• Hiriya Nagreekara Sahaya Vani: 1090 / 08226 222030
  • Makkala Sahayavani : 1098
  • Emergency : 100 / 08226 222383
  • Fire Station : 101
  • Ambulance Service : 108

Blog

Crime Report Date: 30-01-2020

No of views : 9       No of Comments : 0

1. ಚಾಮರಾಜನಗರ ಪಟ್ಟಣ ಠಾಣೆ: (ಮೊ,ನಂ 09/2020) ಪಿರ್ಯಾದಿ ಪದ್ಮ ಚಾಮರಾಜನಗರ ಪಟ್ಟಣರವರು ನೀಡಿದ ದೂರಿನಲ್ಲಿ ಅವರ ಮಗನಾದ ಸಂತೋಷನು ಚಾವಡಿಯ ಬಳಿ ಕುಳಿತಿದ್ದಾಗ ನಮ್ಮ ಬೀದಿಯ ಪುಟ್ಟಣ್ಣರವರ ಮಗನಾದ ಅಭಿಷೇಕ್ನಿಗೂ ಮೊಬೈಲ್ ವಿಚಾರದಲ್ಲಿ ಇಬ್ಬರಿಗೂ ಗಲಾಟೆಯಾಗಿ ನಂತರ ಮುಖ್ಯ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯ ಬಳಿ ನನ್ನ ಮಗನನ್ನು ಅಭಿಷೇಕ್ನು ಕರೆದುಕೊಂಡು ಹೋಗಿ ಕೈಗಳಿಂದ ಹಾಗೂ ಸೌಧೆ ಸೀಳಿನಿಂದ ಮೈ ಕೈ ಗೆ ಹೊಡೆದಿರುತ್ತಾನೆ.ಎಂದು ನನ್ನ ಮಗ ಮನೆಗೆ ಬಂದು ತಿಳಿಸಿದನು.ನಂತರ ನಾನು ಅಭಿಷೇಕ್ನ ಮನೆಗೆ ನನ್ನ ಮಗ ಸಂತೋಷನನ್ನು ಕರೆದುಕೊಂಡು ಹೋಗಿ ಹೊಡೆದ ಬಗ್ಗೆ ವಿಚಾರಿಸಿದಾಗ ಅಭಿಷೇಕ್ ತಂದೆ ಪುಟ್ಟಣ್ಣ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ನಂತರ ನಾನು ನನ್ನ ಮಗ ಮನೆಗೆ ಬಂದಾಗ ಹಿಂದಿನಿಂದ ಅಭಿಷೇಕ್ ಆತನ ತಮ್ಮ ಆಕಾಶ್ ಮತ್ತೆ ಆತನ ತಾಯಿ ನೇತ್ರಾವತಿ ಮತ್ತೆ ಪುಟ್ಟಣ್ಣರವರು ಬಂದು ಅಭಿಷೇಕ್ ಆಕಾಶ್ ಸೌದೆ ಸೀಳಿನಿಂದ ನನ್ನ ಮಗ ಸಂತೋಷನಿಗೆ ತಲೆಗೆ ಮತ್ತು ಎಡೆಕೆನ್ನೆಗೆ ಹೊಡೆದು ರಕ್ತ ಗಾಯ ಮಾಡಿದ್ದು ನನ್ನ ಮಗನನ್ನು ಬಿಡಿಸಲು ಹೋದಾಗ ನನಗೂ ಸಹಾ ಆಕಾಶ್ ಮತ್ತು ಅಭಿಷೇಕ್ ಅದೇ ಸೌದೆ ಸೀಳಿನಿಂದ ನನ್ನ ತಲೆಗೆ ಹೊಡೆದು ರಕ್ತ ಗಾಯ ಮಾಡಿರುತ್ತಾರೆ. ನೇತ್ರಾವತಿ ನನ್ನ ಹಿಡಿದು ಎಳೆದಾಡಿರುತ್ತಾಳೆ ಸದರಿ ನಾಲ್ಕು ಜನರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಈ ವರದಿ.

