• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report Date: 04-02-2020

No of views : 23       No of Comments : 0

01. ಚಾಮರಾಜನಗರ ಪೂರ್ವ ಠಾಣೆ: (ಮೊ,ನಂ 21/2020) ಪಿರ್ಯಾದಿ ಲಕ್ಷ್ಮಮ್ಮ ಕೋಡಿಉಗನೆ ಗ್ರಾಮರವರು ನೀಡಿದ ದೂರಿನಲ್ಲಿ ಅವರ ಮೊದಲನೆ ಮಗನಾದ ಚೆನ್ನಂಜಯ್ಯನ ಮಗನಾದ ನರೇಂದ್ರಸ್ವಾಮಿಯು ಪ್ರತಿ ದಿನ ಮನೆಗೆ ಬಂದು ನನಗೆ ಕುಡಿಯಲು ಹಣ ಕೊಡಬೇಕಂದು ಗಲಾಟೆ ಮಾಡುತ್ತಿದ್ದು ಪಿರ್ಯಾದಿ ನನ್ನ ಹತ್ತಿರ ಹಣವಿಲ್ಲ ಎಂದು ತಿಳಿಸಿದಾಗ ಏಕಾ ಏಕಿ ನನ್ನ ಜಗಳ ತೆಗೆದು ಬೋಳೆ ಮಗಳೇ ಸೂಳೆಮಗಲೇ ಎಂದು ಯಾವಾಗ ಹಣ ಕೇಳಿದರೂ ನೀನು ಕೊಡುವುದಿಲ್ಲ ವೆಂದು ಹೀನಾ ಮಾನವಾಗಿ ಬೈಯ್ದು ನನ್ನನ್ನು ಮುಂದೆ ಹೊಗದಂತೆ ಅಡ್ಡಗಟ್ಟಿ ತಡೆದು ಕೈ ಯಿಂದ ಮೈ ಕೈಗೆ ಹೊಡೆದು ಕೆಳಕ್ಕೆ ಕೆಡವಿ ನನ್ನ ಸೊಂಟ ಹಾಗೂ ನಡು, ಬೆನ್ನಿಗೆ ಹೊದ್ದು ನನ್ನ ಬಲಗೈಯನ್ನು ಹಿಡಿದು ನುಲಿದು ನೋವುಂಟು ಮಾಡಿ ಕೊಲೆ ಬೆದರಿಕೆ ಹಾಕಿ ಮನೆಯ ಒಳಗಿನ ಪಾತ್ರೆ ಇತರೆ ವಸ್ತುಗಳನ್ನು ಬಿಸಾಡಿ ಹೊರಟು ಹೋಗಿದ್ದು, ನನ್ನ ಜೊತೆ ಗಲಾಟೆ ಮಾಡಿ ಕೊಲೆ ಬೆದರಿಕೆ ಹಾಕಿರುವ ನನ್ನ ಮೊಮ್ಮಗ ನರೇಂದ್ರಸ್ವಾಮಿ ವಿರುದ್ದ ಕಾನೂನು ಕ್ರಮ ಜರುಗಿಸಲು ಮನವಿ ಎಂದು ನೀಡಿದ ದೂರಿನ ಮೇರೆಗೆ.

