇಕೆಂದು ಗೊತ್ತಾಗದೆಯಿದ್ದರಿಂದ ತಡವಾಗಿ ಬಂದು ದೂರು ಕೊಡುತ್ತಿದ್ದೇನೆ. ದಯಮಾಡಿ ನಮ್ಮ ಮನೆಗೆ ಬಲವಂತವಾಗಿ ನುಗ್ಗಿ ನನ್ನ ಗಂಡನನ್ನು ಕೊಲೆ ಮಾಡಲು ಪ್ರಯತ್ನಿಸಿದ ರಾಜಿಕ್ ಮತ್ತು ಅಪರ್ಾಜ್ ಅಹಮದ್ ಮತ್ತು ಸ್ನೇಹಿತರ ಮೇಲೆ ಕಾನೂನು ಕ್ರಮ ತೆಗೆದು ನಮಗೆ ನ್ಯಾಯಾ ದೊರಕಿಸಿ ಕೊಡಬೇಕಾಗಿ ಹಾಗೂ ನಮಗೆ ರಕ್ಷಣೆ ಕೊಡಬೇಕಾಗಿ ವಿನಂತಿ ಎಂಬಿತ್ಯಾದಿಯಾಗಿ

3. ಚಾಮರಾಜನಗರ ಸಂಚಾರ ಠಾಣೆ (ಮೊ,ನಂ 25/2020) ಪಿರ್ಯಾದಿ ನಂಜುಂಡಪ್ಪ ಮರಿಯಾಲ ಗ್ರಾಮರವರು ನೀಡಿದ ದೂರಿನಲ್ಲಿ ದಿನಾಂಕ:12.02.2020 ರಂದು ಬೆಳಗ್ಗೆ 7.30 ಗಂಟೆ ಸಮಯದಲ್ಲಿ ಅವರ ಜಮೀನಿಗೆ ಹೊಗಲು ಮರಿಯಾಲ ಗ್ರಾಮದ ಜೆ.ಎಸ್.ಎಸ್ ರೂಡ್ ಸೆಟ್ ಸಂಸ್ಥೆ ಮುಂದೆ ಚಾ ನಗರ-ನಂಜನಗೂಡು ಮುಖ್ಯ ರಸ್ತೆ ಎನ್.ಹೆಚ್105(ಎ)ಯ ಎಡಗಡೆ ನಡೆದುಕೊಂಡು ಹೋಗುತಿದ್ದಾಗ, ಕಾಮಗೆರೆ ಗ್ರಾಮದ ಯೋಗೇಶ್ರವರು ಅವರಿಗೆ ಸೇರಿದ ನೊಂದಣಿಯಾಗಿಲ್ಲದ ಹೊಸ ಹೀರೋ ಪ್ಯಾಷನ್ ಪ್ರೋ ಮೊಟಾರ್ ಸೈಕಲನ್ನು ಹಿಂದಗಡೆಯಿಂದ ಅಂದರೆ ಬದನಗುಪ್ಪೆ ಕಡೆಯಿಂದ ಅತಿವೇಗ ಮತ್ತು ಅಜಾಗರುಕತೆಯಿಂಧ ಓಡಿಸಿಕೊಂಡುಬಂದು ಪಿರ್ಯಾದಿಯವರಿಗೆ ಹಿಂಬದಿಯಿಂದ ಗುದ್ದಿದ ಪರಿಣಾಮ ಪಿರ್ಯಾದಿಗೆ ಬಲಕಣ್ಣು, ಎಡಗಾಲಿನ ಮಂಡಿ, ಹಣೆ ತುಟಿಗೆ ಏಟಾಯಿತು. ಅಪಘಾತ ಮಾಡಿದ ಯೋಗೇಶ ರವರಿಗೂ ಸಹಾ ಮೂಗು, ತಲೆಕಡೆ ಏಟಾಯಿತು, ಅಷ್ಟಕ್ಕೆ ಅಲ್ಲೆ ಇದ್ದ ಪಿರ್ಯಾದಿಯ ಸಂಬಂದಿ ಸತೀಶ ರವರು 108 ಆಂಬುಲೆನ್ಸ್ ನಲ್ಲಿ ಚಾ ನಗರ ಜಿಲಾಸ್ಪತ್ರೆಗೆ ತಂದು ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು,ವೈಧ್ಯೆರ ಸಲಹೆ ಮೇರೆಗೆ ಪಿರ್ಯಾದಿಯವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಪಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಪಡೆಯುತಿದ್ದು ಈ ದಿನ ಪಿರ್ಯಾದಿಯೂ ಅವರಿಗೆ ಅಪಘಾತ ಮಾಡಿದ ಹೊಸ ಹೀರೋ ಪ್ಯಾಷನ್ ಪ್ರೋ ಮೊಟಾರ್ ಸೈಕಲ್ ಸವಾರ ಕಾಮಗೆರೆ ಗ್ರಾಮದ ಯೋಗೇಶ್ನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ದೂರಿನ ಮೇರೆಗೆ ಈ ಪ್ರ.ವ.ವರದಿ.

