• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report Date: 02-02-2020

No of views : 34       No of Comments : 0

01. ಚಾಮರಾಜನಗರ ಸಂಚಾರ ಠಾಣೆ: (ಮೊ,ನಂ 08/2020) ಫಿರ್ಯಾದಿ ಮುರುಗೇಶ ಜೆ.ಎಸ್.ಪುರ ಈರೋಡು ಜಿಲ್ಲೆ ತಮಿಳುನಾಡುರವರು ನೀಡಿದ ದೂರಿನಲ್ಲಿ ಅವರು ಸುಮಾರು 6 ತಿಂಗಳಿನಿಂದ ಸತ್ಯಮಂಗಲಂ ನ ಪಿ.ಸದಾಶಿವ ರವರಿಗೆ ಸೇರಿದ 10 ಚಕ್ರದ ಲಾರಿ ನಂ ಕೆಎ-03 ಎಬಿ--2233 ರಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಸದರಿ ಲಾರಿಯನ್ನು ಕನರ್ಾಟಕ,ಕೇರಳ,ರಾಜ್ಯದ ಕಡೆಗೆ ಬಾಡಿಗೆಗೆ ಹೋಗುತ್ತಿದ್ದು ಅದರಂತೆ ನೆನ್ನೆ ದಿನ ದಿನಾಂಕ:01-02-2020 ರಂದು ಮದ್ಯ ರಾತ್ರಿ ನಂಜನಗೂಡಿನ ಪಾಲರ್ೆ ಆಗ್ರೋ ಪ್ರೈವೇಟ್ ಲಿಮಿಟೆಡ್ನಲ್ಲಿ ಫ್ರೂಟಿ ಜ್ಯೂಸ್ ಅನ್ನು ಲೋಡ್ ಮಾಡಿಕೊಂಡು ಇದನ್ನು ಪಾಲಕ್ಕಾಡ್ ಗೆ ಸಾಗಿಸಲು ಚಾಮರಾಜನಗರದ ಮಾರ್ಗವಾಗಿ ಹೋಗಲು ಬರುತ್ತಿದ್ದಾಗ ಈ ದಿನ ಬೆಳಿಗ್ಗೆ ಸುಮಾರು 5.00 ಗಂಟೆಯಲ್ಲಿ ಬದನಗುಪ್ಪೆ ಮುಂದೆ ಕರಿಕಲ್ಲು ಪ್ಯಾಕ್ಟರಿ ಹತ್ತಿರ ಎದುರುಗಡೆಯಿಂದ ಟಿಎನ್-36 ಎಕ್ಸ್-4264 ರ ಲಾರಿಯನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ಲಾರಿಯ ಬಲಭಾಗದ ಹಿಂಭಾಗಕ್ಕೆ ಅಪಘಾತ ಮಾಡಿದ್ದು ಈ ಪರಿಣಾಮ ನಮ್ಮ ಲಾರಿಯ ಬಲಭಾಗ ಜಖಂ ಆಗಿದ್ದು ಜ್ಯೂಸ್ ಬಾಟೆಲ್ ಗಳು ಸಹ ಕೆಳಗೆ ಬಿದ್ದು ಹೋದವು.ಫಿರ್ಯಾದಿಯವರಿಗೆ ಯಾವುದೇ ಏಟಾಗಲಿಲ್ಲ.ನಂತರ ವಿಚಾರವನ್ನು ಫಿರ್ಯಾದಿಯವರು ಮಾಲೀಕರಿಗೆ ತಿಳಿಸಿ ತಡವಾಗಿ ಬಂದು ಹೇಳಿಕೆ ದೂರನ್ನು ನೀಡಿದ್ದು ಅಪಘಾತ ಮಾಡಿದ ಟಿ.ಎನ್-36 ಎಕ್ಸ್-4264 ರ ಲಾರಿಯ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆ ದೂರಿನ ಮೇರೆಗೆ ಈ ಪ್ರ.ವ.ವರದಿ.

