• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report Date: 06-02-2020

No of views : 31       No of Comments : 0

01. ಚಾಮರಾಜನಗರ ಪಟ್ಟಣ ಠಾಣೆ: (ಮೊ,ನಂ 11/2020) ಪಿರ್ಯಾದಿ ಸರಸ್ವತಿ ಪಿ,ಡಬ್ಲ್ಯೂಡಿ ಬಿ ಬ್ಲಾಕ್ ಚಾಮರಾಜನಗರ ಟೌನ್ರವರು ನೀಡಿದ ದೂರಿನಲ್ಲಿ ನನ್ನ ಪತಿ ರಾಜೇಂದ್ರನ್ ಎನ್.ಎಂ. ರವರು ಚಾಮರಾಜನಗರದ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಸಂಸ್ಥೆಯ ಮುಖ್ಯಸ್ಥರಾಗಿರುತ್ತಾರೆ. ಸಂಸ್ಥೆಯು ಸಬ್ - ಕಂಟ್ರಾಕ್ಟ್ ಪ್ರಾಜೆಕ್ಟ್ಗಳನ್ನು ಇನ್ನೀತರೆ ಸಂಸ್ಥೆಗಳಿಂದಲೂ ತೆಗೆದುಕೊಂಡಿದ್ದು, ಅದರ ಬಿಲ್ ಮಾಡಿಸುವ ಸಂಬಂಧ ಬೆಂಗಳೂರಿಗೆ ಹೋಗಿ ಬಂದು ಮಾಡುತ್ತಿದ್ದರು. ಇದೇ ವಿಚಾರದ ಸಂಬಂಧವಾಗಿ ಈ ಬಾರಿಯು ದಿನಾಂಕ. 03.02.2020 ರಂದು ಮದ್ಯಾಹ್ನ ಸುಮಾರು 2-00 ಗಂಟೆಯಲ್ಲಿ ಬೆಂಗಳೂರಿಗೆ ಹೋಗಿದ್ದು, ಕರೆ ಮಾಡಿ ಮಾತನಾಡಿದ್ದು, ದಿನಾಂಕ 04.02.2020 ರಂದು ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ ಅವರ ದೂರವಾಣಿ ಸಂಖ್ಯೆ 6363966136 ಗೆ ಕರೆ ಮಾಡಿದಾಗ ಬೆಂಗಳೂರು ನಗರದ ಇಂದಿರಾನಗರದ ಹೊಟೇಲ್ನಲ್ಲಿ ಮೀಟಿಂಗ್ನಲ್ಲಿದ್ದೇನೆ. ಒಂದು ಗಂಟೆಯ ನಂತರ ಪೋನ್ ಮಾಡುತ್ತೇನೆಂದು ಪೋನ್ ಕರೆಯನ್ನು ಕಟ್ ಮಾಡಿದ್ದರು. ನಂತರ ನಾನು ಸುಮಾರು 7-30 ಗಂಟೆಗೆ ಕರೆ ಮಾಡಿದಾಗ ಅವರ ಪೋನ್ ಸ್ವಿಚ್ ಅಫ್ ಎಂದು ಬರುತ್ತಿದ್ದು, ಈವರೆವಿಗೂ ಅದು ಸ್ವಿಚ್ ಅಫ್ ಆಗಿರುತ್ತದೆ. ನನ್ನ ಪತಿಯ ಬಗ್ಗೆ ನಮ್ಮ ಸಂಬಂಧಿಕರು ಹಾಗೂ ಸ್ನೇಹಿತರುಗಳಿಗೆ ಪೋನ್ ಮಾಡಿ ವಿಚಾರ ಮಾಡಲಾಗಿ ಅಲ್ಲಿಯೂ ಬಂದಿಲ್ಲವೆಂದು ತಿಳಿಸಿರುತ್ತಾರೆ. ನಾನು ಎಲ್ಲಾ ಕಡೆ ಹುಡುಕಿದರು ನನ್ನ ಪತಿ ರಾಜೇಂದ್ರ ಎನ್. ಎಂ ರವರು ಪತ್ತೆಯಾಗಿರುವುದಿಲ್ಲ. ಆದ್ದರಿಂದ ನನ್ನ ಪತಿ ರಾಜೇಂದ್ರ. ಎನ್.ಎಂ ರವರನ್ನು ಹುಡುಕಿ ಕೊಡಬೇಕೆಂದು ನೀಡಿದ ದೂರಿನ ಮೇರೆಗೆ.

