• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report On 08-02-2020

No of views : 7       No of Comments : 0

01. ಚಾಮರಾಜನಗರ ಪಟ್ಟಣ ಠಾಣೆ: (ಮೊ,ನಂ 12/2020) ಪಿರ್ಯಾದಿ ಸಿಪಿಸಿ 253 ಮಾದಶೆಟ್ಟಿರವರು ನೀಡಿದ ದೂರಿನಲ್ಲಿ ಪಿಎಸ್ಐರವರ ಆದೇಶದಂತೆ ಹೆಲ್ಮೇಟ್ ಧರಿಸದೇ ಇರುವ ಹಾಗು ಇನ್ನಿತರೇ ವಾಹನಗಳನ್ನು ಪರಿಶೀಲಿಸಿ ತಂದು ಹಾಜರುಪಡಿಸುವ ಸಲುವಾಗಿ ವಾಹನಗಳನ್ನು ನಿಲ್ಲಿಸಿ ಪರಿಶೀಲಿಸುತ್ತಿದಾಗ ಬೆಳಿಗ್ಗೆ ಸುಮಾರು 11-00 ಗಂಟೆ ಸಮಯದಲ್ಲಿ ಒಂದು ಬೈಕ್ನಲ್ಲಿ ಇಬ್ಬರು ಆಸಾಮಿಗಳು ಹೆಲ್ಟೆಟ್ ಧರಿಸದೆ ಬೈಕನ್ನು ಚಾಲನೆ ಮಾಡಿಕೊಂಡು ಬಂದಾಗ ಆವರನ್ನು ಕೈ ಮಾಡಿ ನಿಲ್ಲಿಸಿ ಹೆಲ್ಮೆಟ್ ಧರಿಸದೆ ಇರುವ ಬಗ್ಗೆ ಪ್ರಶ್ನಿಸಿದಾಗ, ಬೈಕ್ ಚಾಲನೆ ಮಾಡುತ್ತಿದ್ದವನು ನಿವಾರೋ ನನ್ನನ್ನು ಕೇಳಲು, ನಾನು ಹೆಲ್ಮೆಟ್ ಹಾಕುವುದಿಲ್ಲ, ಎನು ಕಿತ್ತಿಕೊಳ್ಳುತ್ತೀರಾ ಎಂದು ಬೈದನು. ಹಿಂಬದಿ ಕುಳಿತ್ತಿದ್ದ ಅಸಾಮಿಯು ಸಹ ಬೋಳಿಮಕ್ಕಳೇ ದಿನ ಬೆಳಿಗ್ಗೆ ಇದೇ ಆಯಿತು. ದುಡ್ಡು ಮಾಡಿಕೊಳ್ಳುವುದಕ್ಕೆ ಬೇರೆ ಯಾವುದೇ ಜಾಗವಿಲ್ಲವಾ ಅಂತ ಹೇಳಿದನು. ಇಬ್ಬರು ಸೇರಿ ನೀನು ಯಾರೋ ಬೋಳಿ ಮಗನೆ ನಮ್ಮ ವಾಹನವನ್ನು ತಡೆಂಲು ಎಂದು ಅವಾಚ್ಯ ಶಭ್ದಗಳಿಂದ ಬೈಯ್ದು ಗಲಾಟೆ ಮಾಡಿ, ಕೈಯಿಂದ ಎದೆಯ ಭಾಗಕ್ಕೆ ತಳ್ಳಿ ಮುಂದೆ ಹೋಗಲು ಯತ್ನಿಸಿದನು. ಪಿಎಸ್ಐ ರವರು ಆತನ ಹೆಸರು ವಿಳಾಸ ಕೇಳಲಾಗಿ ಬೈಕ್ ಓಡಿಸುತ್ತಿದ್ದವನ ಹೆಸರು ಅರ್ಷದ್ಪಾಷ ಬಿನ್ ಅಬ್ದುಲ್ ಖಲೀಲ್, 30 ವರ್ಷ, ಲಾರಿ ಡ್ರೈವರ್ ಮನೆ ನಂ. 13/4, ಟಿಪ್ಪು ಮಸೀದಿ ಹತ್ತಿರ, ಬೀಡಿ ಕಾಲೋನಿ, ಗಾಳಿಪುರ, ಎಂಬುದಾಗಿ ಹಿಂಬದಿ ಕುಳಿತ್ತಿದ್ದವನ ಹೆಸರು ಅಬ್ದುಲ್ ಇಲಿಯಾಸ್ ಬಿನ್ ಅಬ್ದುಲ್ ಖಲೀಲ್, 25 ವರ್ಷ ಆತನ ತಮ್ಮ ಎಂಬುದಾಗಿ ತಿಳಿಸಿದನು. ಆತನ ಬೈಕ್ ಸಂಖ್ಯೆ ಕೆ.ಎ.10/ಇ.ಎ 4016 ಆಗಿತ್ತು. ನಮ್ಮ ಕರ್ತವ್ಯಕ್ಕೆ ಅಡ್ಡಿ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿರುವ ಅರ್ಷದ್ ಪಾಷ ಹಾಗು ಅಬ್ದುಲ್ ಇಲಿಯಾಸ್ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಠಾಣೆಗೆ ಬೆಳಿಗ್ಗೆ 11-45 ಗಂಟೆ ಸಮಯಕ್ಕೆ ಬಂದು ಆಸಾಮಿಗಳು ಹಾಗು ಆತನ ಬೈಕ್ ಅನ್ನು ಹಾಜರುಪಡಿಸಿ ಕಾನೂನು ಕ್ರಮಕೈಗೊಳ್ಳಲು ವರದಿ ನೀಡಿದ ಮೇರೆಗೆ.

