• ಹಿರಿಯ ನಾಗರೀಕರ ಸಹಾಯ ವಾಣಿ: 1090 / 08226 222030
 • ಮಕ್ಕಳ ಸಹಾಯವಾಣಿ : 1098
 • ತುರ್ತು : 100 / 08226 222383
 • ಅಗ್ನಿ ಶಾಮಕ ದಳ : 101
 • ತುರ್ತು ವಾಹನ ಸೇವಾ: 108

ಜಿಲ್ಲಾ ಅಪರಾಧ ದಾಖಲೆ ವಿಭಾಗ

 • ರಾಜ್ಯ ಅಪರಾಧ ದಾಖಲೆ ವಿಭಾಗಕ್ಕೆ ಮಾಸಿಕ ಅಪರಾಧ ವಿವರ/ ಅಂಕಿ ಅಂಶಗಳನ್ನು ಕಳುಹಿಸುವುದು.
 • ರಾಜ್ಯ ಅಪರಾಧ ದಾಖಲೆ ವಿಭಾಗಕ್ಕೆ ಪಾಕ್ಷಿಕ ಅಪರಾಧ ದಾಖಲೆ (ಹೇಳಿಕೆ) ಕಳುಹಿಸುವುದು.
 • ವಾರ ಅಪರಾಧ ಮತ್ತು ಘಟನೆಯ ಬಗ್ಗೆ ವಿವರ ಸಲ್ಲಿಸುವುದು.
 • ಅಪರಾಧಿಗಳ ಪೂರ್ವೋತ್ತರ ದಸ್ತಾವೇಜುಗಳ ನಿರ್ವಹಣೆ ಮತ್ತು ಅಪರಾಧ ತನಿಖಾ ವಿಭಾಗದ ಅಪರಾದಿಗಳ ಚಟುವಟಿಕೆ ಮತ್ತು ಅವರ ವರದಿಯನ್ನು ಕಳುಹಿಸುವುದು.
 • ಚಾಮರಾಜನಗರ ಜಿಲ್ಲಾ ಪೋಲೀಸ್ ಠಾಣೆಗಳ ಎಂ.ಓ.ಬಿ ಆಸಾಮಿಗಳ ವಿವರಗಳು.
 • ಚಾಮರಾಜನಗರ ಜಿಲ್ಲೆಯ ಅಸ್ವಾಭಾವಿಕ ಮರಣಗಳ ವರದಿ ವಿವರಗಳ ನಿರ್ವಹಣೆ.
 • ನ್ಯಾಯಲಯದಿಂದ ಜಾರಿಯಾದ ವಾರೆಂಟಿನ ಸಮನ್ಸ್ ಗಳ ನಿರ್ವಹಣೆ.
 • ವಿಧಾನ ಸಭೆ ಹಾಗೂ ಪರಿಷತ್ತಿನಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ ಉತ್ತರ ನೀಡುವುದು.
 • ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಓದಗಿಸುವುದು.
 • ತಪ್ಪಿಸಿಕೊಂಡ ಅಪರಾಧಿಗಳ ನೋಂದಾವಣೆ.
 • ಗ್ಯಾಂಗ್ ರಿಜಿಸ್ಟರ್ (ಕಳ್ಳತನ ಮತ್ತು ದರೋಡೆಯಲ್ಲಿ ಒಳಗೊಂಡಿರುವವರು) ಇತ್ಯಾದಿ
 • ಮಿಲಿಟರಿಯಿಂದ ಬಿಟ್ಟು ಬಂದವರ ನೋಂದಣಿ.
 • ಪತ್ತೆ ಹಚ್ಚುಲಾದ ಪ್ರಕರಣಗಳ ನೋಂದಣಿ.
 • ಅಪರಾಧಿಗಳ ಭಾವಚಿತ್ರ.
 • ಅಪರಾಧಿಗಳ ಬುದ್ದಿವಂತಿಕೆಯ ವಿಷಯಕೋಶ.
 • ಜಿಲ್ಲೆಯ ಪೋಲೀಸ್ ಠಾಣೆಗಳಿಂದ ಸಂಗ್ರಹಿಸಿದ ದಿನ ನಿತ್ಯದ ಅಪರಾಧಗಳ ವರದಿಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವುದು.

ಸಿ.ಇ.ಎನ್ ವಿಶೇಷ ಪೊಲೀಸ್ ಠಾಣೆ.

ಈ ಪೊಲೀಸ್ ಠಾಣೆಯು ಒಂದು ವಿಶೇಷವಾದ ತನಿಖಾ ದಳವಾಗಿದ್ದು, ಪೊಲೀಸ್ ಅಧೀಕ್ಷಕರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತದೆ. ಪೊಲೀಸ್ ಅಧೀಕ್ಷಕರಿಂದ ನಿರ್ದೇಶಿಸಲ್ಪಟ್ಟ ಪ್ರಮುಖ ಪ್ರಕರಣ/ವಿಚಾರಣೆಗಳನ್ನು ತನಿಖೆ ಅಥವಾ ವಿಚಾರಣೆ ನಡೆಸುವುದು ಈ ವಿಭಾಗದ ಕರ್ತವ್ಯವಾಗಿರುತ್ತದೆ. ಈ ವಿಭಾಗವು ಪೊಲೀಸ್ ಇನ್ಸ್ಪೆಕ್ಟರ್ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರಿಗೆ ಸಹಾಯಕರಾಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದರ್ಜೆಯ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಾರೆ.

ಈ ವಿಶೇಷ ಪೊಲೀಸ್ ಠಾಣೆಯು 05 ವಿಭಾಗಗಳನ್ನು ಹೊಂದಿದೆ.

 • ಅಬಕಾರಿ, ಲಾಟರಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ.
 • ಆರ್ಥಿಕ ಅಪರಾಧಗಳ ವಿಭಾಗ.
 • ತಾಂತ್ರಿಕ ಕೋಶ, ಸೈಬರ್ ಅಪರಾಧ ಮತ್ತು ಪೊಲೀಸ್ ಐಟಿ ವಿಭಾಗ.
 • ಸಂಘಟಿತ ಅಪರಾಧ, ಮಾದಕ ವಸ್ತುಗಳು, ಮಾನವ ಕಳ್ಳ ಸಾಗಣೆ ಮತ್ತು ಮಕ್ಕಳ ರಕ್ಷಣಾ ಘಟಕ. ಮಾನವ ಹತ್ಯೆ ಮತ್ತು ದರೋಡೆ ವಿಭಾಗ.

ಈ ಘಟಕವು ಗಂಭೀರ ಪ್ರಕರಣಗಳ ತನಿಖೆಯನ್ನು ನಿರ್ವಹಿಸುವುದಲ್ಲದೆ, ಸಾರ್ವಜನಿಕ ಹಿತಾಸಕ್ತಿಯುಳ್ಳ ಪ್ರಕರಣಗಳಲ್ಲಿ ಸ್ಥಳೀಯ ಪೊಲೀಸರಿಗೆ ಸಹಕಾರ ನೀಡುವುದು.

©ಕೃತಿಸ್ವಾಮ್ಯ ಚಾಮರಾಜನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವೆಬ್ ಸೈಟ್ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®