• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On 10-02-2020

No of views : 38       No of Comments : 0

01. ಚಾಮರಾಜನಗರ ಪಟ್ಟಣ ಠಾಣೆ: (ಮೊ,ನಂ 14/2020) ಚಾ.ನಗರ ಪಟ್ಟಣದ ಗಂಗಮತಸ್ಥರ ಬೀದಿಯಲ್ಲಿರುವ ಎಲ್.ಐ.ಸಿ ರಾಮಣ್ಣ ರವರ ಬಾಬ್ತು ಖಾಲಿ ನಿವೇಶನದಲ್ಲಿ ಅಸಾಮಿಗಳು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ - ಬಾಹರ್ ಎಂಬ ಅದೃಷ್ಟದ ಇಸ್ಪೀಟ್ ಜೂಜಾಟ ಆಡುತ್ತಿದ್ದರಿಂದ ಪಂಚಾಯ್ತುದಾರರ ಸಮಕ್ಷಮ ಮದ್ಯಾಹ್ನ 13-30 ಗಂಟೆಯಿಂದ 14-45 ಗಂಟೆಯವರೆಗೆ ಮಹಜರ್ ಕ್ರಮವನ್ನು ಜರುಗಿಸಿ, ಒಟ್ಟು 8100/ ರೂ ನಗದು ಹಣ, ತಾಟು ಮತ್ತು 52 ಇಸ್ವೀಟ್ ಎಲೆಗಳನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರು ಹಾಗೂ ಮಾಲುಗಳ ಸಮೇತ 15-20 ಗಂಟೆಗೆ ಠಾಣೆಗೆ ಬಂದು, ಸ್ವ-ವರದಿ ತಯಾರಿಸಿ 15-40 ಗಂಟೆಗೆ ಠಾಣಾ ಜಿ.ಎಸ್.ಸಿ. ನಂ 105/2020 ರಲ್ಲಿ ನೊಂದಾಯಿಸಿ ಗನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ.

02. ಚಾಮರಾಜನಗರ ಪಟ್ಟಣ ಠಾಣೆ: (ಯುಡಿಆರ್,ನಂ 04/2020) ಪಿರ್ಯಾದಿ ರಶ್ಮಿ ಜತ್ತೇನಹಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ಅವರ ಗಂಡ ಸಂಜಯ್ ಕೆಲಸವಿಲ್ಲದೇ ಕೆಲಸಕ್ಕಾಗಿ ಹುಡುಕಾಡುತ್ತಿದ್ದು, ಕೆಲಸ ಸಿಗದೇ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಹಾಕಿಕೊಂಡು ಮೃತರಾಗಿರುತ್ತಾರೆ. ಮೃತ ಸಂಜಯ್. ಎಲ್, ಬಿನ್ ಲವ, 38 ವರ್ಷ, ರವರ ಸಾವಿನ ಬಗ್ಗೆ ಯಾವುದೇ ಅನುಮಾನವಿರುವುದಿಲ್ಲ. ಮುಂದಿನ ಕ್ರಮ ಜರುಗಿಸಿ ಶವವನ್ನು ಅಂತ್ಯ ಸಂಸ್ಕಾರ ಮಾಡಲು ಕೊಡಿಸಿ ಕೊಡಬೇಕಾಗಿ ಕೋರಿದೆ. ಎಂದು ನೀಡಿದ ದೂರಿನ ಮೇರೆಗೆ

03. ಗುಂಡ್ಲುಪೇಟೆ ಠಾಣೆ: (ಮೊ,ನಂ 41/2020) ಪಿರ್ಯಾದಿ ಹಸೀನಾ ಗುಂಡ್ಲುಪೇಟೆ ಪಟ್ಟಣರವರು ನೀಡಿದ ದೂರಿನಲ್ಲಿ ದಿನಾಂಕ; 09.02.2020 ರಂದು ಬೆಳಗ್ಗೆ 11.00 ಗಂಟೆ ಸಮಯದಲ್ಲಿ ಪಿರ್ಯಾದಿ ಗಂಡ ಹಮೀದ್ ರವರು ಹಾಸನಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ. ಪೋನ್ ನಂಬರ್ ಸ್ವಿಚ್ ಆಫ್ ಆಗಿರುತ್ತದೆ. ಕಾಣೆಯಾಗಿರುವ ನನ್ನ ಗಂಡನನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