02. ಚಾಮರಾಜನಗರ ಪೂರ್ವ ಠಾಣೆ: (ಮೊ,ನಂ 25/2020) ಪಿರ್ಯಾದಿ ತಿಮ್ಮನಾಯಕ ದೊಣ್ಣೆರಂಗನೂರು ಗ್ರಾಮರವರು ನೀಡಿದ ದೂರಿನಲ್ಲಿ ದಿನಾಂಕ:- 07/02/2020 ರಂದು ರಾತ್ರಿ 12.00 ಗಂಟೆ ವೇಳೆಯಲ್ಲಿ ಸುಸ್ತಾಗಿ ನಿದ್ರೆ ಮಾಡುವ ಸಲುವಾಗಿ ಕೋಳಿಪಾಳ್ಯ ಗ್ರಾಮದ ಸಮೀರ್ ಎಂಬುವವರ ಅಂಗಡಿ ಬಳಿ ವಾಹನವನ್ನು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ಸಮೀರ್ ಅವರನ್ನು ಯಾಕೆ ಇಲ್ಲಿ ಗಾಡಿಯನ್ನು ನಿಲ್ಲಿಸಿರುತ್ತೀಯಾ ಎಂದು ಎಂದು ಕೇಳಿದೆ ಆಗ ನಾವು ರಾತ್ರಿಯಾಗಿದ್ದು ಕತ್ತಲೆ ಇರುವುದರಿಂದ ಇಲ್ಲಿ ಸ್ವಲ್ಪ ಇದ್ದು ಹೋಗುತ್ತೇವೆ ಎಂದು ಹೇಳಿದಾಗ ಸಮೀರ್ ಏಕಾ ಏಕಿ ನನ್ನ ಜೊತೆ ಜಗಳ ತೆಗೆದು ಯಾರನ್ನ ಕೇಳಿ ಇಲ್ಲಿ ಗಾಡಿ ನಿಲ್ಲಿಸಿದೆ ಎಂದು ಅಂಗಡಿಯಿಂದ ಚಾಕು ತೆಗೆದುಕೊಂಡು ಬಂದು ನನ್ನ ಎಡಕೈಗೆ ಹೊಡೆದು ರಕ್ತಗಾಯಪಡಿಸಿದ ಅಷ್ಟಕ್ಕೆ ಡ್ರೈವರ್ ಚಿನ್ನಸ್ವಾಮಿ ಹಾಗೂ ಅಲ್ಲೆ ಇದ್ದವರು ಗಲಾಟೆ ಬಿಡಿಸಿದರು. ನಂತರ ನಾನು ಅಲ್ಲೆ ಬರುತ್ತಿದ್ದ ಒಂದು ಲಾರಿಯಲ್ಲಿ ಚಾಮರಾಜನಗರ ಸಕರ್ಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಯನ್ನು ಪಡೆದುಕೊಂಡಿರುತ್ತೇನೆ. ನನ್ನ ಜೊತೆ ಗಲಾಟೆ ಮಾಡಿರುವ ಸಮೀರ್ ರವರ ವಿರುದ್ದ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ.