4. ಕುದೇರು ಠಾಣೆ (ಮೊ,ನಂ 14/2020) ಪಿಎಸ್ಐರವರು ಸಿಬ್ಬಂಧಿಗಳ ಜೊತೆ ಠಾಣಾ ಸರಹದ್ದು ಉಮ್ಮತ್ತೂರು ಗ್ರಾಮದ ದಾಸನೂರು ಕ್ರಾಸ್ ಬಳಿ ಐ.ಎಂ.ವಿ ಪ್ರಕರಣ ದಾಖಲಿಸುತ್ತಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ ಗಣಗನೂರು ಗ್ರಾಮದ ಶ್ರೀ.ಕೆಂಭಾವಿ ದೇವಸ್ಥಾನದ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಆಸಾಮಿಯು ಗಿರಾಕಿಗಳಿಗೆ ಮದ್ಯಸೇವನೆ ಮಾಡಲು ಸ್ಥಳಾವಕಾಶವನ್ನು ನೀಡಿದ್ದಾನೆ, ಎಂಬ ಮಾಹಿತಿಯನ್ನು ಪಡೆದು ಜೊತೆಯಲ್ಲಿದ್ದ ಸಿಬ್ಬಂದಿಗಳಾದ ಪಿ.ಸಿ-43 ಮತ್ತು ಪಿ.ಸಿ-560 ರವರ ಜೊತೆ ಮೇಲ್ಕಂಡ ಸ್ಥಳಕ್ಕೆ ಪಂಚರ ಜೊತೆ ಮದ್ಯಾಹ್ನ 3:00 ಗಂಟೆಗೆ ಸ್ಥಳಕ್ಕೆ ಹೋಗಿ ಮರೆಯಾಗಿ ನೋಡಲಾಗಿ ಶ್ರೀ.ಕೆಂಭಾವಿ ದೇವಸ್ಥಾನದ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಆಸಾಮಿಯು ಗಿರಾಕಿಗಳಿಗೆ ಮದ್ಯಸೇವನೆ ಮಾಡಲು ಸ್ಥಳಾವಕಾಶವನ್ನು ನೀಡಿರುವುದು ಕಂಡು ಬಂದಿದ್ದರಿಂದ ನಂತರ ಅವನನ್ನು ಸಿಬ್ಬಂದಿಗಳ ಸಹಾಯದಿಂದ ಪಂಚರ ಸಮಕ್ಷಮ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಮದ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದಾದರೂ ರಹದಾರಿ ಇದೆಯೇ? ಎಂದು ಕೇಳಿದ್ದಕ್ಕೆ ಯಾವದೂ ರಹದಾರಿ ಇಲ್ಲ ಎಂದು ತಿಳಿಸಿದಾಗ ಸ್ಥಳದಲ್ಲಿ ಮದ್ಯಾಹ್ನ 3:10 ಗಂಟೆಯಿಂದ 3:55 ಗಂಟೆವರೆಗೆ ಮಹಜರ್ ಕ್ರಮ ಕೈಗೊಂಡು ನಂತರ ಮತ್ತೊಂದು ಮಾಹಿತಿಯ ಮೇಲೆ ಗಣಗನೂರುಪುರ ಗ್ರಾಮಕ್ಕೆ ಹೋಗಿ ಮಾಲು ಮತ್ತು ಆಸಾಮಿಯ ಜೊತೆ ಠಾಣೆಗೆ ಬಂದು ವರದಿ ತಯಾರಿಸಿ ಸಂಜೆ 6:45 ಗಂಟೆಗೆ ಪ್ರಕರಣ ದಾಖಲಿಸಿದ ಮೇರೆಗೆ ಈ ಪ್ರ.ವ.ವರದಿ.

