• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report Date: 31-01-2020

No of views : 17       No of Comments : 0

1. ಚಾಮರಾಜನಗರ ಗ್ರಾಮಾಂತರ ಠಾಣೆ: (ಮೊ,ನಂ 243/2019)ಪಿರ್ಯಾದಿ ಮಾದಪ್ಪ ಕೊತ್ತಲವಾಡಿ ಗ್ರಾಮರವರು ನೀಡಿದ ದೂರಿನಲ್ಲಿ ಅವರ ಜಮೀನಿನ ಮೇಲೆ ಟ್ರಾಕ್ಟರ್ ಅನ್ನು ನಮ್ಮ ಜಮೀನಿನ ಮೇಲೆ ಹೊಡೆಯಬೇಡಿ ಎಂದು ತಡೆದಿದ್ದು, ಈ ವಿಚಾರವಾಗಿ ಪಿರ್ಯಾದಿ ತಂದೆಗೂ ಸೋಮೇಶ್ವರಪ್ಪರವರಿಗೂ ಮಾತಿಗೆ ಮಾತಾಗಿ ಗಲಾಟೆಯಾಗಿ ಸೋಮೇಶ್ವರಪ್ಪ ಕಲ್ಲನ್ನು ತೆಗೆದುಕೊಂಡು ಬೋಳಿಮಗನೇ, ಸೂಳೇಮಗನೇ ನೀನು ಬದುಕಿದ್ದರೆ ತಾನೆ ಈ ರೀತಿ ತೊಂದರೆ ಕೊಡುತ್ತೀಯಾ ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಹೇಳುತ್ತಾ ಕಲ್ಲಿನಿಂದ ಪಿರ್ಯಾದಿ ತಂದೆಯ ತಲೆಗೆ ಹೊಡೆದು ಕೆಳಕ್ಕೆ ಕೆಡವಿಕೊಂಡು ಕಾಲಿನಿಂದ ಎದೆಗೆ ಒದೆಯುತ್ತಿದ್ದನು, ಅಷ್ಟಕ್ಕೆ ಪಿರ್ಯಾದಿ ಹೋಗುತ್ತಿದ್ದಂತೆ ಅಲ್ಲಿಂದ ಅವನು ಓಡಿಹೋದನು, ಅವರು ಹತ್ತಿರಕ್ಕೆ ಹೋಗಿ ನಮ್ಮ ತಂದೆಯನ್ನು ನೋಡಲಾಗಿ ರಕ್ತಗಾಯವಾಗಿ ಜ್ಞಾನತಪ್ಪಿಹೋಗಿದ್ದರು, ನಾನು ಪಕ್ಕದ ತೋಟಕ್ಕೆ ಓಡಿಹೋಗಿ ನೀರು ತಂದು ಕುಡಿಸಿದಾಗ ಸತ್ತುಹೋದರು. ಉಳುಮೆ ಮಾಡಿದ್ದ ನಮ್ಮ ಜಮೀನಿನ ಮೆಲೆ ಟ್ರಾಕ್ಟರ್ ಅನ್ನು ಓಡಿಸಬೇಡ ಎಂದು ಸೋಮೇಶ್ವರಪಪ್ನಿಗೆ ಹೇಳಿದ ವಿಚಾರಕ್ಕೆ ಸೋಮೇಶ್ವರಪ್ಪ ನಮ್ಮ ತಂದೆ ಮೇಲೆ ಜಗಳ ತೆಗೆದು ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಕಲ್ಲುಗಳಿಂದ ನಮ್ಮ ತಂದೆಯ ತಲೆಗೆ ಹೊಡೆದು ರಕ್ತಗಾಯಪಡಿಸಿ ಕಾಲಿನಿಂದ ಎದೆಗೆ ಒದ್ದು ಕೊಲೆ ಮಾಡಿರುತ್ತಾರೆ, ಇವರ ಮೇಲೆ ಕ್ರಮ ಜರುಗಿಸಲು ಮನವಿ ಎಂದು ಇದ್ದ ದೂರಿನ ಮೇರೆಗೆ ಈ ಪ್ರ.ವ. ವರದಿ.