02. ಗುಂಡ್ಲುಪೇಟೆ ಠಾಣೆ: (ಮೊ,ನಂ 37/2020) ದಿನಾಂಕ: 02.02.2020 ರಂದುರಾತ್ರಿ 9.00 ಗಂಟೆ ಸಮಯದಲ್ಲಿ ಪಿರ್ಯಾದಿಯವರಾದ ಬೇರಂಬಾಡಿ ಗ್ರಾಮದ ಮಂಜುಳ ರವರು ತಮ್ಮ ಗಂಡ ಬಿ.ಎನ್ರಾಜು, ರವರ ಜೊತೆ ಮನೆ ಬಳಿ ಇದ್ದಾಗ ವಿನೋದ್ನು ತನ್ನ ತಂದೆಗೆ ಜಮೀನಿನ ಗುತ್ತಿಗೆ ಹಣವನ್ನು ಏಕೆ ನೀಡಿದ್ದಿರಿ ನನ್ನ ಬಳಿ ಹಣವನ್ನು ನೀಡಿ ಬೋಳಿಮಕ್ಕಳೆ, ಸೂಳೆಮಕ್ಕಳೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ಮನೆಯೊಳಕ್ಕೆ ಹೋಗುತ್ತಿದ್ದ ವೇಣು ಮತ್ತು ಸಂತೋಷ ಬಿ.ಎನ್ರಾಜು, ರವರನ್ನು ಅಡ್ಡಗಟ್ಟಿ ವಿನೋದ ದೊಣ್ಣೆಯಿಂದ ಮೈಕೈ ಮತ್ತು ಬಾಯಿಗೆ ಹೊಡೆದು ಬಿಡಿಸಲು ಬಂದ ಪಿರ್ಯಾದಿರವರಿಗೆ ಕೃಷ್ಣ ಕೈಯಿಂದ ತಲೆಗೆ ಹೊಡೆದು, ವಿನೋದ ದೋಣ್ಣಯಿಂದ ಎಡದ ಕೈಗೆ ಹೊಡೆದು, ಹಣಕೊಡದಿದ್ದರೆ ನಿಮ್ಮನ್ನು ಒಬ್ಬೊಬ್ಬರಾಗಿ ಮುಗಿಸಿ ಬಿಡುತ್ತೇನೆಂದು ವಿನೋದ್ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಗ್ರಾಮದಲ್ಲಿ ತೀಮರ್ಾಣ ಮಾಡಿಕೊಳ್ಳೋಣವೆಂದು ಇದ್ದು ಗ್ರಾಮದಲ್ಲಿ ಬಗೆ ಹರೆಯದೆ ಇದ್ದುದರಿಂದ ಈ ದಿನ ತಡವಾಗಿ ಬಂದು ದೂರು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

03. ಗುಂಡ್ಲುಪೇಟೆ ಠಾಣೆ: (ಮೊ,ನಂ 38/2020) ಪಿರ್ಯಾದಿ ಮಹೇಶ ಬನ್ನಿತಾಳಪುರ ಗ್ರಾಮ ಈತನು ಕೆಲಸದ ನಿಮಿತ್ತ ಗುಂಡ್ಲುಪೇಟೆಗೆ ಹೋಗುತ್ತಿದ್ದಾಗ ವೀರನಪುರ ಗ್ರಾಮದ ಮುಂದೆ ಯಲ್ಲಪ್ಪನಕಟ್ಟೆ ಹತ್ತಿರ ಹೋಗುತ್ತಿದ್ದ ಅರವ ಮುಂದೆ ಕೆಎ-10-4804 ಆಟೋದಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಆಟೋ ಚಾಲಕ ಬಸವರಾಜು ಹೋಗುತ್ತಿದ್ದಾಗ ಆಟೋ ಚಾಲಕ ಆಟೋವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂದು ಹೋಗಿ ಆಟೋವನ್ನು ಹತೋಟಿಗೆ ತೆಗೆದುಕೊಳ್ಳಲಾಗದೆ ಆಟೋ ರಸ್ತೆಯ ಎಡಮಗ್ಗಿಲಿಗೆ ಎರಡು ಉರುಳಿ ಉರುಳಿ ರಸ್ತೆ ಬೇಲಿ ಹತ್ತಿರ ಹೋಗಿ ಮಗುಚಿಕೊಂಡಿ ಆಟೋದಲ್ಲಿದ್ದ ರಾಚಾಚರಿ, ಸೀರಮ್ಮ, ರಂಗಮ್ಮ, ರಾಜಮ್ಮ, ಜ್ಯೋತಿ ರವರಿಗೆ ಮೈಕೈ, ತಲೆಗೆ ಏಟಾಗಿ ನಂತರ ದಾರಿಯಲ್ಲಿ ಬಂದು ಒಂದು ಆಟೋದಲ್ಲಿ ಗುಂಡ್ಲುಪೇಟೆ ಸಕರ್ಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಬೆಳಿಗ್ಗೆ 11.05 ಗಂಟೆ ಸಮಯದಲ್ಲಿ ರಾಚಾಚಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ, ಆಟೋ ಚಾಲಕ ಆಟೋವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಹೋಗಿ ಆಟೋವನ್ನು ಹತೋಟಿಗೆ ತೆಗೆದುಕೊಳ್ಳಲಾಗದೆ ರಸ್ತೆಯ ಎಡ ಮಗ್ಗುಲಿಗೆ ಮಗುಚಿದ್ದರಿಂದ ಆಟೋದಲ್ಲಿದ್ದವರಿಗೆ ಏಟಾಗಿದ್ದು ರಾಚಾಚಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ, ಕೆಎ-10-4804 ಆಟೋ ಚಾಲಕ ಕೂತನೂರು ಗ್ರಾಮದ ಬಸವರಾಜು ನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

