• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On 09-02-2020

No of views : 28       No of Comments : 0

01. ಯಳಂದೂರು ಠಾಣೆ: (ಮೊ,ನಂ 12/2020) ಪಿರ್ಯಾದಿ ಮಹೇಶ್ ಎಂ ಹೊನ್ನೂರು ಗ್ರಾಮರವರು ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ಅವರ ತಾಯಿಯವರಾದ ಲಕ್ಷ್ಮಮ್ಮರವರು ಅವರ ಗ್ರಾಮದ ಶಿವಪ್ರಸಾದ್ ಎಂಬುವರ ಬಾಬ್ತು ಕೆ.ಎ 54-6030 ನೊಂದಣಿ ಸಂಖ್ಯೆಯ ಆಟೋದಲ್ಲಿ ಗ್ರಾಮದ ಚಿಕ್ಕತಾಯಮ್ಮ ಹಾಗೂ ಇತರರೊಂದಿಗೆ ಯಳಂದೂರಿ ನಿಂದ ದಿನಾಂಕ 08-02-2020 ರಂದು ಸಂಜೆ 05:15 ಗಂಟೆ ಸಮಯದಲ್ಲಿ ಯಳಂದೂರನ್ನು ಬಿಟ್ಟು ಮೆಲ್ಲಹಳ್ಳಿಗೇಟ್ ಮಾರ್ಗವಾಗಿ ಹೊನ್ನೂರು ಗ್ರಾಮದ ಕಡೆಗೆ ಶಿವಪ್ರಸಾದ್, ಲಕ್ಷಮ್ಮರವರನ್ನು ತನ್ನ ಸೀಟ್ ಪಕ್ಕದಲ್ಲಿ ಕೂರಿಸಿಕೊಂಡು ಆಟೋವನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷತನದಿಂದ ಓಡಿಸುತ್ತಿದ್ದು ಸಂಜೆ 05:45 ಗಂಟೆ ಸಮಯದಲ್ಲಿ ಮೆಲ್ಲಹಳ್ಳಿ ಮುಂದೆ ಆಟೋವನ್ನು ವೇಗವಾಗಿ ಬಲಕ್ಕೆ ಭಾಗಿಸಿದಾಗ ಪಕ್ಕದಲ್ಲಿ ಕುಳಿತ್ತಿದ್ದ ಲಕ್ಷಮ್ಮ ರವರು ಕೆಳಕ್ಕೆ ಬಿದ್ದು ಅವರ ತಲೆಗೆ ಗಾಯವಾಗಿರುತ್ತೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಸದರಿ ಅಪಘಾತ ಉಂಟು ಮಾಡಿದ ಕೆಎ 54 6303 ನೋಂದಣಿ ಸಂಖ್ಯೆ ಪ್ಯಾಸೆಂಜರ್ ಆಟೋ ಚಾಲಕ ಶಿವ ಪ್ರಸಾದ್ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