02. ಚಾಮರಾಜನಗರ ಸಂಚಾರ ಠಾಣೆ: (ಮೊ,ನಂ 09/2020) ಪಿರ್ಯಾದಿ ಮಹದೇವ ಅರಳೀಪುರ ಗ್ರಾಮರವರು ನೀಡಿದ ದೂರಿನಲ್ಲಿ ಅವರು ಕೆಎ 10 ಎಕ್ಸ್ 6034 ಟಿವಿಎಸ್ ಎಕ್ಸ್ಎಲ್ ಮೊಪೆಡಿನಲ್ಲಿ ಚಾಮರಾಜನಗರದಿಂದ ತಮ್ಮ ಊರಾದ ಅರಳೀಪುರ ಗ್ರಾಮಕ್ಕೆ ಹೋಗುತ್ತಿದ್ದಾಗ ಯಾವುದೋ ಅಪರಿಚಿತ ವಾಹನ ಎದುರುಗಡೆಯಿಂದ ಬಂದು ಅಪಘಾತ ಮಾಡಿ ಹೊರಟುಹೋಗಿದ್ದು ಈ ಸಂಬಂಧ ಸ್ಥಳದಲ್ಲಿ ಗಾಯುಗೊಂಡಿದ್ದ ಪಿರ್ಯಾದಿ ಮಹದೇವರರವರನ್ನು ಅವರ ಊರಿನವರಾದ ರಾಮೇಗೌಡರ ಮಗ ಚಿನ್ನಸ್ವಾಮಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಪಿರ್ಯಾದಿಯ ಮಗ ಮನೋಜನು ಮೈಸೂರಿನ ಜೆ.ಎಸ್.ಎಸ್.ಆಸ್ಪತ್ರೆಗೆ ದಾಖಲು ಮಾಡಿದ್ದು ಈ ದಿನ ಆಸ್ಪತ್ರೆಯಲಿ ವೈದ್ಯಾದಿಕಾರಿಗಳ ಸಮಕ್ಷಮ ನೀಡಿದ ಹೇಳಿಕೆಯ ಮೇರೆಗೆ ಈ ಪ್ರ.ವ.ವರದಿ.

03.ಕುದೇರು ಠಾಣೆ: (ಮೊ,ನಂ 05/2020) ಪಿರ್ಯಾದಿ ಕೀತರ್ಿ ಆಲೂರು ಗ್ರಾಮರವರು ನೀಡಿದ ದೂರಿನಲ್ಲಿ ಅವರ ಗ್ರಾಮದ ಸುರೇಶರವರ ಮಗ ದಿವಾಕರ ಎಂಬುವವನು ಕುಪ್ಪೇಗಾಲ ಗ್ರಾಮದಿಂದ ಆಲ್ದೂರು ಗ್ರಾಮಕ್ಕೆ ಬರಲು ಕೆ.ಎ-10, ವೈ-6777 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ 150 ಸಿಸಿ ಮೋಟಾರ್ ಸೈಕಲ್ ನಲ್ಲಿ ಬರುತ್ತಿದ್ದಾಗ ನಂಜನಗೂಡು ಕಡೆಯಿಂದ ಟಿ.ನರಸೀಪುರ ಕಡೆಗೆ ಹೋಗಲು ಕೆ.ಎ-09, ಡಿ-5896 ಬೊಲೆರೊ ಸಿಟಿ ಪಿಕಪ್ ವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮೋಟಾರ್ ಸೈಕಲ್ ಸವಾರನಿಗೆ ಢಿಕ್ಕಿ ಹೊಡೆಸಿ ನಂತರ ರಸ್ತೆ ಬದಿಯಲ್ಲಿನ ಸೇತುವೆ ಮೇಲೆ ಕುಳಿತಿದ್ದ ಉಮ್ಮತ್ತೂರು ಗ್ರಾಮದ ಚಂದ್ರು ಎಂಬ ಹುಡುಗನಿಗೆ ಗುದ್ದಿಸಿ ನಿಯಂತ್ರಿಸಲಾಗದೆ ಅವರ ಗ್ರಾಮದ ನಾಗಪ್ಪರವರ ಜಮೀನಿನ ಹತ್ತಿರ ಚರಂಡಿಯಲ್ಲಿ ವಾಲಿಕೊಂಡು ನಿಂತಿತು. ದಿವಾಕರನ ಮೋಟಾರ್ ಸೈಕಲ್ ಸಹ ಜಖಂಗೊಂಡು ಅಲ್ಲೆ ಬಿದ್ದಿರುತ್ತೆ. ಗಾಯಾಳುಗಳನ್ನು 108 ವಾಹನದಲ್ಲಿ ಟಿ.ನರಸೀಪುರ ಸಕರ್ಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಿಕೊಟ್ಟಿರುತ್ತಾರೆ. ಅಪಘಾತದಿಂದ ವಾಹನದ ಸವಾರನಿಗು ಸಹ ಸಣ್ಣಪುಟ್ಟ ಗಾಯವಾಗಿದ್ದು ಅವರ ಕಡೆಯವರು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಗಾಯಾಳು ದಿವಾಕರ.ಎಸ್.ಬಿನ್ ಸುರೇಶರವರು ಮೈಸೂರು ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಕಾನೂನು ಕ್ರಮ ಜರುಗಿಸಿ ಎಚಿದು ನೀಡಿದ ದೂರಿನ ಮೇರೆಗೆ.

