• ಹಿರಿಯ ನಾಗರೀಕರ ಸಹಾಯ ವಾಣಿ: 1090 / 08226 222030
  • ಮಕ್ಕಳ ಸಹಾಯವಾಣಿ : 1098
  • ತುರ್ತು : 100 / 08226 222383
  • ಅಗ್ನಿ ಶಾಮಕ ದಳ : 101
  • ತುರ್ತು ವಾಹನ ಸೇವಾ: 108

ದೂರದೃಷ್ಟಿ ಮತ್ತು ಧ್ಯೆಯೋದ್ದೇಶ

ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಅಪರಾಧಗಳನ್ನು ತಡೆಗಟ್ಟುವುದು ಹಾಗೂ ಸಮಾಜದಲ್ಲಿ ಶಾಂತಿಯನ್ನು ನೆಲೆಸುವಂತೆ ನೋಡಿಕೊಳ್ಳುವುದು ನಮ್ಮ ಮುಖ್ಯ ಗುರಿಯಾಗಿದೆ.
ಜಿಲ್ಲೆಯ ಹಿತರಕ್ಷಣೆ ನಮ್ಮ ಹೊಣೆ ಹಾಗೂ ಮೂಲಭೂತ ಕರ್ತವ್ಯವೆಂದು ಪರಿಗಣಿಸಿ ಸಮಾಜದಲ್ಲಿ ಸರ್ವರೂ ಸುಖ ಶಾಂತಿಯಿಂದ ಬಾಳ್ವೆ ನಡೆಸಲು ನೆರವಾಗುವುದು ನಮ್ಮ ಪರಮೋಚ್ಛಗುರಿಯಾಗಿದೆ ಇದಕ್ಕಾಗಿ ಎಲ್ಲರನ್ನೂ ಪ್ರೇರೇಪಿಸಿ ಕಾರ್ಯೋನ್ಮುಖರನ್ನಾಗಿಸುವುದು ನಮ್ಮ ಗುರಿಗಳಲ್ಲಿ ಸೇರ್ಪಡೆಗೊಂಡಿದೆ.
ನಾಗರೀಕರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಸೆದು ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಹಾಗೂ ವೃತ್ತಿಕೌಶಲ್ಯವನ್ನು ನಿರಂತರವಾಗಿ ಅಭಿವೃದ್ದಿ ಪಡಿಸುವ ಮೂಲಕ ಪೊಲೀಸ್ ಇಲಾಖೆಯ ಶ್ರೇಯೋಭಿವೃದ್ದಿಗಾಗಿ ದುಡಿಯುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ.
ದುಷ್ಟರಿಗೆ ಶಿಕ್ಷೆ ಕೊಡಿಸುವ ಮೂಲಕ ಶಿಷ್ಟರಿಗೆ ರಕ್ಷಣೆಯ ಮೂಲಕ ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸಲು ಬದ್ಧರಾಗಿರುತ್ತೇವೆ. ಅಪರಾಧಿಗಳು ಭಯ ಪಡುವ ಹಾಗೂ ನಿರಪರಾಧಿಗಳು ಶಾಂತಿಯುತ ಬದುಕನ್ನು ನಡೆಸಲು ಅನುವು ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ. ನಾಗರೀಕರೊಂದಿಗೆ ಸ್ನೇಹಿತರಂತೆ ವರ್ತಿಸುವ ಮೂಲಕ ಅವರ ಪ್ರೀತಿ ವಿಶ್ವಾಸವನ್ನು ಗಳಿಸಿ ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇವೆ.

©ಕೃತಿಸ್ವಾಮ್ಯ ಚಾಮರಾಜನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವೆಬ್ ಸೈಟ್ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®