04. ಗುಂಡ್ಲುಪೇಟೆ ಠಾಣೆ: (ಮೊ,ನಂ 43/2020) ದಿನಾಂಕ: 08.02.2020 ರಂದು ಸಂಜೆ 17.45 ಗಂಟೆಯಲ್ಲಿ ಗುಂಡ್ಲುಪೇಟೆ ತಾಲ್ಲೋಕು ದೇವರಹಳ್ಳಿ ಗ್ರಾಮ ಕೆರೆಯ ಬಳಿ ಇರುವ ಮಲ್ಲೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಟೀಟ್ ಜೂಜಾಟ ಆಡುತ್ತಿದ್ದ ಅಖಾಡದಲ್ಲಿದ್ದ 2250/- ರೂಗಳನ್ನು ಮತ್ತು 52 ಇಸ್ಟೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ತಾಟನ್ನು ಪಂಚರ ಸಮಕ್ಷಮ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡು ಅಸಂಜ್ಞೆಯ ಅಫರಾಧವಾದ್ದರಿಂದ ಠಾಣಾ ಕೆ.ಜಿಎಸ್ಸಿ ನಂ 130/20 ರಂತೆ ನೊಂದಾಯಿಸಿಕೊಂಡು ಪ್ರಕರಣ ದಾಖಲಿಸಿ ಸಂಜ್ಞೆಯ ಪ್ರಕರಣವಾಗಿ ತನಿಖೆ ನಡೆಸಲು ಘನ ನ್ಯಾಯಾಲಯದ ಅನುಮತಿಗಾಗಿ ಕೋರಿಕೆಯನ್ನು ಸಲ್ಲಿಸಿಕೊಂಡಿದ್ದು, ಈ ದಿನ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿದ ಮೆರೆಗೆ ಈ ಪ್ರ ವ ವರದಿ.

