• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report Date: 07-02-2020

No of views : 41       No of Comments : 0

01. ಚಾಮರಾಜನಗರ ಗ್ರಾಮಾಂತರ ಠಾಣೆ: (ಮೊ,ನಂ 09/2020) ಕಾಂತರಾಜು ಕೆಲ್ಲಂಬಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ತಾನು ಗ್ರಾಮದ ಮಹದೇವಮ್ಮ ಕೋಂ ಕುಮಾರ್ ರವರ ಜೊತೆ ಇದೇ ನಮ್ಮ ಗ್ರಾಮದ ಶಿವಕುಮಾರ್, ಮಂಜು, ಬಸವರಾಜು, ಮಾಜಿ ಯಜಮಾನರು ದೊಡ್ಡಯ್ಯ ರವರು ಸದರಿಯವರ ಮನೆಯ ಬಳಿ ಅವಾಚ್ಯ ಶಬ್ಬಗಳಿಂದ ಮಹದೇವಮ್ಮರವರನ್ನು ಬೈಯುತ್ತಿದ್ದು, ಆ ಸಂದರ್ಭದಲ್ಲಿ ಮಹದೇವಮ್ಮರವರು ನನಗೆ ಮೇಲ್ಕಂಡ ನಾಲ್ಕು ಜನರು ಬೈಯುತ್ತಿದ್ದಾರೆ ಬನ್ನಿ ಎಂದು ಕರೆದಾಗ ನಾನು ಮಹದೇವಮ್ಮನ ಮನೆಯ ಬಳಿ ಹೋದೆ, ಅಷ್ಟಕ್ಕೆ ಅಲ್ಲೆ ಇದ್ದ ಬಸವರಾಜು ತನ್ನ ಬಳಿ ಇದ್ದ ರಾಡಿನಿಂದ ನನ್ನ ಕತ್ತಿನ ಹಿಂಭಾಗ ಹೊಡೆದ ಮತ್ತು ದೊಡ್ಡಯ್ಯ ನನ್ನನ್ನು ತಬ್ಬಿ ಹಿಡಿದುಕೊಂಡಾಗ ಮಂಜು ನನ್ನ ಬಲಗೈ ಬೆಟ್ಟನ್ನು ಕಚ್ಚಿ ಗಾಯ ಪಡಿಸಿರುತ್ತಾನೆ. ಹಾಗೂ ಶಿವಕುಮಾರ ಕಲ್ಲಿನಿಂದ ನನ್ನ ಮೈ, ಕೈಗೆ ಗುದ್ದಿ ದೊಡ್ಡಯ್ಯ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದು, ಅಷ್ಟಕ್ಕೆ ಮಹದೇವಮ್ಮ ಕಿರುಚಿಕೊಂಡಾಗ ಅವರ ಗಂಡನಾದ ಕುಮಾರ್ ರವರು ಅವರಿಂದ ನನ್ನನ್ನು ಬಿಡಿಸಿರುತ್ತಾನೆ. ಆ ನಂತರ ಸುಮಾರು ಜನ ಬಂದ ತಕ್ಷಣ ಅವರು ನನ್ನನ್ನು ಬಿಟ್ಟು ಹೊರಟು ಹೋಗಿರುತ್ತಾರೆ. ಮೇಲ್ಕಂಡವರು ನೀನು ಊರಲ್ಲಿ ಹೇಗೆ ಬದುಕುತ್ತಿಯ ನೋಡುತ್ತೇನೆ, ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ಇದ್ದ ದೂರಿನ ಮೇರೆಗೆ ಈ ಪ್ರ.ವ. ವರದಿ.