2. ಚಾಮರಾಜನಗರ ಪೂರ್ವ ಠಾಣೆ: (ಮೊ,ನಂ322/2019) ಪಿರ್ಯಾದಿ ರವಿಕುಮಾರ ದೊಡ್ಡ ಗಾಜನೂರು ಗ್ರಾಮರವರು ನೀಡಿದ ದೂರಿನಲ್ಲಿ ಅವರು ್ಲ ಕನರ್ಾಟಕ ರಾಜ್ಯದ ಗಡಿ ಭಾಗದಲ್ಲಿರುವ ಚಿಕ್ಕಹೊಳೆ ಜಲಾಶಯ ನೋಡಲು ಅವರ ಬಾಬ್ತು ಟಿ.ಎನ್-36-ಟಿ-9074 ಆಖಅಔಗಿಇಖ ಮೋಟಾರ್ ಬೈಕ್ನಲ್ಲಿ ಬಂದು, ಮೋಟಾರ್ ಬೈಕ್ಅನ್ನು ತಾಳವಾಡಿ-ಚಿಕ್ಕಹೊಳೆ ರಸ್ತೆಯಲ್ಲಿರುವ ಚಿಕ್ಕಹೊಳೆ ಜಲಾಶಯದ ಗೇಟ್ ಬಳಿ ನಿಲ್ಲಿಸಿ ಮೋಟಾರ್ ಬೈಕ್ ಹ್ಯಾಂಡಲ್ ಲಾಕ್ ಮಾಡಿ, ಜಲಾಶಯದ ಒಳಗೆ ಹೋಗಿ ವೀಕ್ಷಣೆ ಮಾಡಿಕೊಂಡು ನಂತರ ವಾಪಸ್ ಊರಿಗೆ ಹೋಗಲು ಮಧ್ಯಾಹ್ನ 2:15 ಗಂಟೆ ಸಮಯದಲ್ಲಿ ಜಲಾಶಯದ ಗೇಟ್ ಬಳಿ ನಿಲ್ಲಿಸಿದ್ದ ಮೋಟಾರ್ ಬೈಕ್ಅನ್ನು ನೋಡಲಾಗಿ ಮೋಟಾರ್ ಬೈಕ್ ಇರಲಿಲ್ಲ. ಅಕ್ಕಪಕ್ಕ ನೋಡಲಾಗಿ ಎಲ್ಲಿಯೂ ಬೈಕ್ ಕಂಡುಬಂದಿರುವುದಿಲ್ಲ. ನಾನು ಅಜರ್ೆಂಟಾಗಿ ನಮ್ಮ ಊರಿಗೆ ಹೋಗಬೇಕಾದ್ದರಿಂದ ಬಸ್ಸಿನಲ್ಲಿ ನಮ್ಮ ಊರಿಗೆ ಹೋದೆನು. ನಂತರ
ಠಾಣೆಯ ಪೊಲೀಸ್ರನ್ನು ವಿಚಾರಿಸಲಾಗಿ ಈ ಬೈಕ್ಅನ್ನು ಆರೋಪಿಗಳಾದ 1. ಎಸ್.ಸತ್ಯರಾಜ್ @ ಸತ್ಯ ಬಿನ್ ಲೇಟ್ ಶ್ರೀನಿವಾಸ್, 23 ವರ್ಷ, ನಾಯಕ ಜನಾಂಗ, ಆಟೋ ಡ್ರೈವರ್, #32 ಬಿದರಹಳ್ಳಿ, ಮಣಿ ಲೇಔಟ್, 4ನೇ ಕ್ರಾಸ್, ಬೆಂಗಳೂರು. 2. ಕುಮಾರ @ ಸೈಮಂಡ್ಸ್, @ ಕೆವಡ ಬಿನ್ ಲೇಟ್ ಬಿಳಿಗಿರಿ ರಂಗನಾಯಕ, 28 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ಹರದನಹಳ್ಳಿ ಗ್ರಾಮ ಚಾಮರಾಜನಗರ ತಾಲ್ಲೂಕು. ರವರಿಂದ ವಶಪಡಿಸಿಕೊಂಡಿರುತ್ತೆ.ಈ ಬಗ್ಗೆ ಕಾನೂನು ಕ್ರಮ ಕೈಗೊಂಡು ನನ್ನ ಬೈಕ್ಅನ್ನು ಕೊಡಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ.