02. ಕೊಳ್ಳೇಗಾಲ ಗ್ರಾಮಾಂತರ ಠಾಣೆ: (ಮೊ,ನಂ 36/2020) ಪಿರ್ಯಾದಿ ಗೌರಮ್ಮ ಸತ್ತೇಗಾಲ ಗ್ರಾಮರವರು ಕೊಟ್ಟ ಹೇಳಿಕೆ ಏನೆಂದರೆ ದಿ:08-02-2020ರಂದು ರಾತ್ರಿ 08-30 ಗಂಟೆಯಲ್ಲಿ ನಾನು ನಮ್ಮ ಯಜಮಾನರು ಮನೆಯಲ್ಲಿದ್ದಾಗ ನನ್ನ ಭಾವನ ಮಕ್ಕಳಾದ ಸಂತೋಷ, ಶಿವು ಹಾಗೂ ನನ್ನ ವಾರಗಿತ್ತಿ ಗೌರಮ್ಮರವರು ಮನೆಯ ಹೊರಗಡೆಯಿಂದ ಬೈಯ್ಯುತ್ತಿದ್ದು ಗೌರಮ್ಮ ತನ್ನ ಮಕ್ಕಳಿಗೆ ಅವರನ್ನು ಎಳೆದುಕೊಂಡು ಬನ್ನಿ, ಜಮೀನಿನ ವಿಚಾರಕ್ಕೆ ಬಂದರೆ ಇವರಿಗೆ ಒಂದು ಗತಿ ಕಾಣಿಸಿ ಬಿಡೋಣವೆಂದಳು.ಅಷ್ಟಕ್ಕೆ ಶಿವು ನಮ್ಮ ಮನೆ ಒಳಗೆ ನುಗ್ಗಿ ಮನೆಯಲ್ಲಿದ್ದ ನಮ್ಮ ಯಜಮಾನರ ಎದೆಗೆ ಗುದ್ದಿ ತಲೆ ಬೆನ್ನಿಗೆ ಹೊಡೆದನು.ಆಗ ನಾನು ನನ್ನ ಗಂಡನನ್ನು ಬಿಡುವಂತೆ ಕೇಳಿಕೊಂಡು ಹೊರಗಡೆ ಬಂದಾಗ ಮನೆಯ ಹೊರಗೆ ಸಂತೋಷನು ಮಚ್ಚು ಹಿಡಿದುಕೊಂಡು ನಮ್ಮ ಮನೆ ಗೇಟ್ಗೆ ಹೊಡೆಯುತ್ತಿದ್ದನು,ಆಗ ನಾನು ಗೇಟ್ ಮುರಿಯಬೇಡ ಬಿಡಪ್ಪ ಎಂದು ಹೋದಾಗ ಸಂತೋಷ ನನ್ನನ್ನು ತಳ್ಳಿ ಕೈಯಲ್ಲಿದ್ದ ಮಚ್ಚಿನಿಂದ ನನ್ನ ಹಣೆಗೆ ಹೊಡೆದು ರಕ್ತಗಾಯ ಮಾಡಿದನು,ಕೊಲೆ ಬೆದೆರಿಕೆ ಃಆಕಿ ಹೋಗಿರುತ್ತಾರೆ. ನಮ್ಮ ಮೇಲೆ ಗಲಾಟೆ ಮಾಡಿ ಮಚ್ಚಿನಿಂದ ಹೊಡೆದು ರಕ್ತಗಾಯ ಮಾಡಿದ ಸಂತೋಷ,ಶಿವು ಹಾಗೂ ಗಲಾಟೆಗೆ ಕುಮ್ಮಕ್ಕು ನೀಡಿದ ಗೌರಮ್ಮರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಎಂದು ಕೊಟ್ಟ ಹೇಳಿಕೆ ಮೇರೆಗೆ ಈ ಪ್ರ ವ ವರದಿ.

03. ಕೊಳ್ಳೇಗಾಲ ಗ್ರಾಮಾಂತರ ಠಾಣೆ: (ಮೊ,ನಂ 37/2020) ಪಿರ್ಯಾದಿ ಮನು ಜೆ.ಸಿ ನಗರ, ಕುರುಬರಹಳ್ಳಿ ಬೆಂಗಳುರುರವರು ನೀಡಿದ ದೂರೇನೆಂದರೆ ದಿ:09-02-2020 ರಂದು ಬೆಂಗಳೂರಿನಿಂದ ಕೆಎ-05-ಎಂವಿ-8608 ನಂ ಟಾಟಾ ಟಿಯಾಗೋ ಕಾರಿನಲ್ಲಿ ಶಿವನಸಮುದ್ರದ ಸೋಮೆಶ್ವರ ದೇವಸ್ಥಾನಕ್ಕೆ ಬಂದು ಪೂಜಾ ಕಾರ್ಯವನ್ನು ಮುಗಿಸಿಕೊಂಡು ವಾಪಸ್ಸು ಮದ್ಯಾಹ್ನ ಸುಮಾರು 01-30 ಗಂಟೆಲ್ಲಿ ಶಿವನಸಮುದ್ರ ಗ್ರಾಮದ ಕಾವೇರಿ ನದಿಯ ವೆಸ್ಲೆ ಸೇತುವೆಯ ಮುಂದೆ ರಸ್ತೆಯಲ್ಲಿ ನಮ್ಮ ಎದುರುಗಡೆಯಿಂದ ಒಂದು ಟೆಂಪೋ ಟ್ರಾವಲರ್ ವಾಹನವನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ಕಾರ್ನ ಬಲಪಾಶ್ರ್ವಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದನು.ಅಪಘಾತಪಡಿಸಿದ ವಾಹನವನ್ನು ನೋಡಲಾಗಿ, ಕೆಎ-43-2689 ನಂಬರ್ನ ಟೆಂಪೋ ಟ್ರಾವಲರ್ ಆಗಿದ್ದು, ಈ ಅಪಘಾತಕ್ಕೆ ಮೇಲ್ಕಂಡ ವಾಹನದ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯೇ ಕಾರಣವಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಈ ಪ್ರ ವ ವರದಿ.