5. ಕುದೇರು ಠಾಣೆ (ಮೊ,ನಂ 15/2020) ಈ ದಿನ ದಿನಾಂಕ;-12-03-2020 ರಂದು ಮದ್ಯಾಹ್ನ 2:30 ಗಂಟೆ ಸಮಯದಲ್ಲಿ ಸಿಬ್ಬಂಧಿಗಳ ಜೊತೆ ಠಾಣಾ ಸರಹದ್ದು ಉಮ್ಮತ್ತೂರು ಗ್ರಾಮದ ದಾಸನೂರು ಕ್ರಾಸ್ ಬಳಿ ಐ.ಎಂ.ವಿ ಪ್ರಕರಣ ದಾಖಲಿಸುತ್ತಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ ಗಣಗನೂರು ಗ್ರಾಮದ ಶ್ರೀ.ಕೆಂಭಾವಿ ದೇವಸ್ಥಾನದ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಆಸಾಮಿಯು ಗಿರಾಕಿಗಳಿಗೆ ಮದ್ಯಸೇವನೆ ಮಾಡಲು ಸ್ಥಳಾವಕಾಶವನ್ನು ನೀಡಿದ್ದಾನೆ, ಎಂಬ ಮಾಹಿತಿಯನ್ನು ಪಡೆದು ಜೊತೆಯಲ್ಲಿದ್ದ ಸಿಬ್ಬಂದಿಗಳಾದ ಪಿ.ಸಿ-43 ಮತ್ತು ಪಿ.ಸಿ-560 ರವರ ಜೊತೆ ಮೇಲ್ಕಂಡ ಸ್ಥಳಕ್ಕೆ ಪಂಚರ ಜೊತೆ ಹೋಗಿ ಅಸಾಮಿಯನ್ನು ಹಿಡಿದು ನಂತರ ಸ್ಥಳದಲ್ಲಿ ಮಹಜರ್ ಕ್ರಮ ಕೈಗೊಂಡು ಅಸಾಮಿ ಮತ್ತು ಮಾಲಿನ ಜೊತೆ ಠಾಣೆಗೆ ಬರಲು ಹಳ್ಳಿಕೆರೆಹುಂಡಿ ಗ್ರಾಮದ ಹತ್ತಿರ ಬರುತ್ತಿದ್ದಾಗ ಸಂಜೆ 4.10 ಗಂಟೆಯ ಸಮಯದಲ್ಲಿ ಭಾತ್ಮೀದಾರರಿಂದ ಬಂದ ಮಾಹಿತಿಯೇನೆಂದರೆ ಗಣಗನೂರುಪುರ-ಹಾಡ್ಯ ಗ್ರಾಮಕ್ಕೆ ಹೋಗುವ ರಸ್ತೆಯ ಕ್ರಾಸ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಆಸಾಮಿಯು ಗಿರಾಕಿಗಳಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದಾನೆ, ಎಂಬ ಮಾಹಿತಿಯನ್ನು ಪಡೆದು ನಂತರ ಜೊತೆಯಲ್ಲಿದ್ದ ಸಿಬ್ಬಂದಿಗಳು ಮತ್ತು ಪಂಚರ ಜೊತೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಸಂಜೆ 4:30 ಗಂಟೆ ಸಮಯದಲ್ಲಿ ನೋಡಲಾಗಿ ಸದರಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಆಸಾಮಿಯು