• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 14-02-2020

No of views : 36       No of Comments : 0

01. ಚಾಮರಾಜನಗರ ಪೂರ್ವ ಠಾಣೆ: (ಮೊ, ನಂ 26/2020) ದಿನಾಂಕ;- 14-02-2020 ರಂದು ಪಿಯರ್ಾದಿ ಮಂಜುಳ ಅರಳೀಪುರ ಗ್ರಾಮರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ಪತಿಯವರಾದ ಶಿವರುದ್ರೇಗೌಡ ರವರು ದಿ: 12-02-2020 ರ ಬುಧವಾರ ಬೆಳಿಗ್ಗೆ ಎಂದಿನಂತೆ ಸುಮಾರು 07:00 ಗಂಟೆಯಲ್ಲಿ ಮನೆಯ ಹಿಂಬದಿಯಲ್ಲಿರುವ ಜಮೀನಿಗೆ ಕೆಲಸಕ್ಕೆ ಹೋದವರು ಇಂದಿನವರೆಗೂ ಹಿಂದಿರುಗಿ ಬಂದಿರುವುದಿಲ್ಲ. ಪ್ರತಿದಿನ ಉಪಯೋಗಿಸುತ್ತಿದ್ದ ದ್ವಿ-ಚಕ್ರ ವಾಹನ ಹಾಗೂ ಮೊಬೈಲ್ ಅನ್ನು ಸಹ ಮನೆಯಲ್ಲಿಯೇ ಬಿಟ್ಟು ಹೋಗಿರುತ್ತಾರೆ. ಕಾಣೆಯಾಗಿರುವ ವಿಚಾರವಾಗಿ ಸಂಬಂಧಿಕರು, ಪರಿಚಯಸ್ಥರು, ಸ್ನೇಹಿತರು, ಅಕ್ಕಪಕ್ಕದ ಊರಿನವರನ್ನು ವಿಚಾರಿಸಿದರೂ ಸಹ ಯಾವುದೇ ಮಾಹಿತಿ ಲಭ್ಯವಾಗಿರುವುದಿಲ್ಲ. ಶಿವರುದ್ರೇಗೌಡ ರವರು ಯಾವುದೇ ಊರಿಗೆ ಅಥವಾ ಕಾರ್ಯಕ್ರಮಗಳಿಗೆ ಹೋದರೂ ಮನೆಯಲ್ಲಿ ಚಚರ್ಿಸಿ ವಿಚಾರ ತಿಳಿಸಿ ಹೋಗುವುದು ಅಭ್ಯಾಸವಾಗಿತ್ತು. ಇದ್ದಕ್ಕಿದಂತೆ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿರುವುದರಿಂದ ಕಾಣೆಯಾಗಿರುವ ಶಿವರುದ್ರೇಗೌಡರವರನ್ನು ಕೂಡಲೇ ಹುಡುಕಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

02. ಗುಂಡ್ಲುಪೇಟೆ ಠಾಣೆ: (ಮೊ,ನಂ 53/2020) ದಿ-14.02.2020 ರಂದು ಬೆಳಿಗ್ಗೆ 11.00ಗಂಟೆ ಸಮಯದಲ್ಲಿ ಪಿಯರ್ಾದಿ ಪಿಎಸ್ಐರವರಿಗೆ ಶಿವಪುರ ಗ್ರಾಮದಚೆನ್ನಬಸಪ್ಪಚಾರ್ಎಂಬುವರುತಮ್ಮಹೋಟೆಲ್ಮುಂದೆಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುವು ಮಾಡಿಕೊಡುತ್ತಿದ್ದಾನೆಂತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರು ಮತ್ತು ಪಂಚರೊಡನೆ ದಾಳಿ ಮಾಡಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುವು ಮಾಡಿಕೊಡುತ್ತಿದ್ದವರನ್ನುವಶಕ್ಕೆ ತೆಗೆದುಕೊಂಡುಅಂಗಡಿಯಲ್ಲಿದ್ದಇದ್ದ90ಎಂ.ಎಲ್ ಸಾಮಥ್ರ್ಯದ05 ರಾಯಲ್ ಲ್ಯಾನ್ಸರ್ ವಿಸ್ಕಿ ಪೌಚ್ಗಳು, 05 ಖಾಲಿ ಪ್ಲಾಸ್ಟಿಕ್ ಲೋಟಗಳನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಠಾಣೆಗೆ ಬಂದು ವರದಿ ತಯಾರಿಸಿ ಕೇಸು ದಾಖಲಿಸಿರುತ್ತದೆ.