03. ಕೊಳ್ಳೇಗಾಲ ಪಟ್ಟಣ ಠಾಣೆ: (ಯು.ಡಿ.ಆರ್ ನಂ 01/2020) ಪಿರ್ಯಾದಿ ಜಬೀರ್ಖಾನ್ ಕೊಳ್ಳೆಗಾಲ ಪಟ್ಟಣರವರು ನೀಡಿದ ದೂರಿನಲ್ಲಿ ಅವರ ಅಕ್ಕ ಯಾಸ್ಮಿನ್ ಖಾನಂ ರವರು ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಹೊಟ್ಟೆ ನೋವಿಗೆ ಔಷಾಧಿಯನ್ನು ತೆಗೆದುಕೊಳ್ಳಲು ಹೋಗಿ ಮನೆಯಲ್ಲಿಟ್ಟಿದ್ದ ಇಲಿ ಪಾಷಣದ ಔಷಾಧಿಯನ್ನು ಗಾಬರಿಯಲ್ಲಿ ತೆಗೆದುಕೊಂಡಿದ್ದು ಇದರಿಂದ ಅಸ್ವಸ್ಥರಾಗಿ ದಿನಾಂಕ:04-02-2020 ರಂದು ಕೊಳ್ಳೇಗಾಲ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದು ಮನೆಗೆ ವಾಪಸ್ ಬಂದಿದ್ದು ಮತ್ತೇ ಅಸ್ವಸ್ಥಗೊಂಡಿದ್ದರಿಂದ ದಿನಾಂಕ:06-02-2020 ರಂದು ಕೊಳ್ಳೇಗಾಲ ಸಕರ್ಾರಿ ಆಸ್ಪತ್ರೆಗೆ ತೋರಿಸಲಾಗಿ ಹೆಚ್ಚಿನ ಚಿಕಿತ್ಸೆಪಡೆಯಲು ವೈದ್ಯರು ತಿಳಿಸಿದ ನಮ್ಮ ಅಕ್ಕನನ್ನು ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೊಗಿ ಅಲ್ಲಿಂದ ಮಂಡ್ಯ ಸಕರ್ಾರಿ ಆಸ್ಪತ್ರೆಗೆ ಕರೆದಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಯುಡಿಆರ್ ವರದಿ