ಗಿರಾಕಿಗಳಿಗೆ ಮದ್ಯಸೇವನೆ ಮಾಡಲು ಸ್ಥಳಾವಕಾಶವನ್ನು ನೀಡಿರುವುದು ಕಂಡು ಬಂದಿದ್ದರಿಂದ ನಂತರ ಅವನನ್ನು ಸಿಬ್ಬಂದಿಗಳ ಸಹಾಯದಿಂದ ಪಂಚರ ಸಮಕ್ಷಮ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಮದ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದಾದರೂ ರಹದಾರಿ ಇದೆಯೇ? ಎಂದು ಕೇಳಿದ್ದಕ್ಕೆ ಯಾವುದೂ ರಹದಾರಿ ಇಲ್ಲ ಎಂದು ತಿಳಿಸಿದಾಗ ಸ್ಥಳದಲ್ಲಿ ಸಂಜೆ 4:40 ಗಂಟೆಯಿಂದ 5:25 ಗಂಟೆವರೆಗೆ ಮಹಜರ್ ಕ್ರಮ ಕೈಗೊಂಡು ಮಾಲು ಮತ್ತು ಆಸಾಮಿಯ ಜೊತೆ ಠಾಣೆಗೆ ಬಂದು ವರದಿ ತಯಾರಿಸಿ ಸಂಜೆ 7:15 ಗಂಟೆಗೆ ಪ್ರಕರಣ ದಾಖಲಿಸಿದ ಮೇರೆಗೆ ಈ ಪ್ರ.ವ.ವರದಿ.

6. ಗುಂಡ್ಲುಪೇಟೆ ಠಾಣೆ (ಮೊ,ನಂ 97/2020) ದಿನಾಂಕ: 12.03.2020 ರಂದು ಪಿರ್ಯಾಧಿ ಅಸ್ಲಾಂಪéಾಷ ಗುಂಡ್ಲುಪೇಟೆರವರು ನೀಡಿದ ದೂರಿನಲ್ಲಿ ಅವರು ಬೆಳಿಗ್ಗೆ ಗುಂಡ್ಲುಪೇಟೆಯಿಂದ ತೆರಕಣಾಂಬಿಗೆ ಹೋಗಿದ್ದು ಮನೆಯಲ್ಲಿ ಪಿರ್ಯಾಧಿಯವರ ಹೆಂಡತಿ ನಾಸಿರ ಕೌಸಿರ್ ರವರು ಮತ್ತು ಮಕ್ಕಳು ಮನೆಯಲ್ಲಿದ್ದು, ನಂತರ ಪಿರ್ಯಾದಿಯವರು ಸಂಜೆ 7.00 ಗಂಟೆಗೆ ವಾಪಸ್ ಮನೆಗೆ ಬಂದಾಗ ಮಕ್ಕಳು ಅಳುತ್ತ ಇದ್ದು ಕೇಳಿದಾಗ ಸಂಜೆ 4.00 ಗಂಟೆಗೆ ಶಾಲೆಯಿಂದ ಬಂದಾಗಿನಿಂದ ಮನೆಯಲ್ಲಿ ತಾಯಿ ಇಲ್ಲವೆಂದು ತಿಳಿಸಿದ್ದು ನಂತರ ಎಲ್ಲಾ ಕಡೆ ಹುಡುಕಲಾಗಿ ಎಲ್ಲಿಯೂ ಪತ್ತೆಯಾಗಿಲ್ಲವಾದ್ದರಿಂದ, ಕಾಣೆಯಾಗಿರುವ ನನ್ನ ಹೆಂಡತಿ ನಾಸಿರ ಕೌಸರ್ ರವರನ್ನು ಹುಡುಕಿಕೊಡಬೇಕೆಂದು ರಾತ್ರಿ 23.00 ಗಂಟೆಯಲ್ಲಿ ನೀಡಿದ ದೂರಿನ ಮೇರೆಗೆ ಈ ಪ್ರ.ವ ವರದಿ.

