• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report Date: 03-02-2020

No of views : 22       No of Comments : 0

01. ಗುಂಡ್ಲುಪೇಟೆ ಠಾಣೆ: (ಮೊ,ನಂ 33/2020) ಪಿರ್ಯಾದಿ ಮಹದೇವಮ್ಮ ಕಂದೇಗಾಲ ಗ್ರಾಮರವರು ನೀಡಿದ ದೂರಿನಲ್ಲಿ ಅವರು ತಮ್ಮ ಮಗ ಅಶೋಕನ ಬಾಬ್ತು ಕೆಎ-10 ಇಬಿ-1304 ಬಜಾಜ್ ಪಲ್ಸರ್ ಮೋಟಾರ್ ಬೈಕ್ ನ ಹಿಂಬದಿಯಲ್ಲಿ ಕುಳಿತುಕೊಂಡು ಹೋಗುತ್ತಿದ್ದಾಗ ಮದ್ಯಾಹ್ನ 1.00 ಗಂಟೆ ಸಮಯದಲ್ಲಿ ಗುಂಡ್ಲುಪೇಟೆ-ಮೈಸೂರು ಮುಖ್ಯ ರಸ್ತೆಯಲ್ಲಿ ಗಿರಿಧರ್ ಆಸ್ಪತ್ರೆ ಹತ್ತಿರ ಅಶೋಕ್ ಬೈಕ್ ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಹೋಗುತ್ತಿದ್ದಾಗ ರಸ್ತೆಗೆ ಅಡ್ಡಲಾಗಿ ನಾಯಿಯೊಂದು ಬಂದಿದ್ದರಿಂದ ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ನಿರ್ಲಕ್ಷತೆಯಿಂದ ಮೋಟಾರ್ ಬೈಕ್ ನ ಬ್ರೇಕ್ ಹಾಕಿದ್ದರಿಂದ ಪಿರ್ಯಾಧಿಯವರು ಮೋಟಾರ್ ಸೈಕಲ್ ನಿಂದ ಕೆಳಕ್ಕೆ ಬಿದ್ದಿದ್ದರಿಂದ ತಲೆಯ ಹಿಂಭಾಗಕ್ಕೆ, ಮೈಕೈಗೆ ಏಟಾಯಿತು, ಆದ್ದರಿಂಧ ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ಅಪಘಾತ ಉಂಟು ಮಾಡಿದ ನನ್ನ ಮಗನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ಹೇಳಿಕೆ ದೂರನ್ನು ಪಡೆದು ಪ್ರಕರಣ ದಾಖಲಿಸಿದ ಮೇರೆಗೆ

02. ಗುಂಡ್ಲುಪೇಟೆ ಠಾಣೆ: (ಮೊ,ನಂ 34/2020) ಪಿರ್ಯಾದಿ ಅಬ್ದುಲ್ ಹಕೀಂ ಗುಂಡ್ಲುಪೇಟೆ ಪಟ್ಟಣರವರು ತಮ್ಮ ಚಾಲಕನ ಜೊತೆ ಕೆಲಸದ ನಿಮಿತ್ತ ಗುಂಡ್ಲುಪೇಟೆಗೆ ತಮ್ಮ ಬಾಬ್ತು ಕೆಎಲ್-07 ಎಕ್ಸ್-4004 ಕಾರಿನಲ್ಲಿ ಬಂದಿದ್ದು, ಕೆಲಸ ಮುಗಿಸಿ ವಾಪಸ್ ತಮ್ಮ ಜಮೀನಿಗೆ 19.30 ಗಂಟೆ ಸಮಯದಲ್ಲಿ ಊಟಿ ಮುಖ್ಯ ರಸ್ತೆಯ ಸಂತ ಜಾನ್ ಶಾಲೆ ಬಳಿ ಜಮೀನಿಗೆ ಹೋಗಲು ರಸ್ತೆಯ ಎಡಬದಿಯಲ್ಲಿ ನಿಂತಿದ್ದಾಗ ಗುಂಡ್ಲುಪೇಟೆ ಕಡೆಯಿಂದ ಬಂದ ಕೆಎ-13 ಸಿ-7299 ಕ್ಯಾಂಟರ್ ಲಾರಿ ಚಾಲಕ, ಲಾರಿಯನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ಕಾರಿನ ಹಿಂಬಾಗಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಉಂಟು ಮಾಡಿದ ಪರಿಣಾಮ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿರುತ್ತದೆ, ಕಾರಿನಲ್ಲಿ ಪಿರ್ಯಾಧಿಯವರಿಗೂ ಹಾಗೂ ಕಾರಿನ ಚಾಲಕ ಮಹಮದ್ ಜವಾದ್ ಇಬ್ಬರಿಗೂ ಯವುದೇ ಗಾಯಗಳಾಗಿರುವುದಿಲ್ಲ. ಸದರಿ ಕೆಎ-13 ಸಿ-7299 ಕ್ಯಾಂಟರ್ ಲಾರಿ ಚಾಲಕ ಅಕ್ರಂ ಖಾನ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೆಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