04. ಕೊಳ್ಳೇಗಾಲ ಗ್ರಾಮಾಂತರ ಠಾಣೆ: (ಮೊ,ನಂ 35/2020) ಪಿರ್ಯಾದಿ ನೀಲಿಸಿದ್ದನಾಯಕ ಪಾಳ್ಯ ಗ್ರಾಮರವರು ನೀಡಿದ ದೂರಿನಲ್ಲಿ ಅವರು ದಿ:07-02-2020 ರಂದು ಸಂಜೆ 06-00 ಗಂಟೆಯಲ್ಲಿ ತಮ್ಮ ಜಮೀನಿನ ಕಡೆ ಹೋದಾಗ ಅವರಿಗೆ ಸೇರಿದ ಜಮೀನಿನಲ್ಲಿದ್ದ ಬಿದಿರು ಗಳುಗಳನ್ನು ಕತ್ತರಿಸಿದ್ದು ಕಂಡು ಬಂತು. ಅವರು ಯಾರು ಬಿದಿರು ಗಳುಗಳನ್ನು ಕತ್ತರಿಸಿದ್ದು ಎಂದು ಕೇಳಿದ್ದಕ್ಕೆ ಅವರ ಮಗ ಗುರುಸ್ವಾಮಿಯು ಏಕಾಏಕಿ ಏನೋ ಬೋಳಿಮಗನೇ ಅದನ್ನೆಲ್ಲಾ ಕೇಳುವುದು,ಇದೆಲ್ಲಾ ನಮಗೆ ಸೇರಿದ್ದು ಎಂದು ಹೇಳಿ ಬೈದುಕೊಂಡು ಬಂದು ಒಂದು ಬಡಿಗೆಯಿಂದ ವಯೋವೃದ್ದನಾದ ನನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿ ನನ್ನನ್ನು ಹಿಡಿದು ಕೆಳಕ್ಕೆ ತಳ್ಳಿ ಬಡಿಗೆಯಿಂದ ಬೆನ್ನು ಮತ್ತು ಮೈಕೈಗೆ ಹೊಡೆದು ನೋವುಂಟುಪಡಿಸಿ ಕಾಲಿನಿಂದ ತುಳಿದು ಒದ್ದನು.ನಂತರ ನನ್ನ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ,ಎಂದು ಬೆದರಿಕೆ ಹಾಕಿ ಹೊರಟು ಹೋದನು. ಚಿಕಿತ್ಸೆಗಾಗಿ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿದರು. ನನ್ನ ಮಗ ಗುರುಸ್ವಾಮಿಯು ವಿನಾಕಾರಣ ಗಲಾಟೆ ತೆಗೆದು ನನ್ನನ್ನು ಬೈದು ಬಡಿಗೆಯಿಂದ ಹೊಡೆದು ಬೆದರಿಕೆ ಹಾಕಿದ್ದು ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ಮೇರೆಗೆ ಈ ಪ್ರ ವ ವರದಿ.

05. ಹನೂರು ಠಾಣೆ: (ಮೊ,ನಂ 15/2020) ದಿನಾಂಕ, 08.02.2020 ರಂದು ಪಿರ್ಯಾದಿ ಪ್ರಭುಸ್ವಾಮಿ ದೊಡ್ಡಿಂದುವಾಡಿ ಗ್ರಾಮರವರು ನೀಡಿದ ದೂರಿನಲ್ಲಿ ಅವರು ಈಗ್ಗೆ ಸುಮಾರು 11 ತಿಂಗಳಿಂದ ಮೋಡಳ್ಳಿ ಗ್ರಾಮದ ಸವರ್ೆ ನಂ 87.88.92(ಸಿ), 124(ಸಿ). ಸವರ್ೆನಲ್ಲಿರುವ ವದರ್ಾ ಸೋಲಾರ್ ಮಹರಾಷ್ಟ್ರ ಪ್ರೈ, ಲಿಮಿಟೆಡ್ನಲ್ಲಿ ಸೆಕ್ಯೂರಿಟಿ ಗಾಡರ್್ ಆಗಿ ಕೆಲಸ ಮಾಡಿಕೊಂಡಿದ್ದು, ರುತ್ತೇನೆ, ನೆನ್ನೆ ದಿನ ದಿನಾಂಕ, 07.02.2020 ರಂದು ನಮ್ಮ ಸೆಕ್ಯೂರಿಟಿ ಸೂಪರ್ವೈಸರ್ ಚಿಕ್ಕಸ್ವಾಮಿ, ನಾನು ಹಾಗೂ ಇನ್ನೂ 06 ಜನ ಸೆಕ್ಯೂರಿಟಿ ಗಾಡರ್್ಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಕೊಂಡಿದೇವು. ನಾನು ಬ್ಲಾಕ್ 11 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನಾವು ತಂತಿ ಬೇಲಿ ಬಳಿ ಹೋಗಿ ನೋಡಿದಾಗ ತಂತಿಬೇಲಿ ಕಟ್ ಮಾಡಿ ಯಾರೂ ಕಳ್ಳರು ಡಿ ಸಿ ಕೇಬಲ್ ವೈರ್ಗಳನ್ನು ಕಳ್ಳತನ ಮಾಡಿಕೊಂಡಿ ಹೋಗಿರುತ್ತಾರೆ. ಸದರಿ ಕಳುವಾಗಿರುವ ಕೇಬಲ್ ವೈರ್ನ ಅಂದಾಜು ಮೊತ್ತ 40.000 ರೂಗಳಾಗಿದ್ದು ಕಳುವಾಗಿರುವ ಮಾಲುಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ.