04. ಬೇಗೂರು ಠಾಣೆ: (ಮೊ,ನಂ 20/2020) ಪಿರ್ಯಾದಿ ರಂಗನಾಥಪುರ ಗ್ರಾಮದ ವಾಸಿ ಮಹಾನುಭಾವ ಎಂಬುವವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ , ನೆನ್ನೆ ದಿನ ದಿನಾಂಕ 03/02/2020ರಂದು ಸಂಜೆ 05.30 ಗಂಡೆ ಸಮಯದಲ್ಲಿ ನಾನು ಜಮೀನಿಗೆ ಹೋಗುತ್ತಿದ್ದಾಗ ದಾರಿಯಲ್ಲಿ ಸಿಕ್ಕಿದ ನಮ್ಮೂರಿನವರಾದ ಮಹೇಶ ಮತ್ತು ಸಿ ಮಂಜುನಾಥ ಇಬ್ಬರೂ ಚೆನ್ನಾಗಿ ಕುಡಿದು ನನ್ನನ್ನು ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ನನ್ನ ಮನೆಯ ಹತ್ತಿರ ಬಂದು ಮತ್ತೆ ನನ್ನ ಜೊತೆ ಗಳ ತೆಗೆದು ನನ್ನ ತಲೆಗೆ ಸಿ ಮಂಜುನಾಥನು ಕಲ್ಲಿನಿಂದ ಹೊಡೆದು ನೋವುಂಟು ಮಾಡಿರುತ್ತಾನೆಂದು ಸದರಿಯವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