03. ಗುಂಡ್ಲುಪೇಟೆ ಠಾಣೆ: (ಮೊ,ನಂ 35/2020) ದಿನಾಂಕ; 01.02.2020 ರಂದು ಮಧ್ಯಾಹ್ನ 1.45 ಗಂಟೆ ಸಮಯದಲ್ಲಿ ಪಿರ್ಯಾದಿ ಗೌಸ್ ಷರೀಪ್ ಗುಂಡ್ಲುಪೇಟೆ ಟೌನ್ರವರು ಮತ್ತು ಆತನ ಸ್ನೇಹಿತ ಜಾವದ್ ಇಬ್ಬರೂ ಕೆ.ಎ. 10 ಎ. 3614 ರ ಬೈಕಿನಲ್ಲಿ ಗೋವಿಂದರಾಜು ಪೆಟ್ರೋಲ್ ಬಂಕ್ ಹತ್ತಿರ ಪೆಟ್ರೋಲ್ ಹಾಕಿಸಿಕೊಂಡು ರಸ್ತೆಯ ಎಡಭಾಗದಲ್ಲಿ ನಿಂತಿದ್ದಾಗ ಮೈಸೂರು ಕಡೆಯಿಂದ ಊಟಿ ಕಡೆಗೆ ಹೋಗಲು ಬಂದ ಕೆ.ಎಲ್. 10 ಬಿ.ಡಿ 12 ರ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದು ಜಾವದ್ ರವರಿಗೆ ಏಟಾಗಿರುತ್ತದೆಂದು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

04. ಗುಂಡ್ಲುಪೇಟೆ ಠಾಣೆ: (ಮೊ,ನಂ 36/2020) ಪಿರ್ಯಾಧಿ ಸುಶೀಲಮ್ಮ ಗುಂಡ್ಲುಪೇಟೆ ಟೌನ್ರವರು ನೀಡಿದ ದೂರಿನಲ್ಲಿ ದಿನಾಂಕ: 01.02.2020 ರಂದು ತಮ್ಮ ಸಂಬಂದಿಕರ ಮದುವೆಗೆ ಹೋಗಿ ದಿನಾಂಕ: 02.02.2020 ರಂದು ಸಂಜೆ ಬಂದು ನೋಡಿದಾಗ ಮನೆಯ ಬಾಗಿಲನ್ನು ಮೀಟಿ ಮನೆ ಬೀರುವಿನ ಲಾಕರ್ ನಲ್ಲಿದ್ದ ಬೆಳ್ಳಿ ಪದಾರ್ಥಗಳನ್ನು ಹಾಗೂ ಚಿನ್ನದ ಚೈನ್ನ್ನು ಯಾರೋ ಕಳ್ಳರು ರಾತ್ರಿ ವೇಳೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳ್ಳತನ ಮಾಡಿಕೊಂಡು ಹೋಗಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಈ ದಿನ ತಡವಾಗಿ ಬಂದು ನೀಡಿದ ದೂರಿನ ಮೇರೆಗೆ