7. ತೆರಕಣಾಂಬಿ ಠಾಣೆ (ಮೊ ನಂ 27/2020) ಪಿಯರ್ಾದಿ ಸೋಮಶೇಖರ ಅಗತಗೌಡನಹಳ್ಳಿ ರವರು ನೀಡಿದ ದೂರಿನಲ್ಲಿ ಅವರ ಗ್ರಾಮದ ನಾಗಪ್ಪ ಬಿನ್ ಲೇಟ್ ಮಾದಪ್ಪ ರವರು ತಮ್ಮ ಬಾಬ್ತು ಕೆಎ10 ಎಲ್ 9524 ರ ಹಿರೋ ಹೊಂಡಾ ಸ್ಲೆಂಡರ್ ಬೈಕ್ ನಲ್ಲಿ ನಮ್ಮ ಗ್ರಾಮದವರೇ ಆದ ನಮ್ಮ ದೊಡ್ಡಪ್ಪನ ಮಗನಾದ ನಾಗಪ್ಪ ಬಿನ್ ಲೇಟ್ ಎ.ಬಿ ಮಾದಪ್ಪ ರವರನ್ನು ಕೂರಿಸಿಕೊಂಡು ಗುಂಡ್ಲುಪೇಟೆ ಕಡೆಗೆ ಹೊರಟಿದ್ದು, ರಾತ್ರಿ ಸುಮಾರು 9.30 ಗಂಟೆಯಲ್ಲಿ ತೆರಕಣಾಂಬಿ ಗ್ರಾಮದ ಜೆ.ಎಸ್.ಎಸ್ ಪ್ರೌಢಶಾಲೆ ಮುಂದೆ ಹೋಗುತ್ತಿದ್ದಾಗ, ಸದರಿ ನಾಗಪ್ಪ ಬಿನ್ ಲೇಟ್ ಮಾದಪ್ಪ ರವರು ಬೈಕನ್ನು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಬೈಕನ್ನು ನಿಯಂತ್ರಿಸಲಾಗದೆ ಬೈಕನ್ನು ಬೀಳಿಸಿದ್ದು ಬೈಕ್ ನಲ್ಲಿದ್ದ ಇಬ್ಬರೂ ಸಹ ರಸ್ತೆಯ ಮೇಲೆ ಬಿದ್ದುಕೊಂಡರು. ನೋಡಲಾಗಿ ನನ್ನ ದೊಡ್ಡಪ್ಪನ ಮಗ ನಾಗಪ್ಪ ಬಿನ್ ಲೇಟ್ ಎಬಿ ಮಾದಪ್ಪ ರವರಿಗೆ ತಲೆ ಮತ್ತು ಇತರೆ ಕಡೆ ಏಟಾಗಿ ರಕ್ತ ಬರುತ್ತಿತ್ತು ಹಾಗೂ ಬೈಕನ್ನು ಓಡಿಸುತ್ತಿದ್ದ ನಾಗಪ್ಪ ಬಿನ್ ಲೇಟ್ ಮಾದಪ್ಪ ರವರಿಗೂ ತಲೆ , ಕೈ ಕಾಲುಗಳ ಕಡೆ ಏಟಾಗಿದ್ದು, ನಾವುಗಳು ಇಬ್ಬರನ್ನು ಉಪಚರಿಸಿ ಆಸ್ಪತ್ರೆಗೆ ಸೇರಿಸಿದ್ದು, ಈ ದಿನ ಬೆಳಗಿನ ಜಾವ ಸುಮಾರು 2.30 ಗಂಟೆ ಸಮಯದಲ್ಲಿ ನಮ್ಮ ದೊಡ್ಡಪ್ಪನ ಮಗ ನಾಗಪ್ಪ ಬಿನ್ ಲೇಟ್ ಎ.ಬಿ ಮಾದಪ್ಪ ರವರು ಡಿ.ಆರ್.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಆದ್ದರಿಂದ ಸದರಿ ಬೈಕ್ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸ ಬೇಕೆಂದು ಕೇಳಿಕೊಳ್ಳುತ್ತೇನೆ. ಎಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ. ವರದಿ.