02. ಚಾಮರಾಜನಗರ ಪೂರ್ವ ಠಾಣೆ: (ಮೊ,ನಂ 23/2020) ಪಿರ್ಯಾದಿ ಅರ್ಚನ ದೊಡ್ಡರಾಯಪೇಟೆ ಗ್ರಾಮರವರು ನೀಡಿದ ದೂರಿನಲ್ಲಿ ಹಣದ ವಿಚಾರದಲ್ಲಿ ದಿನಾಂಕ; 07/02/2020 ರಂದು ಬೆಳಿಗ್ಗೆ 10.30 ಗಂಟೆ ಸಮಯದಲ್ಲಿ ಮನೆಯ ಮುಂಭಾಗ ರಸ್ತೆಯಲ್ಲಿ ನಾನು ಮನೆಗೆ ಬರುತ್ತಿದ್ದಾಗ ನನ್ನ ತಂದೆ ನಾರಾಯಣಸ್ವಾಮಿ, ಮತ್ತು ಅಣ್ಣ ಅಶೋಕ್ ಕುಮಾರ್ ಸೇರಿಕೊಂಡು ನನ್ನನ್ನು ಅಡ್ಡಗಟ್ಟಿ ತಡೆದು ನೀನು ನನ್ನ ಮನೆಗೆ ಬರಬೇಡ ಹೋಗು ಎಂದು ನನ್ನನ್ನು ಅವಾಚ್ಯ ಶಬ್ದಗಳಿಂದ ಬೈಯ್ದು ನನ್ನ ತಂದೆ ನಾರಾಯಣಸ್ವಾಮಿ ಒಂದು ಪ್ಲಾಸ್ಟಿಕ್ ಪೈಪ್ ನಿಂದ ಹೊಡೆದಿದ್ದು ನನ್ನ ಎಡ ತೋಳು ಬಲ ತೋಡೆಗೆ ಹೊಡೆದು ನೋವುಂಟು ಮಾಡಿದ್ದು ನನ್ನ ಅಣ್ಣ ಕೈ ಯಿಂದ ಹಾಗೂ ಚಪ್ಪಲಿಯಿಂದ ಹೊಡೆದಿರುತ್ತಾನೆ. ಹಾಗೂ ನನ್ನ ತಂದೆ ಮತ್ತು ಅಣ್ಣ ರವರು ನನಗೆ ಹೊಡೆಯುತ್ತಿದ್ದಾಗ ನನ್ನ ತಾಯಿ ವನಜಾಕ್ಷಿ ಹೆಚ್ ಕೆ ಹಾಗೂ ನಮ್ಮ ಬೀದಿಯ ಮಹದೇವಸ್ವಾಮಿ ರವರು ನನ್ನ ಬಿಡಿಸಿ ಸಮಧಾನ ಮಾಡಿರುತ್ತಾರೆ. ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ನನ್ನ ತಂದೆ ಮತ್ತು ಅಣ್ಣ ನನಗೆ ಕೊಲೆ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ನನ್ನ ತಂದೆ ನಾರಾಯಣಸ್ವಾಮಿ ಮತ್ತು ಅಣ್ಣ ಅಶೋಕ ಕುಮಾರ್ ರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೋರಿಕೆ.

