• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report Date: 01-02-2020

No of views : 12       No of Comments : 0

1. ಚಾಮರಾಜನಗರ ಪಟ್ಟಣ ಠಾಣೆ: (ಯುಡಿಆರ್ನಂ 01/2020) ಪಿರ್ಯಾದಿ ರಾಜೇಶ್ವರಿ ಚಾಮರಾಜನಗರ ಟೌನ್ರವರು ನೀಡಿದ ದೂರಿನಲ್ಲಿ ಅವರ ಗಂಡ ಮುರುಗೇಶ ಮದ್ಯಪಾನ ಮಾಡಿ ಹೊಟ್ಟೆ ನೋವಿನ ಬಾಧೆಯನ್ನು ತಾಳಲಾರದೆ ದಿನಾಂಕ. 01.02.2020 ರಂದು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ಮನೆಯೊಳಗೆ ಮನೆಯ ಮೇಲ್ಛಾವಣಿಯ ಕಬ್ಬಿಣದ ಪೈಪ್ಗೆ ಸೀರೆಯಿಂದ ನೇಣು ಹಾಕಿಕೊಂಡಿದ್ದು, ತಕ್ಷಣವೆ ನಾನು ಕೂಗಿಕೊಂಡಾಗ ಅಕ್ಕ-ಪಕ್ಕದವರಾದ ಗಣೇಶ, ಮುರುಗೇಶ, ನಾಗೇಂದ್ರ ಹಾಗೂ ಇತರರು ಓಡಿಬಂದು ಚಾಕುವಿನಿಂದ ಸೀರೆಯನ್ನು ಕೂಯ್ದು ಕೆಳಗಡೆ ಇಳಿಸಿ ಒಂದು ಆಟೋದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದೆವು. ಅಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುತ್ತಾರೆಂತ ತಿಳಿಸಿರುತ್ತಾರೆ. ನನ್ನ ಗಂಡ ಮುರುಗೇಶನಿಗೆ 42 ವರ್ಷವಾಗಿರುತ್ತೆ. ನನ್ನ ಗಂಡನ ಸಾವಿನ ಬಗ್ಗೆ ಯಾವುದೆ ಅನುಮಾನ ಇರುವುದಿಲ್ಲ ಅದರೂ ಕೂಡ ನನ್ನ ಗಂಡನ ಸಾವಿನ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಕೋರಿ ಕೊಳ್ಳುತ್ತೇನೆ.

02. ಚಾಮರಾಜನಗರ ಪೂರ್ವ ಠಾಣೆ: (ಮೊ,ನಂ /2020) ಪಿಎಸ್ಐರವರು ಅಮ್ಮನಪುರ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ಹೊಂಗನೂರು ಗ್ರಾಮದ 5 ನೇ ವಾಡರ್ಿನಲ್ಲಿ ಅಂಗಡಿ ಮಹೇಶ್ ಎಂಬುವರು ತಮ್ಮ ಅಂಗಡಿಯ ಮುಂಭಾಗ ಅಕ್ರಮವಾಗಿ ಮದ್ಯದ ಪ್ಯಾಕ್ ಗಳನ್ನು ಸಂಗ್ರಹಿಸಿಕೊಂಡು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂದು ಭಾತ್ಮೀದಾರರಿಂದ ಖಚಿತ ಮಾಹಿತಿ ದೊರೆತ ಮೇರೆಗೆ ಪಂಚರು ಹಾಗೂ ಸಿಬ್ಬಂದಿಗಳ ಸಮೇತ ದಾಳಿ ಮಾಡಿ ವರದಿಯನ್ಮ್ನ ನೀಡಿದ ಮೇರೆಗೆ ಈ ಪ್ರವ ವರದಿ.

03.ಗುಂಡ್ಲುಪೇಟೆ ಠಾಣೆ: (ಮೊ,ನಂ 30/2020) ದಿನಾಂಕ; 30.01.2020 ರಂದು ಸಂಜೆ 8.20 ಗಂಟೆ ಸಮಯದಲ್ಲಿ ಪಿರ್ಯಾದಿ ಮನೋಜ ಹಂಗಳ ಹೊಸಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ಅವರ ತಂದೆ ಶಿವಣ್ಣ ರವರು ಗುಂಡ್ಲುಪೇಟೆ ಪಟ್ಟಣದ ನಾಗರತ್ನಮ್ಮ ಸ್ಕೂಲ್ ಮುಂಬಾಗದ ಚಾ.ನಗರ ರಸ್ತೆಯಲ್ಲಿ ರಸ್ತೆಯ ಎಡಭಾಗದಲ್ಲಿ ಕೋಡಹಳ್ಳಿ ಸರ್ಕಲ್ ಕಡೆಯಿಂದ ಊಟಿ ಸರ್ಕಲ್ ಕಡೆಗೆ ಬರುತ್ತಿದ್ದಾಗ ಹಿಂದಿನಿಂದ ಬಂದ ಕೆ.ಎ. 10 ಎಫ್. 0070 ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶಿವಣ್ಣ ರವರಿಗೆ ಡಿಕ್ಕಿ ಮಾಡಿದು ಎಡಗಾಲಿನ ಹತ್ತಿರ ಏಟಾಗಿರುತ್ತದೆಂದು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