05. ಬೇಗೂರು ಠಾಣೆ: (ಮೊ,ನಂ 32/2020) ಪಿರ್ಯಾದಿ ಯೋಗರಾಜ್ ಮೈಸೂರುರವರು ನೀಡಿದ ದೂರಿನಲ್ಲಿ ಶ್ರೀ ವೆಂಕಟೇಶ್ ರವರು ಪಿರ್ಯಾದಿ ಬಳಿ ದಿನಾಂಕ: 20-06-2018 ರಂದು ಭಾರತೀಯ ರೂಪಾಯಿ 9,50,000/ ರೂ ನಗದನ್ನು ಮತ್ತು ಚೆಕ್ ಮುಖಾಂತರ ತೆಗೆದುಕೊಂಡಿದ್ದು, ಹಣದ ಭದ್ರತೆಗಾಗಿ ನನ್ನನ್ನು ನಂಬಿಸಲು ಸಂಬಂಧಪಟ್ಟಂತೆ ಹಣ ಸಂದಾಯ ರಶೀದಿ ಮತ್ತು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು ಬೇಗೂರು ಹೋಬಳಿ ರಾಘವಾಪುರ ಗ್ರಾಮದಲ್ಲಿರುವ ಮೋಜಣಿ ಸಂಖ್ಯೆ 282/3 ರಲ್ಲಿರುವ 01 ಎಕರೆ 30 ಗುಂಟೆ ಜಮೀನನ್ನು ಆನ್ ಡಿಮ್ಯಾಂಡ್ ಪ್ರೋನೋಟ್ ಆಧಾರ ಪತ್ರವನ್ನು ಸಾಕ್ಷಿಗಳಾದ ನವೀನ್ಕುಮಾರ್ ಮತ್ತು ಎಸ್.ಚೇತನ್ ರವರ ಸಮ್ಮುಖದಲ್ಲಿ ಮಾಡಿಕೊಂಡಿದ್ದು, 01 ತಿಂಗಳ ನಂತರ ರೂಪಾಯಿ 25,000/- ಹಾಗೂ ಕೈಸಾಲವಾಗಿ 2,25,000/ ರೂ ಒಟ್ಟು 12,00,000/ ರೂಪಾಯಿ (ಹನ್ನೆರಡು ಲಕ್ಷ ರೂಪಾಯಿ) ಹಣವನ್ನು ನನ್ನಿಂದ ಸಾಲವಾಗಿ ಪಡೆದಿದ್ದು, ಮೇಲ್ಕಂಡ ಎಲ್ಲಾ ಮೊತ್ತವನ್ನು ಮೌಖಿಕವಾಗಿ ಆರು ತಿಂಗಳಲ್ಲಿ ವಾಪಸ್ಸು ಮಾಡುವುದಾಗಿ ನನಗೆ ತಿಳಿಸಿರುತ್ತಾರೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ 06 ತಿಂಗಳ ಒಳಗಾಗಿ ನನ್ನಿಂದ ಪಡೆದ ಸಂಪೂರ್ಣ ಹಣವನ್ನು ನನಗೆ ಹಿಂದಿರುಗಿಸುವುದಾಗಿ ಶ್ರೀ ವೆಂಕಟೇಶ ಮತ್ತು ಅವರ ಧರ್ಮಪತ್ನಿಯಾದ ಸ್ವರ್ಣಲತಾ ವೆಂಕಟೇಶ ರವರುಗಳು ಒಪ್ಪಿಕೊಂಡಿದ್ದು, 06 ತಿಂಗಳಾದರೂ ಹಣವನ್ನು ಹಿಂದಿರುಗಿಸದೇ ವಂಚಿಸುತ್ತಿರುವ ಇಬ್ಬರು ವ್ಯಕ್ತಿಗಳ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ

06. ಬೇಗೂರು ಠಾಣೆ: (ಮೊ,ನಂ 19/2020) ಠಾಣಾ ಎಎಸ್ ಐ ಪ್ರಕಾಶ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯೇನೆಂದರೆ ಗುಂಡ್ಲುಪೇಟೆ ಪಟ್ಟಣದಿಂದ ಹಿರೀಕಾಟಿ ಗೇಟಿನ ಕಡೆಗೆ ಗಸ್ತು ಮಾಡಲು ಗುಂಡ್ಲುಪೇಟೆ ಹೆದ್ದಾರಿ ಗಸ್ತು ವಾಹನ-01 ಸಂಖ್ಯೆ ಕೆಎ-03-ಜಿ-1493 ರಲ್ಲಿ ತಗ್ಗಲೂರು ಗೇಟಿನ ಬಳಿ ಬೇಗೂರು ಕಡೆಗೆ ಬರುತ್ತಿದ್ದಾಗ ತಗ್ಗಲೂರು ಗೇಟಿನ ಬಳಿ ಬೆಳಗಿನ ಜಾವ 4-45 ಗಂಟೆಯ ಸಮಯದಲ್ಲಿ ತಗ್ಗಲೂರು ಗೇಟಿನ ಬಳಿ ರಸ್ತೆಯಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ಬಿದ್ದುಕೊಂಡಿದ್ದು, ಆತನ ತಲೆಯಿಂದ ರಕ್ತಸ್ರಾವವಾಗಿ ಕೈಕಾಲುಗಳಿಗೆ ಏಟಾಗಿ ರಕ್ತಗಾಯವಾಗಿತ್ತು. ಆತ ಬಿದ್ದಿದ್ದ ಸ್ಥಳದ ಅಕ್ಕಪಕ್ಕದಲ್ಲಿ ಯಾರೂ ಕೂಡ ಇರಲಿಲ್ಲ. ಇದನ್ನು ನೋಡಿದರೆ ಸದರಿ ವ್ಯಕ್ತಿ ಯಾವುದೋ ಕಡೆಯಿಂದ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಬರುತ್ತಿದ್ದಾಗ ಯಾವುದೋ ವಾಹನ ಚಾಲಕನು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಸದರಿ ವ್ಯಕ್ತಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿ ವಾಹನದೊಂದಿಗೆ ಪರಾರಿಯಾಗಿರುವುದಾಗಿ ಕಂಡು ಬಂದಿರುತ್ತದೆ. ಆದ್ದರಿಂದ ಮೇಲ್ಕಂಡ ಅಪರಿಚಿತ ವ್ಯಕ್ತಿಗೆ ಯಾವುದೋ ವಾಹನದ ಚಾಲಕನು ಯಾವುದೋ ಕಡೆಯಿಂದ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು ಸದರಿ ಅಪರಿಚಿತ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

07. ಯಳಂದೂರು ಠಾಣೆ: (ಮೊ,ನಂ 09/2020) ಪಿರ್ಯಾದಿ ನಿಂಗನಗೌಡ ಪಾಟೀಲ್ ಕೆ ಎಸ್ ಆರ್ ಟಿ ಸಿ ಬಸ್ ನಿವರ್ಾಹಕ ಬಿಲ್ಲೆ ಸಂಖ್ಯೆ 710 ಚಾ ನಗರ ಘಟಕ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 03/12/2020 ರಂಧು ಬೆಳಗ್ಗೆ 7:00 ಗಂಟೆಯಲ್ಲಿ ಬಿಳಿಗಿರಿರಂಗನಬೆಟ್ಟದಿಂದ ನಾನು ನಿವರ್ಾಹಕನಾಗಿ ಕೆ ಎ 10 ಎಫ್ 0188 ವಾಹನದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ನನ್ನ ವಾಹನದ ಚಾಲಕರಾದ ರೈಮಾನ ಸಾಬನದಾಪ್ ಚಾಲಕ ಬಿಲ್ಲೆ ನಂಬರ್ 1992 ರವರು ಬಸ್ಸನ್ನು ಚಾಲನೆ ಮಾಡಿಕೊಂಡು ಯಳಂದೂರು ಕಡೆಗೆ ಹೋಗುತ್ತಿದ್ದಾಗ ಸಮಯ ಸುಮಾರು ಬೆಳಗ್ಗೆ 07:30 ಗಂಟೆಯಲ್ಲಿ ಬಿಳಿಗಿರಿರಂಗನಬೆಟ್ಟ ರಸ್ತೆ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಹಿಂಭಾಗದ ಸೇತುವೆಯ ತಿರುವಿನಲ್ಲಿ ಎದುರುಗಡೆ ಬಂದ ಕೆ ಎ 42 ಏ 9558 ಟಿಪ್ಪರ್ ಚಾಲಕ ಟಿಪ್ಪರ್ ವಾಹನವನ್ನು ಅತಿ ವೇಗವಾಗಿ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಡಿಕ್ಕಿಪಡಿಸಿದ್ದು ಇದರಿಂದ ನಮ್ಮ ಬಸ್ ಚಾಲಕನಿಗೆ ಹಾಗೂ ಬಸ್ಸಿನಲ್ಲಿದ್ದ 4-5 ಜನರಿಗೆ ಸಣ್ಣಪುಟ್ಟಗಾಯಗಳಾಗಿದ್ದು, ಸದರಿ ಟಿಪ್ಪರ್ ವಾಹನ & ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