04. ಕೊಳ್ಳೇಗಾಲ ಗ್ರಾಮಾಂತರ ಠಾಣೆ: (ಮೊ,ನಂ 38/2020) ಪಿರ್ಯಾದಿ ಗೌರಮ್ಮ ಸತ್ತೇಗಾಲ ಗ್ರಾಮರವರು ನೀಡಿದ ದೂರಿನಲ್ಲಿ ಅವರ ಮೈದುನ ನಾಗಣ್ಣ ಹಾಗೂ ಅವನ ಹೆಂಡತಿ ಗೌರಮ್ಮ ಪಿರ್ಯಾದಿ ಮನೆಯ ಬಳಿ ಬಂದು ಅವರ ಜೊತೆ ಜಗಳ ತೆಗೆದು ಗೌರಮ್ಮಳು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಳು. ಅವರ ಮೈದುನ ನಾಗಣ್ಣ ಬಂದು ಜುಟ್ಟು ಹಿಡಿದು ಉರುಳಾಡಿಸಿ ಕೈಯಿಂದ ಬೆನ್ನಿಗೆ ಎದೆಗೆ ಹೊಡೆದು ತಳ್ಳಿ ಬೀಳಿಸಿದನು ನಾಗಣ್ಣ ಮತ್ತು ಗೌರಮ್ಮರವರು ಜಮೀನಿನ ವಿಚಾರಕ್ಕೆ ಬಂದರೇ ನಿಮ್ಮನು ಕೊಲೆ ಮಾಡಿಸದೇ ಬಿಡುವುದ್ದಿಲ್ಲಾ ಎಂದು ಬೈದುಕೊಂಡು ಹೋದರು ಆದ್ದರಿಂದ ನಮ್ಮ ಮೇಲೆ ಜಗಳ ಮಾಡಿ ಹೊಡೆದು ನೋವುಂಟು ಮಾಡಿ ಜೀವ ಬೆದರಿಕೆ ಹಾಕಿರುವ ನಾಗಣ್ಣ ಮತ್ತು ಗೌರಮ್ಮರವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಈ ದಿನ ಬೆಳಿಗ್ಗೆ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ದೂರು ನೀಡಿದ ಮೇರೆಗೆ ಈ ಪ್ರ ವ ವರದಿ.

05. ಕೊಳ್ಳೇಗಾಲ ಗ್ರಾಮಾಂತರ ಠಾಣೆ: (ಮೊ,ನಂ 39/2020) ಪಿರ್ಯಾದಿ ಮಹೇಶ ಕೆಸ್ತೂರು ಗ್ರಾಮರವರು ನೀಡಿದ ದೂರಿನಲ್ಲಿ ಅವರ ತಾಯಿ ಪುಟ್ಟಸಿದ್ದಮ್ಮ ರವರು ಕುಂತೂರಿಗೆ ಹೋಗಿ ವಾಪಸ್ ತಮ್ಮ ಊರಿಗೆ ಬರಲು ಸಾಯಂಕಾಲ 6-30 ಗಂಟೆ ಸಮಯದಲ್ಲಿ ಕುಂತೂರು ಸರ್ಕಲ್ನ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುವಾಗ ಟಿ, ನರಸೀಪುರ ರಸ್ತೆಯ ಕಡೆಯಿಂದ ಬಂದ ಕೆಎ-10 ಡಬ್ಲೂ-7118 ನಂಬರಿನ ಪ್ಲಾಟಿನ ಬೈಕಿನ ಚಾಲಕ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅವರ ತಾಯಿಗೆ ಎದುರುಗಡೆಯಿಂದ ಡಿಕ್ಕಿಗೊಳಿಸಿದ್ದು ಗಾಯವಾಗಿರುತ್ತದೆ. ಅಪಘಾತಪಡಿಸಿದ ಕೆಎ-10 ಡಬ್ಲೂ-7118 ಬೈಕು ಚಾಲಕನ ಮೇಲೆ ಕಾನೂನು ಕ್ರಮಜರುಗಿಸಲು ದೂರು ನೀಡಿದ ಮೇರೆಗೆ ಈ ಪ್ರ ವ ವರದಿ.


Your Comment

Name :
Email:
Comment:
Submit

Website Designed and Developed by Global Buzz®