05. ಬೇಗೂರು ಠಾಣೆ: (ಮೊ,ನಂ 21/2020) ಪಿರ್ಯಾದಿ ವೆಂಕಟೇಶ ಆಲತ್ತೂರು ಗ್ರಾಮರವರು ನೀಡಿದ ದೂರಿನಲ್ಲಿ ಅವರು ಆಲತ್ತೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಾಳು ಟೆಸ್ಟರಾಗಿ ಕೆಲಸ ಮಾಡಿ ಕೊಂಡಿರುತ್ತೇನೆ, ಪಿಪ್ಪಶೆಟ್ಟಿಯವರ ಮಗ ಸುರೇಶನ ಹಾಲನ್ನು ಡಿಗ್ರಿಗೆ ಹಾಕಿ ಟೆಸ್ಟ್ ಮಡಲು ಹಾಲನ್ನು ಸುರಿದಾಗ ಜಹಾಲು ಡಿಗ್ರಿ ಬರಲಿಲ್ಲ, ಆಗ ನಾನು ನಿನ್ನ ಹಾಲು ಡಿಗ್ರಿ ಬಂದಿಲ್ಲ, ನಿನ್ನ ಹಾಲನ್ನು ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಹೇಳಿದೆ, ಆಗ ಸುರೇಶನು ಸೂಳೆ ಮಗನೇ ಭೋಳಿಮಗನೇ ಎಲ್ಲರ ಹಾಲಿನ ತರ ನನ್ನ ಹಾಲು ಕೂಡ ಇದೆ ಯಾಕೆ ನೀನು ತೆಗದುಕೊಳ್ಳುವುದಿಲ್ಲ ಎಂದು ಕೆಟ್ಟದಾಗಿ ಬೈದನು ಆಗ ನಾನು ಹಿಗೆಲ್ಲಾ ಬೈಯ್ಯಬೇಡಿ ಎಂದು ಹೇಳಿದಾಗ ಅಲ್ಲೆ ಇದ್ದ ನಮ್ಮ ಗ್ರಾಮ ಪುಟ್ಟಸ್ವಾಮಿಗೌಡರ ಮಗ ಸಿದ್ದಪ್ಪಾಜಿ, ನಾಗರಾಜೇಗೌಡರ ಮಗ ಮಹೇಂದ್ರ ಇಬ್ಬರೂ ಬಂದು ಸಮಾದಾನ ಮಾಡಿ ಹಾಲು ಹಾಕಿಸಿಕೊಳ್ಳುವಂತೆ ಹೇಳಿ ಹಾಲು ಹಾಕಿಸಿದರು, ಆಗ ಸುರೇಶನು ಸಿದ್ದಪ್ಪಾಜಿ ಮತ್ತು ಮಹೇಂದ್ರನಿಗೆ ಮತ್ತು ನನಗೆ ಕೆಟ್ಟದಾಗಿ ಬೈಯುತ್ತಾ ನಿಮಗೆ ಸರಿಯಾಗಿ ಮಾಡುತ್ತೇನೆ, ಎಂದು ಹೇಳಿ ಅಲ್ಲಿಂದ ಹೊರಟು ಹೋದನು ಸ್ವಲ್ಪ ಸಮಯದ ನಂತರ ಸುರೇಶನು ತನ್ನ ಜೊತೆ ನಮ್ಮ ಗ್ರಾಮದ ಪ್ರವಿಣ, ಪ್ರಸನ್ನ, ಶಿವಕುಮಾರ (ಶಿಕು) ಮತ್ತು ದೊಡ್ಡರಾಯಪೇಟೆ ರವಿ ಇರವುಗಳನ್ನು ಕರೆದುಕೊಂಡು ಬಂದು ನಮ್ಮನ್ನು ತೋರಿಸಿಇವರೇ ಹಾಲಿ ಹಾಕಿಸಿಕೊಳ್ಳಲು ಬೇಡ ಎಂದವರು ಎಂದು ಹೇಳಿದರು ಎಂದಾಗ ಪ್ರವಿಣ, ಪ್ರಸನ್ನ ಶಿವಕುಮಾರ ಬಿನ್ ಲೇಟ್ ಕೆಂಪೇಗೌಡ ರವರು ಸಿದ್ದಪ್ಪಾಜಿಯವರ ಕತ್ತಿನ ಪಟ್ಟಿ ಹಿಡಿದುಎಳೆದಾಡಿ ಶರ್ಟನ್ನು ಹರಿದುಹಾಕಿ ಕೆಳಕ್ಕೆ ಬೀಳಿಸಿ ಕಾಲಿನಿಂದ ಮೈ ಕೈಗೆ ತುಳಿದು ನೋವುಂಟು ಮಾಡಿದರು, ಬಿಡಿಸಲು ಬಂದ ಮಹೇಂದ್ರನಿಗೂ ಕೂಡ ಬೋಳಿಮಗನೇ ನೀನು ಯಾರು ಕೇಳುವುದಕ್ಕೆ ನಿನ್ನನ್ನು ಕೊಲೆ ಮಡದೇ ಬಿಡುವುದಿಲ್ಲ ಎಂದು ಹೇಳಿ ಕೈಗಳಿಂದ ಮೂರು ಜನರು ಮಹೇಂದ್ರನ ಮೈ ಕೈಗೆ ಹೊಡೆದರು ಆಗ ಅಲ್ಲೇ ಇದ್ದ ದೊಡ್ಡರಾಯಪೇಟೆ ರವಿ ನನಗೆ ಬೋಳಿಮಗನೇ ಎಲ್ಲಾ ನಿನ್ನಿಂದಲೇ ಆಗಿರುವುದು, ನೀನು ಸರಿಯಾಗಿ ಹಾಲನ್ನು ಹಾಕಿಸಿಕೊಂಡಿದ್ದರೆ ಏನೂ ಆಗುತ್ತಿರಲಿಲ್ಲ, ಎಂದು ನನಗೆ ಮೈ ಕೈಗೆ ರವಿಯು ಹೊಡೆದನು, ಆಗ ಹಾಲು ಹಾಕಲು ಬಂದಿದ್ದ ನಾಗೇಗೌಡರ ಮಗ ಗುರು ಮತ್ತು ಶ್ರೀನಿವಾಸನ ಮಗ ಮಹೇಶ್ ರವರು ಬಂದು ಜಗಳ ಬಿಡಿಸಿದರು ಆಗ ನಾಲ್ಕು ಜನರೂ ನೀನು ಒಬ್ಬರೇ ಸಿಕ್ಕರೆ ಕೊಲೆ ಮಾಡದೇ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿ ಹೊರಟು ಹೋದರು, ಆದ್ದರಿಂದ ಪ್ರವೀಣ, ಪ್ರಸನ್ನ, ಶಿವಕುಮಾರ್ (ಶಿಕು)ದೊಡ್ಡರಾಯಪೇಟೆ ರವಿ ಮತ್ತು ಸುರೇಶನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.,ವರದಿ.