04. ಗುಂಡ್ಲುಪೇಟೆ ಠಾಣೆ: (ಮೊ,ನಂ 31/2020) ಪಿರ್ಯಾದಿ ನಾಗೇಂದ್ರ ಗುಂಡ್ಲುಪೇಟೆ ಪಟ್ಟಣರವರು ನೀಡಿದ ದೂರಿನಲ್ಲಿ ದಿನಾಂಕ: 01.02.2020 ರಂದು ತಮ್ಮ ಸಂಸಾರ ತಮ್ಮ ಸ್ವಂತ ಊರು ಹೊನ್ನಶೆಟ್ಟರ ಹುಂಡಿಗೆ ಹೋಗಿ ಈ ದಿನ ದಿನಾಂಕ: 02.02.2020 ರಂದು ಬೆಳಿಗ್ಗೆ 11.30 ಗಂಟೆಗೆ ಬಂದು ನೋಡಿದಾಗ ಮನೆಯ ಬಾಗಿಲನ್ನು ಮೀಟಿ ಮನೆ ಬೀರುವಿನ ಲಾಕರ್ ನಲ್ಲಿದ್ದ 1) 3 ಗ್ರಾಂ ಚಿನ್ನದ ಉಂಗುರ2) 4 ಗ್ರಾಂ ಚಿನ್ನದ ಉಂಗುರ3) ನಗದು ಹಣವನ್ನು ಯಾರೋ ಕಳ್ಳರು ರಾತ್ರಿ ವೇಳೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳ್ಳತನ ಮಾಡಿಕೊಂಡು ಹೋಗಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಿನ ಮೇರೆಗೆ.