05. ತೆರಕಣಾಂಬಿ ಠಾಣೆ: (ಮೊ,ನಂ 11/2020) ಪಿರ್ಯಾದಿ ಶ್ರೀ ಮಂಜುನಾಥ್ ಮರಳಾಪುರ ಗ್ರಾಮರವರು ನೀಡಿದ ದೂರಿನಲ್ಲಿ ಅವರು ತಮ್ಮ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಜೀಣರ್ೋದ್ಧಾರಕ್ಕೆ ಮರಿತಿಬ್ಬೆಗೌಡರಿಂದ ಹಾಗೂ ಎಂಎಲ್ಎ ರಾದ ಶ್ರೀ ನಿರಂಜನ್ ಕುಮಾರ್ರವರಿಂದ ಅನುದಾನ ಬಿಡುಗಡೆಯಾಗಿದ್ದು ಈ ಸಂಬಂಧ ದೇವಸ್ಥಾನದ ಅಕ್ಕಪಕ್ಕ ಅಚ್ಚುಕಟ್ಟು ಕೆಲಸಕ್ಕೆ ನಮ್ಮ ತಂದೆ ಶಿವಮಲ್ಲಪ್ಪ ಹಾಗೂ ಗ್ರಾಮಸ್ಥರು ಹೋಗಿದ್ದ ಸಮಯದಲ್ಲಿ ನಮ್ಮ ಗ್ರಾಮದ ಉಮೇಶ ಅವರ ತಂದೆ ರಾಜಶೇಖರಪ್ಪ, ತಾಯಿ ಸಿದ್ದಮ್ಮ ರವರು ದೇವಸ್ಥಾನದ ಖಾಲಿ ಜಾಗ ನಮ್ಮದೆಂದು ಜಗಳ ತೆಗೆದು ಉಮೇಶ ನಮ್ಮ ತಂದೆ ಶಿವಮಲ್ಲಪ್ಪರವರಿಗೆ ಮಚ್ಚಿನಿಂದ ತಲೆಗೆ ಹೊಡೆದು ಗಾಯ ಪಡಿಸಿದ್ದು, ರಾಜಶೇಖರಪ್ಪ ವೀರಭದ್ರಸ್ವಾಮಿ ರವರಿಗೆ ಕಲ್ಲಿನಿಂದ ಬಲಗಾಲಿಗೆ ಹೊಡೆದು ಸಿದ್ದಮ್ಮ ಅವಾಚ್ಯ ಶಬ್ದಗಳಿಂದ ಬೈದು, ಚಪ್ಪಲಿಯನ್ನು ಕೈಯಲ್ಲಿ ಹೊಡೆಯಲು ಎತ್ತಿಕೊಂಡಿದ್ದು ನಂತರ ಗ್ರಾಮಸ್ಥರಾದ ಗೌಡಿಕೆ ಶ್ರೀಕಂಠಪ್ಪ, ಮಹದೇವಪ್ಪ, ಗುರುಮಲ್ಲಪ್ಪ, ಮಹದೇವಪ್ಪ ಶಿವನಂದಸ್ವಾಮಿಗಳವರು ಜಗಳ ಬಿಡಿಸಿರುತ್ತಾರೆ. ನಂತರ ನಮ್ಮ ತಂದೆ ಶಿವಮಲ್ಲಪ್ಪ ಮತ್ತು ವೀರಭದ್ರಸ್ವಾಮಿ ರವರನ್ನು ಗುಂಡ್ಲುಪೇಟೆ ಸಕರ್ಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸಗೆ ದಾಖಲು ಮಾಡಿರುತ್ತೇವೆ. ನಮ್ಮ ತಂದೆ ಶಿವಮಲ್ಲಪ್ಪ ಹಾಗೂ ವೀರಭದ್ರಪ್ಪರವರಿಗೆ ಮಚ್ಚು ಹಾಗೂ ಕಲ್ಲಿನಿಂದಹೊಡೆದು ಗಾಯಪಡಿಸಿರುವ ಮೇಲ್ಕಂಡ ಉಮೇಶ. ರಾಜಶೇಖರಪ್ಪ ಮತ್ತು ಸಿದ್ದಮ್ಮರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ

06. ತೆರಕಣಾಂಬಿ ಠಾಣೆ: (ಮೊ,ನಂ 12/2020) ಪಿರ್ಯಾದಿ ಶ್ರೀಮತಿ ಸಿದ್ದಮ್ಮ ಕೋ ರಾಜಶೇಖರಪ್ಪರವರು ಮರಳಾಪುರ ಗ್ರಾಮರವರು ನೀಡಿದ ದೂರಿನಲ್ಲಿ ಹಾಜರಾಗಿ ನೀಡಿದ ದೂರು ವಿಚಾರವೇನೆಂದರೆ ಈ ದಿನ ದಿನಾಂಕ 10-02-2020 ರಂದು ಬೆಳೀಗ್ಗೆ 9-00 ಗಂಟೆಯಲ್ಲಿ ನಾನು ಮತ್ತು ನನ್ನ ಗಂಡ ರಾಜಶೇಖರಪ್ಪ ಮತ್ತು ನನ್ನ ಮಗ ಉಮೇಶ ಮನೆಯಲ್ಲಿದ್ದಾಗ ನಮ್ಮ ಗ್ರಾಮದ ಶಿವಮಲ್ಲಪ್ಪ ಬಿನ್ ಬಸಪ್ಪ, ಮಂಜುನಾಥ @ ಮಂಜು ಬಿನ್ ಶಿವಮಲ್ಲಪ್ಪ, ಚಂದ್ರ ಬಿನ್ ಕರಿಯಪ್ಪ, ಮಂಜು ಬಿನ್ ಗುರುಸ್ವಾಮಪ್ಪ, ವೀರಭದ್ರಸ್ವಾಮಿ ಬಿನ್ ಗುರುಸ್ವಾಮಪ್ಪ, ಶೇಖರಪ್ಪ ಬಿನ್ ನಿಂಗಪ್ಪ, ಮಹೇಶ ಬಿನ್ ಶೇಖರಪ್ಪ, ಸ್ವಾಮಿ ಬಿನ್ ಚಿನ್ನಪ್ಪರವರುಗಳು ಅಕ್ರಮಕೂಟ ಕಟ್ಟಿಕೊಂಡು ಬೋಳಿಮಕ್ಕಳೇ ಸೂಳೆಮಕ್ಕಳೇ ಎಂದು ಅವಾಛ್ಯಶಬ್ದಗಳಿಂದ ನಮ್ಮನ್ನು ಬೈಯುತ್ತಾ ಕೈಯಲ್ಲಿ ದೊಣ್ಣೆ ಆರೆ ಸುತ್ತಿಗೆಗಳನ್ನು ಹಿಡಿದುಕೊಂಡು ಅಕ್ರಮವಾಗಿ ನಮ್ಮ ಮನೆಯ ಆವರಣಕ್ಕೆ ಪ್ರವೇಶಿಸಿ ನಾವು ನಿಮರ್ಿಸಿದ್ದ ಕಾಪೌಂಡ್ ಗೋಡೆಯನ್ನು ಹೊಡೆದು ಹಾಕಿ ನಮಗೆ ಸುಮಾರು ಎರಡು ಲಕ್ಷ ನಷ್ಟ ಉಂಟು ಮಾಡಿರುತ್ತಾರೆ ಅಲ್ಲದೇ ಒಂದು ತೆಂಗಿನ ಮರವನ್ನು ಕತ್ತರಿಸಿ ಸುಮಾರು 20 ಸಾವಿರ ನಷ್ಟ ಉಂಟು ಮಾಡಿರುತ್ತಾರೆ ಆಗ ನಾನು ಮತ್ತು ನಮ್ಮ ಯಜಮಾನರಾದ ರಾಜಶೇಖರಪ್ಪ ನನ್ನ ಮಗ ಉಮೇಶ ಏಕೆ ಈ ರೀತಿ ಮಾಡುತ್ತಿದ್ದೀರಿ ಎಂದು ಕೇಳಿದಕ್ಕೆ ಶಿವಮಲ್ಲಪ್ಪ, ಮಹೇಶ, ಮಂಜುನಾಥರವರುಗಳು ನನ್ನ ಗಂಡ ರಾಜಶೇಖರಪ್ಪರವರಿಗೆ ಕೈಯಿಂದ ಮೈ ಕೈಗೆ ಹೊಡೆದರು. ನಾನು ಬಿಡಿಸಲು ಹೋದಾಗ ಸ್ವಾಮಿ ಮತ್ತು ಮಂಜುರವರು ನನ್ನನ್ನು ಕೆಳಕೆ ತಳ್ಳಿದರು. ಆಗ ಚಂದ್ರ ವೀರಭಧ್ರಸ್ವಾಮಿರವರುಗಳು ರೀಪರ್ ಪಟ್ಟಿಯಿಂದ ನನ್ನ ಬಲ ತೋಲಿನ ಮುಂಗೈಗೆ ಹೊಡೆದು ಗಾಯ ಪಡಿಸಿರುತ್ತಾರೆ ನಂತರ ಮಂಜುನಾಥ ಮಹೇಶರವರು ಕೈಯಿಂದ ನನ್ನ ಮಗ ಉಮೇಶನ ಮೈ ಕೈಗೆ ಬೆನ್ನಿಗೆ ಹೊಡೆದಿರುತ್ತಾರೆ ಅಷ್ಟಕ್ಕೆ ನನ್ನ ಮೈದ ವಿಷಕಂಠಪ್ಪರವರು ಬಂದು ಜಗಳ ಬಿಡಿಸಿದರು ನಂತರ ಮೇಲ್ಕಂಡವರು ನೀವುಗಳು ತಪ್ಪಿಸಿಕೊಂಡಿದ್ದೀರಿ ಇನ್ನೊಮ್ಮೆ ಸಿಕ್ಕಿ ನಿಮ್ಮನ್ನು ಸಾಯಿಸುತ್ತೇವೆ ಎಂದು ಕೊಲೆಬೆದರಿಕೆ ಹಾಕಿರುತ್ತಾರೆ ನೀಡಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ

07. ಕೊಳ್ಳೇಗಾಲ ಪಟ್ಟಣ ಠಾಣೆ: (ಮೊ,ನಂ 22/2020) ಪಿರ್ಯಾದಿ ರಾಚನಾಯಕ ಕೊಳ್ಳೇಗಾಲ ಪಟ್ಟಣರವರು ನೀಡಿದ ದೂರಿನಲ್ಲಿ ಅವರು ಶಿವ ಬಾರ್ & ರೆಷ್ಟೋರೆಂಟ್ ಬಳಿ ಗಾಡಿಯನ್ನು ಹಾಕಿಕೊಂಡು ಬಾಳೆಹಣ್ಣಿನ ವ್ಯಾಪಾರ ಮಾಡಕೊಂಡಿದ್ದಾಗ ರಾತ್ರಿ 9.00 ಗಂಟೆಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ಬಂದು ಒಂದು ಕೆ.ಜಿ. ಬಾಳೆಹಣ್ಣು ಕೊಡು ಎಂದು ಕೇಳಿದನು. ನಾನು 30 ರೂ ಎಂದು ಹೇಳಿದ್ದಕ್ಕೆ ಆ ವ್ಯಕ್ತಿಯು ಒಂದು ಕೆ.ಜಿ.ಗೆ 30 ರೂನ ಎಂದು ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿ ನನಗೆ ಕೈಗಳಿಂದ ಹೊಡೆಯುತ್ತಿದ್ದಾಗ ನಾನು ಯಾಕೆ ಹೋಡೆಯುತ್ತಿಯಾ ಎಂದು ಕೇಳಿದ್ದಕ್ಕೆ ಆ ವ್ಯಕ್ತಿಯು ನಾನು ತಳ್ಳುವ ಗಾಡಿಯಲ್ಲಿಟಿದ್ದ ತಕ್ಕಡಿಯ ಜೊತೆಯಲ್ಲಿದ್ದ ತೂಕ ಮಾಡು ಬಟ್ಟನ್ನು ತೆಗೆದುಕೊಂಡು ನನ್ನ ತಳೆಗೆ ಹೊಡೆದು ರಕ್ತಗಾಯ ಮಾಡಿದ್ದು, ಅವನ ಜೊತೆಯಲ್ಲಿ ಇದ್ದ ಮತ್ತೊಬ್ಬ ವ್ತಕ್ತಿಯು ನನಗೆ ಕೈಗಳಿಂದ ಹೊಡೆದು ನೋವುಂಟು ಮಾಡಿದ್ದು, ನಂತರ ಸಕರ್ಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು, ನನಗೆ ಹೊಡೆದ ವ್ಯಕ್ತಿಗಳ ಹೆಸರು ವಿಳಾಸ ಗೊತ್ತಿಲ್ಲ ನೋಡಿದರೆ ಗುರುತಿಸುತ್ತೇನೆ. ಆದ್ದರಿಂದ ನನಗೆ ಹೊಡೆದ ವ್ತಕ್ತಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ಹೇಳಿಕೆ ದೂರಿನ ಮೇರೆಗೆ ಪ್ರ ವರದಿ.

