• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On: 13-02-2020

No of views : 33       No of Comments : 0

01. ಚಾಮರಾಜನಗರ ಸಂಚಾರ ಠಾಣೆ: (ಮೊ, ನಂ 11/2020) ದಿನಾಂಕ 13.02.2020ರಂದು ಬೆಳಗ್ಗೆ 05.45ರ ಸಮಯದಲ್ಲಿ ಕುಂ ಇಂಟರ್ನ್ಯಾಷನಲ್ ಕಂಪೆನಿಯಲ್ಲಿ ಮೆಸಿನ್ ಆಪರೇಟರ್ ಆಗಿ ಕೆಲಸ ಮಾಡುವ ಪಿರ್ಯಾದಿ ರಮಾಕರ್ ಪಾಂಡೆ ರವರು ಬೆಳಗಿನ ಶಿಫ್ಟ್ ಕೆಲಸಕ್ಕೆ ಸೈಕಲ್ಲಿನಲ್ಲಿ ಬರುತ್ತಿದ್ದಾಗ ಬದನಗುಪ್ಪೆಯ ಇಂಡಸ್ಟ್ರಿಯಲ್ ಪ್ರದೇಶದ ಕುಂ ಇಂಟರ್ ನ್ಯಾಷನಲ್ ಫ್ಯಾಕ್ಟರಿಯ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ಪಿರ್ಯಾದಿಯ ಅಕ್ಕನ ಮಗನಾದ ಸಂದೀಪ್ ಕುಮಾರ್ ಉಪದ್ಯಾಯ್ ರವರಿಗೆ ಕೆಎ 10 ಎಸ್ 4437 ಬೈಕಿನ ಸವಾರ ಕುಮಾರ ಎನ್ನುವವನು ಡಿಕ್ಕಿ ಮಾಡಿಸಿದ್ದು ಕೂಡಲೇ ಬಂದ ಆಂಬುಲೆನ್ಸ್ ವಾಹನದಲ್ಲಿ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಚಿಕಿತ್ಸಾ ಸಂಬಂದ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸಾ ಸಂಬಂದ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸುತ್ತಿದ್ದಾಗ ಮೈಸೂರಿನಲ್ಲಿ ಮೃತಪಟ್ಟಿದ್ದು ವಿಷಯವನ್ನು ಸಂಬಂದಿಕರಿಗೆ ತಿಳಿಸಿ ಚಾಮರಾಜನಗರಕ್ಕೆ ಬಂದು ಠಾಣೆಯಲ್ಲಿ ಅಪಘಾತ ಮಾಡಿದ ಕೆಎ 10 ಎಸ್ 4437 ಮೊಟಾರ್ ಬೈಕಿನ ಸವಾರ ಕುಮಾರನ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