03. ಚಾಮರಾಜನಗರ ಪೂರ್ವ ಠಾಣೆ: (ಮೊ,ನಂ 24/2020) ಪಿರ್ಯಾದಿ ಗುರುಮಲ್ಲಪ್ಪ ಚಾಮರಾಜನಗರ ಟೌನ್ರವರು ನೀಡಿದ ದೂರಿನಲ್ಲಿ ದಿನಾಂಕ: 07/02/2020 ರಂದು ಬೆಳಿಗ್ಗೆ 08:30 ಗಂಟೆಗೆ ನಾನು ಕೆಲಸಕ್ಕೆ ಹೋಗಿರುತ್ತೇನೆ, ನನ್ನ ಹೆಂಡತಿ ಬೆಳಿಗ್ಗೆ 10:30 ಗಂಟೆಗೆ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಪತಂಜಲಿ ಅಂಗಡಿಗೆ ಹೋಗಿರುತ್ತಾರೆ. ನಂತರ ನಾನು ನಮ್ಮ ಮನೆಗೆ ಮಧ್ಯಾಹ್ನ 2:00 ಗಂಟೆ ಸಮಯದಲ್ಲಿ ಬಂದು ನೋಡಲಾಗಿ ನಮ್ಮ ಮನೆಯ ಮುಂಬಾಗಿಲಿಗೆ ಹಾಕಿದ್ದ ಬೀಗ ಒಡೆದಿದ್ದು, ಬಾಗಿಲನ್ನು ಯಾವುದೋ ರಾಡಿನಿಂದ ಮೀಟಿ ಇಂಟರ್ ಲಾಕ್ನ್ನು ಜಖಂಗೊಳಿಸಿ ಮೀಟಿ ಒಳ ಪ್ರವೇಶಿಸಿ ಮನೆಯ ಬೆಡ್ ರೂಂನ ಬೀರುಗಳಲ್ಲಿದ್ದ ಸುಮಾರು 1,50,000/ರೂ ಬೆಲೆಬಾಳುವ 46-1/2 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಬಾಕ್ಸ್ಗಳ ಸಮೇತ ಹಾಗೂ 1500/ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಈ ಬಗ್ಗೆ ಕಾನೂನು ಕ್ರಮ ಕೈಗೊಂಡು ಕಳವುವಾಗಿರುವ ನಮ್ಮ ಚಿನ್ನದ ಆಭರಣಗಳು ಹಾಗೂ ನಗದು ಹಣವನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿಕೊಳ್ಳುತ್ತೇನೆ.

