• ಹಿರಿಯ ನಾಗರೀಕರ ಸಹಾಯ ವಾಣಿ: 1090 / 08226 222030
 • ಮಕ್ಕಳ ಸಹಾಯವಾಣಿ : 1098
 • ತುರ್ತು : 100 / 08226 222383
 • ಅಗ್ನಿ ಶಾಮಕ ದಳ : 101
 • ತುರ್ತು ವಾಹನ ಸೇವಾ: 108

ರಕ್ಷಣಾ ಸೂಚನೆಗಳು

ಮನೆ ಸುರಕ್ಷತೆ.

 • ಮನೆಯ ಬಾಗಿಲನ್ನು ತೆರೆದು ಮತ್ತು ಬೀಗ ಹಾಕದೆ ಹೊರಗೆ ಹೋಗದಿರಿ.
 • ಮನೆಯ ಮುಂಬಾಗಿಲನ್ನು ತೆರೆದು ಮನೆಯ ಹಿಂದೆ ನಿಮ್ಮ ಕೆಲಸದಲ್ಲಿ ತಲ್ಲೀನರಾಗದಿರಿ.
 • ಅಪರಿಚಿತರು ಮನೆಯ ಬಾಗಿಲನ್ನು ತಟ್ಟಿದಾಗ ಪರಿಶೀಲಿಸದೇ ಬಾಗಿಲು ತೆರೆಯಬೇಡಿ.
 • ಅಪರಿಚಿತರನ್ನು ಗುರುತಿಸಲು ಬಾಗಿಲಿಗೆ ಸೇಫ್ಟಿ ಚೈನ್ ಅಳವಡಿಸಿ.
 • ಸಾಧ್ಯವಾದರೆ ಸಿಸಿ ಟಿವಿ ಅಳವಡಿಸಿಕೊಳ್ಳಿ.

ವಾಹನ ಸುರಕ್ಷತೆ.

 • ನಿಮ್ಮ ವಾಹನವು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ
 • ವಾಹನ ಚಾಲನೆಯಲ್ಲಿರುವಾಗ ಕಿಟಕಿಗಳು ಮತ್ತು ಬಾಗಿಲುಗಳು ಮುಚ್ಚಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಿ
 • ರಾತ್ರಿ ಸಮಯದಲ್ಲಿ ನಿಮ್ಮ ವಾಹವನ್ನು ನಿಲ್ಲಿಸುವಾಗ ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ.
 • ಅಪರಿಚತರು ಕೈ ತೋರಿದಲ್ಲಿ ವಾಹನ ನಿಲ್ಲಿಸುವುದಾಗಲೀ ಡ್ರಾಪ್ ನೀಡುವುದಾಗಲಿ ಮಾಡಬೇಡಿ.
 • ವಾಹನ ಚಾಲನೆ ಮಾಡುವಾಗ ನಿಮ್ಮನ್ನು ಯಾರಾದರೂ ಹಿಂಬಾಲಿಸಿದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ.

ಈ-ಮೇಲ್ ಮತ್ತು ಸೈಬರ್ ಸುರಕ್ಷತೆ.

 • ಫಿಶಿಂಗ್ ವಿರುದ್ದ ನಿಮ್ಮ ಸ್ವಯಂ ಕಾವಲು ರಚಿಸಿಕೊಳ್ಳಿ
 • ಪಾಸ್ವರ್ಡ್ ಪಾಲಿಸಿಯೆಂತೆ ನಿಮ್ಮ ಪಾಸ್ವರ್ಡ್ ಅನ್ನು ಮೇಲಿಂದ ಮೇಲೆ ಬದಲಾಯಿಸಿಕೊಳ್ಳಿ.
 • ಪಾಸ್ವರ್ಡ್ ಆಯ್ಕೆ ಮಾಡಿಕೊಳ್ಳುವಾಗ ಊಹೆಮಾಡಲು ಸಾಧ್ಯವಾಗದ ಕಾಂಪ್ಲೆಕ್ಸ್ ಪಾಸ್ವರ್ಡ್ ಗಳನ್ನು ಬಳಸಿ.
 • ನಿಮ್ಮ ಕಂಪ್ಯೂಟರ್ ಡಾಟಾವನ್ನು ಬೇರೆಡೆ ಬ್ಯಾಕ್ಅಪ್ ತೆಗೆದಿಟ್ಟುಕೊಳ್ಳಿ.
 • ಯಾರಬಳಿಯೂ ನಿಮ್ಮ ಪಾಸ್ವರ್ಡ್ ಅನ್ನು ಹಂಚಿಕೊಳ್ಳದಿರಿ.
 • ಈ-ಮೇಲ್ ಬಳಸಿದ ನಂತರ ಸೈನ್ಔಟ್ ಮಾಡುವುದನ್ನು ಮರೆಯದಿರಿ.
 • ಆಂಟಿ ವೈರಸ್ ತಂತ್ರಾಂಶವನ್ನು ಅಳವಡಿಸಿಕೊಂಡು ಪ್ರತಿನಿತ್ಯ ಅಪ್ಡೇಟ್ ಮಾಡಿರಿ.
 • ಆಪರೇಟಿಂಗ್ ಸಿಸ್ಟಮ್ ಮತ್ತು ಅಪ್ಲಿಕೇಶನ್ ಪ್ಯಾಚಸ್ ಗಳನ್ನು ಅಪ್ಡೇಟ್ ಮಾಡಿರಿ.
 • ಅಪರಿಚಿತರಿಂದ ಬಂದಂತಹ ಈ-ಮೇಲ್, ಅಟ್ಯಾಚ್ಮೆಂಟ್ಸ್ ಗಳಿಗೆ ಪ್ರತಿಕ್ರಿಯೆ ನೀಡದಿರಿ.
 • ನಿಮ್ಮ ಈ-ಮೇಲ್ ಐಡಿಗಳನ್ನು ಅಸುರಕ್ಷಿತ ಜಾಲತಾಣಗಳಿಗೆ ಹಂಚದಿರಿ.
 • ಇಂಟರ್ನೆಟ್ ಬಳಸದೇ ಇರುವಾಗ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿ

ಪ್ರವಾಸಿಗರ ಸುರಕ್ಷತೆ ಕ್ರಮಗಳು

 • ಪ್ರವಾದಸಲ್ಲಿರುವಾಗ ಪಿಕ್ಪಾಕೆಟರ್ಸ್ ಮತ್ತು ಸರಗಳ್ಳರ ಬಗ್ಗೆ ಜಾಗೃತರಾಗಿರಿ.
 • ನಿಮ್ಮ ಲಗೇಜು, ಸೂಟ್ಕೇಸ್ ಹಾಗೂ ಇನ್ನಿತರ ವಸ್ತುಗಳನ್ನು ಅಸುರಕ್ಷಿತ ಸ್ಥಳದಲ್ಲಿ ಇಡಬೇಡಿ.
 • ನಿಮ್ಮ ಪಾಸ್ವರ್ಡ್ ಗಳನ್ನು ಹಿಂದಿನ ಜೇಬಿನಲ್ಲ್ಲಿಡದಿರಿ, ಯಾವಾಗಲೂ ಒಳಜೇಬಿನಲ್ಲಿರಿಸಿ.
 • ಚಿನ್ನಾಭರಣ, ಪಾಸ್ಪೋರ್ಟ್ ರಿಟರ್ನ ಟಿಕೇಟ್ ಮತ್ತು ಇತರೇ ಬೆಲೆಬಾಳುವ ವಸ್ತುಗಳನ್ನು ಹೋಟೆಲ್ ಸೇಫ್ಟ್ ಡೆಪಾಸಿಟ್ ಬಾಕ್ಸ್ ನಲ್ಲಿರಿಸಿ.
 • ಪ್ರವಾಸಕ್ಕೆ ಅವಶ್ಯಕತೆ ಇರುವಷ್ಟು ಹಣವನ್ನು ಮಾತ್ರ ಕೊಂಡೊಯ್ಯಿರಿ.
 • ಅಪರಿಚಿತ ವ್ಯಕ್ತಿಗಳೊಂದಿಗೆ ನಿಮ್ಮ ವೈಯಕ್ತಿಕ ಮತ್ತು ಖಾಸಗಿ ವಿಚಾರಗಳನ್ನು ಹಂಚಿಕೊಳ್ಳದಿರಿ.
 • ಪ್ರವಾಸಕ್ಕೆ ಹೊರಡುವ ಮುಂಚೆಯೇ ನಿಮ್ಮ ಕೊಠಡಿಗಳನ್ನು ಕಾಯ್ದಿರಿಸಿಕೊಳ್ಳಿ
 • ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ತಿರುಗಾಡದಿರಿ.
 • ತುತರ್ು ಸಂದರ್ಭಗಳನ್ನು 100 ಕ್ಕೆ ಕರೆ ಮಾಡಿ.