02. ಮಹಿಳಾ ಠಾಣೆ: (ಮೊ,ನಂ 04/2020) ಪಿರ್ಯಾದಿ ಶ್ರೀಮತಿ ಸುನೀತಾ ರಾಮಸಮುದ್ರರವರು ನೀಡಿದ ದೂರಿನಲ್ಲಿ ಅವರ ಅಣ್ಣ ಅನಿಲ್ ರಾಜ್ ರವರು ಅವರ ತಾಯಿಯನ್ನು ನೋಡಲು ಅಜರ್ಿದಾರರು ವಾಸವಿರುವ ಮನೆಗೆ ಹೋಗಿದ್ದು ಅಲ್ಲಿ ವಿಚಾರ ಮಾಡುತ್ತಾ ಅಜರ್ಿದಾರರು ನೀಡಿದ ತಿಂಡಿ ತಿನ್ನುತ್ತಿರುವಾಗ ಬೆಳಿಗ್ಗೆ 8.30 ಗಂಟೆ ಸಮಯದಲ್ಲಿ ಅನಿಲ್ ರಾಜ್ ರವರ ಹೆಂಡತಿ ಭಾಗೀರಥಿ ರವರು ಪಿರ್ಯಾದಿಯವರ ಮನೆ ಬಳಿ ಬಂದು ನನ್ನ ಗಂಡನಿಗೆ ಏಕೆ ತಿಂಡಿ ಕೊಟ್ಟಿದ್ದೀಯಾ, ನೀನು ಅವರ ತಂಗಿಯಾದರೆ ಏನು ಎನ್ನುತ್ತಾ ಜಗಳ ತೆಗೆದು ಏಕಾಏಕಿ ನನ್ನನ್ನು ಹಿಡಿದು ಎಳೆದಾಡಿ ಕೈಯಿಂದ ಎದೆಭಾಗಕ್ಕೆ ಪರಚಿ, ಅಲ್ಲೇ ಬಿದ್ದಿದ್ದ ದೊಣ್ಣೆಯಿಂದ ಮೈ ಕೈಗೆ ಹೊಡೆದು, ಕಾಲಿನಿಂದ ಒದ್ದು, ದೊಣ್ಣೆಯಿಂದ ಮೈಗೆ ಹೊಡೆದು, ಲೋಫರಮುಂಡೆ, ಈ ದಿನ ಬದುಕಿಕೊಂಡಿದ್ದೀಯಾ ಇನ್ನೊಂದು ದಿನ ನಿನ್ನನ್ನು ಸಾಯಿಸದೆ ಬಿಡುವುದಿಲಾ ಎಂದು ಬೆದರಿಕೆ ಹಾಕಿದ ನನ್ನ ಅತ್ತಿಗೆ ಭಾಗೀರಥಿ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂದು ವೈದ್ಯಾಧಿಕಾರಿಗಳ ಸಮಕ್ಷಮ ನೀಡಿದ ಹೇಳಿಕೆ ನೀಡಿದ ಮೇರೆಗೆ ಈ ಪ್ರ.ವ.ವರದಿ.

03. ಗುಂಡ್ಲುಪೇಟೆ ಠಾಣೆ: (ಮೊ,ನಂ 49/2020) ಪಿರ್ಯಾದಿ ಬೆಳ್ಳಮ್ಮ ಅಣ್ಣೂರು ಗ್ರಾಮರವರು ನೀಡಿದ ದೂರಿನಲ್ಲಿ ಅವರ ಮನೆಯ ಮುಂದೆ ಅದೇ ಗ್ರಾಮದ ಮಹದೇವ2)ಸುಧಾ,3)ಮನು,4)ರಂಜಿತ್5)ಭರತ್,6)ಬಸಮ್ಮ ಎಲ್ಲರೂ ಅಣ್ಣೂರು ಗ್ರಾಮ, ಬಂದು ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮೈಕೈಗೆ ಹೊಡೆದು ಸೀರೆಯನ್ನು ಹಿಡಿದು ಎಳೆದಾಡಿ, ಬಿಡಿಸಲು ಬಂದ ಪಿರ್ಯಾದಿ ಮಗಳಾದ ನೀಲಮ್ಮರವರಿಗೂ ಹೊಡೆದು ಬಟ್ಟೆಯನ್ನು ಹಿಡಿದು ಎಳೆದಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಕೊಟ್ಟ ದೂರಿನ ಮೇರೆಗೆ. ಈ ಪ್ರ.ವ.ವರದಿ.