04. ಕುದೇರು ಠಾಣೆ: (ಮೊ,ನಂ 24/2020) ಫಿರ್ಯಾದಿ ಸೌಮ್ಯ ಕಸ್ತೂರು ಗ್ರಾಮರವರು ನೀಡಿದ ದೂರಿನಲ್ಲಿ ಅವರ ಗಂಡ ಯೇಸುರತ್ನರವರಿಗೆ ಕಳೆದ ಒಂದು ವರ್ಷದಿಂದ ನನ್ನ ಗಂಡ ಮದ್ಯಪಾನ ಮತ್ತು ಧೂಮಪಾನ ಚಟ ಬೆಳೆಸಿಕೊಂಡಿರುತ್ತಾರೆ. ದಿನಾಂಕ:02.02.2020 ರಂದು ನನ್ನ ಗಂಡ ಯೇಸುರತ್ನರವರು ಭಾನುವಾರ ಆದ್ದರಿಂದ ಕೆಲಸಕ್ಕೆ ಹೋಗದೆ ಚಚರ್ಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿಕೊಂಡು ಬಂದು ನಂತರ ಹೊರಗೆ ಹೋಗಿ ಮನೆಗೆ ಬರುವಾಗ ಅತಿಯಾದ ಮಧ್ಯಪಾನ ಮಾಡಿ ಊಟ ಮಾಡಿ ಮನೆಯ ಪಕ್ಕದ ರೂಮಿನಲ್ಲಿ ಒಬ್ಬರೆ ಮಲಗಿಕೊಂಡರು. ನಾವುಗಳು ಮನೆಯ ಹಾಲ್ನಲ್ಲಿ ಮಲಗಿದೆವು. ನಮ್ಮ ಯಜಮಾನರು ಮಲಗಿದ್ದ ರೂಮಿನ ಕಿಟಕಿಯ ಹತ್ತಿರ ಒಂದು ಸೀಮೆಎಣ್ಣೆ ಬತ್ತಿದೀಪವನ್ನು ಹಚ್ಚಿ ಮಲಗಿಕೊಂಡಿದ್ದರು. ನಂತರ ರಾತ್ರಿ 9:00 ಗಂಟೆ ಸಮಯದಲ್ಲಿ ನಮ್ಮ ಯಜಮಾನರು ಜೋರಾಗಿ ಉರಿ ಉರಿ ಎಂದು ಕೂಗಾಡುತ್ತಿದ್ದನ್ನು ನಾವು ಕೇಳಿ ತಕ್ಷಣ ನಾವುಗಳು ಎದ್ದು ಹೋಗಿ ನೋಡಿದಾಗ ಮೈಗೆ ಬೆಂಕಿ ಹತ್ತಿಕೊಂಡಿದ್ದು ಬೆಂಕಿಯನ್ನು ನಾನು, ನಮ್ಮ ತಾಯಿ ಮತ್ತು ಪಕ್ಕದ ಮನೆಯ ಲೆನಿನ್ ಪ್ರಕಾಶ್ ಎಲ್ಲರು ಸೇರಿ ನೀರಿನಿಂದ ಬೆಂಕಿಯನ್ನು ಆರಿಸಿ ಸಮಾಧಾನಪಡಿಸಿ ವಿಚಾರ ಮಾಡಿದಾಗ ನಾನು ಮಲಗಿದ್ದಾಗ ಕಿಟಕಿಯ ಮೇಲೆ ಇಟ್ಟಿದ್ದ ಸೀಮೆಎಣ್ಣೆದೀಪ ನನ್ನ ಮೈಮೇಲೆ ಬಿದ್ದು ಬೆಂಕಿಹತ್ತಿಕೊಂಡಿತ್ತೆಂದು ತಿಳಿಸಿದರು. ನಂತರ 108 ಆಂಬುಲೆನ್ಸ್ನಲ್ಲಿ ಚಾ.ನಗರ ಸಕರ್ಾರಿ ಆಸ್ಪತ್ರೆಗೆ ಸೇರಿಸಿ ಮಾರನೆ ದಿನ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯ ಬನರ್ಿಂಗ್ ವಾಡರ್್ಗೆ ದಾಖಲಿಸಿರುತ್ತೇವೆ. ಚಿಕಿತ್ಸೆ ಫಲಕಾರಿಯಾಗದೆ ದಿ:06.02.2020 ರಂದು ಮದ್ಯಾಹ್ನ 3:40 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ. ಈ ಘಟನೆಯು ಆಕಸ್ಮಿಕವಾಗಿ ನಡೆದಿದ್ದು ಬೇರೆ ಯಾವುದೆ ಕಾರಣವಿರುವುದಿಲ್ಲ. ಮುಂದಿನ ಕ್ರಮ ತೆಗೆದುಕೊಳ್ಳಿ ಎಂದು ಇದ್ದ ದೂರಿನ ಮೇರೆಗೆ ಈ ಪ್ರ.ವ.ವರದಿ.

05. ಗುಂಡ್ಲುಪೇಟೆ ಠಾಣೆ: (ಮೊ,ನಂ 40/2020) ದಿನಾಂಕ: 05.02.2020 ರಂದು ರಾತ್ರಿ 22.00 ಗಂಟೆಯಲ್ಲಿ ಗುಂಡ್ಲುಪೇಟೆ ಪಟ್ಟಣದ ವಿಜಯ ನಾರಾಯಣ ಸ್ವಾಮಿ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಟೀಟ್ ಜೂಜಾಟ ಆಡುತ್ತಿದ್ದ ಅಖಾಡದಲ್ಲಿದ್ದ 5150/- ರೂಗಳನ್ನು ಮತ್ತು 52 ಇಸ್ಟೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ತಾಟನ್ನು ಪಂಚರ ಸಮಕ್ಷಮ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡು ಅಸಂಜ್ಞೆಯ ಅಫರಾಧವಾದ್ದರಿಂದ ಠಾಣಾ ಕೆ.ಜಿಎಸ್ಸಿ ನಂ 123/20 ರಂತೆ ನೊಂದಾಯಿಸಿಕೊಂಡು ಪ್ರಕರಣ ದಾಖಲಿಸಿ ಸಂಜ್ಞೆಯ ಪ್ರಕರಣವಾಗಿ ತನಿಖೆ ನಡೆಸಲು ಘನ ನ್ಯಾಯಾಲಯದ ಅನುಮತಿಗಾಗಿ ಕೋರಿಕೆಯನ್ನು ಸಲ್ಲಿಸಿಕೊಂಡಿದ್ದು, ಈ ದಿನ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿದ ಮೆರೆಗೆ ಈ ಪ್ರ ವ ವರದಿ.