02. ಚಾಮರಾಜನಗರ ಪಟ್ಟಣ ಠಾಣೆ: (ಮೊ,ನಂ 10/2020) ಪಿರ್ಯಾದಿ ಶಿವಕುಮಾರ್ ಚಾಮರಾಜನಗರ ಟೌನ್ರವರು ನೀಡಿದ ದೂರಿನಲ್ಲಿ ಅವರ ಕಂಪನಿಯಿಂದ ಗಿರಿಗಣೇಶ ಎಂಬುವರು ಮಾರುತಿ ಎರ್ಟಿಕಾ ವಿಡಿಐ ಬಿಎಸ್-4, 2014 ನೇ ಮಾಡೆಲ್ನ ಡೀಸಲ್ ಕಾರನ್ನು ನಮ್ಮ ಪೈನಾನ್ಸ್ನಿಂದ 350000/- ರೂಗಳಿಗೆ ಪೈನಾನ್ಸ್ ತೆಗೆದುಕೊಂಡು, ಪೈನಾನ್ಸ್ ಚಾರ್ಜ್ನ ರೂ 112451/- ರೂಗಳು ಸೇರಿ ಒಟ್ಟು 462451/- ರೂಗಳ ಸಾಲವನ್ನು ಪಡೆಕೊಂಡು ಇದಕ್ಕೆ 48 ಕಂತುಗಳಲ್ಲಿ ಕಟ್ಟುವ ಬಗ್ಗೆ ಈತನಿಗೆ ಅಕ್ರಂಪಾಷ ರವರು ಜಾಮೀನುದಾರರಾಗಿದ್ದು, ಈಗಿರುವಾಗ ಗಿರಿಗಣೇಶ ಹಾಗೂ ಅಕ್ರಂಪಾಷರವರು ಕಂಪನಿಯ ನಿಯಮ ಹಾಗೂ ಷರತ್ತುಗಳನ್ನು ಉಲ್ಲಂಘನೆ ಮಾಡಿ, ನಮ್ಮ ಕಂಪನಿಯಿಂದ ಯವುದೇ ಎನ್,ಒ,ಸಿ ಯನ್ನು ಪಡೆದುಕೊಳ್ಳದೇ ನಕಲು ದಾಖಲಾತಿಯನ್ನು ಸೃಷ್ಟಿಸಿಕೊಂಡು , ಆರ್.ಟಿ.ಒ ಕಛೇರಿಗೆ ಸಲ್ಲಿಸಿಕೊಂಡು ಯಶೋದ ಎಂಬುವರ ಹೆಸರಿಗೆ ವಾಹನದ ಆರ್ಸಿ ಮಾಲೀಕತ್ವವನ್ನು ಮೋಸದಿಂದ ಬದಲಾವಣೆ ಮಾಡಿಕೊಂಡು ಕಂಪನಿಗೆ ಮೋಸ ಮಾಡಿರುವುದಾಗಿ, ಘನ ನ್ಯಾಯಾಲಯದಲ್ಲಿ ಪಿಸಿಆರ್ ನಂ 10/2020 ರಲ್ಲಿ ಪ್ರಕರಣ ದಾಖಲಿಸಿದ್ದು, ಘನ ನ್ಯಾಯಾಲಯವು ಕಲಂ 156 (3) ಸಿಆರ್ಪಿಸಿ ರಿತ್ಯಾ ತನಿಖೆ ಕೈಗೊಳ್ಳುವಂತೆ ಸೂಚಿಸಿರುವುದಾಗಿರುತ್ತದೆ