04. ಗುಂಡ್ಲುಪೇಟೆ ಠಾಣೆ: (ಮೊ,ನಂ 50/2020) ಪಿಯರ್ಾದಿ ಶಾರದ ರಾಘವಾಪುರ ಗ್ರಾಮರವರು ನೀಡಿದ ದೂರಿನಲ್ಲಿ ಅವರು ಗ್ರಾಮದಿಂದ ಕಲಿಗೌಡನಹಳ್ಳಿ ಗ್ರಾಮದಲ್ಲಿರುವ ತಮ್ಮ ತಾಯಿ ಮನೆಗೆ ಹೋಗಿದ್ದಾಗ, ರಾತ್ರಿ ಸುಮಾರು 7.15 ಗಂಟೆ ಸಮಯದಲ್ಲಿ ಪಿಯರ್ಾದಿಯವರು ತಮ್ಮ ಮಹದೇವರವರ ಮನೆಯಲ್ಲಿ ಅಣ್ಣ, ಶಿವಣ್ಣ, ಅವರ ಹೆಂಡತಿ ಜಯಮ್ಮ, ಮಕ್ಕಳಾದ ವೆಂಕಟೇಶ ಮತ್ತುರಂಗಸ್ವಾಮಿ ಎಲ್ಲರೂ ಜಾಗದ ವಿಚಾರದಲ್ಲಿ ಮಾತನಾಡುತ್ತಿದ್ದಾಗ, ಪಿಯರ್ಾದಿಯವರು ಜಯಮ್ಮರವರನ್ನು ನಮಗೆ ನೀಡಬೇಕಾದ ಹಣವನ್ನು ಕೊಡಿ ಎಂದು ಕೇಳಿದಕ್ಕೆ ಜಯಮ್ಮ ನಿಮಗೆ ಯಾವ ಹಣಕೊಡುವುದು ಎಂದು ಮಾತಿಗೆ ಮಾತು ಬೆಳೆದು, ಜಗಳ ತೆಗೆದು ಪಿಯರ್ಾದಿಯವರನ್ನು ತಬ್ಬಿ ಹಿಡಿದುಕೊಂಡಾಗ, ರಂಗಸ್ವಾಮಿ ಒಂದು ಕಲ್ಲಿನಿಂದ ಪಿರ್ಯದಿಯವರ ಗಡ್ಡಕ್ಕೆ ಹೊಡೆದು, ವೆಂಕಟೇಶ ದೊಣ್ಣೆಯಿಂದ ಪಿಯರ್ಾದಿಯವರ ಮೈಕೈಗೆ ಹೊಡೆದು, ನೋವುಂಟು ಮಾಡಿರುತ್ತಾರೆ. ಹಾಗೂ ಬೋಳಿಮಕ್ಕಳೆ ಸೂಳೆಮಕ್ಕಳೆ ಎಂದುಅವಾಚ್ಯ ಶಬ್ದಗಳಿಂದ ಬೈದು ಹೋಗಿರುತ್ತಾರೆ.. ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದುಗುಂಡ್ಲುಪೇಟೆ ಸಕರ್ಾರಿಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ದೂರು.

05. ಗುಂಡ್ಲುಪೇಟೆ ಠಾಣೆ: (ಮೊ,ನಂ 51/2020) ಪಿಎಸ್ಐರವರು ಸಿಬ್ಬಂದಿಯವರ ಜೊತೆ ಗಸ್ತಿನಲ್ಲಿದ್ದಾಗ, ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ಸೇಂಟ್ಜಾನ್ ಶಾಲೆಯ ಎದುರು ರಸ್ತೆಯ ಬದಿಯಲ್ಲಿ ಯಾರೋ ಆಸಾಮಿಗಳು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದಾರೆಎಂದು ಮಾಹಿತಿ ಬಂದ ಮೇರೆಗೆ ಪಿಯರ್ಾದಿಯವರು ಮತ್ತು ಸಿಬ್ಬಂದಿಯವರು ಹಾಗೂ ಪಂಚಾಯ್ತುದಾರರಜೊತೆ ದಾಳಿ ಮಾಡಿ, ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ 06 ಜನ ಆಸಾಮಿಗಳನ್ನು ಹಿಡಿದು ಅಖಾಡದಲ್ಲಿ ಇದ್ದ 3500/- ರೂ ನಗದು, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ತಾಟನ್ನು ವಶಕ್ಕೆ ತೆಗೆದುಕೊಂಡು ಬಂದುಠಾಣೆಗೆ ಬಂದು ಕೆ.ಜಿ.ಎಸ್.ಸಿ 139/2020 ರಲ್ಲಿ ನೊಂದಾಯಿಸಿಕೊಂಡು ಸಂಜ್ಞೆಯ ಪ್ರಕರಣದಾಖಲಿಸಲು ಘನ ನ್ಯಾಯಾಲಯದಲ್ಲಿಕೋರಿದ್ದು, ಘನ ನ್ಯಾಯಾಲಯವುಅನುಮತಿ ನೀಡಿದ್ದರಿಂದ ಆಸಾಮಿಗಳ ವಿರುದ್ದ ಕಲಂ 87 ಕೆ.ಪಿ ಆಕ್ಟ್ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತದೆ.