05. ಗುಂಡ್ಲುಪೇಟೆ ಠಾಣೆ: (ಮೊ,ನಂ 32/2020) ಪಿರ್ಯಾದಿ ಮಂಗಳಗೌರಿ ಗುಂಡ್ಲುಪೇಟೆ ಪಟ್ಟಣರವರು ನೀಡಿದ ದೂರಿನಲ್ಲಿ ಅವರು ದಿನಾಂಕ: 01.02.2020 ರಂದು ತಮ್ಮ ಸಂಸಾರ ಸಮೇತ ತಮ್ಮ ಸ್ವಂತ ಊರು ಬೋಗಯ್ಯನಹುಂಡಿ ಗ್ರಾಮಕ್ಕೆ ಹೋಗಿ ಈ ದಿನ ದಿನಾಂಕ: 02.02.2020 ರಂದು ಬೆಳಿಗ್ಗೆ 10.00 ಗಂಟೆಗೆ ಬಂದು ನೋಡಿದಾಗ ಮನೆಯ ಬಾಗಿಲನ್ನು ಮೀಟಿ ಮನೆ ಬೀರುವಿನ ಲಾಕರ್ ನಲ್ಲಿದ್ದ 1) 10 ಗ್ರಾಂ ಚಿನ್ನದ ಮುತ್ತಿನ ಜುಮುಕಿ, 2) 10 ಗ್ರಾಂ ಚಿನ್ನದ ಜುಮುಕಿ, 3) 2 1/2 ಗ್ರಾಂ ಉಂಗುರ, 4) 3 1/2 ಗ್ರಾಂ ಚಿನ್ನದ ಗುಂಡು, 5) 2 1/2 ಡಿಂಗ್ ಡಾಂಗ್, 6) 3 ಗ್ರಾಂ ಉಂಗುರ, 7) 5 ಗ್ರಾಂ ನ ಮೋಹನ ಮಾಲೆ 8) 1 1/2 ಪ್ಯಾನ್ಸಿ ಓಲೆ, 9) 400 ಗ್ರಾಂ ಬೆಳ್ಳಿಯ ಪದಾರ್ಥಗಳನ್ನು ಯಾರೋ ಕಳ್ಳರು ರಾತ್ರಿ ವೇಳೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳ್ಳತನ ಮಾಡಿಕೊಂಡು ಹೋಗಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಿನ ಮೇರೆಗೆ

06. ಕೊಳ್ಳೇಗಾಲ ಗ್ರಾಮಾಂತರ ಠಾಣೆ: (ಮೊ,ನಂ 33/2020) ಪಿರ್ಯಾದಿ ಗಾಯಾಳು ಭರತ್ ಯಾದವಗಿರಿ ಮೈಸೂರುರವರು ನೀಡಿದ ಹೇಳಿಕೆ ಏನೆಂದರೆ ದಿಃ ದಿಃ 01-02-2020 ರಂದು ಸಂಜೆ 07-00 ಗಂಟೆ ಸಮಯದಲ್ಲಿ ಸ್ನೇಹಿತ ಜೊತೆ ಮೈಸೂರು ಬಿಟ್ಟು ಮಲೈ ಮಹದೇಶ್ವರ ಬೆಟ್ಟ ಕ್ಕೆ ಹೋಗುವುದ್ದಕ್ಕೆ ಟಿ ಎನ್ ಪುರ ಮಾರ್ಗ ಕೊಳ್ಳೇಗಾಲಕ್ಕೆ ಬಂದು ಅಲ್ಲಿಂದ ಮಮ ಬೆಟ್ಟಕ್ಕೆ ಹೋಗುವ ಮಧ್ಯೆ ಮಧುವನಹಳ್ಳಿ ಗ್ರಾಮದ ಅರಳಿಮರದ ಕ್ರಾಸ್ ನಲ್ಲಿ ಕೆ ಚಂದ್ರಶೇಕರ್ ಬಿನ್ ಕೃಷ್ಣ ಈತನು ತನ್ನ ಬೈಕ್ ನಂ ಕೆ ಎ 09 ಹೆಚ್ಎಲ್ 3966 ಬಬಾಜ್ ಸಿಟಿ 100 ನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ಕ್ರಾಸ್ ಮಾಡುವಾಗ ಬಿದ್ದುಕೊಂಡೆವು.ನಾನು ಹಿಂಬದಿಯಲ್ಲಿ ಕುಳಿತದ್ದರಿಂದ ನನ್ನ ತಲೆ ಮಧ್ಯೆ ಭಾಗಕ್ಕೆ ಏಟಾಗಿ ರಕ್ತಗಾಯವಾಯಿತು ಕೆ ಚಂದ್ರಶೇಖರ್ನಿಗೂ ತಲೆಗೆ ಮತ್ತು ಕಾಲಿಗೆ ಏಟಾಗಿ ರಕ್ತಗಾಯವಾಯಿತ್ತು ಅಫಘಾತವಾದಾಗ ರಾತ್ರಿ 10-50 ಗಂಟೆ ಸಮಯವಾಗಿತ್ತು ನಂತರ ರಾಷ್ರೀಯ ಹೆದ್ದಾರಿ ಪೊಲೀಸ್ ವಾಹನದಲ್ಲಿ ಬಂದು ನಮ್ಮಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರಗೆ ಸೇರಿಸಿದರು ಈ ಅಪಘಾತಕ್ಕೆ ಕಾರಣನಾದ ಕೆ ಚಂದ್ರಶೇಖರ್ ಬಿನ್ ಕೃಷ್ಣರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ಮೇರೆಗೆ ಈ ಪ್ರ ವ ವರದಿ.