03.ಗುಂಡ್ಲುಪೇಟೆ ಠಾಣೆ: (ಮೊ,ನಂ 28/2020) ದಿನಾಂಕ; 29.01.2020 ರಂದು ಮಧ್ಯಾಹ್ನ 12.30 ಗಂಟೆ ಸಮಯದಲ್ಲಿ ಪಿರ್ಯಾದಿ ನಾಗಶೆಟ್ಟಿ ಬನ್ನಿತಾಳಪುರ ಗ್ರಾಮರವರು ನೀಡಿದ ದೂರಿನಲ್ಲಿ ಅವರು ಮತ್ತು ಅವರ ಹೆಂಡತಿ ನಾಗಮ್ಮ ಇಬ್ಬರೂ ಗುಂಡ್ಲುಪೇಟೆ ಪಟ್ಟಣದ ಕಾವೇರಿ ಗ್ರಾಮೀಣ ಬ್ಯಾಂಕ್ ಹತ್ತಿರ ಗುಂಡ್ಲುಪೇಟೆ ಮುಖ್ಯ ರಸ್ತೆಯಲ್ಲಿ ಹಳೇ ಬಸ್ ನಿಲ್ದಾಣದ ಕಡೆಗೆ ರಸ್ತೆಯ ಎಡಭಾಗದ ಪುಟ್ಬಾತ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಟಿ.ಎನ್. 43 ಎಕ್ಸ್ 3200 ಬೈಕ್ ಸವಾರ ಅರವಿಂದ ಗೂಡ್ಲೂರು ರವರು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾಗಮ್ಮ ರವರಿಗೆ ಡಿಕ್ಕಿ ಮಾಡಿದ್ದು ಬಲಗಾಲು, ಬಲಗೈ, ಮತ್ತು ಮೈಕೈ ಹತ್ತಿರ ಏಟಾಗಿರುತ್ತದೆಂದು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

04. ತೆರಕಣಾಂಬಿ ಠಾಣೆ: (ಯುಡಿಆರ್,ನಂ 02/2020) ದಿನಾಂಕ: ಪಿರ್ಯಾದಿ ಬೆಟ್ಟೇಗೌಡ ಕಬ್ಬಳ್ಳಿ ಗ್ರಾಮರವರು ನೀಡಿದ ದೂರಿನಲ್ಲಿ ಅವರ ಮಗನ ಮಗಳು ದೀಪಾ ದಿ: 21.01.2020 ರಂದು ತನ್ನ ತಂದೆ ತೀರಿಹೊದ ವಿಷಯಕ್ಕೆ ಸಂಬಂಧಿಸಿದಂತೆ ಖಿನ್ನತೆಗೊಳಗಾಗಿ ಮನೆಯಲ್ಲಿ ತೀರಿಗೆ ನೇಣು ಹಾಕಿಕೊಂಡು ಅವಳನ್ನು ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ. ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ.