8. ಯಳಂದೂರು ಠಾಣೆ (ಮೊ ನಂ 22/2020) ಫಿರ್ಯಾಧಿ ಮಹದೇವಯ್ಯ ಯರಗಂಬಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ನಮ್ಮ ಜನಾಂಗದ ರಂಗಸ್ವಾಮಿ ಬಿನ್ ಲೇಟ್ ಲಿಂಗಯ್ಯ ರವರಿಗೂ ನಮಗೂ ಈಗ್ಗೆ 01 ವರ್ಷದಿಂದ ತಿರುಗಾಡುವ ಜಾಗದ ವಿಚಾರದಲ್ಲಿ ಎರಡೂ ಕಡೆಯವರಿಗೂ ತಕರಾರಿದ್ದು , ಈ ವಿಚಾರತದಲ್ಲಿ ಅವಾಚ್ಯ ಶಬ್ಧಗಳಿಂದ ಬೈಯ್ದು ಗಲಾಟೆಮಾಡಿ ಅಡ್ಡಗಟ್ಟಿ ನಮ್ಮ ತಂದೆಗೆ ಹೊಡೆದಿದ್ದು, ಆಸ್ಪತ್ರೆಯಲ್ಲಿ ನಮ್ಮ ತಂದೆ ಕುಳಿತ್ತಿದ್ದ ಸ್ಥಳದಿಂದ ಕೆಳಕ್ಕೆ ಬಿದ್ದುಕೊಂಡರು. ಆಗ ನಾನು ಎತ್ತಿಕೂರಿಸಿ ನೋಡಿದಾಗ ನಮ್ಮ ತಂದೆಯವರಿಗೆ ಪಾಶ್ರ್ವವಾಯು ತರಹ ಕಂಡುಬಂದಿದ್ದು , ವೈದ್ಯರು ನಮ್ಮ ತಂದೆಯನ್ನು ಚೆಕ್ ಮಾಡಿ ನಂತರ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದರು, ಯಳಂದೂರು ಆಸ್ಪತ್ರೆಯಲ್ಲಿ ಹೊರರೋಗಿ ಚೀಟಿಯಲ್ಲಿ ಚಿಕಿತ್ಸೆ ಪಡೆದುಕೊಂಡೆವು. ನಂತರ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನನ್ನ ತಂದೆಗೆ ಚಿಕಿತ್ಸೆ ನೀಡುವಾಗ ವೈದ್ಯರಿಗೆ ಗಲಾಟೆಯಲ್ಲಿ ನಡೆದ ಘಟನೆಯಾಗಿರುತ್ತದೆ ಎಂದು ನಾನು ಹೇಳಿದೆ. ಆದುದರಿಂದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಮ್ಮ ತಂದೆಗೆ ಚಿಕಿತ್ಸೆ ಕೊಡಿಸುತ್ತಿದ್ದು ಈ ದಿನ ತಡವಾಗಿ ದೂರು ನೀಡುತ್ತಿದ್ದೇನೆ. ನನ್ನ ಹಾಗೂ ನನ್ನ ತಂದೆಯ ಮೇಲೆ ಗಲಾಟೆ ಮಾಡಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದಲಿಖತ ದೂರಿನ ಮೇಏರೆಗೆ ಈ ಪ್ರ ವ ವರದಿ.