08. ಕೊಳ್ಳೇಗಾಲ ಪಟ್ಟಣ ಠಾಣೆ: (ಮೊ,ನಂ 23/2020) ಪಿರ್ಯಾದಿ ಗಾಯಳುವಾದ ಪ್ರದೀಪ್ ಕುಮಾರ್ ಸಿ ರವರು ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಸಾರಂಶವೆನೆಂದರೆ ದಿನಾಂಕ:-09-02-2020 ರಂದು ನನ್ನ ಭಾವನಾದ ವಿಜಯ್ ಕುಮಾರ್ ರವರ ತಮ್ಮ ರಾಜೇಂದ್ರ ಪ್ರಸಾದ್ ಪಿ ರವರಿಗೆ ನಾನು ಪೋನ್ ಮಾಡಿ ಎಲ್ಲಿದ್ದಿಯಾ ಎಂದು ಕೇಳಿದ್ದೆ ಅದಕ್ಕೆ ಅವನು ಬೇರೆಕಡೆ ಇದ್ದೇನೆ ಎಂದು ಹೇಳಿದಾಗ ನಾನು ಶಿವರೆಸಿಡೆನ್ಸಿ ಹತ್ತಿರ ಇದ್ದೇನೆ ಎಂದು ಹೇಳಿದಾಗ ನಾನು ಇದ್ದ ಸ್ಥಳಕ್ಕೆ ರಾಜೇಂದ್ರ ಪ್ರಸಾದ್ ಪಿ ಬಂದನು ಆಗ ನಾನು ಕೊಟ್ಟಿದ್ದ ಹಣವನ್ನು ಕೊಡು ಎಂದು ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ನನ್ನ ಕತ್ತನ್ನು ಕೈಯಿಂದ ಹಿಡಿದುಕೊಂಡನು ಆಗ ನಾನು ಕೈಯನ್ನು ಬಿಡಸುತ್ತಿದ್ದಾಗ ನನ್ನ ಬಲಗೈನ ಹೆಬ್ಬರಳಿಗೆ ಕಚ್ಚಿದನು ಹಾಗೂ ಅಲ್ಲಿಯೇ ಬಿದ್ದಿದ್ದ ಗಾಜಿನ ಬಾಟಲ್ನ್ನು ತೆಗೆದುಕೊಂಡು ನನ್ನ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯ ಮಾಡಿದನು ಎಂದು ಇತ್ಯಾದಿಯಾಗಿ ಕ್ರಮ ಜರುಗಿಸಲು ನೀಡಿದ ಹೇಳಿಕೆಯ ಮೇರೆಗೆ ಪ್ರ ವ ವರದಿ.

09. ಕೊಳ್ಳೇಗಾಲ ಪಟ್ಟಣ ಠಾಣೆ: (ಮೊ,ನಂ 24/2020) ಪಿರ್ಯಾದಿ ರಾಜಶೇಖರ ಕೊಳ್ಳೇಗಾಲ ಪಟ್ಟಣರವರು ನೀಡಿದ ದೂರಿನಲ್ಲಿ ನಮ್ಮ ತಾಯಿ ಮನೆಯಿಂದ ಊಟ ಮುಗಿಸಿಕೊಂಡು ಆಶ್ರಯ ಬಡಾವಣೆಯಲ್ಲಿರುವ ನನ್ನ ಮನೆಗೆ ಹೋಗುತ್ತಿರುವಾಗ ನನ್ನ ಮನೆಯ ಮುಂದೆ ಸ್ಕೂಟರ್ನಲ್ಲಿ ವೇಗವಾಗಿ ಅಜಾಂವುಲ್ಲಾ ಎಂಬತನು ಬೈಕ್ ಓಡಿಸುತ್ತಿದ್ದಾಗ ನಾನು ಲೋ ಹುಡುಗ ಸ್ವಲ್ಪ ನಿಧಾನವಾಗಿ ಗಾಡಿ ಓಡಿಸು ವೇಗವಾಗಿ ಗಾಡಿ ಓಡಿಸಿದರೆ ರಸ್ತೆ ಅಪಾತವಾಗುತ್ತದೆ ಎಂದು ಬದ್ದಿವಾದ ಹೇಳಿದ್ದಕ್ಕೆ ಅಜಾಂವುಲ್ಲಾನು ಏಕಾಏಕಿ ನನ್ನನ್ನು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಇದು ನನ್ನ ಗಾಡಿ ನಾನು ಎಷ್ಟು ವೇಗವಾಗಿಯಾದರೂ ಓಡಿಸುತ್ತೇ ನಿನ್ಯಾರು ನನ್ನನ್ನು ಕೇಳುವುದಕ್ಕೆ ಬೋಳಿಮಗನೆ, ಎಂದು ಕೋಪಗೊಂಡು ತನ್ನ ಕೈಮುಷ್ಟಿಯಿಂದ ನನ್ನ ಎಡಕಣ್ಣಿನ ಬಾಗಕ್ಕೆ ಹೊಡೆದು ರಕ್ತಗಾಯ ಮಾಡಿದನು. ನಾನು ಕೆಳಕ್ಕೆ ಬಿದ್ದಾಗ ಆತನು ಕೂಡಲೆ ರಸ್ತೆಯಲ್ಲಿರುವ ಯುಜಿಡಿ ಸ್ಲ್ಯಾಬ್ ಎತ್ತಿಕೊಂಡು ನನ್ನ ತಲೆಗೆ ಹೊಡೆಯಲು ಬಂದಾಗ ಅಕ್ಕಪಕ್ಕದವರು ಬಂದು ಬಿಡಿಸುತಿದ್ದಾಗ ಆತನು ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿ ತನ್ನ ಕಾಲಿನಿಂದ ನನ್ನ ಮಮರ್ಾಂಗಕ್ಕೆ ಹೊಡೆದು ನೋವುಂಟು ಮಾಡರುತ್ತಾನೆ. ಅಷ್ಟಕ್ಕೆ ನನ್ನ ಅಕ್ಕಪಕ್ಕದವರುಬಂದು ಜಗಳ ಬಿಡಿಸಿ ಆಸ್ಪತ್ರೆಗೆ ಸೇರಿಸಿರುತ್ತಾರೆ ಇತ್ಯಾದಿಯಾಗಿ ನೀಡಿದ್ದ ದೂರಿನ ಮೇರೆಗೆ ಪ್ರ ವ ವರದಿ