06. ಬೇಗೂರು ಠಾಣೆ: (ಮೊ,ನಂ 22/2020) ಪಿರ್ಯಾದಿ ಸಿಂಧೂ ಬೆಳಚಲವಾಡಿ ಗ್ರಾಮರವರು ಸುಟ್ಟ ಗಾಯಗಳಾಗಿ ಚಿಕಿತ್ಸೆಗೆ ದಾಖಲಾಗಿ ನೀಡಿದ ದೂರಿನಲ್ಲಿ ಅವರಿಗೆ ಈಗ್ಗೆ 02 ವರ್ಷಗಳಿಂದ ಹಿಂದೆ ಬೆಳಚಲವಾಡಿ ಗ್ರಾಮದ ಮಹದೇವಸ್ವಾಮಿಯನ್ನು ಮದುವೆಯಾಗಿದ್ದು ಮಕ್ಕಳಿರುವುದಿಲ್ಲ. ತನ್ನ ಗಂಡನಿಗೆ ಕುಡಿತದ ಚಟವಿದ್ದು ಕುಡಿದು ಬಂದು ಹಣ ಕೇಳಿ ಗಲಾಟೆ ಮಾಡುತ್ತಿದ್ದುಕೊಡದಿದ್ದಾಗ ಬೈದು ಹೊಡೆದು ಹಿಂಸೆ ನೀಡುತ್ತಿದ್ದು , ದಿ: 03.02.2020 ರಂದು ರಾತ್ರಿ 9:00 ಗಂಠೆ ಸಮಯದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕತ್ತು ಹಿಚುಕಿದ್ದು, ಕೆಳಕ್ಕೆ ಬಿದ್ದಾಗ ಅವರ ಗಂಡ ಅತ್ತೆ ಮಾವರವರುಗಳು ಸೇರಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನ ಪಟ್ಟಿರುತ್ತಾರೆ. ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ.

07. ಕೊಳ್ಳೇಗಾಲ ಪಟ್ಟಣ ಠಾಣೆ: (ಮೊ,ನಂ 19/2020) ದಿನಾಂಕ:-04-02-2020 ರಂದು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ರವರು ಈ ದಿನ ಪಟ್ಟಣದ ಗಸ್ತಿನಲ್ಲಿದ್ದಾಗ ಯಾರೋ ಒಬ್ಬ ವ್ಯಕ್ತಿ ಕೊಳ್ಳೇಗಾಲ ಪಟ್ಟಣದ ರಸ್ತೆಯಲ್ಲಿ ಎಲ್ಐಸಿ ಕಛೇರಿ ಹಿಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಮದ್ಯದ ಪೌಚ್ಗಳನ್ನು ನೀಡಿ ಅನುವು ಮಾಡುಕೊಟ್ಟಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಗಳು ಹಾಗೂ ಪಂಚರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಮದ್ಯದ ಪೌಚ್ಗಳನ್ನು ನೀಡಿ ಅನುವುಮಾಡಿಕೊಟ್ಟಿರುವುದು ಕಂಡು ಬಂದ ಮೇರೆಗೆ ಸದರಿ ಅಸಾಮಿಯನ್ನು ಹಿಡಿದು (1)90 ಎಂಎಲ್ ನ 15 ಹೈವಾಡ್ಸ್ ಚೀರ್ಸ್ ವಿಸ್ಕಿ (2)ಒಂದು ಪ್ಲಾಸ್ಟಿಕ್ ಕವರ್ (3)ಎರಡು ಪ್ಲಾಸ್ಟಿಕ್ ಲೋಟ ಮತ್ತು ಪ್ಲಾಸ್ಟಿಕ್ ನೀರಿನ ಬಾಟಲ್ನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಠಾಣೆಗೆ ಬಂದು ವರದಿ ತಯಾರಿಸಿ ನೀಡಿದ ವರದಿಯನ್ನು ನೀಡಿದ ಮೇರೆಗೆ ಪ್ರ ವರದಿ