3. ಚಾಮರಾಜನಗರ ಸಂಚಾರ ಠಾಣೆ: (ಮೊ,ನಂ 89/2019) ಫಿರ್ಯಾದಿ ಮಂಜುನಾತ್ ಉಪ್ಪಾರ ಬೀದಿ ಚಾಮರಾಜನಗರ ಟೌನ್ರವರು ನೀಡಿದ ದೂರಿನಲ್ಲಿ ಅವರ ತಂದೆಯು ಪಿರ್ಯಾದಿಯವರ 3 ವರ್ಷದ ಮಗಳಾದ ಕೀರ್ತನಾಳನ್ನು ಅವರಿಗೆ ಸೇರಿದ ಕೆಎ-10 ಜೆ-3817 ರ ಮೋಟಾರ್ ಸೈಕಲ್ ನಲ್ಲಿ ಟೌನಿಗೆ ಹೋಗಿ ವಾಪಸ್ ಸಂತೇಮರಳ್ಳಿ ರಸ್ತೆ ಕಡೆ ಬಂದು ನಮ್ಮ ಮನೆಗೆ ಬರಲು ಮಂಟೇಸ್ವಾಮಿ ದೇವಸ್ಥನದ ಬಳಿ ಚಾಮರಾಜನಗರ ಸಂತೇಮರಳ್ಳಿ ಮುಖ್ಯ ರಸ್ತೆಯಲ್ಲಿ ಕ್ರಾಸ್ ಮಾಡಿ ಬರುವಾಗ ಸಂತೇಮರಳ್ಳಿ ಕಡೆಯಿಂದ ಕೆಎ-10 ವಿ-1786 ನಂಬರಿನ ಬುಲೇಟ್ ಮೋಟಾರ್ ಸೈಕಲ್ ಅನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಕ್ರಾಸ್ ಮಾಡುತ್ತಿದ್ದ ಪಿರ್ಯಾದಿಯವರ ತಂದೆಯ ಮೋಟಾರ್ ಸೈಕಲ್ ಗೆ ಅಪಘಾತ ಮಾಡಿದ ಪರಿಣಾಮ ಫಿರ್ಯಾದಿಯವರ ತಂದೆಗೆ ಎರಡು ಕಾಲಿನ ಮಂಡಿಗೆ,ಎಡಕೈನ ಹೆಬ್ಬರಳಿಗೆ,ತಲೆಯ ಬಲಭಾಗ ಹಾಗೂ ಬಲಕಾಲಿನ ಬೆರಳಿಗೆ ಏಟಾಯುತು.ಫಿರ್ಯಾದಿಯವರ ಮಗಳಾದ ಕಿರ್ತನಾಳಿಗೆ ಬಲಕಾಲಿಗೆ ಮತ್ತು ಹಣೆಯ ಬಲಭಾಗಕೆಕ ಎಟಾಗಿತ್ತು.ಬುಲೇಟ್ ಮೋಟಾರ್ ಸೈಕಲ್ ಸವಾರನ ಹಿಂಬದಿ ಕುಳಿತಿದ್ದ ಮಂಜೇಗೌಡ ಎಂಬುವವರಿಗೂ ಸಹ ಏಟಾಗಿದ್ದು ಅಪಘಾತ ಮಾಡಿದ ಬುಲೇಟ್ ಮೋಟಾರ್ ಸೈಕಲ್ ಸವಾರ ಜಮೀಲ್ ಫಾಷ ಎಂಬುವವರಾಗಿದ್ದು ಫಿರ್ಯಾದಿ ತಂದೆ ಮತ್ತು ಮಗಳನ್ನು ಒಂದು ಆಟೋದಲ್ಲಿ ಚಾಮರಾಜನಗರ ಜಿಲ್ಲಾಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು ಬುಲೇಟ್ ಮೋಟಾರ್ ಸೈಕಲ್ನವರೂ ಸಹ ಆಸ್ಪತ್ರೆಗೆ ಬಂದಿದ್ದು ರಾಜಿ ಮಾಡಿಕೊಳ್ಳೋಣವೆಂದು ತಿಳಿಸಿದ್ದು ನಂತರ ಮತ್ತೇ ಪುನಃ ಅವರು ಬರಲಿಲ್ಲ.ಆದ್ದರಿಂದ ಈ ದಿನ ತಡವಾಗಿ ಈ ಅಪಘಾತ ಸಂಬಂಧ ದೂರು ನೀಡುತ್ತಿದೇನೆ.ಆದ್ದರಿಂದ ಅಪಘಾತ ಮಾಡಿದ ಬುಲೇಟ್ ಮೋಟಾರ್ ಸೈಕಲ್ ನಂಬರ್ ಕೆಎ-10 ವಿ-1786 ರ ಸವಾರ ಜಮೀಲ್ ಪಾಷಾ ವಿರುದ್ದ ಕಾನೂನು ಕ್ರಮ ಜರಿಗಿಸಬೇಕೆಂದು ಫಿರ್ಯಾದಿಯವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಈ ಪ್ರ.ವ.ವರದಿ.