10. ಹನೂರು ಠಾಣೆ: (ಮೊ,ನಂ 17/2020) ಪಿರ್ಯಾದಿ ಮಹದೇವ ಪುಷ್ಪಪುರ ಗ್ರಾಮರವರು ನೀಡಿದ ದೂರಿನಲ್ಲಿ ಅವರು ಅಜರ್ಿಯ ಸಾರಾಂಶವೇನೆಂದರೆ, ದಿನಾಂಕ 14.01.2020 ರಂದು ಬೆಳಗಿನ ಜಾವ 5.30 ಗಂಟೆಯದಲ್ಲಿ ನನ್ನ ಹೆಂಡ್ತಿ ಪಾರ್ವತಿಯು ನನ್ನ ಮಗಳು ಲೀಲಾವತಿಗೆ ನಾನು ದೇವಸ್ಥಾನಕ್ಕೆ ನಂಜನಗೂಡಿಗೆ ಹೋಗಿಬರುತ್ತೇನೆಂದು ನನ್ನ ಮಗಳಿಗೆ ಹೇಳಿ ಮನೆಯಿಂದ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ ಅಂತ ನನ್ನ ಮಗಳು ಲೀಲಾವತಿಯು ನನಗೆ ತಿಳಿಸಿದಳು. ನಾನು ಕೇರಳದಿಂದ ವಾಪಸ್ ಬಂದು ನಮ್ಮ ನೆಂಟರಿಷ್ಟರ ಮನೆಯಲ್ಲಿ ಸಂಬಂಧಕರು ಹಾಗೂ ದೇವಸ್ಥಾನದ ಯಾತ್ರಾ ಸ್ಥಳಗಳಲ್ಲಿ ಎಲ್ಲಾ ಹುಡುಕಿ ನೋಡಿದರು ನನ್ನ ಹೆಂಡ್ತಿ ಇದುವರೆಗೂ ಪತ್ತೆಯಾಗಿರುವುದಿಲ್ಲ, ಕಾಣೆಯಾದ ನನ್ನ ಹೆಂಡ್ತಿ ಚಹರೆ- ಹೆಸರು ಪಾರ್ವತಿ, 50 ವರ್ಷ ಎತ್ತರ ಸುಮಾರು 5 ಅಡಿ ಕೆಂಪು ಮೈ ಬಣ್ಣ, ಕೋಲಿಮುಖ, ಮುಖದಲ್ಲಿ ಕಪ್ಪು ಮಚ್ಚೆಗಳು ಇರುತ್ತದೆ. ತಲೆ ಕೂದಲು ಜಡೆಯಾಗಿರುತ್ತದೆ. ಕನ್ನಡದಲ್ಲಿ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹರಿಸಿನ ಬಣ್ಣದ ಸೀರೆ ಹಳದಿ ಬಣ್ಣದ ರವಿಕೆ, ಧರಿಸಿರುತ್ತಾಳೆ. ನಾವು ಎಲ್ಲಾ ಕಡೆ ಹುಡುಕಿ ಸಿಗದಿದ್ದ ಕಾರಣ ಈ ದಿನ ಬಂದು ತಡವಾಗಿ ದೂರು ನೀಡಿರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

