• ಹಿರಿಯ ನಾಗರೀಕರ ಸಹಾಯ ವಾಣಿ: 1090 / 08226 222030
 • ಮಕ್ಕಳ ಸಹಾಯವಾಣಿ : 1098
 • ತುರ್ತು : 100 / 08226 222383
 • ಅಗ್ನಿ ಶಾಮಕ ದಳ : 101
 • ತುರ್ತು ವಾಹನ ಸೇವಾ: 108

ಕಾನೂನು ಮತ್ತು ಸುವ್ಯವಸ್ಥೆ

 • ಒಂದು ಪ್ರದೇಶದ ಜನರು ನೆಮ್ಮದಿಯಿಂದ ಇದ್ದಾರೆಂದರೆ ಆ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ವಿಭಾಗವು ಸಧೃಡವಾಗಿದೆ ಎಂದು ಅರ್ಥ.
 • ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ತಾನು ಕೆಲಸ ಮಾಡುತ್ತಿರುವ ಪ್ರದೇಶದಲ್ಲಿ ಶಾಂತಿಯತೆ ಕಾಪಾಡಿ, ಅಲ್ಲಿಯ ಜನರ ಹಾಗೂ ಆಸ್ತಿ ಪಾಸ್ತಿಯನ್ನು ಕಾಪಾಡಲು ಸುರಕ್ಷತೆ ಒದಗಿಸುವುದು ಆದ್ಯ ಕರ್ತವ್ಯವಾಗಿರುತ್ತದೆ.
 • ಪ್ರತಿ ಠಾಣೆಯ ಪೊಲೀಸ್ ಕಾನ್ಸ್ಟೇಬಲ್/ಹೆಡ್ ಕಾನ್ಸ್ಟೇಬಲ್ ಅಲ್ಲಿನ ಪ್ರದೇಶದ ಗಸ್ತು ಕಾರ್ಯ ಸೇವೆ ನಿರ್ವಹಿಸುವುದಕ್ಕಾಗಿ, ಪೊಲೀಸ್ ಠಾಣೆಯ ಅಧಿಕಾರ ವ್ಯಾಪ್ತಿಯು ಸಾಮಾನ್ಯವಾಗಿ ಅನುಕೂಲಕರ ರೀತಿಯಲ್ಲಿ ವಿಭಜನೆಗೊಂಡಿರುತ್ತದೆ.
 • ಯಾವುದೇ ಗಂಭೀರವಾದ ಗೊಂದಲ, ಶಾಂತಿಯತೆ ಹಾಳಾಗುವಂತಹ ಕೆಲಸಗಳನ್ನು ತಡೆಗಟ್ಟಲು ಬೇಕಾಗುವ ಎಲ್ಲಾ ಮುಂಜಾಗರುಕತೆಯನ್ನು ಸರಿಯಾದ ರೀತಿ ಹಾಗೂ ಸಮಯದಲ್ಲಿ ತೆಗೆದುಕೊಳ್ಳವುದು ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯ ಕರ್ತವ್ಯ. ಒಂದು ವೇಳೆ ಏನಾದರೂ ಸಂಭವಿಸಿದ್ದಲ್ಲಿ, ಪರಿಸ್ಥಿತಿಯನ್ನು ಮಾಮೂಲು ಸ್ಥಿತಿಗೆ ತರಲು ಬೇಕಾಗುವ ಎಲ್ಲಾ ಕ್ರಮಗಳನ್ನು ಪೊಲೀಸ್ ಅಧಿಕಾರಿ ತೀವ್ರಗತಿಯಲ್ಲಿ ತೆಗೆದುಕೊಳ್ಳಬೇಕು.
 • ಶಾಂತಿಯತೆ ಕಾಪಾಡಲು ಆ ಪ್ರದೇಶದ ಮುಖ್ಯ ವ್ಯಕ್ತಿಗಳೊಂದಿಗೆ, ಪ್ರದೇಶದ ನಾಗರೀಕ ಮಂಡಳಿ, ಶಾಂತಿ ಸಭೆಗೆ ಮತ್ತು ಪ್ರದೇಶ ಸಭೆಗಳ ಮೂಲಕ ಪೊಲೀಸ್ ಅಧಿಕಾರಿ ನಿಕಟ ಸಂಪರ್ಕ ಹೊಂದಿರಬೇಕು.
 • ಆ ಪ್ರದೇಶದಲ್ಲಿರುವ ಸಮಾಜ ವಿರೋಧಿ, ಗೂಂಡಾ, ರೌಡಿ ಇರವರುಗಳ ವಿರುದ್ದ ಧೃಡ ನಿರ್ಧಾರ ತೆಗೆದುಕೊಳ್ಳುವುದು ಎಲ್ಲಾ ಪೊಲೀಸ್ ಅಧಿಕಾರಿಗಳ ಕರ್ತವ್ಯ.
 • ಹಬ್ಬ, ಜಾತ್ರೆ, ಸಾರ್ವಜನಿಕ ಸಮಾರಂಭ, ಮೆರವಣಿಗೆ, ಮುಷ್ಕರ, ಪ್ರತಿಭಟನೆ ಮುಂತಾದ ಸಂದರ್ಭಗಳಲ್ಲಿ ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಅಧಿಕಾರಿಗಳ ಕರ್ತವ್ಯ.
 • ಜನಾಂಗ, ಜಾತಿ, ಮತ, ಭಾಷೆ, ಪ್ರದೇಶ, ಲಿಂಗ ಅಥವಾ ರಾಜಕೀಯ ಪಕ್ಷಗಳು ಮುಂತಾದವುಗಳ ಬಗ್ಗೆ, ಪೊಲೀಸ್ ಅಧಿಕಾರಿ ಯಾವುದೇ ತಾರತಮ್ಯ ತೋರಿಸಬಾರದು.
 • ಕಾಲ ಕಾಲಕ್ಕೆ ಸರ್ಕಾರರ ನಿಗಧಿ ಪಡಿಸಿದ ಶುಲ್ಕದ ಪಾವತಿಯ ಮೇರೆಗೆ ಪೊಲೀಸ್ ಅಧಿಕಾರಿಯ ಸೇವೆಯನ್ನು ಮನೋರಂಜನಾ ಕಾರ್ಯಕ್ರಮಗಳ ನಡೆಯುವ ಸ್ಥಳಗಳಲ್ಲಿ ಸ್ವಲ್ಪ ಸಮಯಕ್ಕಾಗಿ ಪಡೆಯಬಹುದು.
 • ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ವಿಷಯದಲ್ಲಿ ಮತ್ತು ಸಮಾಜದ ಒಳಿತಿಗಾಗಿ ಸಾರ್ವಜನಿಕರು ತಮ್ಮ ಸಹಾಯ, ಸಹಕಾರ ಹಾಗೂ ಮಾಹಿತಿಗಳನ್ನು ನೀಡಬಹುದು.

©ಕೃತಿಸ್ವಾಮ್ಯ ಚಾಮರಾಜನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವೆಬ್ ಸೈಟ್ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®