4.ಗುಂಡ್ಲುಪೇಟೆ ಠಾಣೆ: (ಮೊ,ನಂ 468/2019) ಪಿರ್ಯಾದಿ ಅನಿಲ್ಕುಮಾರ್ ಹಂಗಳ ಗ್ರಾಮರವರು ನೀಡಿದ ದೂರಿನಲ್ಲಿ ಅವರು ದಿನಾಂಕ; 31.12.2019 ರಂದು ಬೆಳಗ್ಗೆ 9.30 ಗಂಟೆ ಸಮಯದಲ್ಲಿ ಪಿರ್ಯಾದುದಾರರು ಭೀಮನಬೀಡು ಗ್ರಾಮಕ್ಕೆ ಸಂಘದ ಹಣ ಕಟ್ಟಲು ಹೋಗಿದ್ದಾಗ ಆರೋಪಿತರಾದ ನಂಜಾಚಾರಿ, ನಾಗಮ್ಮರವರು ಹಳೇ ದ್ವೇಷದಿಂದ ಗಲಾಟೆ ಮಾಡಿ ಕಲ್ಲು ಮತ್ತು ಮಚ್ಚಿನಿಂದ ಹೊಡೆದಿರುತ್ತಾರೆಂದು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

5. ಗುಂಡ್ಲುಪೇಟೆ ಠಾಣೆ: (ಮೊ,ನಂ 468/2019) ದಿನಾಂಕ; 30.12.2019 ರಂದು ಮಧ್ಯಾಹ್ನ 15.30 ಗಂಟೆ ಸಮಯದಲ್ಲಿ ಪಿರ್ಯಾದಿ ಶವರಾಜಶೆಟ್ಟಿ ಕೂತನೂರು ಗ್ರಾಮರವರು ನೀಡಿದ ದೂರಿನಲ್ಲಿ ಅವರ ತಾಯಿ ಶಿವಮ್ಮರವರು ಗುಂಡ್ಲುಪೇಟೆ ಪಟ್ಟಣದ ಆರ್.ಟಿ.ಒ. ಚೆಕ್ಪೋಸ್ಟ್ ಹತ್ತಿರ ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕೆ.ಎ. 10 ಇ.ಎ. 1474 ರ ಬೈಕ್ ಚಾಲಕ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಶಿವಮ್ಮರವರಿಗೆ ಏಟಾಗಿರುತ್ತದೆಂದು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