05. ಕೊಳ್ಳೇಗಾಲ ಗ್ರಾಮಾಂತರ ಠಾಣೆ: (ಮೊ,ನಂ 31/2020) ಪಿರ್ಯಾದಿ ಮಧುಸೂದನ್, ತಲಘಟ್ಟಪ್ಮರ ಬೆಂಗಳೂರುರವರು ನೀಡಿದ ದೂರಿನಲ್ಲಿ ಅವರು ಮತ್ತು ಅವರ ಸ್ನೇಹಿತರಾದ ಪ್ರತೀಕ್ ಮತ್ತು ಸಂಜಯ್ ಮೂವರೂ ಬೆಂಗಳೂರಿನ ಡ್ರೈವ್ಜಿ ಯಲ್ಲಿ ಕೆಎ-03 ಎಜಿ-7623 ನಂಬರಿನ ಗ್ರ್ಯಾಂಡ್ ಐ-10 ಕಾರನ್ನು ಬಾಡಿಗೆಗೆ ಪಡೆದುಕೊಂಡು ದಿ:29-01-2020 ರಂದು ಮಲೈಮಹದೇಶ್ವರ ಬೆಟ್ಟದಿಂದ ವಾಪಸ್ಸು ಬೆಂಗಳೂರಿಗೆ ಹೋಗಲು ಕೊಳ್ಳೇಗಾಲ ಮಾರ್ಗವಾಗಿ ರಾತ್ರಿ ಸುಮಾರು 11-45 ಗಂಟೆಲ್ಲಿ ಧನಗೆರೆ ಗ್ರಾಮದ ಮುಂದೆ ರಸ್ತೆಯ ಎಡಭಾಗದಲ್ಲಿ ಕಾರನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಸತ್ತೇಗಾಲದ ಕಡೆಯಿಂದ ಬಂದ ಒಂದು ಮಹಿಂದ್ರ ಕ್ಸೈಲೋ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಬಲಭಾಗಕ್ಕೆ ಬಂದು ನಮ್ಮ ಕಾರಿಗೆ ಡಿಕ್ಕಿಗೊಳಿಸಿದನು. ಅದರಲ್ಲಿದ್ದ 3-4 ಜನರಿಗೂ ಸಣ್ಣ-ಪುಟ್ಟಗಾಯಗಳಾಗಿತ್ತು. ನಮಗೂ ಒಳ ನೋವಾಗಿ ಚಿಕ್ಕಪುಟ್ಟ ಗಾಯಗಳಾದವು. ಈ ಅಪಘಾತಕ್ಕೆ ಕಾರಣವಾದ ಕೆಎ-02 ಎಂಡಿ-4099 ನಂಬರಿನ ಮೆರೂನ್ ಬಣ್ಣದ ಮಹಿಂದ್ರಾ ಕ್ಸೈಲೋ ಕಾರು ಮತ್ತು ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಎಂದು ಕೊಟ್ಟ ಹೇಳಿಕೆ ಮೇರೆಗೆ ಈ ಪ್ರ ವ ವರದಿ.

06. ಹನೂರು ಠಾಣೆ: (ಯು.ಡಿ.ಆರ್,ನಂ 02/2020) ಪಿರ್ಯಾದಿ ಚೇತನ್ ಮೈಸೂರುರವರು ನೀಡಿದ ದೂರಿನಲ್ಲಿ ಅವರ ತಂದೆ ಸಿದ್ದಪ್ಪಾಜಿ 48 ವರ್ಷ ಇವರು ಒಂದು ವಾರದ ಹಿಂದೆ ಅಂದರೆ ದಿನಾಂಕ 16.01.2020 ರಂದು ನಮ್ಮಗೆ ನಾನು ಚಿಕ್ಕಲ್ಲೂರು ಜಾತ್ರಾಗೆ ಹೋಗುತ್ತೇನೆಂದು ಹೇಳಿ ಹೋದವರು ಇದುವರೆಗೂ ವಾಪಸ್ ಬಂದಿರುವುದಿಲ್ಲ. ನಾವು ಎಲ್ಲೂ ನೆಂಟರ ಮನೆಗೆ ಹೋಗಿರಬಹುದೆಂದು ತಿಳಿದುಕೊಂಡು ಮೈಸೂರು ನಗರದ ಹಲವು ಕಡೆ ನಮ್ಮ ನೆಂಟರು ಹಾಗೂ ಸ್ನೇಹಿತರ ಮನೆಯಲ್ಲಿ ಹುಡುಕಿದ್ದೇವು, ಆದರೂ ನಮ್ಮ ತಂದೆ ಸಿಗಲಿಲ್ಲ ಹಾಗೂ ಮೈಸೂರಿನಲ್ಲಿ ದೂರು ನೀಡಲಿಲ್ಲ. ಈ ದಿನ ದಿನಾಂಕ 30.01.2020 ರಂದು ನಮ್ಮ ದೊಡ್ಡಪ್ಪನಾದ ತಮ್ಮಯ್ಯಚಾರ್ ದೂರವಾಣಿ ಮೂಲಕ ನಿಮ್ಮ ತಂದೆ ಸಿದ್ದಪ್ಪಾಜಿ ಶವ ಚಿಕ್ಕಲ್ಲೂರು ಹೊಸಮಠಕ್ಕೆ ಸೇರಿದ ನೀರಿನ ಟ್ಯಾಂಕ್ ನಿಂದ 40 ಅಡಿ ದೂರುದಲ್ಲಿ ಬಳಿಯಲ್ಲಿ ಇದೆ ಎಂದು ತಿಳಿಸಿದರು ನಂತರ ನಾನು ನನ್ನ ತಾಯಿ ಜೊತೆ ಬಂದು ಶವ ಇದ್ದ ಜಾಗವನ್ನು ನೋಡಿದೇನು, ಶವವು ನನ್ನ ತಂದೆ ಸಿದ್ದಪ್ಪಾಜಿ ಶವ ಆಗಿರುತ್ತದೆ. ನಮ್ಮ ತಂದೆಯವರು ಮದ್ಯಪಾನ ಮಾಡುತ್ತಿದ್ದರು. ಅವರು ದಿನಾಂಕ15.01.2020 ರಿಂದ ಇಲ್ಲಿವರೆಗೆ ಸುಮಾರು ಹಿಂದಿನ ದಿನಗಳಲ್ಲಿ ಸದರಿಯ ಜಾಗಕ್ಕೆ ಶೌಚಾಲಯಕ್ಕೆ ಅಥವಾ ಮೂತ್ರ ವಿಸರ್ಜನೆಗೆ ಹೋಗಿ ಆಕಸ್ಮಿಕವಾಗಿ ಮೃತಪಟ್ಟಿರುತ್ತಾರೆ ನಮ್ಮ ತಂದೆ ಸಾವಿಗೆ ಬಗ್ಗೆ ಯಾವುದೇ ಅನುಮಾನ ಇಲ್ಲ. ಆದ್ದರಿಂದ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಹಾಗೂ ನಾನು ನಮ್ಮ ತಂದೆ ತಾಯಿ ಮತ್ತು ತಂಗಿ ಎಲ್ಲರೂ ಅನ್ಯೋನ್ಯವಾಗಿ ಇದ್ದೇವೆ ಎಂದು ನೀಡಿದ ದೂರಿನ ಮೇರೆಗೆ