06. ಗುಂಡ್ಲುಪೇಟೆ ಠಾಣೆ: (ಮೊ,ನಂ 52/2020) ದಿ-13.122020ರಂದುರಾತ್ರಿ 8.00 ಗಂಟೆ ಸಮಯದಲ್ಲಿ ಪಿ ಎಸ್ ಐ ರವರಿಗೆ ಗೂಡಲೂರು ಕಡೆಯಿಂದ ಗುಂಡ್ಲುಪೇಟೆ ಕಡೆಗೆ ಒಂದು ಈಚರ್ ಲಾರಿಯಲ್ಲಿ ಘನ ತ್ಯಾಜ್ಯಗಳನ್ನು ತುಂಬಿಕೊಂಡು ಬರುತ್ತಿದ್ದು, ಇದರಿಂದ ಕೆಟ್ಟದಾದ ದುವರ್ಾಸನೆ ಬರುತ್ತಿದೆಎಂದು ಮಾಹಿತಿ ಬಂದು ಮೇರೆಗೆ ಪಿಯರ್ಾದಿಯವರು ಪಂಚರು ಮತ್ತು ಸಿಬ್ಬಂದಿಯವರೊಡನೆ ಊಟಿರಸ್ತೆಅಂಬೇಡ್ಕರ್ ಭವನದ ಮುಂಭಾಗ ಕಾಯುತ್ತ ನಿಂತಿದ್ದಾಗ, ಬಂಡೀಪುರ ಕಡೆಯಿಂದಕೆ.ಎ-11 ಬಿ-0848ಈಚರ್ ಟೆಂಪೋದಲ್ಲಿ ಅದರ ಚಾಲಕ ಅಬ್ದುಲ್ರಿಯಾಜ್ ಯಾವುದೇ ಅನುಮತಿ ಇಲ್ಲದೆ ಕೇರಳ ರಾಜ್ಯದಿಂದ ದನದ ಮೂಳೆಗಳನ್ನು ತುಂಬಿಕೊಂಡು ಕನರ್ಾಟಕ ರಾಜ್ಯಕ್ಕೆ ಬರುತ್ತಿದ್ದು, ಇದರಿಂದ ಬರುತ್ತಿದ್ದ ಕೆಟ್ಟದಾದ ವಾಸನೆಯಿಂದ ಪರಿಸರ ಮಾಲಿನ್ಯ ಮತ್ತು ಮಾನವನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಸಹ ಕನರ್ಾಟಕಕ್ಕೆ ತರುತ್ತಿದ್ದ ಲಾರಿಯನ್ನು ಹಿಡಿದು ಮುಂದಿನ ಕ್ರಮದ ಬಗ್ಗೆ ಠಾಣೆಗೆ ತಂದು ಸ್ವ ವರದಿ ತಯಾರಿಸಿ ಕೇಸು ದಾಖಲಿಸಿದೆ ಮೇರೆಗೆ ಈ ಪ್ರ.ವ.ರದಿ.