04. ಬೇಗೂರು ಠಾಣೆ: (ಮೊ,ನಂ 17/2020) ಪಿರ್ಯಾದಿ ಕೀತರ್ಿಕುಮಾರ್ ಬೆಟ್ಟದಮಾದಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ತಾನು ಮನೆಯಲ್ಲಿದ್ದಾಗ ಗರಗನಹಳ್ಳಿ ಗ್ರಾಮದ ಸಿದ್ದರಾಜು ಎಂಬುವವರು ತನಗೆ ಪೋನ್ ಮಾಡಿ ಈ ದಿನ ದಿ 30-01-2020ರಂದು ಬೆಳಿಗ್ಗೆ 08.30 ಗಂಟೆ ಸಮಯದಲ್ಲಿ ನಿಮ್ಮ ತಂದೆ ಬಸವಣ್ಣರವರು ಹಿಂದೂಸ್ಥಾನ್ ಕ್ರಸರ್ ನಲ್ಲಿ ಲಾರಿಯನ್ನು ನಿಲ್ಲಿಸಿ ಆಫೀಸ್ ರೂಂ ಕಡೆಗೆ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆಎ-10-4014 ರ ಟಿಪ್ಪರ್ ಚಾಲಕ ಸದರಿ ವಾಹನವನ್ನು ಬಹಳ ಜೋರಾಗಿ ಓಡಿಸಿಕೊಂಡು ಬಂದು ನಿಮ್ಮ ತಂದೆಯವರಿಗೆ ಡಿಕ್ಕಿ ಹೊಡೆಸಿ ಪರಿಣಾಮ ನಿಮ್ಮ ತಂದೆ ಕೆಳಗೆ ಬಿದ್ದುಕೊಂಡರು ಆವಾಗ ನಾನು ಮತ್ತು ಹಸಗೂಲಿ ಗ್ರಾಮದ ಕುಮಾರ್ ಇಬ್ಬರು ಹೋಗಿ ನಿಮ್ಮ ತಂದೆಯನ್ನು ಸುಧಾರಿಸಿದ್ದು ನಿಮ್ಮ ತಂದೆಯವರಿಗೆ ಬೆನ್ನಿಗೆ ಏಟಾಗಿರುತ್ತದೆಂದು ಅವರನ್ನು ನಾವುಗಳು ಗುಂಡ್ಲುಪೇಟೆ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದು ತಾನು ಅಲ್ಲಿಗೆ ಹೋಗಿ ನಮ್ಮ ತಂದೆಯನ್ನು ಮೈಸೂರಿನ ವಿದ್ಯಾರಣ್ಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತೇನೆ. ಆದ್ದರಿಂದ ನನ್ನ ತಂದೆ ಬಸವಣ್ಣನವರಿಗೆ ಡಿಕ್ಕಿ ಹೊಡೆಸಿದ ಟಿಪ್ಪರ್ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

05. ಮ.ಮ.ಬೆಟ್ಟ ಠಾಣೆ: (ಮೊ,ನಂ 05/2020) ಪಿಯರ್ಾದಿ ನಾಗರಾಜು ಕಿರಿಯ ಅಭಿಯಂತರರು ಚೆಸ್ಕಾಂರವರು ನೀಡಿದ ದೂರಿನಲ್ಲಿ ದಾರರು ಮ.ಮ.ಬೆಟ್ಟ-ಪಾಲಾರ್ ಮಾರ್ಗಮಧ್ಯದ ಮಲೈ ಮಹದೇಶ್ವರ ಬೆಟ್ಟದಿಂದ ಪಾಲಾರ್ ಪಂಪ್ಹೌಸ್ಗೆ ಹಾದುಹೋಗಿರುವ 11 ಕೆ.ವಿ.ಎ ಮಾರ್ಗದ ಕೇಬಲ್ ಲೈನ್ ಜೋಡಣೆ ಮಾಡಿರುವ ಸಿಮೆಂಟ್ ಕಂಬಕ್ಕೆ ವಾಹನ ಸಂಖ್ಯೆ ಕೆ.ಎ-09-ಎಂ.ಎ-6394 ರ ಚಾಲಕ ತನ್ನ ಬಾಬ್ತು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ನಮ್ಮ ಕಂಪನಿಯ ಬಾಬ್ತು ವಿದ್ಯುತ್ ಕಂಬಕ್ಕೆ ಗುದ್ದಿಸಿ ಅಪಘಾತವನ್ನುಂಟುಮಾಡಿರುತ್ತಾನೆ. ಇದರಿಂದ ಒಂದು ವಿದ್ಯುತ್ ಕಂಬ ಮುರಿದು ಜಖಂಗೊಂಡಿರುತ್ತದೆ. ಈ ಅಪಘಾತದಿಂದ ನಮ್ಮ ನಿಗಮಕ್ಕೆ ಸುಮಾರು 11,000/- ರೂಗಳ ಆಥರ್ಿಕ ನಷ್ಟ ಉಂಟಾಗಿರುತ್ತದೆ. ಈ ಅಪಘಾತದಿಂದ ಕಾರಿನ ಒಳಗಡೆ ಇದ್ದವರಿಗೂ ಗಾಯಗಳಾಗಿರುವ ಸಂಭವವಿರುತ್ತದೆ. ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ.


Your Comment

Name :
Email:
Comment:
Submit

Website Designed and Developed by Global Buzz®