08. ಯಳಂದೂರು ಠಾಣೆ: (ಮೊ,ನಂ 10/2020) ದಿನಾಂಕ 03/02/2020 ರಂದು ರಾತ್ರಿ 19:30 ಗಂಟೆಯಲ್ಲಿ ಪಿರ್ಯಾದಿದಾರರಾದ ರಮೇಶ ಬಿನ್ ರಾಮಯ್ಯ 35 ವರ್ಷ ಕೂಲಿ ಕೆಲಸ ಪರಿಶಿಷ್ಟ ಜಾತಿ ಯರಿಯೂರು ಗ್ರಾಮ ಯಳಂದೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 01/02/2020 ರ ಶನಿವಾರ ನನ್ನ ತಮ್ಮನಾದ ಚಂದ್ರಶೇಖರ್ ಆರ್ ಎಂಬುವವರು ಮಧ್ಯಾಹ್ನ 02:00 ಗಂಟೆ ಸಮಯದಲ್ಲಿ ನಮ್ಮ ಯರಿಯೂರು ಗ್ರಾಮದಿಂದ ಚಾಮರಾಜನಗರಕ್ಕೆ ಹೋಗಲು ಅವನ ಬಾಬ್ತು ಕೆಎ 10 ವೈ 0919 ಬೈಕಿನಲ್ಲಿ ಹೋಗುತ್ತಿದ್ದಾಗ ಯಳಂದೂರು ಪಟ್ಟಣದ ಕೆಕೆ ರಸ್ತೆಯ ಮಸೀದಿ ಬಳಿಯ ಕಾಳಿಕಾಂಬ ದೇವಸ್ಥಾನದ ಡಿವೈಡರ್ನಿಂದ ಕೆಎ 04 ಇಸಿ 8901 ರ ಬೈಕಿನ ಸವಾರ ಅಡ್ಡಲಾಗಿ ತನ್ನ ಬೈಕನ್ನು ನುಗ್ಗಿಸಿದ್ದರಿಂದ ನನ್ನ ತಮ್ಮನಾದ ಚಂದ್ರಶೇಖರನು ಬೈಕಿಗೆ ಡಿಕ್ಕಿಯಾಗಿ ಕೆಳಕ್ಕೆ ಬಿದ್ದು ತಲೆ ಕಣ್ಣಿನಿನ ಬಳಿ ಹಾಗೂ ಕೈ ಕಾಲುಗಳಿಗೆ ಏಟಾಗಿದೆ. ಎಂದು ನಮ್ಮ ಗ್ರಾಮದ ಗಿರೀಶ ಬಿನ್ ಮಲ್ಲಯ್ಯ ನನಗೆ ಪೋನ್ ಮಾಡಿ ಚಂದ್ರಶೇಖರನನ್ನು ಯಳಂದೂರು ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಆಗ ನಾನು ಯಳಂದೂರು ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ತಮ್ಮನನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ತಿಳಿಸಿದ ಮೆರೆಗೆ ಚಾಮರಜನಗರ ಆಸ್ಪತ್ರಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಮೈಸೂರಿನ ಕೆ ಆರ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಹಾಲಿ ನನ್ನ ತಮ್ಮ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನನ್ನ ತಮ್ಮನ ಅಪಘಾತಕ್ಕೆ ಕಾರಣನಾದ ಕೆ ಎ 04 ಇಸಿ 8901 ರ ಬೈಕ್ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ನಾನು & ನನ್ನ ಕುಟುಂಬದವರು ಮೈಸೂರಿನ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿರುವುದಾಗಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ .

09. ಕೊಳ್ಳೇಗಾಲ ಪಟ್ಟಣ ಠಾಣೆ: (ಮೊ,ನಂ 18/2020) ದಿನಾಂಕ:-03-02-2020 ರಂದು ಪಿರ್ಯಾದುದಾರಾದ ವಿ ರಾಜಶೇಖರ ಮೂತರ್ಿ ಕೊಳ್ಳೇಗಾಲ ತಾಲ್ಲೂಕು ಕಸಬಾ ಹೋಬಳಿಯಲ್ಲಿ ರಾಜಸ್ವ ನೀರಿಕ್ಷಕರಾಗಿದ್ದು ಮೇಲಾಧಿಕಾರಿಗಳ ಆದೇಶದಂತೆ ನಾನು ಮತ್ತು ಹರಳೆ ವೃತ್ತದ ಗ್ರಾಮಲೆಕ್ಕಾಧಿಕಾರಿಗಳಾದ ಬಿ.ಎನ್ ದಿನಕರ ಮತ್ತು ಹರಳೆ ವೃತ್ತದ ಗ್ರಾಮ ಸಹಾಯಕರಾದ ಬಸವರಾಜು ರವರ ಜೊತೆ ನಮ್ಮ ಬಾಬ್ತು ಕೆಎ-09-ಇಎಸ್-5455 ರ ಬೈಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆ ಸಂಬಂಧ ವಿಶೇಷ ಗಸ್ತು ಮಾಡುತ್ತಿದ್ದಾಗ ಹಳೇಹಂಪಾಪುರ ಗ್ರಾಮದಿಂದ ಮುಂದೆ ರಸ್ತೆಯಲ್ಲಿ ಒಂದು ಕೆಎ-32-ಸಿ-0706 ವಾಹನ ಬರುತ್ತಿದ್ದನ್ನು ತಡೆಯಲಾಗಿ ಆ ವಾಹನದ ಚಾಲಕ ಮತ್ತು ಚಾಲಕನ ಸಹಾಯಕ ವಾಹನವನ್ನು ನಿಲ್ಲಿಸಿ ಇಬ್ಬರೂ ಓಡಿ ಹೋಗಿರುತ್ತಾರೆ ನಂತರ ವಾಹನವನ್ನು ಪರಿಶೀಲಿಸಲಾಗಿ ವಾಹನವು ಕೆಎ-32-ಸಿ-0706 ನಂಬರಿನ ಬೊಲೆರೊ ವಾಹನವಾಗಿದ್ದು ವಾಹನದ ಬಾಡಿಯಲ್ಲಿ ಮರಳು ಬಾಡಿ ಮಟ್ಟದ ವರೆಗೆ ತುಂಬಿರುತ್ತದೆ ಈ ವಾಹನದ ಚಾಲಕ ಮತ್ತು ಆತನ ಸಹಾಯಕ ಕಾವೇರಿ ನದಿಯಿಂದ ಮರಳನ್ನು ಕಳ್ಳತನ ಮಾಡಿಕೊಂಡು ವಾಹನದಲ್ಲಿ ತುಂಬಿಕೊಂಡು ಸಕರ್ಾರಕ್ಕೆ ರಾಜಧಾನ ಕಟ್ಟದೆ ಮರಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಬರುತ್ತಿರುವುದು ಧೃಡಪಟ್ಟಿರುತ್ತದೆ ಆದ್ದರಿಂದ ಮೇಲ್ಕಂಡ ಚಾಲಕ ಮತ್ತು ಆತನ ಸಹಾಯಕ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರ ವ ವರದಿ.