6. ತೆರಕಣಾಂಬಿ ಠಾಣೆ: (ಮೊ,ನಂ 158/2019) ಫಿಯರ್ಾದಿ ಸೋಮೇಶ ಕರಕಲಮಾದಳ್ಳಿ ಗ್ರಾಮರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:-30-12-2019 ರಂದು ಸುಮಾರು 5-00 ಗಂಟೆ ಸಮಯದಲ್ಲಿ ನಾನು ವಡ್ಡಗೆರೆಯಲ್ಲಿರುವ ಪಿಎಸಿಸಿ ಸೊಸೈಟಿಗೆ ಹೋಗಿ ವಾಪಸ್ ಬರುವಾಗ ವಡ್ಡಗೆರೆ ವಾಸಿಯಾದ ಮಹದೇವಪ್ಪ ಎಂಬುವವರ ಜಮೀನಿನ ಬಳಿ ಬರುತ್ತಿದ್ದಾಗ ನನ್ನ ವಾಹನ ಮುಂದೆ ನನ್ನ ಚಿಕ್ಕಪ್ಪನ ಮಗನಾದ ಸುಮಾರು 41 ವರ್ಷ ವಯಸ್ಸಿನ ನವೀನ್ ಕುಮಾರ್ ಎಂಬುವವರು ಅವರ ವಾಹನದಲ್ಲಿ ಕೆಎ-10 ಹೆಚ್-8184ರಲ್ಲಿ ಬೈಕಿನಲ್ಲಿ ವಡ್ಡಗೆರೆ ಕಡೆಯಿಂದ ನಮ್ಮೂರಿನ ಕಡೆಗೆ ಬರುವಾಗ ರಸ್ತೆಯ ಎಡಭಾಗದಲ್ಲಿ ಬರುತ್ತಿದ್ದಾಗ ವಡ್ಡಗೆರೆ ಕಡೆಯಿಂದ ಬಂದ ಕೆಎ-10 ಎ-2623 ಮಹೀಂದ್ರ ಪಿಕ್ ಅಪ್ ವಾಹನವನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನವೀನ್ ಕುಮಾರ್ ಎಂಬುವವರ ಬೈಕಿಗೆ ಗುದ್ದಿಸಿದನು, ತಕ್ಷಣ ನಾನು ಹೋಗಿ ನೋಡಲಾಗಿ ನವೀನ್ ಕುಮಾರ್ ನ ತಲೆ ಹಿಂಭಾಗ, ಹೊಟ್ಟೆ, ತೊಡೆಗೆ ಬಲವಾದ ಏಟಾಗಿದ್ದು ಅವನನ್ನು ತಕ್ಷಣ ಎತ್ತಿ ಕೂರಿಸಿ ಸಮಾಧಾನ ಪಡಿಸಿದ್ದು,ಬೈಕಿಗೆ ಡಿಕ್ಕಿ ಮಾಡಿದ ವಾಹನ ಸಂಖ್ಯೆ ನೋಡಲಾಗಿ ಕೆಎ-10 ಎ-2623 ಆಗಿತ್ತು ನನ್ನ ತಮ್ಮನನ್ನು ನಾನು ಮತ್ತು ಶಶಿಕುಮಾರ್ ಎಂಬುವವರು ಸೇರಿ ಆಂಬೂಲೆನ್ಸ್ ನಲ್ಲಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿ ಅಲ್ಲಿಂದ ಮೈಸೂರಿನ ಗೋಪಾಲಗೌಡ ಆಸ್ಪತ್ರೆಗೆ ಸೇರಿಸಿದ್ದೆವು, ನಂತರ ರಾತ್ರಿ ಸುಮಾರು 9-30 ಗಂಟೆ ಸಮಯದಲ್ಲಿ ನವೀನ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ, ಆದ್ದರಿಂದ ಈ ಅಪಘಾತಕ್ಕೆ ಕಾರಣವಾಗಿರುವ ಪಿಕಪ್ ಸಂಖ್ಯೆ ಕೆಎ-10 ಎ-2623 ರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ಲಿಖಿತ ದೂರನ್ನು ಸ್ವೀಕರಿಸಿದ ಮೇರೆಗೆ ಈ ಪ್ರ.ವ.ವರದಿ.