07. ಕೊಳ್ಳೇಗಾಲ ಪಟ್ಟಣ ಠಾಣೆ: (ಮೊ,ನಂ 25/2020) ಪಿರ್ಯಾದಿ ಪ್ರೇಮ ಬಸ್ತೀಪುರ ಕೊಳ್ಳೇಗಾಲ ಪಟ್ಟಣರವರು ನೀಡಿದ ದಊರಿನಲ್ಲಿ ಅವರ ಮಗಳಾದ ವಿದ್ಯಾಶ್ರೀ ರವರು ದಿನಾಂಕ:10-02-2020 ರಂದು ಕೂಂತೂರಿನ ನನ್ನ ಸ್ನೇಹಿತರ ಮನೆಯ ಗೃಹಪ್ರವೇಶಕ್ಕೆ ನನ್ನ ಸ್ನೇಹಿತರು ಹೋಗುತ್ತಿದ್ದು ನಾನು ಅವರ ಜೊತೆಯಲ್ಲಿ ಹೋಗುತ್ತೇನೆಂದು ಹೇಳಿ ಹೋದವಳು ಮನೆಗೆ ವಾಪಸ್ ಬಂದಿರುವುದಿಲ್ಲ ಆದ್ದರಿಂದ ಕಾಣೆಯಾದ ನನ್ನ ಮಗಳನ್ನು ಪತ್ತೇಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರವ ವರದಿ.

08. ಹನೂರು ಠಾಣೆ: (ಮೊ,ನಂ 18/2020) ಹನೂರು ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯದಲ್ಲಿರುವ ಎಸ್ ನಾಗೇಶ್ ಬಂಡಳ್ಳಿ, ಮಣಗಳ್ಳಿ, ಅಣಗಳ್ಳಿದೊಡ್ಡಿ, ನೇಕಾರದೊಡ್ಡಿ ಗ್ರಾಮದ ಕಡೆಗಳಲ್ಲಿ ಗಸ್ತು ಮಾಡುತ್ತಿದ್ದಾಗ ಬಂಡಳ್ಳಿ ಗ್ರಾಮದಲ್ಲಿ ಸಂಜೆ ಸುಮಾರು 07.30 ಗಂಟೆಯ ಸಮಯಕ್ಕೆ ಒಬ್ಬ ಆಸಾಮಿಯ ಮನೆಯ ಹತ್ತಿರ ಮೂರನಾಲ್ಕು ಜನರು ಹೋಗುವುದು ಬರುವುದನ್ನು ಕಂಡ ನಾವುಗಳು ಮರೆಯಾಗಿ ನಿಂತು ನೋಡಿದಾಗ ಒಬ್ಬ ಆಸಾಮಿಯು ತಮ್ಮ ಮನೆಯ ಮುಂದಿರುವ ಅಂಗಡಿಗೆ ಬರುತ್ತಿದ್ದ ಸಾರ್ವಜನಿಕರಿಗೆ ಮದ್ಯದ ಪೌಚನ್ನು ತೆಗೆದು, ಮದ್ಯವನ್ನು ಲೋಟಕ್ಕೆ ಹಾಕಿ ಮಾರಾಟ ಮಾಡುತ್ತಿದ್ದುದು ಹಾಗೂ ತಿನ್ನಲು ಮಿಕ್ಷರ್ಅನ್ನು ಕೊಡುತ್ತಿದ್ದುದು, ಕಂಡು ಬಂದು ಮಹಜರ್ ಕ್ರಮ ಜರುಗಿಸಿ ಅಮಾನತು ವಶಪಡಿಸಿಕೊಂಡು ಸದರಿ ಆಸಾಮಿ ಹಾಗೂ ಮಾಲುಗಳ ಸಮೇತ ಸಂಜೆ. 8.45 ಗಂಟೆಗೆ ಠಾಣೆಗೆ ಕರೆತಂದು ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸಿ ಮುಂದಿನ ಕ್ರಮಕ್ಕಾಗಿ ಸೂಚಿಸಿದ ಮೇರೆಗೆ.


Your Comment

Name :
Email:
Comment:
Submit

Website Designed and Developed by Global Buzz®