ರಸ್ತೆ ಭದ್ರತೆಗಳು

 • ಹೊರ ಹೋಗುವ ಸಮಯದಲ್ಲಿ ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲಿಯೇ ಇಡುವುದು.
 • ನಿಮ್ಮ ಅವಶ್ಯಕತೆಗೆ ಮೀರಿ ಹೆಚ್ಚು ಹಣವನ್ನು ಒಯ್ಯಬೇಡಿ.
 • ಕತ್ತಲು ಹಾಗೂ ನಿರ್ಜನ ಪ್ರದೇಶದಲ್ಲಿ ಒಬ್ಬಂಟಿಯಾಗಿ ಓಡಾಡದಿರಿ.
 • ನಿಮ್ಮ ಬ್ಯಾಗ್ಗಳನ್ನು ನಿಮ್ಮ ದೇಹಕ್ಕೆ ಅಂಟಿಕೊಂಡಂತೆ ಇರಿಸಿಕೊಳ್ಳಿ.
 • ನಿಮ್ಮ ಪರ್ಸ್ ಕ್ರೆಡಿಟ್ ಕಾರ್ಡ್ಮತ್ತು ಇತರೆ ವಸ್ತುಗಳನ್ನು ಒಳ ಜೇಬಿನಲ್ಲಿ ಇಟ್ಟುಕೊಳ್ಳಿ.

ಹಿರಿಯ ನಾಗರೀಕರ ಸುರಕ್ಷತೆ.

 • ಸೇವಕನ್ನು ನೇಮಿಸಿಕೊಳ್ಳುವಾಗ ಖಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಪೂರ್ವಚರಿತ್ರಯನ್ನು ಪರಿಶೀಲಿಸಿಕೊಳ್ಳಿ.
 • ನಿಮ್ಮ ಜೊತೆಯಲ್ಲಿ ಯಾವಾಗಲೂ ಗುರುತಿನ ಚೀಟಿಯನ್ನು ಇಟ್ಟುಕೊಂಡಿರಿ.
 • ಅಪರಿಚಿತರು ಮತ್ತು ಮನೆಕೆಲಸದವರ ಬಳಿ ನಿಮ್ಮ ಹಣಕಾಸಿನ ವ್ಯವಹಾರವನ್ನು ಹಂಚಿಕೊಳ್ಳದಿರಿ.
 • ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ಬ್ಯಾಂಕಿನ ಲಾಕರ್ನಲ್ಲಿಡಿ.
 • ಮನೆಗೆಲಸದವರ ಸಂಬಂಧಿಕರು ಮತ್ತು ಸ್ನೇಹಿತರನ್ನು ಸಾಮಾನ್ಯವಾಗಿ ಮನೆಯೊಳಗೆ ಸೇರಿಸದಿರಿ.
 • ಸಾಧ್ಯವಾದಲ್ಲಿ ಆಧುನಿಕ ಎಲೆಕ್ಟ್ರಾನಿಕ್ ಭದ್ರತಾ ಸಲಕರೆಣೆಗಳಾದ ಡೋರ್ ಅಲಾರಮ್, ಎಲೆಕ್ಟ್ರಾನಿಕ್ ಐ-ಬೆಲ್ ಹಾಗೂ ಇತ್ಯಾದಿಗಳನ್ನು ಮನೆ ಬಾಗಿಲಿಗೆ ಅಳವಡಿಸಿಕೊಳ್ಳಿ.
 • ರಿಪೇರಿ ಕೆಲಸಗಾರರು, ಸೇಲ್ಸ್ ಮೆನ್ ಹಾಗೂ ಇತರರು ಮನೆಗೆ ಬಂದಾಗ ಅವರ ಗುರುತಿನ ಬಗ್ಗೆ ಪರಿಶೀಲಿಸಿ ಅವರ ಜೊತೆ ಮನೆಕೆಲಸದವರು ಇರುವಂತೆ ನೋಡಿಕೊಳ್ಳಿ.
 • ಯಾವುದೇ ಕಾರಣಕ್ಕೂ ರಿಪೇರಿ ಕೆಲಸಗಾರರು ಮತ್ತು ಸೇಲ್ಸ್ ಮೆನ್ ಗಳನ್ನು ಒಬ್ಬರನ್ನೇ ಮನೆಯೊಳಗೆ ಬಿಡದಿರಿ.

ಪಾದಚಾರಿಗಳ ಸುರಕ್ಷತೆ.

 • ಸಂಚಾರಿ ನಿಯಮ ಮತ್ತು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ.
 • ರಸ್ತೆ ದಾಟುವಾಗ ಝೀಬ್ರಾ ಕ್ರಾಸಿಂಗ್ ಬಳಸಿ.
 • ರಸ್ತೆ ಮಧ್ಯದಲ್ಲಿ ಅಡ್ಡಾದಿಡ್ಡಿ ಓಡಾಡದಿರಿ.
 • ಯಾವಾಗಲೂ ಪಾದಚಾರಿ ಮಾರ್ಗವನ್ನೇ ಬಳಸಿ
 • ಮಕ್ಕಳನ್ನು ರಸ್ತೆ ದಾಟುವಾಗ ಒಂಟಿಯಾಗಿ ಕಳುಹಿಸದಿರಿ.
 • ಹೆದ್ದಾರಿಗಳನ್ನು ದಾಟುವಾಗ ಜಾಗೃತರಾಗಿರಿ.
 • ದೃಷ್ಟಿದೋಷವಿದ್ದಲ್ಲಿ ರಸ್ತೆ ದಾಟುವಾಗ ಬೇರೆಯವರ ಸಹಾಯ ಪಡೆಯಿರಿ.