03. ಹನೂರು ಠಾಣೆ: (ಯು.ಡಿ.ಆರ್ ,ನಂ 04/2020) ಫಿರ್ಯಾದಿ ಬಾಲಾಜಿ ಶಿರಗೋಡು ಗ್ರಾಮರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಫಿರ್ಯಾದಿಯವರಿಗೆ 05 ಜನ ಮಕ್ಕಳಿದ್ದು ಅದರಲ್ಲಿ ನಾಲ್ಕು ಹೆಣ್ಣು ಒಂದು ಗಂಡು ಇದ್ದು ಇದರಲ್ಲಿ ನಿನ್ನೆ ರಾತ್ರಿ ಸಂಶಯಾಸ್ಪದಕವಾಗಿ ಎರಡು ಹೆಣ್ಣು ಮಕ್ಕಳು ತೀರಿಕೊಂಡಿರುತ್ತಾರೆ. ನಿನ್ನೆ ರಾತ್ರಿ ಸುಮಾರು 09-30 ರಾತ್ರಿ ಊಟ ಮಾಡಿದ ಮೇಲೆ ಅಣ್ಣನ ಮನೆಯಿಂದ ತಂದ ಚಿಕನ್ ಸಾರು ಅನ್ನ ಮತ್ತು ಮುದ್ದೆಯನ್ನು ತಿಂದು 10 ಗಂಟೆಗೆ ನಿದ್ರೆ ಮಾಡಿರುತ್ತಾರೆ. ನಂತರ ಸುಮಾರು ರಾತ್ರಿ 12 ಗಂಟೆಗೆ ಚಿಕ್ಕ ಮಗಳು ಲಕ್ಷ್ಮಿ ಎದ್ದು ಟಾಯ್ಲೆಟ್ ಗೆ ಹೋಗಬೇಕು ಎಂದು ಹೇಳಿದಾಗ ನಂತರ ನೀರು ಕುಡಿಸಿದ್ದಾರೆ, ತಕ್ಷಣವೇ ಮಲಗಿದ್ದು ಮಗು ಬಾಯಲ್ಲಿ ಮತ್ತು ಮೂಗಿನಲ್ಲಿ ನೊರೆ ಬಂದು ತೀರಿಕೊಂಡಿರುತ್ತಾರೆ. ನಂತರ ಸುಮಾರು ರಾತ್ರಿ 01-30 ಕ್ಕೆ ಇನ್ನೊಬ್ಬ ಮಗಳು ಕೂಡ ಸುಸ್ತಾಗುತ್ತಿದೆ ಎಂದಾಗ ಹನೂರಿನ ಆಸ್ಪತ್ರೆಗೆ ತೆಗೆದುಕೊಂಡು ಬರುವ ಮಾರ್ಗದಲ್ಲಿ ತೀರಿಕೊಂಡಿರುತ್ತಾರೆ. ದಯವಿಟ್ಟು ತಾವು ಪರಿಶೀಲಿಸಿ ಸಾವಿನ ಕಾರಣವನ್ನು ತಿಳಿಸಬೇಕೆಂದು ಬೇಡಿಕೊಳ್ಳುತ್ತೇವೆ ಹಾಗೂ ಇದರ ಬಗ್ಗೆ ಕಾನೂನು ರೀತಿ ಕ್ರಮವನ್ನು ಜರುಗಿಸಬೇಕೆಂದು ಹಾಗೂ ಸಾವಿನ ಬಗ್ಗೆ ಅನುಮಾನ ಇರುತ್ತದೆ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