07. ಹನೂರು ಠಾಣೆ: (ಮೊ,ನಂ 11/2020) ದಿನಾಂಕ: 29-01-2020 ರಂದು ಸಂಜೆ 07.30 ಗಂಟೆ ಸಮಯದಲ್ಲಿ ಪಿರ್ಯಾದಿ ಪಿ.ಐ ಹನೂರು ಠಾಣೆರವರು ಹನೂರು ಪೊಲೀಸ್ ಠಾಣೆಯಲ್ಲಿದ್ದಾಗ ಹನೂರು ಪಟ್ಟಣದಿಂದ-ಜಿ.ಕೆ ಹೊಸೂರು ಗ್ರಾಮಕ್ಕೆ ಹೋಗುವ ಹನೂರು ಪಟ್ಟಣದ ಜಗನಾಥ ರವರ ಜಮೀನಿನ ಪಕ್ಕದಲ್ಲಿ ಹಾದು ಹೋಗಿರುವ ಸಾರ್ವಜನಿಕರು ತಿರುಗಾಡುವ ರಸ್ತೆಯ ಬದಿ ಇರುವ ತೆಂಗಿನ ಮರೆದ ಕೆಳಗಡೆ ಕೆಲವು ಆಸಾಮಿಗಳು ಅಂದರ್-ಬಾಹರ್ ಎಂಬ ನಸೀಬಿನ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ಪಂಚರುಗಳ ಸಮಕ್ಷಮ ಮಹಜರ್ ಕ್ರಮದ ಮೂಲಕ ಅಮಾನತ್ತುಪಡಿಸಿಕೊಂಡು ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ ಹಿಂತಿರುಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ಸೂಚಿಸಿದ ಮೇರೆಗೆ.


Your Comment

Name :
Email:
Comment:
Submit

Website Designed and Developed by Global Buzz®