7. ಕೊಳ್ಳೇಗಾಲ ಗ್ರಾಮಾಂತರ ಠಾಣೆ:. (ಮೊ,ನಂ 310/2019) ಪಿರ್ಯಾದಿ ಉಮೇಶ ಟಗರಪುರ ಮೋಳೆ ಗ್ರಾಮರವರು ನೀಡಿದ ದೂರಿನಲ್ಲಿ ಅವರು ತಮ್ಮ ಬಾಬ್ತು ಕೆಎ 10 ವೈ 6869 ಹೊಂಡಾ ಶೈನ್ ಮೋಟಾರ್ ಬೈಕ್ನ್ನು ಕುಂತೂರು ಸಕ್ಕರೆ ಪ್ಯಾಕ್ಟರಿ ಬಳಿ ಇರುವ ಬಸವರಾಜು ರವರ ಹೋಟೆಲ್ ಮುಂಬಾಗ ನಿಲ್ಲಿಸಿ ಊಟಕ್ಕೆ ಹೋಗಿದ್ದು ವಾಪಸ್ ಬಂದು ನೋಡಲಾಗಿ ಬೈಕ್ ಕಾಣಲಿಲ್ಲ ಅಕ್ಕ-ಪಕ್ಕ ಹಾಗೂ ಸ್ನೇಹಿತರ ಮನೆಯಲ್ಲೆ ಹುಡುಕಾಡಿ ನೋಡಲಾಗಿ ಎಲ್ಲೂ ಸಹ ಬೈಕ್ ಪತ್ತೆಯಾಗದ ಕಾರಣ ಯಾರೋ ಕಳ್ಳರು ಪಿರ್ಯಾದಿಯವರ ಬೈಕ್ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಈ ದಿನ ತಡವಾಗಿ ಬಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

8. ಕೊಳ್ಳೇಗಾಲ ಗ್ರಾಮಾಂತರ ಠಾಣೆ: (ಮೊ,ನಂ 311/2019) ದಿ:31-12-2019ರಂದು ಗಾಯಾಳು ಗಣೇಶ ಕೊಳ್ಳೇಗಾಲ ಪಟ್ಟಣರವರು ಮೈಸೂರು ಕೆ ಆರ್ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಏನೆಂದರೆ ದಿ:26-12-2019 ರಂದು ಪಿರ್ಯಾದಿಯವರು ತಮ್ಮ ಸಂಬಂಧಿಕರ ಮನೆಗೆ ಹಬ್ಬದ ಪ್ರಯುಕ್ತ ದೊಡ್ಡಿಂದವಾಡಿ ಗ್ರಾಮಕ್ಕೆ ಹೋಗಿದ್ದು ರಾತ್ರಿ ಸುಮಾರು 08:00 ಗಂಟೆ ಸಮಯದಲ್ಲಿ ಬಹಿದರ್ೆಸೆಗೆಂದು ದೊಡ್ಡಿಂದವಾಡಿ ಸರ್ಕಲ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ಅಪರಿಚಿತ ವಾಹನ ಪಿರ್ಯಾದಿಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿಯವರ ಎರಡೂ ಕಾಲುಗಳು ಜಖಂಗೊಂಡಿದ್ದು ಕೊಳ್ಳೇಗಾಲ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಸಂಬಂಧ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ನೀಡಿದ ಹೇಳಿಕೆ ಮೇರೆಗ ಈ ಪ್ರ.ವ.ವರದಿ.