07. ಮ.ಮ.ಬೆಟ್ಟ ಠಾಣೆ: (ಯು.ಡಿ.ಆರ್ 01/2020) ದಿನಾಂಕ 02.02.2020 ರಂದು ಸಂಜೆ 18:00 ಗಂಟೆ ಸಮಯದಲ್ಲಿ ಮ.ಮ.ಬೆಟ್ಟದ ದೇವಸ್ಥಾನದ ಪ್ರಾಧಿಕಾರದ ನೌಕರರಾದ ರವೀಂದ್ರ ಎಸ್ ಮನ್ವಾಚಾರ್, ಸಹಾಯಕ ಅಭಿಯಂತರರು, ಶ್ರೀ ಮಲೈಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃಧ್ಧಿ ಪ್ರಾಧಿಕಾರ, ಮಹದೇಶ್ವರ ಬೆಟ್ಟ, ಹನೂರುತಾಲ್ಲೂಕು (ಕಾರ್ಯದಶರ್ಿಗಳ ಪರವಾಗಿ)ರವರು ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶವೇನೆಂದರೆ ಮ.ಮ.ಬೆಟ್ಟ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಪರು ಮಾಡುವ ಜಾಗದಲ್ಲಿ ಸುಮಾರು 50ವರ್ಷದ ಒಬ್ಬಳು ಅಪರಿಚಿತ ಹೆಂಗಸು ಮೃತಪಟ್ಟಿರುವುದಾಗಿ ಶ್ರೀ ಜಿ..ರಾಜರವರು ಕಛೇರಿಗೆ ಲಿಖಿತದ ಮೂಲಕ ತಿಳಿಸಿದ ಮೇರೆಗೆ ಸದರಿ ಸ್ಥಳಕ್ಕೆ ಹೋಗಿ ನೋಡಿದಾಗ ಒಬ್ಬ ಹೆಂಗಸು ತೀರಿಕೊಂಡಿರುವುದು ದೃಢಪಟ್ಟಿರುತ್ತದೆ. ಸದರಿ ದೂರಿನ ಅಸಲು ಪ್ರತಿಯನ್ನು ಮುಂದಿನ ಕ್ರಮಕ್ಕಾಗಿ ಈ ಪತ್ರದ ಜೊತೆಯಲ್ಲಿ ಲಗತ್ತಿಸಿ ಕಳುಹಿಸಿಕೊಡಲಾಗಿದೆ. ಎಂದು ನೀಡಿದ ದೂರನ್ನು ಠಾಣೆಯಲ್ಲಿ ಸ್ವೀಕರಿಸಿ ಠಾಣಾ ಯುಡಿಆರ್ ನಂ 01/2020 ಕಲಂ 174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿದೆ.


Your Comment

Name :
Email:
Comment:
Submit

Website Designed and Developed by Global Buzz®