06. ಯಳಂದೂರು ಠಾಣೆ: (ಮೊ,ನಂ 11/2020) ಪಿರ್ಯಾದಿ ಬಂಗಾರು ಬಿಳಿಗಿರಿರಂಗನಬೆಟ್ಟರವರು ನೀಡಿದ ದೂರಿನಲ್ಲಿ ದಿ: 07-02-2020 ರಂದು ಮಧ್ಯಾಹ್ನ 03:00 ಗಂಟೆ ಸಮಯಕ್ಕೆ ಯಳಂದೂರು ಎಎಸ್.ಬಿ.ಐ ಬ್ಯಾಂಕಿನಲ್ಲಿ ಒಟ್ಟು 1,39, 000 ನಗದು ಹಣವನ್ನು ಬ್ಯಾಗಿನಲ್ಲಿ ಹಾಕಿಕೊಂಡು ಊರಿಗೆ ಹೋಗುವ ಸಲುವಾಗಿ ಬ್ಯಾಂಕಿನ ಮುಂಭಾಗ ಬಂದು ನನ್ನ ಬೈಕಿನ ಬಳಿ ಬಂದು ಹಣವಿದ್ದ ಬ್ಯಾಗ್ ನನ್ನು ಬೈಕಿನ ಟ್ಯಾಂಕಿನ ಮೇಲೆ ಇಟ್ಟಾಗ 03:15 ಗಂಟೆ ಸಮಯಕ್ಕೆ ನನ್ನ ಬಳಿ ಒಬ್ಬ ವ್ಯಕ್ತಿ ಬಂದು ನಿಮ್ಮ ಬೆನ್ನ ಹಿಂದೆ ಟೀ ಶಟರ್್ ಗಲೀಜಾಗಿದೆ ಎಂದು ತಿಳಿಸಿದಾಗ ನಾನು ತಕ್ಷಣ ಹಿಂಬದಿಗೆ ತಿರುಗಿ ಟೀಶಟರ್್ನ್ನು ನೋಡಿಕೊಂಡು ವಾಪಸ್ಸು ತಿರುಗಿ ನೋಡಿದಾಗ ನನ್ನ ಮೋಟಾರು ಬೈಕಿನ ಬಳಿ ಇಟ್ಟಿದ್ದ ಬ್ಯಾಗು ಇರಲಿಲ್ಲ ನನಗೆ ತಕ್ಷಣ ಗಾಬಾರಿಯಾಗಿ ನೋಡಲಾಗಿ ಸ್ಥಳದಲ್ಲಿ ಯಾರು ಇರಲಿಲ್ಲ , ನನಗೆ ಒಬ್ಬ ಗಲಿಜಾಗಿದೆ ಎಂದು ತಿಳಿಸಿದ ವ್ಯಕ್ತಿಯು ಸಹ ಸ್ಥಳದಲ್ಲಿ ಇರಲಿಲ್ಲ ಸದರಿ ಆಸಾಮಿಯು ಕಳ್ಳತನ ಮಾಡುವ ಉದ್ದೇಶದಿಂದ ನನ್ನ ಗಮನವನ್ನು ಬೇರೆಡೆ ಸೆಳೆದು ಬ್ಯಾಗ್ ನಲ್ಲಿದ್ದ 1,39,000 ನಗದು ಹಣವನ್ನು ಬ್ಯಾಗ್ ಸಮೇತ ಮೊಸಮಾಡಿ ಕಳ್ಳತನ ಮಾಡಿರುತ್ತಾನೆ ಆದ್ದರಿಂದ ಸದರಿ ಆಸಾಮಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು ಅಜರ್ಿ ಮೇರೆಗೆ ಈ ಪ್ರ ವ ವರದಿ.