02. ಬೇಗೂರು ಠಾಣೆ: (ಮೊ,ನಂ 25/2020) ಪಿರ್ಯಾದಿ ಸಿದ್ದನಾಯಕ ಕೋಟೆಕೆರೆ ಗ್ರಾಮರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ಗ್ರಾಮದ ದೊಡ್ಡಸ್ವಾಮಿರವರನ್ನು ನನ್ನ ಹೆಂಡತಿಯನ್ನು ಏಕೆ ಕರೆದುಕೊಂಡು ಹೋಗಿದ್ದೀಯಾ ಎಂದು ಕೇಳಿದ್ದಕ್ಕೆ ದೊಡ್ಡಸ್ವಾಮಿ ಮಚ್ಚಿನಿಂದ , ತಾಯಮ್ಮ ಮತ್ತು ಗೌರಮ್ಮರವರು ಇಟ್ಟಿಗೆಯಿಂದ ಪಿರ್ಯಾದಿಯವರ ತಲೆಗೆ ಹೊಡೆದು ಕೆಳಕ್ಕೆ ಬೀಳಿಸಿರುತ್ತಾರೆ. ಅವರುಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ.

03. ಬೇಗೂರು ಠಾಣೆ: (ಮೊ,ನಂ 26/2020) ಪಿರ್ಯಾದಿ ಹಾಲಹಳ್ಳಿ ಗ್ರಾಮದ ಹೆಚ್.ಎಸ್. ರೇವಣ್ಣರವರು ಠಾಣೆಗೆ ಹಾಜರಾಗಿ ಲಿಖಿತ ದೂರೊಂದನ್ನು ನೀಡಿದ್ದು, ಅದರಲ್ಲಿ ದಿನಾಂಕ : 03-02-2020 ರಂದು ಸಾಯಂಕಾಲ ಸುಮಾರು 5:50 ಗಂಟೆಯ ಸಮಯದಲ್ಲಿ ದೇಪೇಗೌಡನ ಹೊಸಪುರ ಗ್ರಾಮದಲ್ಲಿ ಬೈಕ್ ಅಪಘಾತವಾಗಿ ಗಾಯಗೊಂಡಿದ್ದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ತಾನು ಮತ್ತು ಶುಶ್ರೂಷಕರಾದ ಕುಮಾರ ರವರು ಬೇಗೂರಿನಿಂದ ಕೆಎ-51, ಜಿ-5426 ರ 108 ಆಂಬ್ಯುಲೆನ್ಸ್ ವಾಹನದಲ್ಲಿ ಹೊರಟಾಗ ವಾಹನವನ್ನು ತಾನು ಚಾಲನೆ ಮಾಡಿಕೊಂಡು ಯಡವನಹಳ್ಳಿ ಮಾರ್ಗವಾಗಿ ಹೋಗುತ್ತಿದ್ದಾಗ ಸಾಯಂಕಾಲ ಸುಮಾರು 6:10 ಗಂಟೆಯ ಸಮಯದಲ್ಲಿ ಯಡವನಹಳ್ಳಿ ಗ್ರಾಮದಿಂದ ಸುಮಾರು 100 ಮೀಟರ್ ದೂರದಲ್ಲಿ ಕೆಎ-09, ಹೆಚ್.ಸಿ. 3158 ರ ಮೋಟಾರು ಬೈಕನ್ನು ಅದರ ಸವಾರ ತನ್ನ ಮುಂದೆ ಹೋಗುತ್ತಿದ್ದ ಆಟೋ ಒಂದನ್ನು ಹಿಂದಿಕ್ಕುವ ಭರದಲ್ಲಿ ತನ್ನ ಮೋಟಾರು ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದಿದ್ದರಿಂದ ಮೋಟಾರು ಬೈಕನ ವೇಗವನ್ನು ಕಡಿಮೆಗೊಳಿಸದೇ ನನ್ನ ವಾಹನದ ಮುಂದಿನ ಬಲಭಾಗಕ್ಕೆ ಗುದ್ದಿಸಿದ ಪರಿಣಾಮ ತುತರ್ುವಾಹನದಲ್ಲಿ ನಮಗೆ ನೋವಾಗಿರುತ್ತೆ ಹಾಗೂ ಮೋಟಾರು ಬೈಕಿನಲ್ಲಿ ಬರುತ್ತಿದ್ದವರಿಗೆ ಗಾಯಗಳಾಗಿದ್ದು, ತಾನು ಮತ್ತು ಕುಮಾರ ರವರು ಗಾಯಗೊಂಡಿದ್ದವರಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ ನಂತರ ಆಟೋ ಒಂದರಲ್ಲಿ ಗಾಯಗೊಂಡಿದ್ದವರನ್ನು ಹೆಚ್ಚಿನ ಚಿಕಿತ್ಸೆಗೆ ಬೇಗೂರು ಸಕರ್ಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇವೆ. ಈ ಅಪಘಾತಕ್ಕೆ ಕಾರಣರಾದ ಕೆಎ-09, ಹೆಚ್.ಸಿ. 3158 ರ ಮೋಟಾರು ಬೈಕ ಸವಾರನ ಮೇಲೆ ಈ ದಿನ ಕಾನೂನು ರೀತಿ ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.


Your Comment

Name :
Email:
Comment:
Submit

Website Designed and Developed by Global Buzz®