9. ಕೊಳ್ಳೇಗಾಲ ಗ್ರಾಮಾಂತರ ಠಾಣೆ (ಮೊ ನಂ 58/2020) ಪಿರ್ಯಾದಿ ಮಹೇಶ ಮದುವನಹಳ್ಳಿ ಗ್ರಾಮರವರು ಠಾಣೆಗೆ ಹಾಜರಾಗಿ ನೀಡಿದ ದೂರೇನೆಂದರೆ ದಿಃ08-03-2020 ರಂದು ಸಂಜೆ ಸುಮಾರು 06-00 ಗಂಟೆ ಸಮಯದಲ್ಲಿ ನಮ್ಮ ಅಕ್ಕ ಚಿಕ್ಕತಾಯಮ್ಮರವರು ರಾಗಿ ಬೀಸಿಕೊಂಡು ಮಧುವನಹಳ್ಳಿ ಮುಖ್ಯರಸ್ತೆಯಲ್ಲಿ ಹಸಿಕಡ್ಲೆ ಮಲ್ಲಪ್ಪರವರ ಮನೆಯ ಮುಂಭಾಗದಲ್ಲಿ ರಸ್ತೆಯ ಎಡಬದಿಯಲ್ಲಿ ನೆಡದುಕೊಂಡು ಬರುತ್ತಿದ್ದಾಗ ಕೆ ಎ 21 ಬಿ 1816 ಆಟೋ ಚಾಲಕ ಅತೀವೇಗ ಮತ್ತು ಅಜಾಗರುಕತೆಯಿಂದ ಅಡ್ಡಾದಿಡ್ಡಿ ಓಡಿಸಿಕೊಂಡು ನನ್ನ ಅಕ್ಕ ಚಿಕ್ಕತಾಯಮ್ಮ ರವರಿಗೆ ಗುದ್ದಿಸಿದ ಪರಿಣಾಮ ತಲೆಯ ಭಾಗಕ್ಕೆ ತೀವ್ರವಾದ ಸ್ವರೂಪದ ಗಾಯವಾಗಿದ್ದು ನಂತರ ಅದೇ ಆಟೋದಲ್ಲಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿ ವೈದ್ಯರು ಹೆಚ್ಚಿನ ಚಿಕಿತ್ಸಗಾಗಿ ಜೆ ಎಸ್ ಎಸ್ ಆಸ್ಪತ್ರೆ ಮೈಸೂರಿಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ನನ್ನ ಅಕ್ಕ ಚಿಕ್ಕತಾಯಮ್ಮಳಿಗೆ ತಲೆಗೆ ತೀವ್ರ ಸ್ವರೂಪದ ಗಾಯಾವಾಗಿ ಹೆಚ್ಚು ರಕ್ತ ಸುರಿಯುತ್ತಿದ್ದರಿಂದ ಗಾಬರಿಗೊಂಡು ಪೊಲೀಸ್ ಠಾಣೆಗೆ ದೂರು ನೀಡಿರುವುದಿಲ್ಲಾ ಈವಾಗ ನಮ್ಮ ಅಕ್ಕಳಿಗೆ ಚಿಕಿತ್ಸೆ ಕೊಡಿಸಿ ತಡವಾಗಿ ಬಂದು ಈ ದಿನ ದೂರು ನೀಡುತ್ತಿದ್ದೇನೆ. ಆದ್ದರಿಂದ ನನ್ನ ಅಕ್ಕ ಚಿಕ್ಕತಾಯಮ್ಮಳಿಗೆ ಅಪಘಾತ ಉಂಟು ಮಾಡಿದ ಆಟೋ ನಂ ಕೆಎ 21 ಬಿ 1816 ಆಟೋ ಚಾಲಕನ ಮೇಲೆ ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಈ ಪ್ರ ವ ವರದಿ.


Your Comment

Name :
Email:
Comment:
Submit

Website Designed and Developed by Global Buzz®