11. ರಾಮಾಪುರ ಠಾಣೆ: (ಮೊ,ನಂ 14/2020) ಫಿರ್ಯಾದಿ ಪೊಲೀಸ್ ಇನ್ಸ್ಪೆಕ್ಟರ್ರವರು ಸಿಬ್ಬಂದಿಗಳೊಂದಿಗೆ ಗಸ್ತಿನಲ್ಲಿದ್ದಾಗ ಬಂದ ಖಚಿತ ವರ್ತಾಮಾನದ ಮೇರೆಗೆ ಪಂಚರರೊಂದಿಗೆ ದಿನಾಂಕ 09-02-2020 ರಂದು ಸಂಜೆ 17-30 ಗಂಟೆ ಸಮಯದ;ಲ್ಲಿ ಹೂಗ್ಯಂ ಗ್ರಾಮದಿಂದ ಪಾಲರ್ ನದಿ ಬಳಿ ಹೂಗುವ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ವೃತ್ತಾಕಾರದಲ್ಲಿ ಕುಳಿತು ಜೂಜಾಟ ಆಡುತ್ತಿದ್ದವರನ್ನು ಸಿಬ್ಬಂದಿಗಳೊಂದಿಗೆ ಸುತ್ತುವರೆದು ದಾಳಿ ಮಾಡಿದಾಗ ಮೇಲ್ಕಂಡ ಆರೋಪಿಗಳನ್ನು 7 ಜನರನ್ನು ಹಿಡಿದಿದ್ದು 04 ಜನ ಓಡಿಹೋಗಿದ್ದು ಪಣಕ್ಕಾಗಿಟ್ಟದ್ದ ಒಟ್ಟು 30070/- ರೂ ನಗದು ಹಾಗೂ 52 ಇಸ್ಪೀಟ್ ಎಲೆ ಗಳನ್ನು ವಶಕ್ಕೆ ಪಡೆದು ಠಾಣೆಗೆ 19-00 ಗಂಟೆಗೆ ಬಂದು ವರದಿ ನೀಡಿದ್ದು ಸ್ವೀಕರಿಸಿ ಠಾಣಾ ಎನ್.ಸಿ.ಆರ್ 29/2020 ರಲ್ಲಿ ನೊಂದಾಯಿಸಿ ಇದು ಅಸಂಜ್ಞೆಯ ಪ್ರಕರಣ ವಾದ್ದರಿಂದ ಘನ ನ್ಯಾಯಾಲಯದ ಅನುಮತಿ ಪತ್ರವನ್ನು ಠಾಣಾ ಹೆಚ್.ಸಿ-143 ರವರು ಈ ದಿನ ದಿನಾಂಕ 10-02-2020 ರಂದು ಸಂಜೆ 18-15 ಗಂಟೆ ಸಮಯದಲ್ಲಿ ಸ್ವೀಕರಿಸಿದ ಮೇರೆಗೆ ಈ ಪ್ರ ವ ವರದಿ.


Your Comment

Name :
Email:
Comment:
Submit

Website Designed and Developed by Global Buzz®