08. ಕೊಳ್ಳೇಗಾಲ ಪಟ್ಟಣ ಠಾಣೆ: (ಮೊ,ನಂ 20/2020) ದಿನಾಂಕ:-04-02-2020 ರಂದು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ರವರು ಈ ದಿನ ಪಟ್ಟಣದ ಗಸ್ತಿನಲ್ಲಿದ್ದಾಗ ಯಾರೋ ಒಬ್ಬ ವ್ಯಕ್ತಿ ಕೊಳ್ಳೇಗಾಲ ಪಟ್ಟಣದ ವಕೀಲ್ ರಾಮಯ್ಯ ರಸ್ತೆಯಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಮದ್ಯದ ಪೌಚ್ಗಳನ್ನು ನೀಡಿ ಅನುವು ಮಾಡುಕೊಟ್ಟಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಗಳು ಹಾಗೂ ಪಂಚರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಮದ್ಯದ ಪೌಚ್ಗಳನ್ನು ನೀಡಿ ಅನುವುಮಾಡಿಕೊಟ್ಟಿರುವುದು ಕಂಡು ಬಂದ ಮೇರೆಗೆ ಸದರಿ ಅಸಾಮಿಯನ್ನು ಹಿಡಿದು ಸ್ಥಳದಲ್ಲಿ ದೊರೆತ (1)90 ಎಂಎಲ್ ನ 15 ಹೈವಾಡ್ಸ್ ಚೀರ್ಸ್ ವಿಸ್ಕಿ (2)ಒಂದು ಪ್ಲಾಸ್ಟಿಕ್ ಕವರ್ (3)ಎರಡು ಪ್ಲಾಸ್ಟಿಕ್ ಲೋಟ ಮತ್ತು ಪ್ಲಾಸ್ಟಿಕ್ ನೀರಿನ ಬಾಟಲ್ನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಠಾಣೆಗೆ ಬಂದು ವರದಿ ತಯಾರಿಸಿ ನೀಡಿದ ಮೇರೆಗೆ ಪ್ರ ವರದಿ.

09. ಕೊಳ್ಳೇಗಾಲ ಗ್ರಾಮಾಂತರ ಠಾಣೆ: (ಮೊ,ನಂ 34/2020) ಪಿರ್ಯಾದಿ ಪುಟ್ಟಮಾದಮ್ಮ ಹರಳೆ ಗ್ರಾಮರವರು ಠಾಣೆಗೆ ಹಾಜರಾಗಿ ನೀಡಿದ ದೂರೇನೆಂದರೆ ನಿನ್ನೆ ದಿನ ದಿ:03-02-2020 ರಂದು ಬೆಳಗ್ಗೆ 08:30 ಗಂಟೆ ಸಮಯದಲ್ಲಿ ಪಿರ್ಯಾದಿಯವರು ಮನೆಯಲ್ಲಿದ್ದಾಗ ಪಿರ್ಯಾದಿಯವರ ಎರಡನೆ ಮಗ ಸೊಸೆ ಹಾಗೂ ಇತರರು ಮನೆ ಬಳಿ ಬಂದು ಮನೆಯಲ್ಲಿರುವ ಸಾಮಾನುಗಳನ್ನು ಕೊಡು ಎಂದು ಕೇಳಿದ್ದು ಪಿರ್ಯಾದಿಯವರು ಇದಕ್ಕೆ ಒಪ್ಪದೆ ಮನೆ ಬೀಗ ಹಾಕಿಕೊಂಡಿದ್ದು ಅರೋಪಿಗಳು ಪಿರ್ಯಾದಿಯವರ ಮನೆ ಬೀಗ ಹೊಡೆದು ಮನೆಯಲ್ಲಿದ್ದ ಸಾಮಾನುಗಳನ್ನು ತೆಗೆದುಕೊಂಡು ಹೋಗಿದ್ದು ಪಿರ್ಯಾದಿಯವರನ್ನು ಹಿಡಿದು ತಳ್ಳಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಕೊಲೆ ಬೆದರಿಕೆ ಹಾಕಿರುವುದರಿಂದ ಸದರಿಯವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡದ ದೂರಿನ ಮೇರೆಗೆ ಪ್ರ.ವ.ವರದಿ.