04. ಕೊಳ್ಳೇಗಾಲ ಪಟ್ಟಣ ಠಾಣೆ: (ಮೊ,ನಂ 26/2020) ದಿನಾಂಕ :13-02-2020 ರಂದು ಚಾಮರಾಜನಗರದ ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವರಾದ ಡಿ ರಾಜಣ್ಣ ರವರು ಸಿಬ್ಬಂದಿಗಳ ಜೊತೆ ಗಸ್ತು ಮಾಡುತ್ತಿದ್ದಾಗ ಯಾರೋ 04 ಜನ ಅಸಾಮಿಗಳು ಕೊಳ್ಳೇಗಾಲ ಪಟ್ಟಣ ಠಾಣಾ ಸರಹದ್ದು ಹೊಸಹಂಪಾಪುರ ಹೊಸ ಯುಜಿಡಿ ಗ್ರೌಂಡ್ ಬಳಿಯಿರುವ ನಾರಾಯಣಗಿರಿ ಮಠದ ಮುಂಭಾಗ ಹುಣಸೆ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ರವರಿಗೆ ವಿಚಾರ ತಿಳಿಸಿ ಅವರನ್ನು ಹಾಗೂ ಸಿಬ್ಬಂದಿಗಳು, ಪಂಚರ ಜೊತೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದ 04 ಅಸಾಮಿಗಳನ್ನು ವಶಕ್ಕೆ ಪಡೆದು ಸ್ಥಳದಲ್ಲಿ ದೊರೆತ 3320/ ರೂ ನಗದು ಹಣ ಹಾಗೂ 52ಇಸ್ಪೀಟ್ ಎಲೆಗಳನ್ನು,ಒಂದು ಪ್ಲಾಸ್ಟೀಕ್ ಚೀಲವನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಠಾಣೆಗೆ ಬಂದು ನೀಡಿದ ವರದಿಯನ್ನು ಸ್ವೀಕರಿಸಿಕೊಂಡು ಅಸಂಜ್ಞೇಯ ಪ್ರಕರಣವಾದ್ದರಿಂದ ಠಾಣಾ ಎನ್ಸಿಆರ್ ನಂ 24/2020 ರಲ್ಲಿ ನಮೂದಿಸಿಕೊಂಡು ನ್ಯಾಯಾಲಯವು ಕಲಂ 87 ಕೆಪಿಆಕ್ಟ್ ರೀತ್ಯಾ ಪ್ರಕರಣದಾಖಲಿಸಿಕೊಳ್ಳಲು ಅನುಮತಿ ನೀಡಿದ ಮೇರೆಗೆ ಪ್ರ ವರದಿ.

05. ಕೊಳ್ಳೇಗಾಲ ಪಟ್ಟಣ ಠಾಣೆ: (ಮೊ,ನಂ 27/2020) ದಿನಾಂಕ:13-02-2020 ರಂದು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ರವರಾದ ರಾಜೇಂದ್ರ ಜೆ ರವರು ಕೊಳ್ಳೇಗಾಲ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಸಿಬ್ಬಂದಿಗಳ ಜೊತೆ ಗಸ್ತು ಮಾಡುತ್ತಿದ್ದಾಗ ಕೆಲವು ಜನ ಅಸಾಮಿಗಳು ಕೊಳ್ಳೇಗಾಲ ಪಟ್ಟಣದ ಸಾಕಮ್ಮಸ್ ಮೆಸ್ ಹಿಂಭಾಗ ಇರುವ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಸಿಬ್ಬಂದಿಗಳು ಹಾಗೂ ಪಂಚರ ಜೊತೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದ 04 ಅಸಾಮಿಗಳನ್ನು ವಶಕ್ಕೆ ಪಡೆದು ಸ್ಥಳದಲ್ಲಿ ದೊರೆತ 1920/ ರೂ ನಗದು ಹಣ ಹಾಗೂ ಒಂದು ಪ್ಲಾಸ್ಟೀಕ್ ಚೀಲ, 52ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಠಾಣೆಗೆ ಬಂದು ನೀಡಿದ ವರದಿಯನ್ನು ಸ್ವೀಕರಿಸಿಕೊಂಡು ಅಸಂಜ್ಞೇಯ ಪ್ರಕರಣವಾದ್ದರಿಂದ ಠಾಣಾ ಎನ್ಸಿಆರ್ ನಂ 25/2020 ನಮೂದಿಸಿಕೊಂಡು ಈ ದಿನ ದಿನಾಂಕ:14-02-2020 ರಂದು ನ್ಯಾಯಾಲಯವು ಕಲಂ 87 ಕೆಪಿಆಕ್ಟ್ ರೀತ್ಯಾ ಪ್ರಕರಣದಾಖಲಿಸಿಕೊಳ್ಳಲು ಅನುಮತಿ ನೀಡಿದ ಮೇರೆಗೆ ಪ್ರ ವರದಿ.


Your Comment

Name :
Email:
Comment:
Submit

Website Designed and Developed by Global Buzz®