07. ಹನೂರು ಠಾಣೆ: (ಯು.ಡಿ.ಆರ್,ನಂ 11/2020) ದಿನಾಂಕ 07.02.2020 ರಂದು ಪಿರ್ಯಾದಿ ರಾಜನ್ ಲೊಕ್ಕನಹಳ್ಳಿ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರೆ, ಈಗ್ಗೆ 16 ವರ್ಷಗಳ ಹಿಂದೆ ನನ್ನ ಚಿಕ್ಕಪ್ಪ ಮಗಳಾದ ಕಲೈವಾಣಿರವರನ್ನು ಪಳನಿಸ್ವಾಮಿ ಬಿನ್ ನಾಚಿಮುತ್ತುಗೌಂಡರ್ 42 ವರ್ಷ ಲೊಕ್ಕನಹಳ್ಳಿ ಇವರಿಗೆ ಮದುವೆ ಮಾಡಿಕೊಟ್ಟು ಇವರಿಗೆ ಒಬ್ಬರು ಗಂಡು ಮಗನಿರುತ್ತಾನೆ. ನನ್ನ ಭಾವನಾದ ಪಳನಿಸ್ವಾಮಿರವರಿಗೆ 02 ವರ್ಷಗಳ ಹೊಟ್ಟೆ ನೋವು ಬರುತ್ತಿತ್ತು. ಇದಕ್ಕೆ ಲೊಕ್ಕನಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುದ್ದರು. ದಿನಾಂಕ 05.02.2020 ರಂದು ಸಂಜೆ 6.30 ಗಂಟೆ ಸಮಯದಲ್ಲಿ ಹೊಟ್ಟೆ ನೋವಿನ ಔಷದಿಯನ್ನು ತೆಗದುಕೊಳ್ಳುವ ಸಲುವಾಗಿ ಮನೆಯಲ್ಲಿ ಹುಡಕಾಡುತ್ತಿರುವಾಗ ಮನೆಯಲ್ಲಿ ಬೆಳಿಗ್ಗೆ ಸಿಂಪಡಿಸಲು ತಂದು ಇಟ್ಟದಂತಹ ಕೀಟನಾಶಕವನ್ನು ಹೊಟ್ಟೆ ನೋವಿನ ಔಷದಿ ಎಂದು ತಿಳಿದು ಕುಡಿದಿರುತ್ತಾರೆ ನಂತರ ಪಳನಿಸ್ವಾಮಿ ವಾಂತಿ ಮಾಡಿಕೊಳ್ಳುತ್ತಿದ್ದನ್ನು ನೋಡಿ ಕಲೈವಾಣಿ ಹಾಗೂ ಪಿ,ಅಜಿತ್ ಇವರಿಬ್ಬರು ಕೊಳ್ಳೇಗಾಲ ಜನನಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಮಿಷನ್ ಆಸ್ಪತ್ರೆಗೆ ದಿನಾಂಕ 06.2.2020 ರಂದು ದಾಖಲಾಗಿರುತ್ತಾರೆ. ಪಳನಿಸ್ವಾಮಿ ಚಿಕಿತ್ಸೆಗೆ ಸ್ವಂದಿಸದೇ ಈ ದಿನ ದಿನಾಂಕ 07.02.2020 ರಂದು ಬೆಳಿಗ್ಗೆ 9.10 ಗಂಟೆಗೆ ಮೃತಪಟ್ಟಿರುತ್ತಾರೆ. ಮುಂದಿನ ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.


Your Comment

Name :
Email:
Comment:
Submit

Website Designed and Developed by Global Buzz®