10. ರಾಮಾಪುರ ಠಾಣೆ: (ಮೊ,ನಂ 13/2020) ದಿನಾಂಕ 03-02-2020 ರಂದು ಪಿರ್ಯಾಧಿಯವರಾದ ನಂಜುಂಡ ಹೆಚ್ ಸಿ-27 ರವರು ಹಾಗೂ ಸಿಬ್ಬಂದಿಗಳು ಅಪರಾಧ ಪತ್ತೆ ಸಂಬಂಧ ನಾಲ್ ರೋಡ್ ಗರಿಕೆಕಂಡಿ ಗಸ್ತಿನಲ್ಲಿದ್ದಾಗ ಒಬ್ಬ ಆಸಾಮಿಯು ಅಕ್ರಮ ವಾಗಿ ಹೊರ ರಾಜ್ಯದ ಲಾಟರಿ ಟಿಕೆಟುಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ತಕ್ಷಣ ಪಿಯರ್ಾದಿ ಹಾಗೂ ಸಿಬ್ಬಂದಿಗಳು ನಾಲ್ ರೋಡ್ ಸರ್ಕಲ್ ಗೆ ಬಂದು ನೋಡಿದಾಗ ಯಾರೋ ಒಬ್ಬ ಆಸಾಮಿ ಕೈಯಲ್ಲಿ ಒಂದು ನೀಲಿ ಬಣ್ಣದ ಬಟ್ಟೆ ಬ್ಯಾಗ್ ಹಿಡಿದುಕೊಂಡು ಹಾಗೂ ಮತ್ತೊಂದು ಕೈಯ್ಯಲ್ಲಿ ಲಾಟರಿ ಟಿಕೆಟುಗಳನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ಲಾಟರಿ ಮಾರಾಟ ಮಾಡುತ್ತಿದ್ದು ಕಂಡು ಬಂದಿದ್ದು, ಆಸಾಮಿಯನ್ನು ಸುತ್ತುವರೆದು ಹಿಡಿದು ಲೈಸೆನ್ಸ್ ವಗೈರಾ ಕೆಳಲಾಗಿ ಯಾವುದೇ ಲೈಸೆನ್ಸ್ ಇಲ್ಲಾ ಎಂದು ತಿಳಿಸಿರುತ್ತಾನೆ ನಂತರ ಪಂಚರುಗಳ ಸಮಕ್ಷಮ ಮಹಜರ್ ಮುಖಾಂತರ ಮಾಲು ಮತ್ತು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ತಂದು ಹಾಜರುಪಡಿಸಿದ ಮೇರೆಗೆ ಅಸಂಜ್ಞೆಯ ಪ್ರಕರಣವಾದ್ದರಿಂದ ಎನ್ ಸಿಆರ್ ದಾಖಲಿಸಿ ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡು ಪ್ರ ವ ವರದಿ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿಯನ್ನು ಪಡೆದುಕೊಂಡು ಈ ದಿನ ದಿನಾಂಕ 04-02-2020 ರಂದು 18-15 ಗಂಟೆಗೆ ಪ್ರ ವ ವರದಿ ದಾಖಲಿಸಿ ಘನ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿರುತ್ತೆ ಎಂಬುದಾಗಿ ಈ ವರದಿ.


Your Comment

Name :
Email:
Comment:
Submit

Website Designed and Developed by Global Buzz®