• ಹಿರಿಯ ನಾಗರೀಕರ ಸಹಾಯ ವಾಣಿ: 1090 / 08226 222030
  • ಮಕ್ಕಳ ಸಹಾಯವಾಣಿ : 1098
  • ತುರ್ತು : 100 / 08226 222383
  • ಅಗ್ನಿ ಶಾಮಕ ದಳ : 101
  • ತುರ್ತು ವಾಹನ ಸೇವಾ: 108

ಪರಿಚಯ

ಚಾಮರಾಜನಗರ ಜಿಲ್ಲಾ ಪೊಲೀಸ್ ದಿನಾಂಕ 15/08/1997 ರಂದು ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಅಸ್ತಿತ್ವಕ್ಕೆ ಬಂದಿರುತ್ತದೆ. ಜಿಲ್ಲೆಯು 5 ತಾಲ್ಲೂಕು ಕೇಂದ್ರಗಳನ್ನೊಳಗೊಂಡಿದ್ದು ಅವುಗಳೆಂದರೆ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಮತ್ತು ಹನೂರು.
ಚಾಮರಾಜನಗರ ಜಿಲ್ಲಾ ಪೊಲೀಸ್ ಘಟಕವು ನೂತನವಾಗಿ ವೆಬ್ಸೈಟ್ ಅನ್ನು ಪ್ರಾರಂಬಿಸಿದ್ದು, ಜಿಲ್ಲೆಯ ಜನತೆಯ ಹಿತರಕ್ಷಣೆ ಹಾಗೂ ಕುಂದುಕೊರತೆಗಳನ್ನು ಶೀಘ್ರವಾಗಿ ಪರಿಹರಿಸಲು ಆಧುನಿಕ ತಂತ್ರಜ್ಞಾನದ ಮೂಲಕ ಹೊಸ ಮುನ್ನಡಿಗೆ ಸಜ್ಜಾಗಿದೆ. ಎಲ್ಲರ ಸಂರಕ್ಷಣೆ ಹಾಗೂ ಜನಸ್ನೇಹಿ ನಿಲುವಿನೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಪೊಲೀಸ್ ಸೇವೆಯನ್ನು ವಿವಿಧ ಮಾಹಿತಿಗಳನ್ನು ನಿರ್ವಹಿಸಿ ಸಂಯೋಜಿಸುವ ಮೂಲಕ ಜಿಲ್ಲಾ ಪೊಲೀಸ್ ಮುಂದಾಗಿದೆ.
ಸುಮಾರು 10 ಲಕ್ಷಕ್ಕೂ ಅಧಿಕ ಜಿಲ್ಲೆಯ ನಾಗರೀಕರ ರಕ್ಷಣೆಯ ಹೊಣೆ ಹೊತ್ತಿರುವ ಚಾಮರಾಜನಗರ ಜಿಲ್ಲಾ ಪೊಲೀಸ್ ಘಟಕವು ವಿವಿಧ ಶಾಖೆಗಳಾದ ಜಿಲ್ಲಾ ಅಪರಾಧ ದಾಖಲಾತಿ ವಿಭಾಗ, ಜಿಲ್ಲಾ ವಿಶೇಷ ವಿಭಾಗ, ಸಿ.ಇ.ಎನ್ ವಿಶೇಷ ಪೊಲೀಸ್ ಠಾಣೆ, ಜಿಲ್ಲಾ ನಿಯಂತ್ರಣ ಕೊಠಡಿ, ಬೆರಳಚ್ಚು ವಿಭಾಗ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಯನ್ನು ಹೊಂದಿರುತ್ತದೆ. ಈ ಎಲ್ಲಾ ಶಾಖೆಗಳು ಜಿಲ್ಲೆಯ ಜನತೆಗೆ ತೃಪ್ತಿದಾಯಕ ಸೇವೆಯನ್ನು ಒದಗಿಸಲು ಹಗಲಿರುಳು ಶ್ರಮಿಸುತ್ತಿವೆ.
ಚಾಮರಾಜನಗರ ಜಿಲ್ಲಾ ಪೊಲೀಸ್ ಅಧಿಕಾರ ವ್ಯಾಪ್ತಿಯನ್ನು ಮುಖ್ಯವಾಗಿ 2 ಉಪ ವಿಭಾಗಗಳಾಗಿ ವಿಂಗಡಿಸಲಾಗಿದೆ. 1) ಚಾಮರಾಜನಗರ ಉಪ ವಿಭಾಗ 2) ಕೊಳ್ಳೇಗಾಲ ಉಪ ವಿಭಾಗ. ಪ್ರತಿಯೊಂದು ಉಪ ವಿಭಾಗವು ಪೊಲೀಸ್ ಉಪಾಧೀಕ್ಷಕರ ದರ್ಜೆಯ ಅಧಿಕಾರಿಗಳ ಆಡಳಿತಕ್ಕೆ ಒಳಪಟ್ಟಿರುತ್ತದೆ. ಉಪ ವಿಭಾಗಗಳನ್ನು ಮತ್ತೆ ವೃತ್ತ ಗಳಾಗಿ ವಿಂಗಡಿಸಲ್ಪಟ್ಟಿದ್ದು ಪೊಲೀಸ್ ಇನ್ಸ್ಪೆಕ್ಟರ್ ದರ್ಜೆಯ ಅಧಿಕಾರಿಗಳ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ.
ನೂತನವಾಗಿ ಅಭಿವೃದ್ದಿಪಡಿಸಿರುವ ವೆಬ್ಸೈಟ್ ನಾಗರೀಕರಿಂದ ಸಲಹೆ ಸೂಚನೆಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದ್ದು, ನಾಗರೀಕರು ತಮ್ಮ ಅಮೂಲ್ಯ ವಿಚಾರಗಳನ್ನು ವೆಬ್ಸೈಟ್ ಮೂಲಕ ಜಿಲ್ಲಾ ಪೊಲೀಸ್ ಘಟಕದೊಂದಿಗೆ ಹಂಚಿಕೊಳ್ಳುವ ಸದಾವಕಾಶವನ್ನು ಒದಗಿಸಿದೆ.

©ಕೃತಿಸ್ವಾಮ್ಯ ಚಾಮರಾಜನಗರ ಪೊಲೀಸ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವೆಬ್ ಸೈಟ್ ತಾಣದ ವಿನ್ಯಾಸಗಾರರು: ಗ್ಲೋಬಲ್ ಬಜ್®