ರಸ್ತೆ ಸುರಕ್ಷತಾ ಕ್ರಮಗಳು.

 • ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸದಿರಿ.
 • ಸೀಟ್ ಬೆಲ್ಟ್ ಬಳಸಿ.
 • ಮಧ್ಯಪಾನ ಮಾಡಿ ವಾಹನ ಚಲಾಯಿಸಬೇಡಿ.
 • ಅತಿವೇಗ ಅಪಾಯಕರ.
 • ವಾಹನ ಚಲಾಯಿಸುವಾಗ ಹಿರಿಯ ನಾಗರೀಕರು, ಮಕ್ಕಳು ಮತ್ತು ಪಾದಚಾರಿಗಳ ಮೇಲೆ ವಿಶೇಷ ನಿಗಾವಹಿಸಿ.
 • ದಣಿದ ಸಮಯದಲ್ಲಿ ಚಾಲನೆ ಮಾಡಿಬೇಡಿ.
 • ಚಾಲನಾ ಸಮಯದಲ್ಲಿ ಇತರೆ ರಸ್ತೆ ಬಳಕೆದಾರರ ಮೇಲೆ ಗಮನವಿರಲಿ.
 • ನಡುವೆ ಅಂತರ ವಿರಲಿ
 • ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಬಳಸಿ.
 • ಸಂಚಾರಿ ನಿಯಮಗಳನ್ನು ಪಾಲಿಸಿ
 • ಪಾದಚಾರಿಗಳ ಮೇಲೆ ವಿಶೇಷ ನಿಗಾ ಇರಲಿ
 • ಮಂಜು ಕವಿದ ವಾತಾವರಣದಲ್ಲಿ ವಾಹನ ಚಲಾಯಿಸುವುದು ಅಪಾಯಕಾರಿ
 • ಶಾಲಾ ಕಾಲೇಜು, ಆಸ್ಪತ್ರೆ ಮತ್ತು ಜನ ಸಂದಣೆ ಪ್ರದೇಶಗಳಲ್ಲಿ ಜಾಗೃತರಾಗಿ ವಾಹನ ಚಲಾಯಿಸಿ.
 • ತಿರುವುಗಳಲ್ಲಿ ವಾಹನವನ್ನು ನಿಧಾನವಾಗಿ ಚಲಿಸಿ.

ಎ.ಟಿ.ಎಂ ಸುರಕ್ಷತಾ ಕ್ರಮಗಳು

 • ಎ.ಟಿ.ಎಂ ಬಳಸುವಾಗ ಸುತ್ತ ಮುತ್ತ ಗಮನ ವಿರಲಿ.
 • ನಿಮ್ಮ ವ್ಯವಹಾರ ಮುಗಿಯುವ ವರೆವಿಗೂ ಸುತ್ತಮುತ್ತಲಿನವರ ಬಗ್ಗೆ ಗಮನವಿರಲಿ.
 • ಅಕ್ಕಪಕ್ಕದವರಿಗೆ ಕಾಣುವಂತೆ ಪಿನ್ ನಂಬರ್ ಅನ್ನು ಒತ್ತದಿರಿ, ಪಿನ್ ನಂಬರ್ ಅನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ ಹಾಗೂ ಪಿನ್ ನಂಬರ್ ಅನ್ನು ಕಾಡರ್್ ನ ಹಿಂಬದಿಯಲ್ಲಿ ಬರೆದುಕೊಳ್ಳ ಬೇಡಿ.
 • ಸಾರ್ವಜನಿಕ ಪ್ರದೇಶದಲ್ಲಿ ಹಣ ಎಣಿಸದಿರಿ.
 • ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಮೇಲಿಂದ ಮೇಲೆ ಪರಿಶೀಲಿಸಿ ದೋಷವೇನಾದರೂ ಕಂಡು ಬಂದಲ್ಲಿ ಕೂಡಲೇ ನಿಮ್ಮ ಬ್ಯಾಂಕ್ ಸಂಪರ್ಕಿಸಿ.

©ಕೃತಿಸ್ವಾಮ್ಯ ಚಾಮರಾಜನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವೆಬ್ ಸೈಟ್ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®