10. ಹನೂರು ಠಾಣೆ: (ಮೊ,ನಂ 13/2020) ಪಿರ್ಯಾದಿ ಪ್ರಕಾಶ ಆರ್.ಎಸ್. ದೊಡ್ಡಿ ಗ್ರಾಮರವರು ನೀಡಿದ ದೂರಿನಲ್ಲಿ ಅವರು ಕನ್ನಿಕಾಪರಮೇಶ್ವರಿ ದೇವಸ್ಥಾನದ ಹತ್ತಿರ ಬರುತ್ತಿದ್ದಾಗ ವಿನೋದ,ಎನ್ ಬಿನ್ ನಿಂಗರಾಜೇಗೌಡ ಹನೂರು ಪಟ್ಟಣ ಈತನು ನನ್ನನ್ನು ಅಡ್ಡಗಟ್ಟಿ ನಿಲ್ಲಿಸಿ ತೀಟೆ ಜಗಳ ತೆಗೆದು ಬೋಳಿಮಗನೇ, ಸೋಳೆಮಗನೆ, ಎಂದು ಬೈಯುತ್ತ ನನ್ನ ಹೆಂಡ್ತಿಗೂ ಇವನಿಗೂ ನನಗೂ ಹಿಂದೆ ಗಲಾಟೆ ಆಗಿದ್ದ ವಿಚಾರದಲ್ಲಿ ಜಗಳ ತೆಗೆದು ಏಕಾಏಕಿ ನನಗೆ ಕೈಯಿಂದ ಮೈ ಕೈ ಗೆ ಹೊಡೆದು ಒಳನೋವು ಉಂಟುಮಾಡಿದ ಕಾಲಿನಿಂದ ಎದೆಗೆ ಒದ್ದು ನೋವುಂಟು ಮಾಡಿದ ಹಾಗೂ ಸೊಂಟಕ್ಕೆ ಒದ್ದು ನೋವುಂಟು ಮಾಡಿದ ನಂತರ ಅಷ್ಟಕ್ಕೆ ಬಿಡದೆ ನನ್ನ ಎಡಗೈಯನ್ನು ತನ್ನ ಕೈಯಿಂದ ತಿರುಚಿದಾಗ ಎಡಗೈ ತುಂಬ ನೋವುಂಟಾಗಿದೆ, ನಂತರ ಎಡಕೈನ ಕಂಕಣ ತುಂಬ ನೋವಾಗಿದೆ. ಹಾಗೂ ಎರಡು ಕೈಯಿಂದ ಕುತ್ತಿಗೆ ಹಾಗೂ ಭುಜಕ್ಕೆ ಹೊಡೆದಿರುತ್ತಾನೆ,ಅಷ್ಟರಲ್ಲಿ ಹನೂರು ಪಟ್ಟಣದ ರಾಜು ಬಿನ್ ಕೆಂಪೇಗೌಡು ಬಂದು ನನ್ನನ್ನು ಸಮಾಧಾನಪಡಿಸಿ ತಮ್ಮ ಸ್ಕೂಟರ್ ನಲ್ಲಿ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬರುವಾಗ ವಿನೋದನು ಮಗನೇ ನಿನ್ನನ್ನು ನಿನ್ನ ತಂದೆ ತಾಯಿಯನ್ನು ಕೊಲೆ ಮಾಡುತ್ತೇನೆಂದು ಪ್ರಾಣಬೆದರಿಕೆ ಹಾಕಿದ ನಿನ್ನ ಹೆಂಡ್ತಿಯನ್ನು ನಾನೇ ಕರೆದುಕೊಂಡು ಹೋಗುತ್ತೇನೆ ಹೇಳಿ ಅಲ್ಲೆ ಬಿದ್ದಿದ್ದ ದೊಣ್ಣೆಯಿಂದ ನನ್ನ ಎಡದ ಮೊಣಕೈಗೆ ಹೊಡೆದು ನೋವುಂಟು ಮಾಡಿರುತ್ತಾರೆ. ನನಗೆ ಹೊಡೆದ ವಿನೋದನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿಕೊಂಡ ಮೇರೆಗೆ.


Your Comment

Name :
Email:
Comment:
Submit

Website Designed and Developed by Global Buzz®