06. ಹನೂರು ಠಾಣೆ: (ಮೊ,ನಂ 16/2020) ಪಿರ್ಯಾದಿ ಶ್ರೀನಿವಾಸ ಮಣಗಳ್ಳಿ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ತಾಯಿಯಾದ ರಾಜಮ್ಮರವರು ಪ್ರತಿ ವಾರ ಹನೂರು ಪಟ್ಟಣದಲ್ಲಿರುವ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನಕ್ಕೆ ಹೋಗಿ ಪೊಜೆ ಮಾಡಿಕೊಂಡು ಬರುತ್ತಿದ್ದರು, ಇದೆ ರೀತಿ ದಿನಾಂಕ 28.01.2020 ರಂದು ಬೆಳಿಗ್ಗೆ 10.30 ಗಂಟೆಗೆ ಪೊಜೆ ಮಾಡಿಸಿಕೊಂಡು ಬರುತ್ತೇನೆ ಎಂದು ನನಗೆ ತಿಳಿಸಿ ಬಂದರು ನಂತರ ನಮ್ಮ ತಾಯಿ ರಾತ್ರಿಯಾದರು ಮನಗೆ ಬರಲಿಲ್ಲ ನಂತರ ನಾನು ನಮ್ಮ ಸಂಬಂಧಿಕರ ಮನೆಯಲ್ಲಿ ಪೋನ್ ಮಾಡಿ ವಿಚಾರಿಸಲಾಗಿ ಇಲ್ಲೂ ಬಂದಿಲ್ಲ ಎಂದು ತಿಳಿಸಿದರು. ನಾನು ನನ್ನ ತಾಯಿಯ ಪೋನ್ ನಂಬರ್ 6362661540 ಹಾಗೂ 6360931799 ನಂಬರ್ ಗೆ ಪೋನ್ ಮಾಡಿದಾಗ ಸ್ವಿಚ್ ಆಪ್ ಎಂದು ಬರುತ್ತಿತ್ತು, ಆದ್ದರಿಂದ ನಮ್ಮ ತಾಯಿ ಎಲ್ಲೂ ಕಾಣಿಯಾಗಿದ್ದಾರೆ ಎಂದು ಗೊತ್ತಾಗಿ ನಮ್ಮ ಸಂಬಂಧಿಕರ ಮನೆಯಲ್ಲಿ ವಿಚಾರ ಮಾಡಲಾಗಿ ಎಲ್ಲೂ ಸಿಗದ ಕಾರಣ ಪತ್ತೆ ಂಆಡಿಕೊಡಬೇಕೆಂದು ತಡವಾಗಿ ಬಂದು ಠಾಣೆಗೆ ದೂರು ನೀಡಿದ ಮೇರೆಗೆ ಈ ಪ್ರ ವ ವರದಿ.


Your Comment

Name :
Email:
Comment:
Submit

Website Designed and Developed by Global Buzz®