9. ಕೊಳ್ಳೇಗಾಲ ಗ್ರಾಮಾಂತರ ಠಾಣೆ: (ಮೊ,ನಂ 312/2019) ದಿ:31-12-2019ರಂದು ಪಿಎಸ್ಐ ರವರು ನೀಡಿದ ವರದಿ ಏನೆಂದರೆ ದಿನಾಂಕ ಃ31-12-2019 ರಂದು 16-45 ಗಂಟೆ ಸಮಯದಲ್ಲಿ ಸಿಪಿಸಿ 46 ರವರು ನೀಡಿದ ಖಚಿತ ಮಾಹಿತಿ ಮೇರೆಗೆ ಕಾರ್ಯ ಪ್ರವೃತರಾಗಿ ಸಿಬ್ಬಂದಿ ಮತ್ತು ಪಂಚರೊಡನೆ ಉತ್ತಂಬಳ್ಳಿ ಗ್ರಾಮದಲ್ಲಿರುವ ಉಪ್ಪಾರಶೆಟ್ಟಿ ಜನಾಂಗದ 01 ನೇ ಬೀದಿಯ ನಾಗ ಎಂಬುವರ ಚಿಲ್ಲರೆ ಅಂಗಡಿಯ ಮುಂಭಾಗ ಒಬ್ಬ ಆಸಾಮಿ ಅಕ್ರಮವಾಗಿ ಮದ್ಯದ ಪೌಚ್ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತ್ತಿದ್ದವನ ಮೇಲೆ ದಾಳಿ ಮಾಡಿ ಅಮಾನತ್ತು ಮಹಜರ್ ಮುಖೇನ ಮಾಲು ಮತ್ತು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ನೀಡಿದ ಮೇರೆಗೆ ಈ ಪ್ರ.ವ.ವರದಿ.

10. ರಾಮಾಪುರ ಠಾಣೆ: (ಮೊ,ನಂ 131/2019) ಫಿರ್ಯಾದಿ ಆರೋಗ್ಯಸ್ವಾಮಿ ಬಿದರಹಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ಅವರು ದಿನಾಂಕ:- 30/12/2019 ರಂದು ಸಂಜೆ 05.00 ಗಂಟೆ ಸಮಯದಲ್ಲಿ ಪಿರ್ಯಾದಿ ಹಾಗೂ ಅವರ ತಂದೆ ಮನೆಯ ಮುಂದೆ ಕುಳಿತ್ತಿದ್ದಾಗ ಆರೋಪಿಗಳು ಅದೇ ಗ್ರಾಮದ ಅಲೆಕ್ಷಾಂಡರ್, ಅರುಳ್, ಸಿಂಕು, ರೀನಶಾಲಿನಿ, ಜೋಸೆಫ್ಅರುಳ್ರಾಜ್ರವರುಗಳು ಟಿ ಎನ್ 38 ಬಿಬಿ 4331 ಕಾರಿನಲ್ಲಿ ಏಕಾಏಕಿ ಬಂದು ದೊಣ್ಣೆಯಿಂದ ಪಿರ್ಯಾದಿ ಹಾಗೂ ಶೇಷುರಾಜು ರವರಿಗೆ ದೊಣ್ಣೆಯಿಂದ ಹೊಡೆದು ಬೈದು ಕೊಲೆ ಬೆದರಿಕೆ ಹಾಕಿ ಗಲಾಟೆ ಮಾಡಿ ಕೇಳಲು ಬಂದು ಶೇಷುರಾಜು ರವರ ಹೆಂಡತಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

11. ರಾಮಾಪುರ ಠಾಣೆ: (ಮೊ,ನಂ 132/2019) ಫಿರ್ಯಾದಿಯವರು ದಿನಾಂಕ:-30/12/2018 ರಂದು ರಂದು ಸಂಜೆ 05. ಗಂಟೆ ಸಮಯದಲ್ಲಿ ನನ್ನ ಮಗನಾಗ ಮಣಿ ಹಾಗೂ ಮೊಮ್ಮಗಳು ರೀನಾಶಾಲಿನಿ ರವರು ಬಿದರಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ತಮ್ಮ ಅಜ್ಜಿಯನ್ನು ನೋಡಿಕೊಂಡು ಬರಲು ಹೋಗಿದ್ದಾಗ ಆರೋಪಿತರು ಇವರನ್ನು ಮರದ ದೊಣ್ಣೆಯಿಂದ ಹೊಡೆದು, ಅಡ್ಡಗಟ್ಟಿ ನಿವ್ಯಾಕೆ ನಮ್ಮ ಜಮೀನಿಗೆ ಬರುತ್ತಿರೆಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆದು, ಜಾಜರ್್ ರವರ ಮಾತನ್ನು ಕೇಳಿಕೊಂಡು ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.


Your Comment

Name :
Email:
Comment:
Submit

Website Designed and Developed by Global Buzz®